ಪ್ರಚಲಿತ

ಮಂಗಳೂರಿನಲ್ಲಿ ನಡೆಯುತ್ತಿದೆ ತುಳುನಾಡಿನ ಜಾನಪದ ಕಲೆ ಕಂಬಳ!! ನಿಮಗೆ ಗೊತ್ತಿರದ ಒಂದಷ್ಟು ಅದ್ಭುತಗಳು!!

ತಲಪಾಡಿ ದೊಡ್ಡಮನೆ ಕ್ಯಾಪ್ಟನ್ ಬೃಜೇಶ್ ಚೌಟೆರೆನ ಒಂಜನೇ ನಂಬರ್‍ದ ಎರ್ಲು ರಾಮ ಕರೆಟ್ಟ್, ಬೆದ್ರ ಬೆಳುವಾಯಿ ಪೋಸ್ಟ್ ಕಾರ್ಡ್ ನ್ಯೂಸ್‍ದ ಗುರಿಕಾರೆ ಮಹೇಶ್ ವಿಕ್ರಮ್ ಹೆಗ್ಡೆರೆನ ರಡ್ಡನೇ ನಂಬರ್‍ದ ಎರ್ಲು ಲಕ್ಷ್ಮಣ ಕರೆಟ್ಟ್… ಬಲ್ಲು ಗಟ್ಟಿ ಕೈಪುಲೆಣ್ಣಾ… ಪೊರ್ತಾಂಡಣ್ಣಾ… ತಯಾರತೇ…???
ಅಲೆ ಬುಡ್ತೆರ್ಯೇ……….

ಅಬ್ಭಾ… ಎಷ್ಟೊಂದು ಸುಂದರ ಸಾಲುಗಳಲ್ಲವೇ… ತುಳುನಾಡಿನ ಜನರ ಪಾಲಿಗಂತೂ ಇದೊಂದು ಸುಮಧುರ ಸಂಗೀತವೇ ಸರಿ. “ಅಲೆ ಬುಡ್ತೆರ್ಯೇ” ಎಂಬ ಶಬ್ಧ ಕೇಳಿದರೆ ಸಾಕು ದೃಷ್ಟಿ ನೂರು ಮೀಟರಿನಾಚೆಗೆ ಹೊಕ್ಕಿಬಿಡುತ್ತದೆ. ಕಿವಿಗಳು ನಿವಿರುತ್ತದೆ.

ಹೌದು. ನಾವು ಹೇಳುತ್ತಿರುವುದು ಅದೇ ತುಳುನಾಡಿನ ಜನಪದ ಕ್ರೀಡೆ ಕಂಬಳದ ಬಗ್ಗೆ. ಕಂಬಳವೆಂದರೆ ಸಾಕು ತುಳುನಾಡಿನ ಜನತೆಯ ಮೈ ರೋಮಾಂಚನಗೊಳ್ಳುತ್ತದೆ. ಈಗಲಂತೂ ಕೇವಲ ತುಳುವರು ಮಾತ್ರವಲ್ಲದೆ ಕನ್ನಡಿಗರೂ ಈ ಕ್ರೀಡೆಯನ್ನು ನೋಡಲೆಂದೇ ಕಡಲ ನಾಡಿಗೆ ಧಾವಿಸಿ ಬರುತ್ತಾರೆ. ಕರಾವಳಿ ಜನತೆಯ ಪಾಲಿಗೆ ಇದೊಂತರಾ ಹಬ್ಬವೇ ಸರಿ…

ಮತ್ತೆ ಬಂತು ಕಂಬಳ-ಮಂಗಳೂರು ನಗರದೆಲ್ಲಡೆ ಪರಿಮಳ…

ಮಂಗಳೂರಿನ ಕದ್ರಿ ಕಂಬಳವೆಂದರೆ ಕರಾವಳಯಲ್ಲಿಯೇ ಫೇಮಸ್. ಭೂಲೋಕದೊಡೆಯ ಶ್ರೀ ಮಂಜುನಾಥನ ಕೃಪಾಶಿರ್ವಾದಿಂದ ನಡೆಯುತ್ತಿದ್ದ ಈ
ಕಂಬಳಕ್ಕೆ ಸಾವಿರಾರು ಜನರು ಅಭಿಮಾನಗಳ ದಂಡೇ ಹರಿದು ಬರುತ್ತಿತ್ತು. ಮಂಗಳೂರು ನಗರದ ಜನತೆಯ ಪಾಲಿಗಂತೂ ಅದೊಂತರಾ ವಿಶ್ವ ತುಳು ಸಮ್ಮೇಳನದ ಅನುಭವ.

ಆದರೆ ದುರಾದೃಷ್ಟವಶಾತ್ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಕಂಬಳ ನಡೆಯಲೇ ಇಲ್ಲ. ಕಂಬಳ ನಡೆಯುತ್ತಿದ್ದ ಆ ಜಾಗ ಈಗ ಬೇರೊಬ್ಬರ ಒಡೆತನದಲ್ಲಿ ಇರುವುದರಿಂದ ಅಲ್ಲಿ ಕಂಬಳ ನಡೆಸಲು ಅವಕಾಶವೇ ಇಲ್ಲದಂತಾಗಿತ್ತು. ಇದು ಮಂಗಳೂರಿನ ಜನತೆಗೇ ತೀವ್ರ ನಿರಾಸೆಯಾಗಿತ್ತು. ಹತ್ತಿರದಲ್ಲಿ ಇದ್ದಂತಹ
ಒಂದೇ ಒಂದು ಕಂಬವಳವನ್ನು ಕಳೆದುಕೊಂಡೆವಲ್ಲಾ ಎಂಬ ಚಿಂತೆ ಮಂಗಳೂರು ನಗರದ ಜನತೆಯಲ್ಲಿ ಕಾಡುತ್ತಲೇ ಇತ್ತು.

ಕ್ಯಾಪ್ಟನ್ ಬೃಜೇಶ್ ಚೌಟರ ಪಣ-ನಗರದಲ್ಲಿ ರಾಮ-ಲಕ್ಷ್ಮಣ…!!!

ಮಂಗಳೂರಿನ ನಗರದ ಜನತೆಯ ನಿರಾಸೆಯನ್ನು ಹೋಗಲಾಡಿಸಿದವರು ಇವರೇ… ಅದೆಷ್ಟೋ ವರ್ಷಗಳಿಂದ ನಡೆಯುತ್ತಿದ್ದ ಕದ್ರಿ ಕಂಬಳವು ನಿಂತು ಹೋದ ನಂತರ ಮತ್ತೆ ಯಾವಾಗ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಇದಕ್ಕೆ ಅಮೃತವೆರೆದವರೇ ಕ್ಯಾಪ್ಟನ್ ಬೃಜೇಶ್ ಚೌಟಾ ಮತ್ತು ತಂಡ. ಈ ಬಾರಿ ಹೇಗಾದರೂ ಸರಿ, ಮಂಗಳೂರಿನ ಜನತೆಗೆ ಕಂಬಳವನ್ನು ವೀಕ್ಷಿಸಲು ಅವಕಾಶ ನೀಡಲೇಬೇಕು ಎಂಬ ದೃಢ ನಿಲುವನ್ನು ಹೊತ್ತು ಸಂಘಟಿತರಾದರು ಕ್ಯಾಪ್ಟನ್ ಬೃಜೇಶ್ ಚೌಟ ಮತ್ತು ತಂಡದವರು. ಇದರ ಪ್ರತಿಫಲವೇ ಮಂಗಳೂರಿನಲ್ಲಿ ನಾಲ್ಕು ವರ್ಷಗಳ ನಂತರ ನಾಳೆ ನಡೆಯುವ ರಾಮ-ಲಕ್ಷ್ಮಣ ಜೋಡುಕರೆ ಕಂಬಳ…

ಕದ್ರಿ ಕಂಬಳ ಇತಿಹಾಸದ ಪುಟ ಸೇರಿದ ನಾಲ್ಕು ವರ್ಷಗಳ ನಂತರ ತುಳುನಾಡಿನ ಗ್ರಾಮೀಣ ಸೊಗಡಿನ ಕಂಬಳ ಸೌಂದರ್ಯ ಎದುರುಗೊಳ್ಳಲು ಮಂಗಳೂರು ನಗರ ಸಾಕ್ಷಿಯಾಗಿದೆ. ನಾಳೆ (ಡಿಸೆಂಬರ್.3) ನಡೆಯುವ ಮಂಗಳೂರಿನ ಬಂಗ್ರ ಕೂಳೂರಿನಲ್ಲಿ ನಡೆಯುವ “ಮಂಗಳೂರು ಕಂಬಳ” ಎಂಬ ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹೇಗೆ ನಡೆದಿತ್ತು ಕಂಬಳದ ಕರೆ..?

ಕಂಬಳದ ಅಂದ ಚೆಂದ ಇರುವುದೇ ಜೋಡುಕರೆಗಳಲ್ಲಿ. ನೂರರಿಂದ ನೂರಾ ಐವತ್ತು ಮೀಟರ್ ಉದ್ದವಿರುವ ಕರೆಗಳಲ್ಲಿ ತಲೆಯಿಂದ ಬುಡದ ವರೆಗೆ ಓಡಿಸಿಕೊಂಡು ಬಂದು ಯಾವುದು ಮೊದಲು ಮಂಜೊಟ್ಟಿ ತಲುಪುವುದು ಎಂದು ನೋಡುವುದೇ ಎಲ್ಲಕ್ಕಿಂತ ಚೆಂದ. ಈ ಸಂಭ್ರಮ ಕ್ರಿಕೆಟ್ ಮೈಧಾನದಲ್ಲಿ ಸಿಕ್ಸರ್ ಭಾರಿಸಿದಾಗಲೂ ಬರೋದಿಲ್ಲ ಎಂದರೆ ಉತ್ಪ್ರೇಕ್ಷೆಯಾಗದು. ವಿದ್ಯತ್ ದೀಪದಿಂದ ಅಲಂಕಾರಿತವಾಗಿರುವ ಆ ಎರಡೂ ಕರೆಗಳಲ್ಲಿ ಚಿನ್ನದ ಬಣ್ಣದ ನೀರನ್ನು ಮುಗಿಲೆತ್ತರಕ್ಕೆ ಚಿಮ್ಮಿಸಿಕೊಂಡು ಚಿನ್ನದ ಬಹುಮಾನಕ್ಕಾಗಿ ಓಡಿಕೊಂಡು ಬರುವ ಕೋಣಗಳನ್ನು ನೋಡಲು ಎರಡು ಕಣ್ಣುಗಳೇ ಸಾಲದು.

ಇದರೊಂದಿಗೆ ತುಳುನಾಡಿನ ಸಂಸ್ಕøತಿ-ಸಂಪ್ರದಾಯದ ಧ್ಯೋತಕ ಕಂಬಳವನ್ನು ಮತ್ತೊಮ್ಮೆ ನಗರ ಪ್ರದೇಶಕ್ಕೂ ಪಸರಿಸಬೇಕು, ಯುವಜನತೆಗೂ ಈ ಸಂಪ್ರದಾಯಿಕ ಕಲೆಗಳ ಬಗ್ಗೆ ಪರಿಚಯ ಆಗಬೇಕು ಎಂಬ ನೆಲೆಯಿಂದ ತಲಪಾಡಿ ದೊಡ್ಡಮನೆ ಕ್ಯಾಪ್ಟನ್ ಬೃಜೇಶ್ ಚೌ ನೇತೃತ್ವದಲ್ಲಿ ಒಂದು ಸಧೃಢ ತಂಡವೇ ಸೇರಿಕೊಂಡು ಕಂಬಳವನ್ನು ಆಯೋಜಿಸುತ್ತಿದ್ದಾರೆ.

ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಕಂಬಳ ನಡೆಸಲಾಗುತ್ತಿದ್ದು, “ರಾಮ-ಲಕ್ಷ್ಮಣ” ಜೋಡುಕರೆ ಕಂಬಳ ಎಂಬ ಹೆಸರಿಡಲಾಗಿದೆ. ಉತ್ತಮ ತಂಡದಿಂದ ಕಂಬಳ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದ್ದು ಗೌರವಾಧ್ಯಕ್ಷರಾಗಿ ಕೆ.ಪ್ರಕಾಶ್ ಶೆಟ್ಟಿ ಹಾಗೂ ಅಧ್ಯಕ್ಷರಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆಯಾಗಿದ್ದಾರೆ.

10 ಲಕ್ಷ ವೆಚ್ಚದಲ್ಲಿ ಕರೆ ನಿರ್ಮಾಣ..!!!

ಹೌದು. ಕಂಬಳದ ತಯಾರಿ ಭರದಿಂದ ಸಾಗಿ ವೈಭವ ಪೂರಿತ ಕಂಬಳಕ್ಕೆ ಅಣಿಯಾಗುತ್ತಿದೆ. ಸಾಮಾನ್ಯ ಗದ್ದೆಯಂತಿರುವ ಈ ಜಾಗದಲ್ಲಿ ಹೊಸದಾಗಿ ಕಂಬಳದ ಕರೆ ಸಿದ್ಧವಾಗಬೇಕಾಗಿರುವುದರಿಂದ 10 ಲಕ್ಷಕ್ಕೂ ಅಧಿಕ ವೆಚ್ಚ ತಗುಲಿದೆ ಎಂದು ಹೇಳಲಾಗುತ್ತಿದೆ. ಆಧುನೀಕತೆಗೆ ಹೊಂದಿಕೊಂಡು ನವಶೈಲಿಯಲ್ಲಿ
ನಿರ್ಮಾಣವಾಗುತ್ತಿರುವ ಈ ಕರೆಯ ಕೆಲಸವು ಅದ್ಭುತವಾಗಿ, ಅಚ್ಚುಕಟ್ಟಾಗಿ ನಡೆದಿದೆ.

ಕಂಬಳವನ್ನು ಉಳಿಸುವುದೇ ನಮ್ಮ ಗುರಿ-ಕ್ಯಾಪ್ಟನ್ ಬೃಜೇಶ್ ಚೌಟ.

ನವ ನಿನ್ಯಾಸದೊಂದಿಗೆ ಆರಂಭಗೊಳ್ಳುತ್ತಿರುವ ಮಂಗಳೂರು (ಬಂಗ್ರ ಕೂಳೂರು) ಕಂಬಳದ ಸಂಪೂರ್ಣ ಜವಬ್ಧಾರಿಯನ್ನು ವಹಿಸಿಕೊಂಡಿರುವ ಕಂಬಳ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ ಕಂಬಳವನ್ನು ಉಳಿಸುವುದೇ ನಮ್ಮ ಧ್ಯೇಯ ಎಂದಿದ್ದಾರೆ. “ಕರಾವಳಿ ಜಿಲ್ಲೆಗಳು ಕೃಷಿ ಆಧಾರಿತವಾದಂತಹ ಜಿಲ್ಲೆಗಳು. ನಗರ ಪ್ರದೇಶದವರಿಗೆ ತುಳುನಾಡಿನ ಸಂಸ್ಕøತಿ ಪರಿಚಯಿಸುವುದು ನಮ್ಮ ಉದ್ಧೇಶ. ಯುವ ಜನತೆಗೆ ನಮ್ಮ ಸಂಸ್ಕøತಿಯ ಪರಿಚಯವಾಗಬೇಕು. ಈ ನಾಡಿನ ಸಂಪ್ರದಾಯ ಮುಂದುವರಿಯಬೇಕೆನ್ನುವುದೇ ನಮ್ಮ ಆಶಯ” ಎಂದು ಹೇಳುತ್ತಾರೆ ಬೃಜೇಶ್ ಚೌಟ.

ಶಾಶ್ವತವಾಗಿ ಮುಂದುವರೆಯಲಿ-ಶಾಂತರಾಮ ಶೆಟ್ಟಿ ಬಾರ್ಕೂರು.

“ಮಂಗಳೂರು ನಗರದಲ್ಲಿ ಕಂಬಳದ ಕೊರತೆ ಇತ್ತು. ಅದನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಬೃಜೇಶ್ ಚೌಟರ ನೇತೃತ್ವದಲ್ಲಿ ಉತ್ತಮ
ಕೆಲಸವಾಗುತ್ತಿದ್ದು, ಇದು ಮಂಗಳೂರಿನಲ್ಲಿ ಶಾಶ್ವತವಾಗಿ ಮುಂದುರೆಯಬೇಕೆಂದು” ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ.

ಗತವೈಭವದತ್ತ ಮಂಗಳೂರು ಕಂಬಳ-ಅನ್ಯ ಭಾಷಿಕರಿಂದಲೂ ಕಂಬಳಕ್ಕೆ ಬೆಂಬಲ!

ಬಂಗ್ರಕೂಳೂರು ಕಂಬಳ ನಗರದೊಳಗೇ ಇರುವುದರಿಂದ ಅನೇಕ ಜನರಿಗೆ ಇದರ ಲಾಭವಾಗುತ್ತದೆ. ಈವರಗೆ ಕಂಬಳವನ್ನು ಕೇವಲ ಟಿವಿಗಳಲ್ಲಿ ಮೋಬೈಲ್‍ಗಳಲ್ಲಿ ಮಾತ್ರ ನೋಡುತ್ತಿದ್ದೆವು ಎಂಬ ಅನೇಕ ನಗರ ವಾಸಿಗಳ ಕೊರಗು ಈ ವರ್ಷ ಈಡೇರುತ್ತಿದೆ. ಮಂಗಳೂರಿನಲ್ಲಿ ಕೇವಲ ತುಳುವರು ಮಾತ್ರ ವಾಸವಾಗಿಲ್ಲ. ಇತರೆ ಭಾಗಗಳಿಂದ ಅಂದರೆ ಕನ್ನಡ, ತಮಿಳು ಹಾಗೂ ಮಳಿಯಾಲಿ ಭಾಷಿಕರೂ ಇಲ್ಲಿ ಕೆಲಸದ ನಿಮಿತ್ತ ನೆಲೆಸಿದ್ದಾರೆ. ಆದ್ದರಿಂದ ಅವರಿಗೂ ನಗರದಲ್ಲಿ ನಡೆಯುತ್ತಿರುವ ಈ ಕಂಬಳ ಅತ್ಯಂತ ಖುಷಿಯನ್ನು ತಂದಿದೆ. “ನಮ್ಮೂರಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ನೋಡಿದ್ದೇವೆ. ಹಾಗೆನೇ ತುಳುನಾಡಿನಲ್ಲಿ ಕಂಬಳ ಎಂಬ ಕ್ರೀಡೆ ಇದೆ ಎಂಬುವುದನ್ನು ಕೇಳಿದ್ದೇವೆ. ಆದರೆ ಈವಾಗ ಮಂಗಳೂರು ನಗರದಲ್ಲೇ ಕಂಬಳ ನೋಡುವ ಭಾಗ್ಯ ಒದಗಿ ಬಂದಿರುವುದು ನಿಜಕ್ಕೂ ಸಂತೋಷವನ್ನು ತಂದಿದೆ” ಎನ್ನುತ್ತಾರೆ ತಮಿಳಿಗರು.

ಕನ್ನಡಿಗರಲ್ಲೂ ಕಂಬಳದ ಕಂಪು…

ಇನ್ನು ಕಂಬಳ ಎನ್ನುವ ತುಳುನಾಡ ಜನಪದ ಕ್ರೀಡೆ ಇಂದು ಕನ್ನಡ ಭಾಷಿಕರನ್ನೂ ಬಹುವಾಗಿ ಸೆಳೆದಿದೆ. ಕನ್ನಡದ ರಾಜಕಾರಣಿಗಳು ಹಾಗೂ ಚಲನ ಚಿತ್ರ ನಟರು ಕಂಬಳದ ಆಕರ್ಷಣೆಗೆ ಒಳಗಾಗಿದ್ದಾರೆ. ಕಂಬಳಕ್ಕಾಗಿ ಹೋರಾಟವನ್ನೂ ಮಾಡಿದ್ದಾರೆ. ಹೀಗಾಗಿ ನಗರ ಪ್ರದೇಶದಲ್ಲಿ ಕಂಬಳವನ್ನು ಬೆಂಬಲಿಸಿ ವೀಕ್ಷಿಸಲು ಚಲನಚಿತ್ರ ನಟರು ಹಾಗೂ ಗಣ್ಯ ರಾಜಕಾರಣಿಗಳ ದಂಡೇ ಆಗಮಿಸುವ ನಿರೀಕ್ಷೆಯಿದೆ.

ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿ ಈ ಕಂಬಳ ಏರ್ಪಾಡಾಗುವುದರಿಂದ ಪಾರ್ಕಿಂಗ್‍ಗೂ ಸಾಕಷ್ಟು ಸ್ಥಳಾವಕಾಶ ಇರುವುದು ಧನಾತ್ಮಕ ಅಂಶವಾಗಿದೆ. ಸಹಜವಾಗಿಯೇ ಸಹಸ್ರಾರು ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು, ಕುತೂಹಲಿಗಳು ಸೇರುವ ನಿರೀಕ್ಷೆ ಇದೆ. ಗಣ್ಯರನ್ನು ಆಹ್ವಾನಿಸುವುದರೊಂದಿಗೆ ದೊಡ್ಡ ಮಟ್ಟದಲ್ಲೇ ಕಂಬಳ ಆಯೋಜನೆಗೆ ಭರದ ಸಿದ್ಧತೆ ನಡೆದಿದೆ. ಇದರೊಂದಿಗೆ ಗ್ರಾಮೀಣ ಭಾಗದ ಜೀವನಾಡಿ ಕಂಬಳ ನಗರದಲ್ಲಿ ಗತವೈಭವ ಮೆರೆಯುವ ಲಕ್ಷಣವೂ ಗೋಚರಿಸುತ್ತಿದೆ.

ಸರ್ವರಿಗೂ ಅನುಕೂಲ…

ಈ ಹಿಂದೆ ಕದ್ರಿ ದೇವರ ಕಂಬಳ ನಗರದ ಮಧ್ಯೆಯೇ ನಡೆಯುತ್ತಿತ್ತು. ಅದು 2012ರಲ್ಲಿ ನಡೆದಿದ್ದೇ ಕೊನೆ. ನಂತರ ಆ ಭೂಮಿ ಬೇರೆಯವರ ಪಾಲಾಗಿದ್ದರಿಂದ ಕಂಬಳ ಸ್ಥಗಿತಗೊಂಡಿದೆ. ಸದ್ಯ ನಗರದಲ್ಲಿ ನಡೆಯುತ್ತಿರುವುದು ಜಪ್ಪಿನಮೊಗರು ಜಯ-ವಿಜಯ ಜೋಡುಕರೆ ಕಂಬಳ ಮಾತ್ರ. ಸುರತ್ಕಲ್ ಮಾಧವ ನಗರದ ರಾಮ ಲಕ್ಷ್ಮಣ ಕಂಬಳ ನಡೆಯುತ್ತಿದೆಯಾದರೂ ನಗರದಿಂದ ದೂg ಇದೆ. ನಗರದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಕಂಬಳ ನಡೆಯುತ್ತಿಲ್ಲ ಎಂಬ ಕೊರಗು ಅನೇಕರಲ್ಲಿತ್ತು. ಅದನ್ನು ನೀಗಿಸುವ ನಿಟ್ಟಿನಲ್ಲಿ ಬಂಗ್ರ ಕೂಳೂರಿನಲ್ಲಿ ನಡೆಯುತ್ತಿರುವ “ಮಂಗಳೂರು ಕಂಬಳ” ಗಂಭೀರ ಪ್ರಯತ್ನ ಎಂದು ಹೇಳಲಾಗುತ್ತಿದೆ.

ತುಳುನಾಡಿಗೇ ಸಂಭ್ರಮ ತಂದಿತ್ತು ಮತ್ತೆ ಕಂಬಳದ ನ್ಯಾಯ…

ಹೌದು. “ಪೇಟಾ”ದವರ ಕಿರಿಕಿರಿಯಿಂದ ತೀವ್ರ ಬೇಸರಕ್ಕೊಳಪಟ್ಟಿದ್ದರು ಕರಾವಳಿಯ ಜನತೆ. ಜನಪದವಾಗಿ ಅತಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ಏಕೈಕ ಜನಪದ ಕ್ರೀಡೆ ಕಂಬಳವನ್ನು ನ್ಯಾಯಾಲಯದ ಮುಖಾಂತರ ನಿಲ್ಲಿಸಿಬಿಟ್ಟರಲ್ಲ ಎಂಬ ಬೇಸರ ಪ್ರತಿ ಕಂಬಳಾಭಿಮಾನಿ ಮಾತ್ರವಲ್ಲದೆ ತುಳುನಾಡಿನ ಪ್ರತಿಯೊಬ್ಬನಲ್ಲೂ ಕಾಡಿತ್ತು. ನ್ಯಾಯಾಲಯದಲ್ಲಿ ಇದರ ಬಗ್ಗೆ ವಿಚಾರಣೆ ನಡೆಯುತ್ತಿದ್ದಂತೆ ಕರಾವಳಿಯಲ್ಲಿ ಹೋರಾಟವೂ ತೀವ್ರಗೊಂಡಿತ್ತು. ಈ ಹೋರಾಟ ಕೇವಲ ಕರಾವಳಿ ಭಾಗಕ್ಕೆ ಅಥವಾ ತುಳುನಾಡಿಗೆ ಮಾತ್ರ ಸೀಮಿತವಾಗದೆ ಜಿಲ್ಲೆಯಾಚೆಗೂ ವಿಸ್ತರಿಸಿತ್ತು. ಕನ್ನಡದ ಹಲವಾರು ರಾಜಕಾರಣಿಗಳು ಹಾಗೂ ಚಲನಚಿತ್ರ ಹಾಗೂ ಕಿರುತೆರೆ ನಟರು ಈ ಹೋರಾಟಕ್ಕೆ ಬೆಂಬಲ ನೀಡಿ ಬೀದಿಗಿಳಿದಿದ್ದರು. ಚಲನ ಚಿತ್ರ ನಟ ಜಗ್ಗೇಶ್ ಒಂದು ಹೆಜ್ಜೆ ಮುಂದೆ ಹೋಗಿ ತುಳು ನಾಡಿನ ಈ ಕ್ರೀಡೆಯನ್ನು ಉಳಿಸುವ ಪ್ರಯತ್ನ ಮಾಡಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ನಂತರ ಕೇಂದ್ರದ ಮೋದಿ ಸರ್ಕಾರದಲ್ಲಿ ಕರಾವಳಿಯ ಮಣ್ಣಿನ ಮಗನಾದ ಕೇಂದ್ರ ಸಚಿವ ಸದಾನಂದ ಗೌಡರ ಸತತ ಪ್ರಯತ್ನದಲ್ಲಿ ಕಂಬಳವನ್ನು ಮತ್ತೆ ನೋಡಲು ಅವಕಾಶ ಸಿಕ್ಕಿತ್ತು. ಕೇಂದ್ರದಲ್ಲಿ ಕಾನೂನೊಂದನ್ನು ಮಂಡಿಸಿ ಸುಗಮ ಕಂಬಳಕ್ಕೆ ಅನುಕೂಲ ಮಾಡಿ ಅವಕಾಶ ಮಾಡಿಕೊಟ್ಟವರೇ ಕೇಂದ್ರ ಸಚಿವ ಸದಾನಂದ ಗೌಡರು.

ಮತ್ತೆ ಕಿರಿಕ್ ಮಾಡುತ್ತಿರುವ ಪೇಟಾ…

ದೇಶದಲ್ಲಿ ಗೋವುಗಳ ಸಾಲು ಸಾಲು ಹತ್ಯೆ ನಡೆಯುತ್ತಿದ್ದರೂ ತುಟಿಕ್ ಪಿಟಿಕ್ ಎನ್ನದ ಪ್ರಾಣಿ ದಯಾ ಸಂಘದವರು ದಿನಂಪ್ರತಿ ಲಕ್ಷಗಟ್ಟಲೆ ಖರ್ಚು ಮಾಡಿ, ಆಹಾರಗಳನ್ನು ನೀಡಿ, ಹವಾ ನಿಯಂತ್ರಿತ ಪ್ರದೇಶದಲ್ಲಿ ಎಣ್ಣೆ ಹಾಕಿ ಅವುಗಳನ್ನು ಮಕ್ಕಳಂತೆ ಪಾಲನೆ ಮಾಡುತ್ತಿರುವ ಕಂಬಳ ಕೋಣಗಳನ್ನು ಕಂ¨ಳಕ್ಕೆ ಉಪಯೋಗಿಸಿದರೆ ಅದು ಪ್ರಾಣಿ ಹಿಂಸೆ ಎಂದು ಬೊಬ್ಬೆ ಹೊಡೆಯುತ್ತಾರೆ.

ಅಂತೂ ಇಂತೂ ನ್ಯಾಯಾಲಯ ಹಾಗೂ ಸರ್ಕಾರಗಳಿಂದ ಶಾಶ್ವತ ಅನುಮೋದನೆ ದೊರೆತಿದ್ದು ಈಗ ಸಂಭ್ರಮವನ್ನೇ ಮನೆ ಮಾಡಿದೆ. ಇದರ ಮತ್ತೊಂದು ಹೆಜ್ಜೆಯೇ “ಮಂಗಳೂರು ಕಂಬಳ”. ಈ ಕಂಬಳ ತುಳುನಾಡಿನ ಕಂಬಳದ ಇತಿಹಾಸದಲ್ಲೇ ಹೊಸ ಮೈಲುಗಲ್ಲನ್ನು ಸೃಷ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ…

-ಸುನಿಲ್ ಪಣಪಿಲ

Tags

Related Articles

Close