ಪ್ರಚಲಿತ

ಮತ್ತೆ ರಾಜ್ಯಕ್ಕೆ ಲಗ್ಗೆ ಇಟ್ಟ ರಾಜಕೀಯ ಚಾಣಾಕ್ಯ… ಸಿಎಂಗೆ ತಲೆ ನೋವಾಗಿರುವ ಶಾ ಬಳಿ ಇರುವ ಆ ಟಾಪ್ ಸೀಕ್ರೇಟ್ ಏನು..?

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ತಿಂಗಳುಗಳು ಹತ್ತಿರವಿರುವಂತೆಯೇ ದಿನದಿಂದ ದಿನಕ್ಕೆ ರಾಜಕೀಯ ವಿದ್ಯಮಾನಗಳು ಗರಿಗೆದರುತ್ತಿವೆ. ರಾಜ್ಯ ನಾಯಕರು ಬಿರುಸಿನ ಪ್ರಚಾರವನ್ನು ಈಗಾಗಲೇ ಕೈಗೊಂಡಿದ್ದು, ರಾಷ್ಟ್ರ ನಾಯಕರ ಲಗ್ಗೆಯೂ ರಾಜ್ಯದತ್ತ ಮುಖ ಮಾಡಿದೆ. ಇನ್ನು ಭಾರತೀಯ ಜನತಾ ಪಕ್ಷದ ಅಧ್ಯಕ್ಷ, ರಾಜಕೀಯ ಚಾಣಾಕ್ಯ ಅಮಿತ್ ಶಾ ಇಂದು ಕರ್ನಾಟಕಕ್ಕೆ ಆಗಮಿಸಿದ್ದು, ಕಾಂಗ್ರೆಸ್ ಸಹಿತ ವಿಪಕ್ಷ ನಾಯಕರಲ್ಲಿ ನಡುಕ ಹುಟ್ಟಿಸಿದೆ.

ರಾಜ್ಯಕ್ಕೆ ಲಗ್ಗೆಯಿಡಲಿದ್ದಾರೆ ಚಾಣಾಕ್ಯ…

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಗದ್ದುಗೆ ಹಿಡಿದ ನಂತರ ಬರೋಬ್ಬರಿ 19ಕ್ಕಿಂತಲೂ ಅಧಿಕ ರಾಜ್ಯದಲ್ಲಿ ಕೇಸರಿಯನ್ನು ಅರಳಿಸಿದ ಕೀರ್ತಿ ಪಡೆದುಕೊಂಡಿರುವ ಭಾರತೀಯ ಜನತಾ ಪಕ್ಷದ ಚಾಣಾಕ್ಯ ಅಮಿತ್ ಶಾ ಇಂದು ಮತ್ತೆ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಮೂಲಕ ತನ್ನ ಮುಂದಿನ ಗುರಿ ಕರ್ನಾಟಕ. ಅದನ್ನು ಪಡೆದೇ ತೀರುತ್ತೇನೆ ಎಂಬ ಹಠದೊಂದಿಗೆ ಟೊಂಕ ಕಟ್ಟಿ ನಿಂತಿದ್ದಾರೆ ಶಾ.

“ಅಮಿತ್ ಶಾ ಕಂಡರೆ ನನಗೇನು ಭಯವಿಲ್ಲ” ಎಂದು ಹೇಳುತ್ತಲೇ ಭಯಪಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಶಾ ಬರುತ್ತಾರೆಂದರೆ ಗಡಗಡ ನಡುಗುತ್ತಾರೆ. ಆಡಳಿತ ವಿರೋಧ ಅಲೆಯಲ್ಲಿ ತೇಲುತ್ತಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಗ್ಲೂಕೋಸ್ ಬಾಟಲಿ ಹಿಡಿದುಕೊಂಡು ಬೀದಿ ಬೀದಿ ಸುತ್ತುತ್ತಿದೆ. ಇಡಿಯ ದೇಶವೇ ಕಾಂಗ್ರೆಸ್ ನಿಂದ ಮುಕ್ತವಾಗಿದೆ. 132 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಈಗ ದೇಶದೆಲ್ಲಡೆ ಮಖಾಡೆ ಮಲಗುತ್ತಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ತನ್ನ ಪತನವನ್ನು ಅನುಭವಿಸಿದ ಕಾಂಗ್ರೆಸ್ ಪಕ್ಷ, ತನ್ನ ಪ್ರಾಣ ಉಳಿಸಲು ಆಮ್ಲಜನಕವನ್ನಾಗಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉಸಿರಾಡುತ್ತಿದೆ.

ತಾನು ಹೋದಲ್ಲೆಲ್ಲಾ ಸೋಲನ್ನೇ ಅನುಭವಿಸಿಕೊಂಡು ಬರುತ್ತಿರುವ ರಾಹುಲ್ ಗಾಂಧಿ ಈಗ ಮತ್ತೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾಗಿ ಆಗಮಿಸುತ್ತಿದ್ದಾರೆ. ಈ ಹಿಂದೆ ಮುಸಲ್ಮಾನರನ್ನು ಉಸಿರಾಗಿಸಿಕೊಂಡು ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ಈಗ ದೇವಸ್ಥಾನಗಳ ಭೇಟಿಯನ್ನು ಶುರುವಿಟ್ಟುಕೊಂಡಿದೆ. ಅತಿಯಾದ ಮುಸಲ್ಮಾನರನ್ನು ಓಲೈಸಿಕೊಂಡು ಬಂದಿರುವ ಕಾಂಗ್ರೆಸ್‍ಗೆ ದೇಶದ ಹಿಂದೂಗಳು ಸರಿಯಾಗಿಯೇ ಪಾಠ ಕಳಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ನಂತರ ಸೋಲನ್ನೇ ಕಾಣುತ್ತಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಈ ಸೋಲಿಗೆ ಹಿಂದುತ್ವದ ಕಡೆಗಣನೆಯೇ ಕಾರಣ ಎಂಬ ಸತ್ಯ ಹೊರಬೀಳುತ್ತದೆ. ಆವಾಗ ಕಾಂಗ್ರೆಸ್ ಮಹರಾಜ ತನ್ನ ಒರಸೆಯನ್ನೇ ಬದಲಾಯಿಸುತ್ತಾರೆ. ಯಾವ ಹಿಂದೂಗಳನ್ನು ಕಡೆಗಣಿಸಿಕೊಂಡು ರಾಜಕೀಯ ಮಾಡುತ್ತಿದ್ದರೋ ಈಗ ಅದೇ ಹಿಂದೂಗಳ ದೇವಸ್ಥಾನಕ್ಕೆ ಬಿಡುವಿಲ್ಲದೆ ಭೇಟಿ ನೀಡಿ ಪೂಜೆ ಪುನಸ್ಕಾರ ಎಂದು ಸುತ್ತುತ್ತಿದ್ದಾರೆ.

ಈ ಕಾರಣಕ್ಕಾಗಿಯೇ ಸಿಎಂಗೆ ಶಾ ಭಯ?

“ಚುನಾವಣೆಯನ್ನು ಹೇಗೆ ಗೆಲ್ಲಬೇಕೆಂದು ನಮಗೆ ಗೊತ್ತಿದೆ. ನಾವು ಗೆಲ್ಲುತ್ತೇವೆ. ಗೆಲ್ಲೋದಕ್ಕೆ ನಾನಾ ತಂತ್ರಗಳಿವೆ. ಅದು ಗುಪ್ತ ತಂತ್ರವಾಗಿರುತ್ತದೆ. ಅದನ್ನು ಸ್ವತಃ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರಿಗೂ ಹೇಳಲ್ಲ”. ಇದು ಅಮಿತ್ ಶಾ ಕಳೆದ ಬಾರಿ ಬಂದಾವಾಗ ಹೇಳಿದ್ದ ಮಾತು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬೆಚ್ಚಿ ಬೀಳುವಂತೆ ಮಾಡಿದೆ. ಅಮಿತ್ ಶಾ ವಿರುದ್ಧ ರಣತಂತ್ರ ಹೆಣೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅಕ್ಷರಷಃ ಕಂಗಾಲಾಗಿ ಹೋಗಿದ್ದಾರೆ. ಶಾ ಮಾಡುತ್ತಿರುವ ಆ ಸೀಕ್ರೇಟ್ ವರ್ಕ್ ಏನು ಎಂಬ ತಲೆನೋವು ಮುಖ್ಯಮಂತ್ರಿಗಳನ್ನು ಕಾಡುತ್ತಲೇ ಇದೆ.

ಈ ಸೀಕ್ರೇಟ್ ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರಿಗೂ ತೀವ್ರ ತಲೆ ನೋವಾಗಿ ಪರಿಣಮಿಸಿದೆ. ಅದೇನು ಎಂಬ ಯೋಚನೆ ಎಲ್ಲರಲ್ಲೂ ಮನೆ ಮಾಡಿದೆ. “ಅದೇನೇ ಇರಲಿ. ಹೇಳಿದ ಕೆಲಸವನ್ನು ಮಾಡಿ” ಎಂದು ಅಮಿತ್ ಶಾ ಈಗಾಗಲೇ ಸೂಚನೆ ನೀಡಿದ್ದಾರೆ.

ಕರ್ನಾಕದಲ್ಲೂ ಟೆಂಪಲ್ ರನ್..!!!

ಕರ್ನಾಟಕದಲ್ಲೂ ಟೆಂಪಲ್ ರನ್ ಜೋರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನಗಳನ್ನು ಸುತ್ತಲು ಶುರುವಿಟ್ಟುಕೊಂಡಿದ್ದಾರೆ. ಹಿಂದಿನಿಂದಲೂ ನಾನು ಗೋಮಾಂಸ ತಿನ್ನುತ್ತೇನೆ, ದೇವರೇ ಇಲ್ಲ ಎಂದು ಬೊಗಳೆ ಬಿಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ “ನಾನೂ ಹಿಂದೂನೇ, ನನ್ನ ಹೆಸರಲ್ಲೂ ರಾಮನಿದ್ದಾನೆ” ಎನ್ನುವ ಮಾತುಗಳನ್ನು ಆಡಲು ಆರಂಭಿಸಿದ್ದಾರೆ.

ಅಮಿತ್ ಶಾ ಕಂಡರೆ ಇವರಿಗ್ಯಾಕೆ ಭಯ..?

ಅವರೆಂದರೆ ಸುಮ್ನೇನಾ… ಯಾವುದೇ ಧಿಕ್ಕಿನಿಂದ ನೋಡಿದರೂ ಅವರೊಬ್ಬ ಚಾಣಾಕ್ಯನೆ. ದೇಶದ ಮೂಲೆ ಮೂಲೆಗಳಲ್ಲೂ ಕೇಸರೀ ಅರಳಿಸುವುದೆಂದರೆ ಅದು ಸುಲಭದ ಮಾತಲ್ಲ. ಯಾಕೆಂದರೆ ಅಮಿತ್ ಶಾ ಅನ್ನುವ ಮಾಸ್ಟರ್ ಮೈಂಡ್ ಅಷ್ಟೊಂದು ನಿಪುಣತೆಯಿಂದ ಪಕ್ಷವನ್ನು ಬೆಳೆಸಿದವರು.

ಈವಾಗ ಅಮಿತ್ ಶಾ ದೃಷ್ಟಿ ನೆಟ್ಟಿರುವುದು ಕರ್ಣಾಟಕಕ್ಕೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಮುಗಿದ ತಕ್ಷಣ ಕರ್ನಾಟಕಕ್ಕೆ ಲಗ್ಗೆಯಿಟ್ಟ ಅಮಿತ್ ಗೆಲುವನ್ನು ಕಮಲ ಪಾಳಯಕ್ಕೆ ಧಕ್ಕಿಸಿಯೇ ತೀರುತ್ತೇವೆ ಎಂಬ ಧೃಢ ಸಂಕಲ್ಪವನ್ನು ಮಾಡಿದ್ದಾರೆ. “ಕಠಿಣವಾಗಿರುವ ಕೆಲವು ರಾಜ್ಯಗಳನ್ನು ಗೆದ್ದಿದ್ದೇವೆ. ಕರ್ನಾಟಕ ಯಾವ ಲೆಕ್ಕನೂ ಅಲ್ಲ. ಇಲ್ಲಿ ಮುಂದಿನ ಸರ್ಕಾರವನ್ನು ರಚಿಸೋದು ನಾವೇ” ಎಂಬ ಹೇಳಿಕೆಯನ್ನೂ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಭಯ ಎನ್ನುವುದು ತಲೆಯಲ್ಲೇ ಕುಳಿತುಕೊಳ್ಳುವಂತೆ ಮಾಡಿದೆ.

ಕಮಲ ನಾಯಕರಿಗೂ ಶಾ ಭಯ..?

ಕೇವಲ ವಿರೋಧ ಪಕ್ಷಗಳಿಗೆ ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ನಾಯಕರಿಗೂ ಅಮಿತ್ ಶಾ ಭಯ ಆರಂಭವಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಒಂದಲ್ಲಾ ಒಂದು ರೀತಿಯಲ್ಲಿ ಅಮಿತ್ ಶಾ ರಿಂದ ಬೈಗುಳ ತಿನ್ನುವ ಭಾರತೀಯ ಜನತಾ ಪಕ್ಷದ ನಾಯಕರು ಈಗ ಮತ್ತೆ ಶಾ ಆಗಮನದಿಂದ ಚುಕಾಗಿದ್ದಾರೆ. ಕಳೆದ ಬಾರಿ ಕರ್ನಾಟಕಕ್ಕೆ ಬಂದಿದ್ದಾಗ ಚುನಾವಣೆಯ ರಣತಂತ್ರದ ಬಗ್ಗೆ ಟಾಸ್ಕ್ ನೀಡಿದ್ದ ಅಮಿತ್ ಶಾ ಈ ಬಾರಿ ಅದನ್ನು ಪರಿಶೀಲಿಸಲಿದ್ದಾರೆ. ಮತ್ತೆ ಉದ್ದಟತನ ಮೆರೆದ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿದ್ದು ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರೆಲ್ಲರೂ ಮೈ ಚಳಿ ಬಿಟ್ಟು ಶಾ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಮಿತ್ ಶಾ ಕರ್ನಾಟಕದಲ್ಲಿ ಕಮಲವನ್ನು ಅರಳಿಸಿ ಕೇಸರೀ ಪತಾಕೆಯನ್ನು ಹಾರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ಬಿಜೆಪಿ ಮಯವಾಗಲಿದೆ.

-ಸುನಿಲ್ ಪಣಪಿಲ

Tags

Related Articles

Close