ಅಂಕಣಪ್ರಚಲಿತ

ಮಹಾಭಾರತ ಕಥೆಯಲ್ಲಿದೆ ಚೀನಾ, ಪಾಕಿಸ್ತಾನದಂತಹಾ ರಾಷ್ಟ್ರಗಳನ್ನು ಮಣಿಸುವ ತಂತ್ರ…!!

ಶತ್ರುವನ್ನು ನಾಶ ಮಾಡುವುದು ಹೇಗೆ…? ನಮ್ಮ ಶತ್ರುಗಳು ತುಂಬಾ ಬಲಶಾಲಿಗಳಾಗಿದ್ದರೆ ಅವರನ್ನು ಎದುರಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಅದಕ್ಕಾಗಿ ನಮ್ಮ ಸಾಮಥ್ರ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಶತ್ರುಗಳ ಬಲಹೀನತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಶತ್ರುಗಳ ಮುಂದೆ ನಮ್ಮ ಸಾಮಥ್ರ್ಯ ಹೆಚ್ಚಾಗಿದ್ದರೆ ಅವರನ್ನು ಕೆಣಕಿ ಯುದ್ಧಕ್ಕೆ ಆಹ್ವಾನಿಸಿ ಅವರನ್ನು ನಾಶ ಮಾಡಬೇಕು. ಒಂದು ವೇಳೆ ಅವರಲ್ಲಿ ಸೈನ್ಯ ಜಾಸ್ತಿ ಇದ್ದರೆ ನಮ್ಮ ಸೈನ್ಯವನ್ನು ಬಳಸದೆ ಬೇರೊಂದು ತಂತ್ರದ ಮೂಲಕ ಮಣ್ಣುಮುಕ್ಕಿಸಬಹುದು. ಹೌದು… ಇಂದು ನಮಗೆ ಇನ್ನಿಲ್ಲದಂತೆ ಕಾಟ ಕೊಡುತ್ತಿರುವ ಚೀನಾ ಮತ್ತು ಪಾಕಿಸ್ತಾನದಂತಹಾ ರಾಷ್ಟ್ರಗಳನ್ನು ಸೋಲಿಸುವ ತಂತ್ರವೊಂದು ಮಹಾಭಾರತದಲ್ಲಿದೆ…

ಇಂದು ಭಾರತದ ಶತ್ರುವಾದ ಪಾಕಿಸ್ತಾನ ನಮಗೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಭಯೋತ್ಪಾದನೆಯನ್ನು ರಫ್ತು ಮಾಡುವ ದೇಶ. ಅದೇ ರೀತಿ ಉತ್ತರ ಕೊರಿಯಾ ಇಡೀ ವಿಶ್ವಕ್ಕೆ ಬೆದರಿಕೆ ಒಡ್ಡುವಂತಹಾ ದೇಶ. ಈ ರಾಷ್ಟ್ರಗಳು ಸಾಮಥ್ರ್ಯದಲ್ಲಿ ಯಾವುದೇ ಕಮ್ಮಿ ಇಲ್ಲ. ಇಂಥಾ ರಾಷ್ಟ್ರಗಳನ್ನು ನಾಶ ಮಾಡುವುದು ಹೇಗೆ… ಇದಕ್ಕೆ ಭಗವಾನ್ ಶ್ರೀಕೃಷ್ಣನ ತಂತ್ರವನ್ನು ಬಳಸಿಕೊಂಡರೆ ಆ ಎರಡೂ ರಾಷ್ಟ್ರ್ರಗಳನ್ನು ಸಂಪೂರ್ಣವಾಗಿ ನಾಶ ಮಾಡಬಹುದು.

ಶ್ರೀಕೃಷ್ಣ ಮಾಗಧದ ದೊರೆ ಜರಾಸಂಧನನ್ನು ಯಾವ ರೀತಿ ನಾಶ ಮಾಡಿದನೆಂದರೆ ಖಂಡಿತಾ ಅಚ್ಚರಿಯಾಗಬಹುದು.

ಮಾಗಧದ ದೊರೆಯಾಗಿದ್ದ ಜರಾಸಂಧ ಮಹಾಕ್ರೂರಿಯಷ್ಟೇ ಅಲ್ಲದೆ ಮಹಾನ್ ಬಲಶಾಲಿಯಾಗಿದ್ದ. ನರಮೇಧ ಯಾಗವನ್ನು ಮಾಡಲು ಸಾವಿರಾರು ರಾಜಕುಮಾರರನ್ನು ಅಪಹರಿಸಿ ಬಂಧಿಸಿಟ್ಟಿದ್ದ. ನರಮೇಧ ಯಾಗವೆಂದರೆ ಯಾಗ ನಡೆಸಿ ಸಾವಿರಾರು ರಾಜಕುಮಾರರನ್ನು ಕೊಲೆ ನಡೆಸಿ ಯಜ್ಞ ಮಾಡುವುದು. ಇವನ ಕ್ರೂರತನಕ್ಕೆ ಇಡೀ ಲೋಕವೇ ಬೆಚ್ಚಿಬಿದ್ದಿತ್ತು. ಯಾಗ ಮಾಡುವ ದಿನ ಹತ್ತಿರ ಹತ್ತಿರ ಬರುತ್ತಿತ್ತು. ಮಥುರಾ ಪಟ್ಟಣಕ್ಕೆ 17 ಬಾರಿ ದಾಳಿ ನಡೆಸಿ ಸೋತು ಹೋಗಿದ್ದ ಕ್ರೂರಿ ಜರಾಸಂಧನ ನಿರಂಕುಷ ಪ್ರಭುತ್ವಕ್ಕೆ ಜನ ಬೆದರಿಹೋಗಿದ್ದರು.

ಶ್ರೀಕೃಷ್ಣ ಸಮುದ್ರ ಮಧ್ಯದಲ್ಲಿ ದ್ವಾರಕಾ ನಿರ್ಮಿಸಿದ್ದ. ಇತ್ತ ಇಂದ್ರಪ್ರಸ್ತದ ದೊರೆಯಾಗಿದ್ದ ಯುದಿಷ್ಟಿರ ರಾಜಸೂಯ ಯಾಗ ಮಾಡಲು ಮುಂದಾಗಿದ್ದ. ಇಂದ್ರಪ್ರಸ್ತಕ್ಕೆ ಆಗಮಿಸಿದ ಶ್ರೀಕೃಷ್ಣ ಜರಾಸಂಧನ ವಧೆಗಾಗಿ ಭೀಮಾರ್ಜುನರನ್ನು ತನ್ನ ಜೊತೆ ಕಳಿಸುವಂತೆ ಯುದಿಷ್ಟಿರನಲ್ಲಿ ಕೇಳಿಕೊಂಡನು. ಶ್ರೀಕೃಷ್ಣನ ಮಾತನ್ನು ಶಿರಸಾ ಪಾಲಿಸಿದ ಯುದಿಷ್ಟಿರ ಭೀಮಾರ್ಜುನನನ್ನು ಕೃಷ್ಣನ ಜೊತೆ ಕಳುಹಿಸಿಸದ.

ಮಹಾಕ್ರೂರಿ ಅಲ್ಲದೆ ಅಷ್ಟೇ ಪ್ರತಾಪಿಯಾಗಿದ್ದ ಜರಾಸಂಧನ ರಾಜ್ಯಕ್ಕೆ ಮುತ್ತಿಗೆ ಹಾಕುವಷ್ಟು ಸುಲಭದ ಮಾತಾಗಿರಲಿಲ್ಲ. ಅದಕ್ಕಾಗಿ ಭಗವಾನ್ ಶ್ರೀಕೃಷ್ಣ ಒಂದು ಉಪಾಯ ಮಾಡಿದ. ಜರಾಸಂಧನ ಮಾಗಧ ರಾಜ್ಯಕ್ಕೆ ಸೈನ್ಯ ಸಮೇತರಾಗಿ ಬಂದ ಕೃಷ್ಣ ಸೈನ್ಯವನ್ನು ಪರ್ವತದ ಬಳಿ ನಿಲ್ಲುವಂತೆ ಸೂಚನೆ ನೀಡಿದ. ಬಳಿಕ ಕೃಷ್ಣನ ಸೂಚನೆಯಂತೆ ಕಗ್ಗತ್ತಲಲ್ಲಿ ಕೃಷ್ಣ, ಭೀಮ ಹಾಗೂ ಅರ್ಜುನ ಮಾಗಧ ರಾಜ್ಯಕ್ಕೆ ನುಗ್ಗಿದರು.

ಜರಾಸಂಧನ ರಾಜ್ಯದಲ್ಲಿ ಮೂರು ಭೇರಿಗಳಿದ್ದವು. ರಣಭೇರಿ, ಜಯಭೇರಿ ಹಾಗೂ ಮೃತ್ಯು ಭೇರಿ. ಜರಾಸಂಧ ರಣಭೇರಿ ಹೊಡೆದು ಹೊರಟರೆ ಅವನನ್ನು ಸುರಾಸುರರಿಗೂ ಜಯಿಸಲು ಅಸಾಧ್ಯ. ಮೃತ್ಯು ಭೇರಿಯನ್ನು ಯಾರು ಒಡೆದು ಹಾಕುತ್ತಾನೋ ಅವನಿಂದಲೇ ಜರಾಸಂಧನಿಗೆ ಮರಣ. ದಿಗ್ವಿಜಯದ ಬಳಿಕ ಜಯಭೇರಿಯನ್ನು ಜರಾಸಂಧ ಹೊಡೆದರೆ ಆತನನ್ನು ಎದುರಿಸಲು ಅಸಾಧ್ಯ. ಮೂರೂ ಭೇರಿಯನ್ನು ಒಟ್ಟಾಗಿ ಒಡೆದು ಹಾಕಲು ನಿಶ್ಚಯಿಸಿದ ಕೃಷ್ಣ, ರಣಭೇರಿಯ ಬಾರಿಸುತ್ತಾನೆ. ಅರ್ಜುನ ಜಯಭೇರಿಯನ್ನು ಮೊಳಗಿಸಿದ. ಭೀಮಾ ಜರಾಸಂಧನ ಕೊಲ್ಲಲು ಅರ್ಹನೆಂದು ಬಗೆದು ಮೃತ್ಯುಭೇರಿಯನ್ನು ಪುಡಿಗಟ್ಟಿದ. ಬಳಿಕ ಮಾಗಧ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದರು.

ಬಳಿಕ ಜರಾಸಂಧನ ಅರಮನೆಗೆ ಅಪರದ್ವಾರದ ಮೂಲಕ ಎಡಗಾಲಿಂದ ಹೊಕ್ಕರು. ಮಾರು ವೇಷದಲ್ಲಿದ್ದ ಕೃಷ್ಣಾರ್ಜುನರನ್ನು ಗುರುತಿಸಲಾಗದ ಜರಾಸಂಧ ಅವರನ್ನು ಸ್ವಾಗತಿಸಿ ಪರಿಚಯ ಕೇಳಿದ. ಈ ವೇಳೆ ತಮ್ಮ ಮೂವರ ಪರಿಚಯವನ್ನೂ ಹೇಳಿದ ಕೃಷ್ಣ ನಿನ್ನನ್ನು ಕೊಲ್ಲಲು ಬಂದಿರುವುದಾಗಿ ಜರಾಸಂಧನಲ್ಲಿ ತಿಳಿಸಿದ. ಇದನ್ನು ಗಹಗಹಿಸಿದ ಜರಾಸಂಧ ನನ್ನನ್ನು ಕೊಲ್ಲುವುದಿರಲಿ, ಮೈಮುಟ್ಟಲೂ ಸಾಧ್ಯವಿಲ್ಲ ಎಂದು ಮೂದಲಿಸಿದ. ಈ ವೇಳೆ ಶ್ರೀಕೃಷ್ಣ ಜರಾಸಂಧ ತಮ್ಮ ಜೊತೆ ಯುದ್ಧ ಮಾಡುವಂತೆ ಪ್ರೇರೇಪಿಸಿ, ಕೊನೆಗೂ ಆತನನ್ನು ಯುದ್ಧಕ್ಕೆ ಸಿದ್ಧವಾಗುವಂತೆ ನೋಡಿಕೊಂಡ. ಕೊನೆಗೆ ಮಲ್ಲ ಯುದ್ಧದಲ್ಲಿ ಪ್ರವೀಣನಾಗಿದ್ದ ಜರಾಸಂಧ ತನಗೆ ಭೀಮನೇ ಸರಿಸಮಾನ ಎಂದು ಭಾವಿಸಿ ಆತನಲ್ಲಿ ಯುದ್ಧಕ್ಕೆ ಅಣಿಯಾಗುತ್ತಾನೆ.

13 ದಿನ ಕಳೆದು 14 ದಿನದವರೆಗೆ ಯುದ್ಧ ನಡೆಯಿತು. 14ನೇ ದಿನದಂದು ಜರಾಸಂಧನ ಶಕ್ತಿ ಕುಂದಿತು. ಭೀಮಾ ಜರಾಸಂಧನ ಕಾಲುಗಳನ್ನು ಹಿಡಿದು ಸೀಳಿ ಬಿಸಾಡಿದ. ಆದರೆ ದೇಹದ ಎರಡು ಸೀಳುಗಳು ಪುನಃ ಪುನಃ ಸಂಧಿಸಿ ಮತ್ತೆ ಯುದ್ಧ ಮಾಡುತ್ತಿದ್ದ. ಆಗ ಭೀಮನ ಶಕ್ತಿ ಕುಂದಲಾರಂಭಿಸಿತು. ಆಗ ಕೃಷ್ಣನು ತನ್ನ ಕೈಗಳನ್ನು ಮೇಲೆ ಕೆಳಗೆ ಮಾಡಿ ಜರಾಸಂಧನ ಬಿಸಾಡುವಂತೆ ಕೈಗಳಲ್ಲಿ ಸಂಕೇತಿಸಿದನು. ಕೃಷ್ಣನ ಕೈಸನ್ನೆಯನ್ನು ಅರ್ಥ ಮಾಡಿಕೊಂಡ ಭೀಮ ಜರಾಸಂಧನ ದೇಹವನ್ನು ಇನ್ನೊಮ್ಮೆ ಸೀಳಿ ತಲೆಕೆಳಗೆ, ಕಾಲುಮೇಲೆ ಮಾಡಿ ಬಹುದೂರಕ್ಕೆ ಬಿಸಾಡಿದನು. ಜರಾಸಂಧ ಮತ್ತೆ ಮೇಲೇಳಲಾಗದೆ ಸತ್ತೇ ಹೋದನು. ಜರಾಸಂಧನ ಸೆರೆಯಲ್ಲಿ ನರಮೇಧ ಯಾಗಕ್ಕೆ ಅರ್ಪಣೆಯಾಗಬೇಕಿದ್ದ ರಾಜಕುಮಾರರನ್ನು ಬಿಡಿಸಿದ ಕೃಷ್ಣ, ಅವರನ್ನು ಅವರವರ ರಾಜ್ಯಕ್ಕೆ ಕಳಿಸಿದರು.

ಒಬ್ಬ ಶತ್ರುಬಲಶಾಲಿಯಾಗಿದ್ದು ಆತನನ್ನು ನಾಶ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ಸಾಕಷ್ಟು ಬುದ್ಧಿಮತ್ತೆಯನ್ನು ಬಳಸಬೇಕು. ಶತ್ರುಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ, ಅವರ ಸಾಮಥ್ರ್ಯ, ಬಲಹೀನತೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕು. ಒಂದು ದಿನ ಯೋಜನಾಬದ್ಧವಾಗಿ ತಯಾರಿ ನಡೆಸಿ ಅವರನ್ನು ನಾವಾಗಿಯೇ ಪ್ರೇರೇಪಿಸಿ ಅವರನ್ನು ನಾಶ ಮಾಡಬೇಕು. ಇಲ್ಲವಾದರೆ ಅವರು ನಮ್ಮನ್ನು ನಾಶ ಮಾಡುತ್ತಾರೆ. ಚೀನಾ ಮತ್ತು ಪಾಕಿಸ್ತಾನವನ್ನು ಮಣ್ಣುಮುಕ್ಕಿಸಲು ಇದನ್ನೇ ಹೋಲುವ ತಂತ್ರವನ್ನು ಬಳಸಿದರೆ ಖಂಡಿತಾ ಆ ದೇಶಗಳನ್ನು ನಿರ್ಣಾಮ ಮಾಡಬಹುದು.

ದುರದೃಷ್ಟವೇನು ಗೊತ್ತಾ? ಭಾರತದಲ್ಲಿ ಮಕ್ಕಳಿಗೆ ಮಹಾಭಾರತವನ್ನು ಪಠ್ಯವನ್ನಾಗಿಸಿ ವೀರರನ್ನಾಗಿ ಮಾಡುವ ಬದಲು, ಪ್ರಗತಿಪರರರು ತಮ್ಮ ಮೂಗಿನ ನೇರಕ್ಕೆ ಬರೆದ ಅಯೋಗ್ಯ ಕಥೆಗಳನ್ನೇ ಪಠ್ಯ ವಿಷಯವನ್ನಾಗಿಸಿ ನಮ್ಮ ಮಕ್ಕಳನ್ನು ದುರ್ಬಲರನ್ನಾಗಿ, ನಾಸ್ತಿಕರನ್ನಾಗಿ ಮಾಡಲಾಗುತ್ತಿದೆ…

ಚೇಕಿತಾನ

Tags

Related Articles

Close