ಪ್ರಚಲಿತ

ಮುಂಬರುವ ಗುಜರಾತಿನ ಚುನಾವಣೆಗೂ ಮುನ್ನ ಮೋದಿಯ ಕೇಂದ್ರ ಸರಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಅಲ್ಲ! ಆ ರಹಸ್ಯ ವ್ಯಕ್ತಿ ಯಾರೆಂದು ತಿಳಿದರೆ ಆಘಾತಕ್ಕೊಳಗಾಗುವುದು ಖಂಡಿತ!

ಯಾವಾಗ ತಾತ್ವಿಕವಾಗಿ ಒಬ್ಬರನ್ನು ಸೋಲಿಸಲು ಸಾಧ್ಯವಿಲ್ಲವೋ, ಆಗ ದ್ವೇಷಗಳು ಹುಟ್ಟುತ್ತವೆ! ಬಗಲಲ್ಲಿಯೇ ಶತ್ರು ಎನ್ನುವ ಹಾಗೆ ಒಳಗಿನಿಂದಲೇ ರಾಜಕೀಯ ನಡೆದು ಹೋಗುತ್ತದೆ! ಆದರೆ, ಕೊನೆಗೂ ಅದರ ಪ್ರತಿಫಲ ಅನುಭವಿಸುವದು ಮೂರನೆಯವರಷ್ಟೇ ಹೊರತು ಸತ್ಯವೆನ್ನುವುದು ಮೂಲೆಗುಂಪಾಗಿಬಿಡುತ್ತದೆ!

ಇದೇ ಸ್ಥಿತಿಯೇ ನರೇಂದ್ರ ಮೋದಿಗೂ ಆಗುತ್ತಿರುವುದು! ಆದರೆ, ಈ ರೀತಿಯ ಕಪಟತನದ ಕುಟಿಲ ತಂತ್ರವನ್ನು ಯಾರು ಮಾಡತ್ತಿದ್ದಾರೆಂದರಿತರೆ ನಿಜಕ್ಕೂ
ಆಘಾತಕ್ಕೊಳಗಾಗುವುದು ಖಂಡಿತ! ಅಧಿಕಾರಕ್ಕೋಸ್ಕರ ಸಿದ್ಧಾಂತವನ್ನೇ ಮರೆತರಾ ಅಂತಹ ಘನತೆಯುಳ್ಳ ವ್ಯಕ್ತಿ ಎನ್ನಿಸಿಬಿಡುವುದು ಸುಳ್ಳಲ್ಲ!

ರಾಹುಲ್ ಗಾಂಧಿಯೂ ಅಲ್ಲ, ಸೋನಿಯಾಳೂ ಅಲ್ಲ!

ಹೌದು! ನರೇಂದ್ರ ಮೋದಿಗೆ ಇನ್ಯಾರು ಶತ್ರುವಿದ್ದಾರು ಇವರಿಬ್ಬರ ಬಿಟ್ಟರೆ ಅಂದುಕೊಂಡರೆ ತಪ್ಪು! ರಾಹುಲ್ ಗಾಂಧಿ ನರೇಂದ್ರ ಮೋದಿಯ ವಿರುದ್ಧ ಪಿತೂರಿ ಮಾಡುತ್ತಿರುವುದು ಎಂದುಕೊಂಡರೆ ನಿಮ್ಮ ತೀರ್ಪು ಎಡವುತ್ತದೆ! ಇಟಲಿಯ ಬೆಡಗಿ ಎಂದುಕೊಂಡರೂ ಉಹೂಂ! ನಿಮ್ಮ ಊಹೆ ತಪ್ಪೇ!

ಈ ಪಿತೂರಿ ನಡೆಯುತ್ತಿರುವುದು ಬಿಜೆಪಿ ಪಕ್ಷದ ಒಳಗಿನಿಂದಲೇ! ಬಿಜೆಪಿಯ ಪಕ್ಷವನ್ನು ದಶಕಗಳಷ್ಟು ಮುನ್ನಡೆಸಿದ ದೇಶ ಕಂಡ ಉತ್ತಮ ರಾಜಕಾರಣಿ ಗುಜರಾತ್ ನ ಚುನಾವಣೆಗೂ ಮುನ್ನ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಶಪಥ ತೊಟ್ಟಿದ್ದಾರೆ!

ಪಕ್ಷದೊಳಗಿನ ಪಿತೂರಿ!

ಪಕ್ಷದೊಳಗಿನಿಂದಲೇ ಗುಪ್ತವಾಗಿ ಮೋದಿಯನ್ನು ಕೆಳಗಿಳಿಸಲು ಪಿತೂರಿ ನಡೆಸುತ್ತಿರುವುದು ಯಾರು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಬಿಡುತ್ತೇನೆ!

ಇದ್ದಕ್ಕಿದ್ದ ಹಾಗೆ, ಬಿಜೆಪಿಯ ಘಟಾನುಘಟಿ ನಾಯಕರಾಗಿದ್ದ ಯಶವಂತ್ ಸಿನ್ಹಾ, ಅರುಣ್ ಶೌರೀ, ಶತ್ರುಘ್ನ ಸಿನ್ಹಾ ಬೊಬ್ಬೆ ಹೊಡೆಯುತ್ತಿರುವುದ್ಯಾಕೆ ಗೊತ್ತಾ?! ಅವರಿಗಿನ್ನು ಪಕ್ಷದಲ್ಲಿ ಯಾವ ಭವಷ್ಯವೂ ಇಲ್ಲ ಎಂಬುದನ್ನು ನೇರವಾಗಿಯೇ ಹೇಳುತ್ತಿದ್ದೇನೆ! ಯಾಕೆ ಗೊತ್ತಾ?! ಇಷ್ಟು ವರ್ಷದ ನಾಯಕತ್ವದಲ್ಲಿ ಸಿದ್ಧಾಂತದ ತಳಹದಿಗೆ ಅಂಟಿಕೊಳ್ಳಲೇ ಇಲ್ಲ ಎಂಬುದನ್ನು ಅವರೇ ಸಾಬೀತು ಪಡಿಸುತ್ತಿರುವಾಗ ಇನ್ನೇನನ್ನು ಹೇಳಲು ಸಾಧ್ಯವಾದೀತು?!

ಹಾಸ್ಯಾಸ್ಪದವೆಂದರೆ, ಇಂತಹ ನಾಯಕರ ಹೇಳಿಕೆಗಳನ್ನೆಲ್ಲ ಮಾಧ್ಯಮದವರು ಮಸಾಲೆ ಹಾಕಿ ಖಾರದ ಪುಡಿಯನ್ನು ಸ್ವಲ್ಪ ಜಾಸ್ತಿ ಹಾಕಿ ಅರೆದು ಸರಿಯಾಗಿಯೇ ರುಬ್ಬಿದರ ಪರಿಣಾಮ ನಿಧಾನವಾಗಿ ಇವರೆಲ್ಲರೂ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾದ ಹಿಂದಿನ ಕಾರಣ ಭಾರತಕ್ಕೆ ತಿಳಿಯುತ್ತಲೇ ಬಂತು ಎನ್ನುವುದು ನಿಜ! ಹಳೆಯ ಕಾಲದ ಅಂಕಿ ಅಂಶಗಳನ್ನಿಟ್ಟುಕೊಂಡು ಅರ್ಥವಿಲ್ಲದ ವಾದ ಮಾಡಿದ್ದ ಇವರು ಮಾಧ್ಯಮದ ಒಂದಷ್ಟು ದಿನಗಳ ಟಿಆರ್ ಪಿ ಯ ಅಸ್ತ್ರಗಳಾದರಷ್ಟೇ!

ಅರುಣ್ ಶೌರೀ ಹೇಳಿದ್ದೇನು ಗೊತ್ತೇ?!

ನೋಟು ನಿಷೇಧವಾದಾಗ, ” ಈ ಪ್ರಕ್ರಿಯೆ ಕೇಂದ್ರ ಸರಕಾರದ ಹಿಂದೆಂದೂ ಕಂಡಿರದ ಬಹುದೊಡ್ಡ ಹಗರಣ! ಕಾನೂನಾತ್ಮಕವಾಗಿಯೇ ಹಗರಣ ನಡೆಸಿದೆ ಸರಕಾರ!”

ಇದೊಂದು ಹುಚ್ಚುತನ! ಯಾರೆಲ್ಲರ ಹತ್ತಿರ ಕಪ್ಪು ಹಣವಿದೆಯೋ ಅವರೆಲ್ಲರೂ ಆದಷ್ಟು ಬೇಗ ಅದನ್ನು ಬಿಳಿ ಹಣವಾಗಿ ಮಾರ್ಪಾಟು ಮಾಡುತ್ತಾರಷ್ಟೇ!” ಎಂದು ಹೇಳಿದರು ಇದೇ ಶೌರಿ!

ಯಶವಂತ್ ಸಿನ್ಹಾ ತಮ್ಮ ಪಾಕಿಸ್ಥಾನದ ಒಲವನ್ನು ತೋರಿಸಿಕೊಟ್ಟಿದ್ದು ಹೀಗೆ!

ಭಾರತ ಭಾವನಾತ್ಮಕವಾಗಿ ಕಾಶ್ಮೀರ ಕಣಿವೆಯನ್ನು ಕಳೆದುಕೊಂಡಿದೆ! ಪಾಕಿಸ್ಥಾನದ ಜೊತೆ ಶಾಂತಿ ಸಂಧಾನ ಮಾಡದಿದ್ದರೆ ಪಾಕಿಸ್ಥಾನ ಖಂಡಿತ ಕಾಶ್ಮೀರವನ್ನು ಬಿಡುವುದಿಲ್ಲ.” ಎಂದ ಯಶವಂತ್ ಸಿನ್ಹಾರವರ ಹೇಳಿಕೆಗೆ ಸ್ವತಃ ಪಾಕಿಸ್ಥಾನ ಚಪ್ಪಾಳೆ ಹೊಡೆದು ನಕ್ಕಿತ್ತು!

ಎಂತಹ ಹುಚ್ಚನಿಗೂ ಸಹ ಪಾಕಿಸ್ಥಾನದ ಜೊತೆ ಶಾಂತಿ ಮಾತುಕಥೆ ನಡೆಸಿ ಕೈ ಕುಲುಕಿ ಬಂದರೆ ಉಪಯೋಗವಿಲ್ಲ ಎಂಬುದು ಗೊತ್ತಿದೆ! ಪಾಕಿಸ್ಥಾನವನ್ನು ನಂಬುವುದೂ ತೀರಾ ಅಸಾಧ್ಯದ ಸಂಗತಿ ಎಂಬುದೂ ಗೊತ್ತಿದೆ! ಆದರೆ, ಇವರೆಲ್ಲರೂ ಸಹ ತಮ್ಮ ಭಾರತೀಯ ಸ್ವಾಭಿಮಾನದ ವಿರುದ್ಧ ನಡೆದುಕೊಂಡಿದ್ದವರೇ!

ಪ್ರಾರಂಭದಲ್ಲಿ ಎಲ್ಲರಿಗೂ ಸಹ ಇವರೆಲ್ಲರೂ ಸರಕಾರವನ್ನು ಗುರಿಯಾಗಿಸಿ ವಿರೋಧಿಸುತ್ತಿದ್ದಾರೆ ಎಂದೆನಿಸಿತು! ಆದರೆ, ಅವರೆಲ್ಲರ ವಿರೋಧಕ್ಕೆ ಕಾರಣವಿದ್ದದ್ದು ಅಧಿಕಾರದ ದಾಹವಷ್ಟೇ! ವಾಸ್ತವ ಬೇರೆಯದೇ ಇತ್ತು ಎಂಬುದನ್ನು ಸ್ವತಃ ಮೋದಿಯೂ ಎಣಿಸಿರಲಿಕ್ಕಿಲ್ಲ!

ಇವರೆಲ್ಲರೂ ಸಹ ಕಾಂಗ್ರೆಸ್ ಏಜೆಂಟುಗಳ ತರಹ ಬಹಿರಂಗವಾಗಿ ಸರಕಾರವನ್ನು ವಿರೋಧಿಸಿದ್ಯಾಕೆ ಗೊತ್ತೇ?!

ಪರವಾಗಿಲ್ಲ ಬಿಡಿ! ದೇಶದ ಹಿತಕ್ಕೆ, ಆರ್ಥಿಕತೆಯ ಸ್ಥಿತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಇವರೆಲ್ಲರಿಗೂ ಕಾಳಜಿ ಇದ್ದಿದ್ದರೆ ಅವಶ್ಯವಾಗಿ
ಮೋದಿಯವರಿಗೆ ಬೆಂಬಲ ನೀಡುತ್ತಿದ್ದರು! ಪ್ರತಿದಿನ ಉಪಯುಕ್ತವಾದ ಸಲಹೆಗಳನ್ನು ನೀಡುತ್ತಿದ್ದರು! ಆದರೆ, ಮಾಧ್ಯಮದ ಮುಂದೆ ಬಂದರು! ಇವೆಲ್ಲವನ್ನೂ ಬಿಟ್ಟು ಬಹಿರಂಗವಾಗಿ ವಿಷಕಾರಿದರು!

Yes! Something was fishy!

ಇದೆಲ್ಲದರ ಹಿಂದಿರುವುದು ಅಡ್ವಾಣಿ??!!!! ಆಘಾತವಾಯಿತಾ?!

75 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ನಾಯಕನಿಗೂ ಪಕ್ಷದಲ್ಲಿ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಿಲ್ಲ ಎಂಬುವುದು ಎಲ್ಲರಿಗೂ ಗೊತ್ತಿರುವ ವಾಸ್ತವ! ಇದರಿಂದಾಗಿ, ಎಲ್.ಕೆ.ಅಡ್ವಾಣಿ ಹಾಗೂ ಸಿನ್ಹಾ ತಮ್ಮ ಅವಕಾಶವನ್ನು ಕಳೆದುಕೊಂಡರು! ಮೋದಿಯ ಸಂಸತ್ತಿನಲ್ಲಿ ಅವಕಾಶವಿಲ್ಲವಾಯಿತು! ಇದು ಅವರಂದುಕೊಂಡ ಮುಖಭಂಗ!!

ಹಂತ ಹಂತವಾಗಿ ಅವರ ದ್ವೇಷ ಮುಂದುವರೆಯುತ್ತಲೇ ಹೋಯಿತು! ಕೊನೆ ಕೊನೆಗೆ ಅರ್ಥವಿಲ್ಲದ ದ್ವೇಷವಾಯಿತು! ವೈಯುಕ್ತಿಕವಾಗಿಯೂ ಮುಂದುವರೆದಾಗ ಮಾಧ್ಯಮಗಳಿಗೆ ವಾಸನೆ ಬಡಿಯಿತು! ಇತ್ತೀಚೆಗೆ ದಸರಾ ಉತ್ಸವದ ಸಮಯದಲ್ಲಿ ಅಡ್ವಾಣಿಯ ಕೋಪವನ್ನು ಶಮನಗೊಳಿಸಲು ಮೋಹನರ ಭಾಗವತ್ ರನ್ನೂ ಕಳಿಸಿದರು ಮೋದಿ!

ಅಡ್ವಾಣಿಯವರ ದ್ವೇಷದ ಹಿಂದಿನ ರಹಸ್ಯ!

ಬಿಜೆಪಿ ಯಾವಾಗ ಗನ್ನು ಹಿಡಿದೇ ಕೇರಳದ ಪ್ರವೇಶ ಮಾಡಿತೋ, ಕಮ್ಮಿನಿಷ್ಠೆಯರಿಗೆ ಬೆಂಕಿ ಬಿತ್ತು! ಅಮಿತ್ ಷಾ ಜನರಕ್ಷಾ ಯಾತ್ರಾವನ್ನು ಯಶಸ್ವಿಯಾಗಿ ಪೂರೈಸುತ್ತಿರುವಾಗಲೇ ಉಳಿದೆಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮತ್ತೆ ದೆಹಲಿಗೆ ಹೋದರು! ಇದ್ದಕ್ಕಿದ್ದ ಹಾಗೆ! ಯಾತ್ರೆಗಿಂತಲೂ ಹೆಚ್ಚಿನದಾದ ಕೆಲಸ ಏನಿದ್ದೀತು?! ಅತಿ ಮುಖ್ಯವಾದ ವಿಷಯ ಏನಿದ್ದಿರಬಹುದು?!

ಇದನ್ನು ಪ್ರತಿ ಒಬ್ಬ ಪಕ್ಷದ ಕಾರ್ಯಕರ್ತನೂ ಯೋಚಿಸಿದ್ದಾನೆ! ಪ್ರತಿಯೊಬ್ಬ ನಾಯಕನೂ ಯೋಚಿಸಿದ್ದಾನೆ!

ಪಕ್ಷದ ಏಳಿಗೆಗೆ ದಕ್ಷತೆಯಿಂದ ಕೆಲಸ ಮಾಡಿದವರಲ್ಲಿ ಅಡ್ವಾಣಿಯೂ ಒಬ್ಬರು! ವಾಜಪೇಯಿಗೆ ಬೆಂಗಾವಲಾಗಿ ನಿಂತವರು! ಅಂತಹದ್ದರಲ್ಲಿ ಇಷ್ಟು ವಿಷಕಾರುವ ಅಗತ್ಯವೇನಿತ್ತು?! ತನಗೆ ಅಧಿಕಾರ ಸಿಗಲಿಲ್ಲ ಎಂಬ ನೋವೇ?! ಮೋದಿಯ ಬಗೆಗಿನ ಮತ್ಸರವೇ?! ದೇಶದ ಹಿತದ ಬಗ್ಗೆಯೂ ಯೋಚಿಸದೇ ಹಠ ಹಿಡಿದು ಕೂತರಾ ಅಡ್ವಾಣಿ ಜೀ?! ಮೋದಿಯವರನ್ನೂ ವಿರೋಧಿಸುವಷ್ಟು ಅಪಕ್ವರಾದರಾ?!

ಇವತ್ತು ಯಾರೋ ಒಬ್ಬ ‘ಮೋದಿ ಭಾರತದ ಆರ್ಥಿಕತೆಯನ್ನು ನಾಶಗೊಳಿಸುತ್ತಿದ್ದಾರೆ” ಎಂದರೆ ಆತ 24 ಗಂಟೆಗಳಲ್ಲಿ ಸೆಲೆಬ್ರಿಟಿಯಾಗುತ್ತಾನೆ! ಅಂತಾದ್ದರಲ್ಲಿ. . . ಅಡ್ವಾಣಿಗಿದು ಬೇಕಿತ್ತಾ?!

ನೆನ್ನೆ ಮೋದಿ ಪ್ರತಿ ಟೀಕಾಕಾರರಿಗೂ ಉತ್ತರ ಕೊಟ್ಟಿದ್ದಾರೆ! ಅದೂ ಅಂಕಿ ಅಂಶಗಳನ್ನಿಟ್ಟು ಭಾರತದ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿರುವುದನ್ನು ನಿರೂಪಿಸಿದ್ದಾರೆ! ಬಿಡಿ! ಯಾವ ಮಾಧ್ಯಮವೂ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ! ಅದೇ.. ಮೋದಿ ಒಂದರೆಗಳಿಗೆ ತಡವರಿಸಿದ್ದರೂ ದೊಡ್ಡ ಸುದ್ದಿಯಾಗುತ್ತಿತ್ತು! ಭಾರತದ ಆರ್ಥಿಕತೆ ಬಿದ್ದೇ ಹೋಯಿತು ಎನ್ನುತ್ತಾ ಊಳಿಡುತ್ತಿದ್ದವು ಇದೇ ಮಾಧ್ಯಮಗಳು! ಆದರೆ ವಾಸ್ತವ ಮಾತ್ರ ಕತ್ತಲ ಕಣಿವೆ!

ಇದು ಸತ್ಯ! ಮುಂಬರುವ ಗುಜರಾತಿನ 2019 ರ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಸಾಧ್ಯವೇ ಇಲ್ಲ! ಆದ್ದರಿಂದ, ಈರ್ವರೆಲ್ಲ ವಿರೋಧಿಗಳೂ ಅಡ್ವಾಣಿಯನ್ನು ದಾಳವನ್ನಾಗಿ ಉಪಯೋಗಿಸುತ್ತಿರುವುದರಲ್ಲಿ ಸಂಶಯವೂ ಇಲ್ಲ!

ಈ ಎಲ್ಲಾ ನಾಟಕಗಳು ಇನ್ನೆಲ್ಲಿಗೆ ತೆಗೆದುಕೊಂಡು ಹೋಗುತ್ತವೆಯೋ?! ಗುಜರಾತ್ ಚುನಾವಣೆಗೂ ಮುನ್ನ ಇವಷ್ಟೂ ಬಯಲಾಗುತ್ತದೆಂಬ ಅಚಲ ವಿಶ್ವಾಸ ನನಗಿದೆ! ಆದರೆ, ಅಡ್ವಾಣಿ ಇದನ್ನು ಅರಿಯುತ್ತಾರೋ ಇಲ್ಲವೋ ಗೊತ್ತಿಲ್ಲ! ಅಕಸ್ಮಾತ್ ಮೋದಿ ಸೋತರೆ ಈರ್ವರೆಲ್ಲ ನಾಯಕರು ಸಿದ್ಧಾಂತ ಬದಿಗಿರಿಸಿ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ನ ಕೈ ಹಿಡಿಯುತ್ತಾರೆಯೇ ಎಂಬುದು ಈಗಿರುವ ಪ್ರಶ್ನೆ!

– ತಪಸ್ವಿ

Tags

Related Articles

Close