ಪ್ರಚಲಿತ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಕೇಸ್… ಈ ಬಾರಿ ಮುಖ್ಯಮಂತ್ರಿಗಳು ತಗಲಾಕಿಕೊಂಡಿದ್ದು ಹೇಗೆ ಗೊತ್ತಾ..?

ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ರಾಜ್ಯದಲ್ಲಿ ಅದ್ಯಾವಾಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂತೋ ಅಂದಿನಿಂದ ಈ ರಾಜ್ಯಕ್ಕೆ ಗ್ರಹಚಾರ ಅನ್ನೋದು ತಪ್ಪಿಯೇ ಇಲ್ಲ. 2013ರಿಂದ ಈ ರಾಜ್ಯಕ್ಕೆ ಅದ್ಯಾವ ಗ್ರಹಚಾರ ಒಕ್ಕರಿಸಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಒಂದಲ್ಲ ಒಂದು ರೀತಿಯ ಅರಾಜಕತೆಗಳು ಸೃಷ್ಟಿಯಾಗುತ್ತಲೇ ಇರುತ್ತಿದೆ. ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆಯುತ್ತಿದ್ದ ಕರ್ನಾಟಕ ಇಂದು ಸಾಲ ಎಂಬ ಹೊರೆಯಲ್ಲಿ ಮಿಂದು ಮುಳುಗುತ್ತಿದೆ. ಯಾವಾಗ ಕೊಲೆಗಳಾಗುತ್ತೋ ಯಾವಾಗ ಕಳ್ಳತನವಾಗುತ್ತೋ, ಯಾವಾಗ ದರೋಡೆಗಳಾಗುತ್ತೋ, ಯಾವಾಗ ಅತ್ಯಾಚಾರಗಳಾಗುತ್ತೋ ಎಂಬ ಭಯದಿಂದಲೇ ಈ ರಾಜ್ಯದ ಜನತೆ ತಮ್ಮ ನಿತ್ಯದ ಜೀವನವನ್ನು ನಡೆಸುವಂತಹ ಪರಿಸ್ಥಿತಿ ಎದುರಾಗಿದೆ.

ತನ್ನಷ್ಟಕ್ಕೆ ತಾನು ಕೆಲಸ ಮಾಡಿಕೊಂಡಿದ್ದ ಹಿಂದೂ ಸಂಘಟನೆಯ ಮುಖಂಡರು ಕೊಲೆಯಾಗುತ್ತಾರೆ, ಸದಾ ತಮ್ಮ ಪಕ್ಷದ ನಾಯಕರನ್ನು ಹೊಗಳುತ್ತಿದ್ದ ಪತ್ರಕರ್ತೆ ಗೌರೀ ಲಂಕೇಶ್ ಸಂಜೆಯಾಗುತ್ತಲೇ ಹತ್ಯೆಯಾಗುತ್ತಾರೆ, ದಕ್ಷ ಪೊಲೀಸ್ ಅಧಿಕಾರಿಗಳು ದಿನಬೆಳಗಾಗುವುದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?, ನೂರಾರು ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ, ಪೊಲೀಸ್ ಅಧಿಕಾರಿಗಳು ತಮ್ಮ ನಿಷ್ಟೆಯನ್ನು ಪ್ರದರ್ಶಿಸಿ ದಕ್ಷತೆಯನ್ನು ಮೆರೆದರೆ ರಾತ್ರಿ ಬೆಳಗಾಗುವುದರೊಳಗೆ ಅವರು ವರ್ಗಾವಣೆ ಶಿಕ್ಷೆಯನ್ನು ಅನುಭವಿಸುತ್ತಾರೆ, ಮಲ್ಲಿಕಾರ್ಜುನ ಬಂಡೆಯಂತಹ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಇಲ್ಲಿ ರಕ್ಷಣೆಯೇ ಇಲ್ಲ, ಡಿವೈಎಸ್‍ಪಿ ಗಣಪತಿಯ ನಿಗೂಢ ಸಾವಿನ ಬಗ್ಗೆ ಸ್ವತಃ ಸಚಿವ ಕೆ.ಜೆ.ಜಾರ್ಜ್ ಮೇಲೆ ಆರೋಪ ಇದ್ದರೂ ಆತ ರಾಜೀನಾಮೆ ನೀಡೋದಿಲ್ಲ ಹೀಗೆ ಒಂದಾ ಎರಡಾ… ಹೇಳಿದರೆ ಮುಗಿಯದಷ್ಟಿದೆ ಈ ರಾಜ್ಯದ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿರುವ ಅರಾಜಕತೆ.

ಡಿನೋಟಿಫಿಕೇಶನ್ ಹಗರಣ, ಶಾಲಾ ಮಕ್ಕಳ ಶೂ ಹಗರಣ, ಪರಿಶಿಷ್ಟ ಜಾತಿಗಳ ಲ್ಯಾಪ್ ಟಾಪ್ ಹಗರಣ, ಅನ್ನಭಾಗ್ಯದ ಅಕ್ಕಿಯಲ್ಲಿ ಹಗರಣ, ವಿದ್ಯುತ್ ಹಗರಣ, ರಾಸಲೀಲೆ ಪ್ರಕರಣ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ, ಮಹಿಳೆಯರ ಮೇಲೆ ಕಾಂಗ್ರೆಸ್ ಶಾಸಕರ ಹಲ್ಲೆ ಹಾಗೂ ದಬ್ಬಾಳಿಕೆ ಪ್ರಕರಣ, ಮುಖ್ಯಮಂತ್ರಿಗಳ ಕಾಫಿ, ಬಿಸ್ಕತ್, ಬೆಡ್‍ಶೀಟ್‍ಗೆ ಲಕ್ಷ ಲಕ್ಷ ಖರ್ಚು ಪ್ರಕರಣ, ಮುಖ್ಯಮಂತ್ರಿಗಳ 80 ಲಕ್ಷದ ವಾಚ್ ಪ್ರಕರಣ, ಮುಖ್ಯಮಂತ್ರಿಗಳ ಬೆಳ್ಳಿ ತಟ್ಟೆಯ ಊಟ ಪ್ರಕರಣ, ಮುಖ್ಯಮಂತ್ರಿಗಳ ಕಿಸ್ಸಿಂಗ್ ಪ್ರಕರಣ ಮಾತ್ರವಲ್ಲದೆ ಇನ್ನೂ ಅನೇಕ ಪ್ರಕರಣಗಳು ರಾಜ್ಯದ ಜನತೆಯನ್ನು ಕಂಗೆಟ್ಟು ಹೋಗುವಂತೆ ಮಾಡಿದೆ. ರಾಜ್ಯದ ಜನತೆ ನೆಮ್ಮದಿಯಿಂದ ನಿದ್ದೆ ಮಾಡಲು ಆಗದೆ ಯಾವಾಗ ಏನಾಗುತ್ತೋ ಎಂಬ ಭಯ ರಾಜ್ಯದ ಜನತೆಯ ಮೇಲೆ ಆತಂಕವನ್ನೇ ಸೃಷ್ಟಿಸಿದೆ.

Image result for siddaramaiah

ಹೊಸವರ್ಷದಂದೇ ಮುಖ್ಯಮಂತ್ರಿಗಳ ವಿರುದ್ಧ ಕೇಸ್…

ಬಿಡಿ. ಅದು ದೊಡ್ಡ ವಿಷಯವೇ ಅಲ್ಲ. ಏಕೆಂದರೆ ಅದು ಕೇಸ್ ದಾಖಲಿಸಿರುವುದು ಎಸಿಬಿ ಎಂಬ ಕಾಂಗ್ರೆಸ್ ಹಿಡಿತದಲ್ಲಿರುವ ಸಂಸ್ಥೆಯಲ್ಲಿ. ಎಸಿಬಿಯಲ್ಲಿ ಅದೆಷ್ಟೋ ಪ್ರಕರಣಗಳು ಮುಖ್ಯಮಂತ್ರಿಗಳ ಮೇಲೆ ದಾಖಲಾಗಿದೆ. ಈ ಪ್ರಕರಣಗಳೆಲ್ಲವೂ ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿತ್ತು. ಆದರೆ ತನ್ನ ಉಪಕಾರಕ್ಕಾಗಿ ತಾನೇ ನಿರ್ಮಿಸಿದ ಎಸಿಬಿಯಲ್ಲಿ ಈ ಎಲ್ಲಾ ಪ್ರಕರಣಗಳು ದಾಖಲಾಗಿವೆ.

ಈ ಬಾರಿ ಮುಖ್ಯಮಂತ್ರಿಗಳ ಮೇಲೆ ದಾಖಲಾಗಿರುವುದು ಬರೋಬ್ಬರಿ 129 ಕೋಟಿಯ ಹಗರಣ. ಮುಖ್ಯಮಂತ್ರಿಗಳು ತಮ್ಮ ಪಕ್ಷದ ಸಾಧನಾ ಸಮಾವೇಶಕ್ಕೆ ಸರ್ಕಾರದ ಕೋಟಿ ಕೋಟಿ ಹಣಗಳನ್ನು ದುರ್ಬಳಕೆ ಮಾಡಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ತಮ್ಮ ಪಕ್ಷದ ಸರ್ಕಾರ ಈ ರಾಜ್ಯದಲ್ಲಿ ಬೇಕಾದಷ್ಟು ಸಾಧನೆ ಮಾಡಿದೆ ಎಂಬುವುದನ್ನು ಬಿಂಬಿಸಲು ಕೋಟಿ ಕೋಟಿ ಹಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಇದರ ಬಗ್ಗೆ ಕೇಸ್ ದಾಖಲಾಗಿದೆ.

ಹೊಸವರ್ಷ, ಅಂದರೆ ಜನವರಿ 01 2018ರ ಹೊಸ ವರ್ಷದ ಆರಂಭದ ಮೊದಲ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದ ಸಾಧನೆಗಳ ಪ್ರಚಾರಕ್ಕೆಂದು ಸುಮಾರು 129 ಕೋಟಿ ರೂ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳ ಪ್ರಚಾರಕ್ಕೆಂದು 129 ಕೋಟಿ ರೂಗಳ ಬೃಹತ್ ಮೊತ್ತವನ್ನು ದುರ್ಬಳಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕ ಹೋರಾಟ ಸಮಿತಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರಿನಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ತನಿಖೆ ನಡೆಸಬೇಕೆಂದು ನಾಗರಿಕ ಹಕ್ಕು ಹೋರಾಟ ಸಮಿತಿಯು ತನ್ನ ದೂರಿನಲ್ಲಿ ಒತ್ತಾಯಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವ ಕರ್ನಾಟಕ ನಿರ್ಮಾಣದ ಯಾತ್ರೆಯ ಹೆಸರಿನಲ್ಲಿ ಕಳೆದ 15 ದಿನಗಳಿಂದ ರಾಜ್ಯದ ನಾನಾ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಸರ್ಕಾರದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್ ನಡೆಗೆ ವಿಪಕ್ಷಗಳು ಗರಂ…

ರಾಜ್ಯ ಕಾಂಗ್ರೆಸ್ ಸರ್ಕಾರ ಈ ರೀತಿ ಸರಕಾರದ ಹಣಗಳನ್ನು ತನ್ನ ಪಕ್ಷದ ಸಾಧನೆಗೆ ಉಪಯೋಗಿಸುತ್ತಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಮಾತ್ರವಲ್ಲದೆ ಜನರ ಹಣವನ್ನು ಈ ರೀತಿ ಪೋಲು ಮಾಡುವುದು ಎಷ್ಟು ಸರಿ ಎಂದು ಕಿಡಿ ಕಾರಿವೆ. ಪ್ರಮುಖ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿಗಳ ಈ ರೀತಿಯ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾ ದಳ ಕೂಡಾ ಈ ಬಗ್ಗೆ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಎಂಬ ಸೋಗಲಾಡಿ ಪಕ್ಷ ಈ ರಾಜ್ಯದಲ್ಲಿ ಯಾವ ರೀತಿ ತನ್ನ ನೀಚ ಆಡಳಿತವನ್ನು ನೀಡಿದೆ ಎಂಬುವುದು ಜಗದ್ಜಾಹೀರು. ಒಂದಲ್ಲ ಒಂದು ರೀತಿಯ ಅರಾಜಕತೆಗಳನ್ನು ಸೃಷ್ಟಿಸುತ್ತಲೇ ಬಂದಿದೆ. ಹಿಂದೂ ವಿರೋಧಿ ನೀತಿಗಳು, ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ, ಸಹಿತ ಇತ್ಯಾದಿ ಜನವಿರೋಧಿ ಕೆಲಸಗಳಿಂದಲೇ ಹೆಸರಾಗಿರುವ ಈ ತುಘಲಕ್ ಸರ್ಕಾರ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮನೆಗೆ ಹೋಗುವುದು ಖಂಡಿತಾ ಎಂಬುವುದರಲ್ಲಿ ಯಾವ ಸಂದೇಹವೂ ಇಲ್ಲ.

source:
https://m.dailyhunt.in/news/india/kannada/oneindia+kannada-epaper-thatskannada/hosa+varshadha+aarambhadha+dinave+sankashtakke+silukidha+siddaraamayya-newsid-79069820?ss=pd&s=a
-ಸುನಿಲ್ ಪಣಪಿಲ

 

Tags

Related Articles

Close