ಪ್ರಚಲಿತ

ಮುಸಲ್ಮಾನರ ವಿರೋಧದ ನಡುವೆಯೂ ಹಿಂದೂ ಮಹಿಳೆಯರೊಂದಿಗೆ ಶಿಕ್ಷಣ ಕ್ರಾಂತಿಯನ್ನೆಬ್ಬಿಸಿದ, ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಯಾರು ಗೊತ್ತೇ?!

ಭಾರತೀಯ ಸಮಾಜವು ವರ್ಣ, ಜಾತಿ, ವರ್ಗವ್ಯವಸ್ಥೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪೆÇೀಷಿಸಿದ್ದು, ಇಂತಹ ಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗಾಗಿಯೇ ಮೊಟ್ಟಮೊದಲ ಬಾರಿಗೆ ಶಾಲೆಗಳನ್ನು ತೆರೆದು ಅಕ್ಷರ ಜ್ಞಾನವನ್ನು ನೀಡಿದವರು ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿ ಎಂಬುವುದು ತಿಳಿದೇ ಇದೆ!! ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ಸಾವಿತ್ರಿಬಾಯಿ ಫುಲೆಯ ಶಿಕ್ಷಣ ಕ್ರಾಂತಿಯ ಯಶಸ್ಸಿಗೆ ಕಾರಣರಾದವರು ಮಾತ್ರ ಈ ಮುಸ್ಲಿಂ ಮಹಿಳೆ!!

ಸಂಪ್ರದಾಯಸ್ಥ ಕಟ್ಟುಪಾಡುಗಳಲ್ಲಿ ಒರ್ವ ಮುಸ್ಲಿಂ ಮಹಿಳೆ ಅದೂ…. 18ನೇ ಶತಮಾನದಲ್ಲಿದ್ದ ಆಚಾರ ವಿಚಾರಗಳಿಗೆ ಸೆಡ್ಡು ಹೊಡೆದು ಫುಲೆ ದಂಪತಿಗಳೊಂದಿಗೆ ಶಿಕ್ಷಣ ಕ್ರಾಂತಿಯನ್ನು ಆರಂಭಿಸಿದರು ಎಂದರೆ ಅದು ಸಣ್ಣ ವಿಚಾರವೇ ಅಲ್ಲ!! ಹಾಗಾದರೆ ಯಾರು ಗೊತ್ತೇ ದೇಶದ ಪ್ರಪ್ರಥಮ ಮುಸ್ಲಿಂ ಶಿಕ್ಷಕಿ ಎಂದೇ ಹೆಸರು ವಾಸಿಯಾದಂತಹ ಮಹಿಳೆ!!

ಪುರುಷ ಪ್ರಧಾನವಾದ ಸಮಾಜದಲ್ಲಿ ಒರ್ವ ಮುಸ್ಲಿಂ ಹೆಣ್ಣು ಮಗಳೊಬ್ಬಳು ಪುರುಷರಂತೆಯೇ ಸಮಾನ ಸ್ಥಾನವನ್ನು ಪಡೆದುಕೊಂಡು ಭಾರತದ ಮೊದಲ ಮುಸ್ಲಿಂ ಶಿಕ್ಷಕಿಯಾಗುತ್ತಾರೆ ಎಂದರೆ ಅದನ್ನು ಮೆಚ್ಚಲೇ ಬೇಕು!! ಆದರೆ ಜಡ್ಡುಗಟ್ಟಿದ ಸಮಾಜದಿಂದ ಕಿರುಕುಳ ಅನುಭವಿಸಿ ತಮ್ಮ ಜೀವಿತದ ಅವಧಿಯಲ್ಲಿ ತಳ ಸಮುದಾಯ, ಅಸ್ಪೃಶ್ಯರು ಹಾಗೂ ಮಹಿಳೆಯರ ಶಿಕ್ಷಣ ಹಾಗೂ ಅವರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡ ಸಾವಿತ್ರಿಬಾಯಿ ಫುಲೆಯವರ ಶಿಕ್ಷಣ ಕ್ರಾಂತಿಯ ಯಶಸ್ಸಿಗೆ ಕಾರಣರಾಗಿದ್ದು ಇದೇ ಮುಸ್ಲಿಂ ಮಹಿಳೆ!!

ಆಕೆ ಬೇರಾರು ಅಲ್ಲ.. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟುಕೊಂಡು, ಮಹಿಳೆ ಎಂದರೆ ಪುರುಷನ ಆಶ್ರಯದಲ್ಲಿ ನಾಲ್ಕು ಗೋಡೆಗಳ ನಡುವೆ ಇರಬೇಕು ಎಂಬ ಮನಸ್ಥಿತಿಯನ್ನು ಹಿಮ್ಮೆಟ್ಟಿ ಸಾವಿತ್ರಿಯವರೊಂದಿಗೆ ಕೈಜೋಡಿಸಿ ಶಿಕ್ಷಣ ಕ್ರಾಂತಿಯ ಯಶಸ್ಸಿಗೆ ಕಾರಣರಾದವರು ಫಾತಿಮಾ ಶೇಖ್!! 19ನೇಯ ಶತಮಾನದ ಮೊದಲ ಮುಸಲ್ಮಾನ್ ಶಿಕ್ಷಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ಇವರು ಮುಸ್ಲಿಂ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ನಿಂತ ಗಟ್ಟಿಗಿತ್ತಿ!!

ಹೌದು… ಆಧುನಿಕ ಭಾರತದ ಮೊದಲ ಮುಸ್ಲಿಂ ಮಹಿಳೆ ಎಂದೆನಿಸಿರುವ ಫಾತಿಮಾ ಶೇಖ್ ಮುಸಲ್ಮಾನ್ ಸಮಾಜದ ಕಟ್ಟುಪಾಡುಗಳ ಮಧ್ಯೆಯೂ ಕುಟುಂಬದ ಹಾಗೂ ಸಮಾಜದ ತೀವ್ರ ವಿರೋಧವನ್ನು ಕಟ್ಟಿಕೊಂಡು ಹೆಣ್ಣುಮಕ್ಕಳ ಹಾಗೂ ಶೋಷಿತ ವರ್ಗಕ್ಕೆ ಧ್ವನಿಯಾದ ಫಾತಿಮಾ ಶೇಖ್ ತನ್ನ ಸಹೋದರ ಉಸ್ಮಾನ್ ಶೇಖ್ ಬೆಂಬಲದಿಂದ ಸಾಮಾಜಿಕ ಬದಲಾವಣೆಗೆ ಹೋರಾಡಿದ ದಿಟ್ಟ ಮಹಿಳೆ.

ಸಾವಿತ್ರಿ ಬಾ ಫುಲೆಯೊಂದಿಗೆ ಕೈಜೋಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಬರೆದ ಫಾತಿಮಾ ಶೇಖ್, ಮಹಿಳೆಯೆಂದರೆ ಪುರುಷನ ಆಶ್ರಯದಲ್ಲಿ ನಾಲ್ಕು ಗೋಡೆಗಳ ನಡುವೆ ಇರಬೇಕು ಎಂಬ ಮನಸ್ಥಿತಿಯಿಂದ ಹೊರ ನಡೆದು ಶಿಕ್ಷಣದ ಬಾಗಿಲು ತೆರೆದಂತಹ ಮೊದಲ ಮುಸಲ್ಮಾನ್ ಶಿಕ್ಷಕಿ!!

ಹೌದು… ಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೊಳಗಾಗಿ ಶಿಕ್ಷಣದಿಂದ ವಂಚಿತರಾದವರಿಗೆ, ಮೊಟ್ಟಮೊದಲ ಬಾರಿಗೆ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದ ಜ್ಯೋತಿಬಾ ಮತ್ತು ಸಾವಿತ್ರಿ ಫುಲೆ ವಿರುದ್ಧ ಸಮಾಜದ ಮೇಲ್ವರ್ಗದ ಜನ ತಿರುಗಿಬಿದ್ದಿದ್ದರು. ಯಾಕೆಂದರೆ ಪೇಶ್ವೆಗಳ ಆಡಳಿತದ ಅವಧಿಯಲ್ಲಿ ಹೂವನ್ನು ಮಾರುತ್ತಿದ್ದರಿಂದ ಇವರ ಕುಟುಂಬಕ್ಕೆ ಫುಲೆ ಎಂಬ ಅಡ್ಡ ಹೆಸರು ಬಂತು. ಹಿಂದುಳಿದ ಹೂಗಾರ ಜಾತಿಗೆ ಸೇರಿದ ಫುಲೆ ದಂಪತಿಗಳ ಸಾಮಾಜಿಕ ಕಾರ್ಯಕ್ಕೆ ಕುಟುಂಬ ಹಾಗೂ ಸಮುದಾಯದಿಂದಲೂ ವಿರೋಧ ವ್ಯಕ್ತವಾಯಿತು. “ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ, ಇಲ್ಲ… ಊರು ಬಿಟ್ಟು ತೊಲಗಿ” ಎಂಬ ಬೆದರಿಕೆಗಳು ಬಂದವು.

ಹೀಗಾಗಿ ಎರಡನೇ ಮಾರ್ಗವನ್ನು ಆಯ್ಕೆ ಮಾಡಿದ ಫುಲೆ ದಂಪತಿಗಳ ಹೋರಾಟಕ್ಕೆ ನೆರವಾಗಿದ್ದು ಪುಣೆಯ ಉಸ್ಮಾನ್ ಶೇಖ್!! ಊರು ಬಿಟ್ಟು ಹೊರ ಬಂದ ಜ್ಯೋತಿ ಬಾ ಮತ್ತು ಸಾವಿತ್ರಿ ಫುಲೆ ದಂಪತಿಗಳಿಗೆ ಪುಣೆಯ ತನ್ನ ನಿವಾಸದಲ್ಲಿ ಇರಲು ಸೂರು ಕಲ್ಪಿಸಿ ಕೊಟ್ಟರು ಉಸ್ಮಾನ್ ಶೇಖ್. ಅಷ್ಟೇ ಅಲ್ಲದೇ, ತನ್ನ ಮನೆಯ ಆವರಣದಲ್ಲಿ ಶೋಷಿತ ವರ್ಗಕ್ಕೆ ಶಿಕ್ಷಣ ನೀಡಲು ಅವಕಾಶವನ್ನೂ ಮಾಡಿಕೊಟ್ಟರು.

ಫುಲೆ ದಂಪತಿಗಳ ಈ ಮಹತ್ ಕಾರ್ಯಕ್ಕೆ ಉಸ್ಮಾನ್ ಶೇಖ್ ಸಹೋದರಿ ಫಾತಿಮಾ ಶೇಖ್ ಸಹಾಯದಿಂದ ಫುಲೆ ದಂಪತಿಗಳು 1848ರಲ್ಲಿ ಶಾಲೆಯನ್ನು ಆರಂಭಿಸಿದರು. ಆದರೆ ಇದೇ ಸಂದರ್ಭದಲ್ಲಿ ಫುಲೆ ದಂಪತಿಗಳಿಗೆ ಎದುರಾದ ಅನೇಕ ತೊಂದರೆಗಳನ್ನು ಹಾಗೂ ಫುಲೆ ದಂಪತಿಗಳ ಕೊಲೆ ಯತ್ನವನ್ನು ಫಾತಿಮಾ ಶೇಖ್ ಬಹಳ ಜಾಣ್ಮೆಯಿಂದ ತಪ್ಪಿಸಿದ್ದರು!!

1847ರಲ್ಲಿ ಸಾವಿತ್ರಿಬಾಯಿ ಅವರು ಫಾತಿಮಾ ಶೇಖ್ ರವರೊಂದಿಗೆ ಅಧ್ಯಾಪಕ ತರಬೇತಿ ಪಡೆದಿದ್ದರು. ಅಷ್ಟೇ ಅಲ್ಲದೇ, ಕೇವಲ 17 ವರ್ಷದಲ್ಲಿ ಶಿಕ್ಷಕ ತರಬೇತಿ ಪೂರೈಸಿದ ಸಾವಿತ್ರಿಬಾಯಿ ಮಹಾರಾಷ್ಟ್ರದಲ್ಲಿ ತರಬೇತಿ ಪಡೆದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

18ನೇ ಶತಮಾನದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಬಿಡಿ, ಶಿಕ್ಷಣದ ಬಗ್ಗೆ ಮಾತಾನಾಡುವುದೇ ಮಹಾಪಾಪ ಎಂಬ ನಂಬಿಕೆ ಇತ್ತು. ಅದರಲ್ಲೂ ಸಂಪ್ರದಾಯವಾದಿಗಳ ಬಿಗಿಕಟ್ಟಲೆಗಳಲ್ಲಿ ನಲುಗುತ್ತಿದ್ದ ಮುಸಲ್ಮಾನ್ ಧರ್ಮದಲ್ಲಿ, ಯುವತಿಯೊಬ್ಬಳು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಾಳೆ ಎಂದರೆ ಆಕೆಗೆ ಯಾವ ರೀತಿಯ ಬೆಂಬಲ ಸಿಗಬಹುದು ಎಂಬುದು ಕಲ್ಪನೆಗೂ ನಿಲುಕದ ವಿಚಾರ. ಕುಟುಂಬದ ಹಾಗೂ ಸಮಾಜದ ತೀವ್ರ ವಿರೋಧ, ಕಟ್ಟುಪಾಡುಗಳ ಮಧ್ಯೆಯೇ ಹೆಣ್ಣುಮಕ್ಕಳ ಹಾಗೂ ಶೋಷಿತ ವರ್ಗಕ್ಕೆ ಧ್ವನಿಯಾದವರು ಫಾತಿಮಾ ಶೇಖ್!!

ಈ ನಡುವೆಯೂ ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಖ್ ಪುಣೆಯಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಆರಂಭಿಸಿದರು. ಜ್ಯೋತಿಬಾ ಸ್ಥಾಪಿಸಿದ ಶಾಲೆಗಳಿಗೆ ಫಾತಿಮಾ ಮತ್ತು ಸಾವಿತ್ರಿಯವರು ಆಗಮಿಸುವಾಗ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ಹಲವು ಬಾರಿ ಇಬ್ಬರಿಗೂ ಕಲ್ಪಿನಿಂದ ಹೊಡೆಯಲಾಯಿತಲ್ಲದೇ ಅವರನ್ನು ಅವಮಾನಿಸಲಾಯಿತು. ಆದರೆ ಈ ಎಲ್ಲ ಅವಮಾನ ಹಾಗೂ ಬೆದರಿಕೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದ ಇಬ್ಬರೂ ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರಿಸಿದ್ದು ಮಾತ್ರ ಎಲ್ಲರೂ ಹೆಮ್ಮೆ ಪಡಲೇಬೇಕಾದಂತಹ ವಿಚಾರ!!

ಮೇಲ್ವರ್ಗದವರಿಗೆ ಮಾತ್ರ ಶಿಕ್ಷಣ ಕಲಿಯುವ ಸ್ವಾತಂತ್ರ್ಯವಿರುತ್ತದೆ ಎಂಬ ಅಲಿಖಿತ ನಂಬಿಕೆಯ ಕಾಲವದು. ಹೆಣ್ಣುಮಕ್ಕಳು ಶಾಲೆಯ ಆವರಣ ಪ್ರವೇಶಿಸುವುದೇ ಮಹಾಪಾಪ ಎನ್ನುವಂತಹ ಯೋಚನೆಯಿದ್ದ ದಿನಗಳವು. ಇಂತಹ ಯೋಚನೆಯನ್ನು ಬದಲಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಆ ಸಂದರ್ಭದಲ್ಲಿ ಫಾತಿಮಾ ಶೇಖ್ ಕಾರ್ಯಕ್ಕೆ ಹಿಂದೂ ಹಾಗೂ ಮುಸ್ಲಿಂ ಎರಡು ಸಮುದಾಯದಿಂದಲೂ ವಿರೋಧ ವ್ಯಕ್ತವಾಗಿತ್ತು!! ಆದರೆ ಅದನ್ನೆಲ್ಲ ಹಿಮ್ಮೆಟ್ಟಿ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿ ಮಹಿಳಾ ಶಿಕ್ಷಣಕ್ಕೆ ಒತ್ತುಕೊಟ್ಟಂತಹ ಧೀರ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮುಸಲ್ಮಾನ ಹೆಣ್ಣು ಮಗಳೊಬ್ಬಳು, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಸಮಾಜದ ಮುಖ್ಯವಾಹಿನಿಗೆ ಬರುತ್ತಾಳೆಂದರೆ ಆ ಸಮಾಜದ ವಿರೋಧ ಯಾವ ರೀತಿಯಲ್ಲಿರಬಹುದು ಎಂಬುದು ಕಲ್ಪನೆಗೂ ನಿಲುಕದ ಮಾತು. ಆದರೆ ಈ ವಿರೋಧಗಳನ್ನು ಲೆಕ್ಕಿಸದ ಫಾತಿಮಾ ಶೇಖ್, ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಸಂಪ್ರದಾಯವಾದಿಗಳ ಮನವೊಲಿಸಿ, ತಳಸಮುದಾಯ, ಅಲ್ಪಸಂಖ್ಯಾತರು, ಅಸ್ಪøಶ್ಯರು ಹಾಗೂ ಮಹಿಳೆಯರ ಶಿಕ್ಷಣ ಹಾಗೂ ಅವರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಂತಹ ಈ ಧೀರೆಯ ಪರಿಶ್ರಮವನ್ನು ಎಲ್ಲರೂ ಕೂಡ ಮೆಚ್ಚುವಂತಹದ್ದು!!
– ಅಲೋಖಾ

Tags

Related Articles

Close