ಪ್ರಚಲಿತ

ಮುಸ್ಲಿಂ ಮತಕ್ಕೆ ಮತಾಂತರಗೊಂಡು ಮತ್ತೆ ಹಿಂದು ಧರ್ಮಕ್ಕೆ ವಾಪಸಾದ ಯುವತಿ ಬಹಿರಂಗಪಡಿಸಿದ ಸ್ಫೋಟಕ ಸತ್ಯ ಏನು ಗೊತ್ತೇ…!!!???

ನಿಜವಾಗಿಯೂ ಆಕೆ ಮಹಾನ್ ಗಂಡಾಂತರದಿಂದ ಪಾರಾಗಿದ್ದಾಳೆ. ಇಲ್ಲದಿದ್ದರೆ ಆಕೆ ಮುಂದೊಂದು ದಿನ ಆಕೆ ಮೈಯ್ಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡು,
ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡು ಬುರ್ಖಾದೊಳಗಿನಿಂದಲೇ ಕಣ್ಣು ಪಿಳಿಪಿಳಿ ಮಾಡಿಕೊಂಡು ನೋಡಬೇಕಿತ್ತು. ಒಂದಷ್ಟು ಮಕ್ಕಳನ್ನು ಕರುಣಿಸಿ ಈಕೆಯ ಗಂಡ ತಲಾಖ್ ನೀಡಿರುತ್ತಿದ್ದ. ಇಲ್ಲವಾದರೆ ಆಕೆಯನ್ನು ಐಸಿಸ್‍ಗೋ, ಆತ್ಮಾಹುತಿ ದಳಕ್ಕೋ ಸೇರಿಸಿ ಕೈತೊಳೆದುಕೊಂಡುಬಿಡುತ್ತಿದ್ದರು ಈ ಮತಾಂಧ ರಾಕ್ಷಸರು…. ಆದರೆ ಕೊನೆಗೂ ಸತ್ಯವನ್ನು ಅರ್ಥಮಾಡಿಕೊಂಡಿದ್ದಾಳೆ. ಸಹೋದರಿ ನಿನಗೊಂದು ಸಲಾಂ ಅನ್ನಲೇಬೇಕು…. ಭೇಷ್ ಮಗಳೇ….

ಅದಿರಾ…………………………….!!!!

ಈಕೆ ಯಾರು ಗೊತ್ತೇನು….?

ಕಾಸರಗೋಡಿನ ಉದುಮಾ ನಿವಾಸಿಯಾಗಿರುವ ಅದಿರಾ ಕಳೆದ ಜುಲೈ 10ರಂದು ತಾನು ಇಸ್ಲಾಂ ಮತದ ಬಗ್ಗೆ ಆಸಕ್ತಿ ತಳೆದಿದ್ದೇನೆ…ಆ ಧರ್ಮದ ಅಧ್ಯಯನಕ್ಕೆ
ತೆರಳುವುದಾಗಿ 15 ಪುಟಗಳ ಪತ್ರವೊಂದನ್ನು ಬರೆದು ಮನೆಬಿಟ್ಟು ಹೋಗಿದ್ದಳು. ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ
ಪೊಲೀಸರು ಈಕೆಯನ್ನು ಜು.27ರಂದು ಕಣ್ಣೂರು ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಕಾಸರಗೋಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಆದರೆ ತಂದೆ
ತಾಯಂದಿರ ಜೊತೆ ಹೋಗಲೊಪ್ಪದ ಅದಿರಾಳನ್ನು ಪರವನಡ್ಕ ಸರ್ಕಾರಿ ಮಹಿಳಾ ಮಂದಿರಕ್ಕೆ ಕಳುಹಿಸಲಾಗಿತ್ತು.

ನಾಪತ್ತೆಗೊಂಡು ಇಸ್ಲಾಂ ಅಧ್ಯಯನಕ್ಕೆ ತೆರಳಿದ್ದ ಅದಿರಾ ತನ್ನ ಹೆಸರನ್ನು ಆಯೆಷಾ ಎಂದು ಬದಲಿಸಿಕೊಂಡಿದ್ದಳು.

ಅದಿರಾಳ ತಂದೆತಾಯಿ ತನ್ನ ಮಗಳಿಗಾಗಿ ಹೈಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅದರಂತೆ ಆಕೆಯನ್ನು ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆಕೆಯನ್ನು ತಂದೆ ತಾಯಿ ಜೊತೆ ಕಳುಹಿಸಲು ಆದೇಶ ನೀಡಿತ್ತು.

ಅದಿರಾಳನ್ನು ಎಷ್ಟು ಬ್ರೈನ್‍ವಾಶ್ ಮಾಡಲಾಗಿತ್ತೆಂದರೆ ಆಕೆ ತಂದೆತಾಯಿ ಜೊತೆ ಹೋಗಲು ಒಪ್ಪಲೇ ಇಲ್ಲ. ಬದಲಿಗೆ ತನ್ನ ಕಣ್ಣೂರಿನ ಗೆಳತಿ ಅನಿಸಾ ಜೊತೆ
ಹೋಗುವುದಾಗಿ ಹೇಳಿದ್ದಳು. ಆದರೆ ಅನಿಸಾಳಿಗೆ ಅಂಜದ್ ಎನ್ನುವ ಗೆಳೆಯನಿದ್ದ. ಈತ ಹಲವಾರು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವುದನ್ನು ಕಂಡು ಬೆದರಿ ಅದಿರಾಳ ಪೋಷಕರು, `ಆನೀಸಾಳ ಜತೆಯಲ್ಲಿ ಆದಿರಾರನ್ನು ಬಿಟ್ಟರೆ, ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಆನೀಸಾಳ ಗೆಳೆಯ ಅಂಜಾದ್ ಜತೆಯಲ್ಲಿ ಹೋಗುವ ಸಾಧ್ಯತೆ ಇರುವುದರಿಂದ ಆಕೆ ಸುರಕ್ಷಿತಳಾಗಿರಲು ಸಾಧ್ಯವಿಲ್ಲ` ಎಂದು ಪೆÇಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.

ಪೋಷಕರ ಮನವಿಯನ್ನು ಮನ್ನಿಸಿದ ನ್ಯಾಯಾಲಯ, ಅದಿರಾಳನ್ನು ತಾಯಿತಂದೆ ಜೊತೆ ಕಳುಹಿಸಲು ಒಪ್ಪಿಕೊಂಡಿತ್ತು. ಆದರೆ ಇಸ್ಲಾಂ ಧರ್ಮದಂತೆ ಆದಿರಾಳಿಗೆ ಜೀವನ ಸಾಗಿಸಲು ಪೆÇೀಷಕರು ಅನುವು ಮಾಡಿಕೊಡಬೇಕು ನ್ಯಾಯಾಲಯ ತಿಳಿಸಿತ್ತು. ಇದಕ್ಕೆ ಒಪ್ಪಿದ ಆಕೆಯ ಪೋಷಕರು ಮನೆಗೆ ಕರೆದೊಯ್ದಿದ್ದರು.

ಆ ಬಳಿಕ ಆದಿರಾಳನ್ನು ಎರ್ನಾಕುಲಂನಲ್ಲಿರುವ ಆರ್ಷ ವಿದ್ಯಾ ಸಮಾಜದವರು ಕರೆದೊಯ್ದು ಎಲ್ಲ ಧರ್ಮಗಳ ಬಗ್ಗೆ ಆಕೆಗೆ ಶಿಕ್ಷಣ ನೀಡಿದ್ದರು. ಕೊನೆಗೂ ಸನಾತನ
ಹಿಂದೂ ಧರ್ಮದ ಮಹತ್ವದ ಬಗ್ಗೆ ಅರಿವಾದ ಅದಿರಾ ಮತ್ತೆ ಇಸ್ಲಾಂ ತ್ಯಜಿಸಿ ಮಾತೃಧರ್ಮಕ್ಕೆ ಮರಳಿದ್ದಾಳೆ.

ಮಾತೃಧರ್ಮಕ್ಕೆ ಮರಳಿರುವ ಅದಿರಾ ಕಾಸರಗೋಡಿನ ಎರ್ನಾಕುಳಂನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೆಲವೊಂದು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾಳೆ…. ಏನು ಗೊತ್ತೇ..?

ಹಿಂದೂ ಹುಡುಗಿಯರನ್ನು ಇಸ್ಲಾಂ ಮತಕ್ಕೆ ಮತಾಂತರಗೊಳಿಸಲು ಮಸ್ಲಿಂ ಹುಡುಗಿಯರು ಗುಪ್ತಗಾಮಿನಿಯಾಗಿ ಕೆಲಸ ಮಾಡುತ್ತಿರುವುದನ್ನು ಅದಿರಾ ಮಾತುಗಳಿಂದ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಸ್ನಾತಕ್ಕೋತ್ತರ ವಿದ್ಯಾರ್ಥಿನಿಯಾಗಿದ್ದ ಅದಿರಾಳನ್ನು ಮೊದಲು ಮರುಳು ಮಾಡಿರುವುದು ಆಕೆಯ ಸಹಪಾಠಿಗಳು…! ಈ ಬಗ್ಗೆ ಮಾಹಿತಿ ನೀಡಿದ ಅದಿರಾ ಮುಸ್ಲಿಂ ಸಹಪಾಠಿಗಳ ಒತ್ತಾಯಕ್ಕೆ ಮಣಿದು ನನ್ನನ್ನು ಕಡ್ಡಾಯವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿತ್ತು ಎಂದಿದ್ದಾರೆ.

`ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವಾಗಲೇ ಕೆಲವು ಸ್ನೇಹಿತರು ಮುಸ್ಲಿಂ ಮತಸ್ಥರಾಗಿದ್ದರು. ಅಲ್ಲದೆ ಮನೆಯಲ್ಲಿ ಹಿಂದೂ ಧರ್ಮದ
ಬಗ್ಗೆಯಾಗಲಿ, ಆಚರಣೆಗಳ ಬಗ್ಗೆಯಾಗಲಿ ಸರಿಯಾದ ತಿಳಿವಳಿಕೆ ಲಭಿಸಲಿಲ್ಲ. ಆದ್ದರಿಂದ ಮುಸ್ಲಿಂ ಆಚಾರ ಅನುಷ್ಠಾನಗಳನ್ನು ಕಂಡುಕೊಂಡು ಇಸ್ಲಾಂಗೆ
ಆಕರ್ಷಣೆಗೊಂಡು, ಇಸ್ಲಾಂ ಬಗ್ಗೆ ಹೆಚ್ಚು ಕಲಿತಾಗ ಕುರಾನ್ ಹೆಚ್ಚು ಸರಿ ಎಂಬುದಾಗಿಯೂ, ಇಸ್ಲಾಮ್ ಸರಿಯಾದ ದೇವರನ್ನು ಆರಾಧಿಸುವ ಮತವಾಗಿದೆ ಎಂದು
ತಿಳಿದುಕೊಂಡು ಮತಾಂತರಗೊಳ್ಳಲು ತೆರಳಿರುವುದಾಗಿ ಹೇಳಿದ್ದೆ. ಆದರೆ ಇದೀಗ ನನ್ನ ನಿರ್ಧಾರ ಸರಿಯಲ್ಲ ಎಂಬುದನ್ನು ತಿಳಿದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಪುನಃ ಹಿಂದೂ ಧರ್ಮಕ್ಕೆ ಮರಳಿದ್ದೇನೆ. ಹೆತ್ತವರೊಂದಿಗೆ ಮನೆಗೆ ತೆರಳಿದ ಬಳಿಕ ಎರ್ನಾಕುಳಂನ ಒಂದು ಕೇಂದ್ರದಲ್ಲಿ ಹಿಂದೂ ಧರ್ಮದ ಬಗ್ಗೆ ಕಲಿತ ಬಳಿಕ ನನ್ನ ಮನಸ್ಸು ಬದಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಮತಾಂತರದ ಹಿಂದೆ ಪಿಎಫ್‍ಐ!!!

ಸಿಮಿ ಸಂಘಟನೆಯ ಇನ್ನೊಂದು ರೂಪವಾದ ಮುಸ್ಲಿಂ ತೀವ್ರವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಇಂಡಿಯಾ ಮತಾಂತರದ ಹಿಂದೆ ಇದೆ ಎಂಬ ಸ್ಪೋಟಕ ಮಾಹಿತಿ ಅದಿರಾಳ ಮಾತುಗಳಿಂದ ವ್ಯಕ್ತವಾಗಿದೆ. ಕೇರಳದಲ್ಲಿ ವ್ಯಾಪಕವಾಗಿರುವ ಲವ್ ಜಿಹಾದ್ ಕೃತ್ಯದ ಬಗ್ಗೆ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ಈ ವೇಳೆ ಪಿಎಫ್‍ಐಯ ಗುಪ್ತ ಕಾರ್ಯಸೂಚಿ ಬೆಳಕಿಗೆ ಬಂದಿತ್ತು. ಅದಿರಾ ಪತ್ರಿಕಾಗೋಷ್ಠಿಯಲ್ಲಿ ನುಡಿದಂತೆ ಆಕೆಯನ್ನು ಮತಾಂತರಗೊಳಿಸಲು ಪಿಎಫ್‍ಐ ಸಹಾಯ ಮಾಡಿದೆ. `ನಾನು ಇಸ್ಲಾಂ ಮತಾಂತರಗೊಳ್ಲುವುದಕ್ಕೆ ಪಾಪ್ಯುಲರ್ ಫ್ರಂಟ್ ಸಹಿತ ವಿವಿಧ ಸಂಘಟನೆಗಳು ನನಗೆ ಸಹಾಯ ನೀಡಿದ್ದವು’ ಎಂದು ಆಕೆ ವಿವರಿಸಿರುವುದನ್ನು ತನಿಖಾ ಸಂಸ್ಥೆ ಗಂಭೀರವಾಗಿ ಪರಿಗಣಿಸಿಕೊಂಡು ಇದರ ಕುರಿತು ತನಿಖೆ ನಡೆಸಬೇಕಾಗಿದೆ.

ಈಕೆಯನ್ನು ಯಾವ ರೀತಿ ಬ್ರೈನ್‍ವಾಶ್ ಮಾಡಿರಬಹುದೆಂದು ಆಕೆ ಬರೆದ ಪತ್ರವೂ ಸಾಕ್ಷಿಯನ್ನಾಗಿ ಪರಿಗಣಿಸಬೇಕಾಗಿದೆ. ಯಾಕೆಂದರೆ ಅದಿರಾ ನಾಪತ್ತೆಯಾದ ಬಳಿಕ ಆಕೆಯ ಕೊಠಡಿಯಲ್ಲಿ ಪತ್ತೆಯಾದ ಪತ್ರದಲ್ಲಿ ಆಕೆ ಶಾಲೆ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗಿನ ಪ್ರತೀ ವಿಷಯಗಳನ್ನು ಪತ್ರದಲ್ಲಿ ವಿವರವಾಗಿ ಉಲ್ಲೇಖಿಸಿದ್ದಳು. ಈ ಮಧ್ಯೆ ಧಾರ್ಮಿಕವಾಗಿ ಉಂಟಾದ ಬದಲಾವಣೆ, ವಿವಿಧ ಧರ್ಮಗಳ ಕುರಿತಾದ ವಿಮರ್ಶೆಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಳು ಎಂಬ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದರು.

ಇಸ್ಲಾಂಗೆ ಬರುವಂತೆ ವಿವಿಧ ಆಮಿಷಗಳನ್ನು ಒಡ್ಡುವಂತೆ ಅವರಿಗೆ ಇಸ್ಲಾಂ ಕುರಿತು ಸಾಕಷ್ಟು ಬ್ರೈನ್‍ವಾಶ್ ಮಾಡಲಾಗುತ್ತದೆ. ಇದೇ ರೀತಿ ಅನೇಕ ಮಂದಿ ಹಿಂದೂ ಹುಡುಗಿಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಅವರನ್ನು ಪೊಣ್ಣಾನಿಗೆ ಕರೆದುಕೊಂಡು ಇಸ್ಲಾಂ ಕುರಿತ ವಿಷಯಗಳನ್ನು ಹೇರಲಾಗುತ್ತಿದೆ ಎಂಬ ಮಾಹಿತಿ ಇದೆ. ಆದರೂ ಪೊಲೀಸರು ಅಲ್ಲಿಗೆ ದಾಳಿ ನಡೆಸುತ್ತಿಲ್ಲ ಎಂಬ ಆರೋಪ ಹಿಂದಿನಿಂದಲೂ ಕೇಳಿಬಂದಿದೆ.

ಸತ್ಯವನ್ನು ಕೊನೆಗೂ ಅರ್ಥ ಮಾಡಿಕೊಂಡು ಕೆಲವೊಂದು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡ ಅದಿರಾಳಿಗೆ ಒಂದು ಸಲಾಂ ಅನ್ನೋಣ….

-ಚೇಕಿತಾನ

Tags

Related Articles

Close