ಪ್ರಚಲಿತ

ಮೂರು ವರ್ಷಗಳಲ್ಲಿ ನಮ್ಮನ್ನು ಮೋದಿ ಭಕ್ತರೆಂದು ಕಂಡುಹಿಡಿದವರಿಗೆ ಅದೆಷ್ಟೋ ವರ್ಷಗಳಿಂದ ತಾವು ಇಟಲಿಯ ಗುಲಾಮರೆಂದು ಅರಿಯದೆ ಹೋಯಿತೇ?

ನಾವು ಸರಕಾರಕ್ಕೆ ಸಲ್ಲಿಸುವ ತೆರಿಗೆಯಿಂದ ದೇಶಕ್ಕೆ ಎಷ್ಟೆಲ್ಲಾ ಆಗುವ ಲಾಭ ಏನೆಂದು ತಿಳಿದರೆ ತೆರಿಗೆ ಕಟ್ಟುವ ನಾವೆಲ್ಲಾ ನಿಜಕ್ಕೂ ಹೆಮ್ಮೆಪಡಲೇಬೇಕು. ದೇಶದ ರಕ್ಷಣೆಯಿಂದ ಹಿಡಿದು, ಮನೆಗೆ ಮುಂದಿರುವ ರಸ್ತೆ ತನಕವೂ ನಮ್ಮ ತೆರಿಗೆ ಹಣ ವಿನಿಯೋಗವಾಗುತ್ತದೆ. ಇಂದು ಜಿಎಸ್‍ಟಿ ತೆರಿಗೆ ಇರುವುದರಿಂದ ತೆರಿಗೆ
ವಂಚಕರಿಗಾಲೀ, ತೆರಿಗೆಯ ಹಣವನ್ನು ಪೋಲು ಮಾಡುವುದಾಗಲೀ ನಡೆಸಲು ಸಾಧ್ಯವಿಲ್ಲ. ನಮ್ಮ ಹಣ ಖಂಡಿತಾ ಸದ್ವಿನಿಯೋಗವಾಗುತ್ತಿದೆ. ಈ ಬಗ್ಗೆ ಚಿಂತೆ ಪಡುವ ಅಗತ್ಯವೇ ಇಲ್ಲ. ಯಾಕೆಂದರೆ ಮೋದಿ ಸರಕಾರ ರೂಪಿಸಿದ ಹೊಸ ತೆರಿಗೆ ಪದ್ದತಿ ಜಿಎಸ್‍ಟಿಯಿಂದಾಗಿ ನಮ್ಮ ಹಣ ಖಂಡಿತಾ ಸದ್ವಿನಿಯೋಗವಾಗುತ್ತಿದೆ. ಈ ಬಗ್ಗೆ ಮೋದಿ ಸರಕಾರ ನಿಜವಾಗಿಯೂ ಅಭಿನಂದನಾರ್ಹ…

ಆದರೆ ಇದು ತೆರಿಗೆ ವಂಚನೆ ಮಾಡಿಕೊಂಡು ಸರಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿದ್ದವರಿಗೆ ಜಿಎಸ್‍ಜಿ ಹೊರೆಯಾಗಿಯೇ ಪರಿಣಮಿಸಿದೆ. ಸರಕಾರಕ್ಕೆ ತೆರಿಗೆ ಕಟ್ಟದೆ
ಕಳ್ಳವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಇಂದು ತೆರಿಗೆ ಕಟ್ಟಲೇಬೇಕಾದ ಪರಿಸ್ಥಿತಿ ಇದ್ದು ವಿಧಿ ಇಲ್ಲದೆ ನರೇಂದ್ರ ಮೋದಿ ಸರಕಾರಕ್ಕೆ ವಾಚಮಗೋಚರ
ಬಯ್ಯುತ್ತಿದ್ದಾರೆ. ಇಂದು ಯಾರೆಲ್ಲಾ ಜಿಎಸ್‍ಟಿ ಬಗ್ಗೆ ಬಯ್ಯುತ್ತಾರೋ ಅವರ ಬಗ್ಗೆ ಹೇಳುವುದಾದರೆ, ಒಂದರ್ಥದಲ್ಲಿ ಅವರು ತೆರಿಗೆವಂಚಕರಾಗಿರಬಹುದು ಅಥವಾ
ಒಂದೋ ಅವರಿಗೆ ಜಿಎಸ್‍ಟಿ ಬಗ್ಗೆ ಗೊತ್ತಿಲ್ಲ, ಅಥವಾ ಜಿಎಸ್‍ಟಿ ಬಗ್ಗೆ ಹಬ್ಬುತ್ತಿರುವ ಮಿಥ್ಯೆಗಳನ್ನು ನಂಬಿದ್ದಾರೆ ಅಥವಾ ಸರಕಾರಕ್ಕೆ ತೆರಿಗೆ ವಂಚಿಸುತ್ತಿದ್ದ ತೆರಿಗೆ ಕಳ್ಳರ ಮಾತು ಕೇಳಿದ್ದಾರೆ ಎಂದರ್ಥ.

ಇಂದು ನಾವು ಸರಕಾರಕ್ಕೆ ಕಟ್ಟುವ ಜಿಎಸ್‍ಟಿಯಿಂದ ಸರಕಾರಕ್ಕೆ ಆಗುವ ಲಾಭ ತಿಳಿದರೆ ಖಂಡಿತಾ ನೀವು ಹೆಮ್ಮೆಯಿಂದ ತೆರಿಗೆ ಕಟ್ಟುತ್ತೀರಿ…

1. ಸರ್ಕಾರ ಬಡವರಿಗೆ ಉಚಿತವಾಗಿ ಕೊಡುವ ಬಡವರ ಅಕ್ಕಿ, ಗೋಧಿ, ಗ್ಯಾಸ್, ಸಕ್ಕರೆ ಇದಕ್ಕೆಲ್ಲಾ ಬಳಕೆಯಾಗುವುದು ನಮ್ಮ ತೆರಿಗೆ ಹಣ. ಬಡವರು ಮೂರು ಹೊತ್ತು ಊಟ ಮಾಡಲು ಕಾರಣವಾಗುವ ನಮ್ಮ ಬಗ್ಗೆ ನಾವೇ ಹೆಮ್ಮೆ ಪಡಬೇಕು.

2. ಮಕ್ಕಳಿಗೆ ಕೊಡುವ ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿ ಊಟ, ಸೈಕಲ್, ಶಿಕ್ಷಕರಿಗೆ ಸಂಬಳ ಇದಕ್ಕೆಲ್ಲಾ ನಮ್ಮ ಹಣ ಬಳಕೆಯಾಗುತ್ತದೆ. ನಾವು ಒಂದು ವೇಳೆ ತೆರಿಗೆ ಕಟ್ಟದೇ ಹೋದರೆ ಬಡಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಿತ್ತೇ?

3. ಇಂದು ವಿಕಲಚೇತನರಿಗೆ ಕೊಡುವ ಸಹಾಯಾರ್ಥ, ವೃದ್ಧಾಪ್ಯವೇತನ, ಅಲ್ಪಸಂಖ್ಯಾತ, ದಲಿತರಿಗೆ ಕೊಡುವುದೇ ನಮ್ಮ ತೆರಿಗೆ ಹಣದಿಂದ..

4. ಇಂದು ಅದೆಷ್ಟೋ ಬಡವರಿಗೆ ಮನೆಕಟ್ಟಲು ಕೊಡುವ ಹಣ, ಹೈನುಗಾರಿಕೆ, ಕೃಷಿ ಮುಂತಾದುವುಗಳಿಗೆ ನೀಡುವ ಸಪ್ಸಿಡಿ, ವಿವಿಧ ಯೋಜನೆಗಳ ಮೂಲಕ ಬಡವರಿಗೆ ಕೊಡುವ ಸೌಲಭ್ಯ ಇತ್ಯಾದಿ ಸಾಧ್ಯವಾಗುವುದು ನಮ್ಮದೇ ತೆರಿಗೆ ಹಣದಿಂದ..

5. ಇಂದು ನಡೆಯುವ ಸರಕಾರಿ ಆಸ್ಪತ್ರೆಗಳು, ಅಂಬ್ಯುಲೆನ್ಸ್ ಸೇವೆ, ವೈದ್ಯರು ಸೇರಿ ಹಲವು ಸಿಬ್ಬಂದಿಗೆ ಕೊಡುವುದು ನಮ್ಮದೇ ತೆರಿಗೆ ಹಣ.

6. ನಮ್ಮದೇ ತೆರಿಗೆ ಹಣದಿಂದ ಬರಪರಿಹಾರ ನಿಧಿ, ಪ್ರಕೃತಿ ವಿಕೋಪ ಇವುಗಳಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿದೆ.

7. ಇಂದು ದೇಶದ ಸುವ್ಯಸ್ಥೆ ಕಾಪಾಡುವ ಪೊಲೀಸರು, ರಕ್ಷಣೆ ಮಾಡುವ ಸೈನಿಕರು, ದೇಶದ ರಕ್ಷಣೆಗೆ ಬಳಕೆಯಾಗುವ ಮದ್ದುಗುಂಡು, ಶಶ್ತ್ರಾಸ್ತ್ರಗಳು, ಸರಕಾರಿ ಸೇವೆ, ಮುಖ್ಯವಾಗಿ ಹೇಳುವುದಾದದರೆ ಇಡೀ ಸರಕಾರ ನಡೆಯುವುದೇ ನಮ್ಮ ತೆರಿಗೆ ಹಣದಿಂದ…

ಆದ್ದರಿಂದ ಸರಕಾರಕ್ಕೆ ಸಲ್ಲಿಕೆಯಾಗುವ ಹಣವನ್ನು ನಾವು ಹೆಮ್ಮೆಯಿಂದ ಕಟ್ಟಬೇಕಿತ್ತು. ಆದರೆ ಇಂದು ತೆರಿಗೆ ಒಂದು ದೊಡ್ಡ ಶಾಪ ಎಂದು ಹೇಳುತ್ತಿದ್ದಾರೆ. ಇನ್ನು
ಜಿಎಸ್‍ಟಿ ಬಗ್ಗೆ ಇಲ್ಲಸಲ್ಲದ ಸುಳ್ಳು ಪ್ರಚಾರ ಕೈಗೊಂಡು ದೇಶದ ಬಗ್ಗೆ ಜನರಿಗೆ ಕೋಪಬರುವಂತಹಾ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇದೆಲ್ಲಾ ಸರಕಾರಿ
ವಿರೋಧಿ ಹುನ್ನಾರ ಎಂದು ಅರ್ಥಮಾಡಿಕೊಳ್ಳಬೇಕಾಗಿದೆ. ಜಿಎಸ್‍ಟಿಯಿಂದ ಬೆಲೆ ಏರಿದ್ದಕ್ಕಿಂದ ಹಲವಾರು ವಸ್ತುಗಳ ಬೆಲೆ ಕಡಿಮೆಯಾಗಿದೆ.

ಜಿಎಸ್‍ಟಿಯನ್ನು ವಿರೋಧಿಸುವುದಕ್ಕೆ ಅರ್ಥವೇ ಇಲ್ಲ ಆದರೂ ವಿರೋಧಿಸುತ್ತಾರೆ ಯಾಕೆಂದರೆ….

1. ನೂರಾರು ಬಗೆಯ ಪರೋಕ್ಷ ತೆರಿಗಳನ್ನು ಕಟ್ಟಲು ರೆಡಿ ಇದ್ದರೂ ಅವುಗಳನ್ನೆಲ್ಲಾ ಬಿಟ್ಟು ವಸ್ತುಗಳಿಗನುಗುಣವಾಗಿ ಶೇ.5ರಿಂದ ಶೇ.28ರತನಕ ಜಿಎಸ್‍ಟಿ
ಕಟ್ಟುವಾಗ ಮಾತ್ರ ಕಿಸೆ ಖಾಲಿಯಾಗುತ್ತದೆ.

2. ಬಡವರ ತಿನ್ನುವ ಕೆಲವಸ್ತುಗಳ ಬೆಲೆ ಕಡಿಮೆಯಾಗಿದ್ದರೂ ಸ್ಟಾರ್ ಹೋಟೆಲ್‍ಗಳಲ್ಲಿ ಉಣ್ಣುವವರು ಜಿಎಸ್‍ಟಿ ಕಟ್ಟಲು ತಯಾರಿಲ್ಲದಾಗ ಅವರಿಗೆ ಜಿಎಸ್‍ಟಿ ಹೊರೆ ಎನಿಸುತ್ತದೆ..

3. ಸಪ್ಸಿಡಿ ರೂಪದಲ್ಲಿ ಗ್ಯಾಸ್, ಮನೆ, ಸೂಕ್ತವಾದ ರಸ್ತೆ ಇತ್ಯಾದಿ ಸೌಕರ್ಯಗಳನ್ನು ಒದಗಿಸಿದರೂ ಜಿಎಸ್‍ಟಿ ಕಟ್ಟುವಾಗ ಮಾತ್ರ ಅದೊಂದು ಹೊರೆಯಾಗುತ್ತದೆ.

4. ಜಿಎಸ್‍ಟಿ ಬಳಿಕ ಸಾಕಷ್ಟು ದಿನಬಳಕೆಯ ವಸ್ತುಗಳ ಬಲೆಯಲ್ಲಿ ಕಡಿಮೆಯಾದವು. ಆದರೆ ಈ ಬಗ್ಗೆ ಚರ್ಚೆಯಾಗಲೇ ಇಲ್ಲ.

5. ಪೆಟ್ರೋಲ್ ಬೆಲೆ ಏರಿಕೆಯಾದಾಗ ಕಸಿವಿಸಿಯಾಗುತ್ತದೆ. ಇದರ ಬೆಲೆ ಕಡಿಮೆಯಾಗಬೇಕಾದರೆ ಪೆಟ್ರೋಲನ್ನೂ ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಎಂದು ಹೇಳುತ್ತಾರೆ. ಇದೇ ತರವ ಜಿಎಸ್‍ಟಿಯಿಂದ ಹಲವು ವಸ್ತುಗಳ ಬೆಲೆ ಇಳಿಕೆಯಾಗಿರುವುದು ಯಾರಿಗೂ ಬೇಡ. ಆದರೂ ಜಿಎಸ್‍ಟಿ ಬೇಕಾಗಿಲ್ಲ.

6. ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸಾ ವ್ಯಚ್ಚಗಳಲ್ಲಿ 80% ಕಡಿತ ಘೋಷಿಸಿದಾಗ ಹೊಗಳುವವರೇ ಕಾಣಲಿಲ್ಲ, ಆರೋಗ್ಯ ಚಿಕಿತ್ಸಾ ಸಂಬಂಧಿ ಅದೆಷ್ಟೋ ಸರ್ಕಾರೀ
ಸವಲತ್ತುಗಳು ಜನಸಾಮಾನ್ಯರ ಪರವಾಗಿ ಕೆಲಸ ಮಾಡಿದೆ. ಆದರೂ eಎಸ್‍ಟಿ ಕಟ್ಟುವುದೆಂದರೆ ಯಾಕೋ ಅಲರ್ಜಿ.

7. ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಿಂದ ಹಲವಾರು ಔಷಧಿಗಳು ನಿರೀಕ್ಷೆಗೂ ಮೀರಿ ಕಡಿಮೆ ಬೆಲೆಯಲ್ಲಿ ದೊರಕುತ್ತಿದೆ. ಆದರೂ ಜಿಎಸ್‍ಟಿಯಿಂದ ಔಷಧಬೆಲೆ
ಏರಿಕೆಯಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇದರಿಂದ ಜಿಎಸ್‍ಟಿ ಮಾತ್ರ ಬೇಡವೇ ಬೇಡ ಎನ್ನುತ್ತಾರೆ.

ಜಿಎಸ್‍ಟಿ ಯಾರಿಗೆ ಹೊರೆ?

ಇಷ್ಟರವರೆಗೆ ಸರಕಾರಕ್ಕೆ ನಯಾಪೈಸೆ ತೆರಿಗೆ ಕಟ್ಟದೆ, ತೆರಿಗೆಯನ್ನು ವಂಚಿಸುತ್ತಾ ಸರಕಾರಕ್ಕೆ ಮೋಸ ಮಾಡುವವರಿದ್ದರು. ಇನ್ನು ಕೆಲವರು ತೆರಿಗೆ ವಂಚಿಸಲೆಂದೇ ವಾಮಮಾರ್ಗವನ್ನು ಕೈಗೊಂಡಿದ್ದರು. ಕೋಟಿಗಟ್ಟಲೆ ಹಣ ಪಡೆಯುವ ಕಲಾವಿದರು ಸರಕಾರಕ್ಕೆ ತೆರಿಗೆ ಕಟ್ಟದೆ ವಂಚಿಸುತ್ತಾ ಬಂದಿದ್ದರು. ಇಂತವರಿಗೆ ಇಂದು ಜಿಎಸ್‍ಟಿ ಹೊರೆಯಾಗಿ ಪರಿಣಮಿಸಿದೆ. ಒಂದರ್ಥದಲ್ಲಿ ಮೋಸಗಾರರಿಗೆ ಜಿಎಸ್‍ಟಿ ನಿಜವಾಗಿಯೂ ಹೊರೆಯಾಗಿ ಪರಿಣಮಿಸಿದೆ. ಯಾಕೆಂದರೆ ತೆರಿಗೆ ವಂಚನೆಗೆ ಕತ್ತರಿ ಬೀಳುತ್ತಿದ್ದಂತೆ ಜಿಎಸ್‍ಟಿ ಮೇಲೆ ಆಕ್ರೋಶ ವ್ಯಕ್ತವಾಗುತ್ತದೆ. ಇದೇ ಅವರನ್ನು ಜಿಎಸ್‍ಟಿ ವಿರೋಧಿಸಲು ಎಲ್ಲಿಲ್ಲದ ಉತ್ಸಾಹ ತೋರಿಸುತ್ತಾರೆ. ಇವರನ್ನು ತೆರಿಗೆಕಳ್ಳರು ಎಂದೂ ತಪ್ಪಿಲ್ಲ.

ಮುಂಚೆ ಎಷ್ಟು ಮಂದಿ ಆಸ್ತಿ ತೆರಿಗೆ ಕಟ್ಟುತ್ತಿದ್ದರು ಗೊತ್ತೇ? ಸರಕಾರಕ್ಕೆ ಎಚ್ಚರಿಸೀ ಎಚ್ಚರಿಸಿ ಸಾಕಾಗುತ್ತಿತ್ತು. ಆಸ್ತಿ ತೆರಿಗೆಯಲ್ಲಿ ಸಾಕಷ್ಟು ಮೋಸ ನಡೆಯುತ್ತಿತ್ತು. ಆದರೆ ಜಿಎಸ್‍ಟಿ ಆಸ್ತಿ ತೆರಿಗೆ ಕಟ್ಟದವರಿಗೆ ಶಾಪವಾಗಿ ಪರಿಣಮಿಸಿದೆ. ಭಾರತ ಸಿಂಗಾಪುರ್, ಜಪಾನ್ ಆಗಬೇಕೆಂದು ಬೊಬ್ಬೆ ಹೊಡೆಯುತ್ತೇವೆಯೇ ಹೊರತು ಸರಕಾರಕ್ಕೆ ತೆರಿಗೆ ಕಟ್ಟಲು ಮನಸ್ಸಿಲ್ಲ.

ಜಿಎಸ್‍ಟಿ ಮೋದಿಯೊಬ್ಬರದ್ದಷ್ಟೇ ಅಲ್ಲ ಪ್ರತಿಯೊಬ್ಬರ ನಿರ್ಧಾರದಂತೆ ಜಿಎಸ್‍ಟಿ ತರಲಾಗಿದೆ. ಆರ್ಥಿಕ ತಜ್ಞರ ಸಲಹೆಯಂತೆ ಸಾಕಷ್ಟು ಅಳೆದು ತೂಗಿ ಜಿಎಸ್‍ಟಿ
ತರಲಾಗಿದೆ. ಆದರೆ ಇಲ್ಲಿ ಮೋದಿಯೊಬ್ಬರೇ ಟಾರ್ಗೆಟ್ ಆಗುತ್ತಿದ್ದಾರೆ. ಹಾಗಾದರೆ ವಿರೋಧಿಗಳಿಗೆ ಜಿಎಸ್‍ಟಿ ಎನ್ನುವುದು ಮೋದಿಯನ್ನು ನಿಂದಿಸಲು ಒಂದು ನೆಪ ಅಷ್ಟೆ ಎನ್ನುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಭಾರತದ ಅಭಿವೃದ್ಧಿ ಬೇಡವೇ?

ಭಾರತ ವಿಶ್ವದ ನಂಬರ್ ವನ್ ದೇಶವಾಗಬೇಕೆಂದು ಎಲ್ಲರಿಗೂ ಆಸೆ ಇದೆ. ಎಲ್ಲಾ ನಗರಗಳೂ ಸ್ಮಾರ್ಟ್‍ಸಿಟಿ ಆಗಬೇಕೆಂದು ಎಲ್ಲರಿಗೂ ಮನಸ್ಸಿದೆ. ಆದರೆ ಆ ರೀತಿ ಮಾಡುವವರನ್ನು ಕೆಲಸ ಮಾಡಲು ನಾವು ಬಿಡುವುದಿಲ್ಲ.

ಸ್ವಚ್ಛನಗರ ಎಲ್ಲರಿಗೂ ಬೇಕು. ಆದರೂ ಕಸ ಚೆಲ್ಲುತ್ತೇವೆ. ಕಸ ಚೆಲ್ಲಬೇಡಿ ಸ್ವಚ್ಛಭಾರತ ಮಾಡೋಣ ಎಂದು ಮೋದಿ ಕರೆ ನೀಡಿದರೆ ಅದೆಲ್ಲಾ ಬೇಡ. ಈ ವಿಚಾರದಲ್ಲೂ ಮೋದಿಯನ್ನು ಆಪಾದಿಸುವವರಿಗೆ ಕಮ್ಮಿ ಇಲ್ಲ.

ಭಾರತ ವಿಶ್ವಗುರುವಾಗಬೇಕು ಎಂದು ಎಲ್ಲರಿಗೂ ಮನಸಿದೆ. ಬೇರೆ ದೇಶದ ತಂತ್ರಜ್ಞಾನ, ಅಭಿವೃದ್ಧಿ, ರಕ್ಷಣಾ ಒಪ್ಪಂದ, ವ್ಯಾಪಾರ ಒಪ್ಪಂದ ಇತ್ಯಾದಿ ಒಪ್ಪಂದಗಳ ಮೂಲಕ ಭಾರತ ಬಲಿಷ್ಠವಾಗಬೇಕೆಂದು ಮನಸ್ಸಿದೆ. ಅದಕ್ಕಾಗಿ ಪ್ರಧಾನಿ ಮೋದಿ ವಿದೇಶ ಪ್ರವಾಸ ಮಾಡಿದರೆ ಅದು ಸರಿಯಲ್ಲ. ದೇಶದ ಉತ್ಪನ್ನಗಳು ಮಾರುಕಟ್ಟೆ ಸೃಷ್ಟಿಸಬೇಕೆಂದು ಮನಸ್ಸಿದ್ದರೂ ನಮಗೆ ವಿದೇಶೀ ವಸ್ತುಗಳೇ ಬೇಕು.

ದೇಶದ ಆರ್ಥಿಕತೆ ಸುಧಾರಿಸಬೇಕು, ಉಗ್ರರ ದಮನವಾಗಬೇಕು, ಕಳ್ಳದಂಧೆ ನಿಲ್ಲಬೇಕು, ನಕಲಿ ನೋಟು, ಕಪ್ಪು ಹಣ ಎಲ್ಲವೂ ನಿಲ್ಲಬೇಕೆಂದು ಮನಸ್ಸಿದೆ ಆದರೆ
ನೋಟು ಅಮಾನ್ಯೀಕರಣ ಮಾತ್ರ ಒಂದು ಮೂರ್ಖತನದ ನಿರ್ಧಾರ.

ಸಾಮಾನ್ಯ ಜನರಿಗೆ ಅತ್ಯಲ್ಪ ದರದಲ್ಲಿ ಬ್ಯಾಂಕ್ ಖಾತೆ ಮತ್ತು ವಿಮೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದು ಸಾಧನೆಯೇ ಅಲ್ಲ. ಡಿಜಿಟಲೈಸೇಷನ್‍ನಿಂದ ಮುಂದೆ ಎಲ್ಲರಿಗೂ ಸಹಕಾರಿಯಾಗಲಿದೆ ಎಂದು ಗೊತ್ತಿದ್ದರೂ ಅದೆಲ್ಲಾ ನಮಗೆ ಬೇಡ.

ಮೋದಿಯವರಂತೆ ಹಿಂದಿನ ಸರಕಾರ ಕೆಲಸ ಮಾಡಿದ್ದರೆ ಇಂದು ಭಾರತ ಅಮೇರಿಕಾ, ಚೀನಾ ಸರಿಸಮಾನವಾಗಿರುತ್ತಿತ್ತು. ಈ ವಿಚಾರ ಮೋದಿಯವರನ್ನು
ಟೀಕಿಸುವವರಿಗೂ, ಮೋದಿ ವಿರೋಧಿಗಳಿಗೂ ಗೊತ್ತಿದೆ. ಹಿಂದಿನ ಸರಕಾರಗಳಿಂದ ಸಾಕಷ್ಟು ಭ್ರಷ್ಟಾಚಾರ ನಡೆದಿರುವುದರಿಂದ ದೇಶ ಅಧೋಗತಿಗೆ ತಲುಪಿತ್ತು. ಅದನ್ನು ಮೋದಿ ವಿವಿಧ ಯೋಜನೆಗಳ ಮುಖಾಂತರ, ಡಿಜಿಟಲ್ ಇಂಡಿಯಾ, ಸ್ಟಾರ್ಟ್‍ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮುಖಾಂತರ ಮೇಲೆತ್ತಲು
ಪ್ರಯತ್ನಿಸುತ್ತಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಆದರೂ ನರೇಂದ್ರ ಮೋದಿ ಅಂದ್ರ ಆಗಲ್ಲ.

ಮೋದಿ ಬಂದ 3 ವರ್ಷಗಳಲ್ಲಿ ನಮ್ಮನ್ನು ಭಕ್ತರೆಂದು ಕಂಡುಹಿಡಿದರು! ಇಂದು ನಾನು ಮೋದಿಯನ್ನು ಹೊಗಳುತ್ತಿದ್ದೇನೆ. ನಾನೂ ಕೂಡಾ ಮೋದಿ ಭಕ್ತ. ಮೋದಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದರಿಂದ ನನಗೆ ಮೋದಿಯ ಭಕ್ತ ಎಂದು ಕರೆಸಲು ನಿಜಕ್ಕೂ ಹೆಮ್ಮೆ ಇದೆ.

ಆದರೆ ದೇಶದಲ್ಲಿ ನಾನಾ ಭ್ರಷ್ಟಾಚಾರ ನಡೆಸಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದವರ ಬಗ್ಗೆ ಮಾತಾಡಿದ್ದಾರೆಯೇ? ಅದೆಷ್ಟೋ ವರ್ಷಗಳಿಂದ ತಾವು ಇಟಲಿಯವಳ ಗುಲಾಮರಂತೆ ಬದುಕಿದರೂ ತನ್ನನ್ನು ತಾನು ಗುಲಾಮರೆಂದು ಅರಿಯದೆ ಹೋದಿರಲ್ಲಾ ಇದಕ್ಕಿಂತ ದೊಡ್ಡ ಮೂರ್ಖತನ ನಿಜಕ್ಕೂ ಇದೆಯೇ?

-ಚೇಕಿತಾನ

Tags

Related Articles

Close