ಪ್ರಚಲಿತ

ಮೈಸೂರಿನ ಈ ರಹಸ್ಯ ಪಿಎಫ್‍ಐ ಕಾರ್ಯಕರ್ತನಿಂದ ಕೊಲೆಗೀಡಾದ ಹಿಂದೂಗಳ ಸಂಖ್ಯೆ ಎಷ್ಟು ಗೊತ್ತಾ?! ಇದನ್ನು ಓದಿದರೆ ಖಂಡಿತಾ ಬೆಚ್ಚಿಬೀಳುತ್ತೀರಿ…!!!

ಈತನ ಹೆಸರು ಅಬಿದ್ ಪಾಶಾ, ವಯಸ್ಸು 34, ವೃತ್ತಿಯಲ್ಲಿ ಬಡಗಿ. ಈತನನ್ನು ಮೈಸೂರು ಪೊಲೀಸರು ವಿಚಾರಣೆ ನಡೆಸಿದಾಗ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದರು. ಏಕೆ ಗೊತ್ತಾ ಪಕ್ಕಾ ಖತರ್ನಾಕ್ ಆಗಿರುವ ಈತನ ಮೇಲೆ ಭಜರಂಗದಳದ ಕಾರ್ಯಕರ್ತ ಕೆ. ರಾಜು ಮತ್ತು 2011ರ ಬಿಸಿನೆಸ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳಾದ ವಿಘ್ನೇಶ್ ಮತ್ತು ಸುಧೀಂದ್ರ ಎಂಬಿಬ್ಬರ ಅಪಹರಿಸಿ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿರುವ ಅಬಿದ್ ಪಾಶಾ ಮುಸ್ಲಿಂ ಮತೀಯ ಸಂಘಟನೆಯೊಂದರ ಸದಸ್ಯ. ನಟೋರಿಯಸ್ ಹಂತಕನಾಗಿರುವ ಪಾಶಾನ ಮೇಲೆ ಇನ್ನೂ 5 ಕೊಲೆ ಆರೋಪಗಳಿರುವುದನ್ನು ಕಂಡು ಸ್ವತಃ ಪೊಲೀಸರೇ ದಂಗಾಗಿ ಹೋಗಿದ್ದರು.

ಅಷ್ಟಕ್ಕೂ ಈ ಅಬಿದ್ ಪಾಶಾ ಯಾರು ಗೊತ್ತಾ? ಆರಂಭದಲ್ಲಿ ಕೆಎಫ್‍ಡಿ ಸಕ್ರಿಯ ಕಾರ್ಯಕರ್ತನಾಗಿ ಬಳಿಕ ಪಾಪ್ಯುಲರ್ ಫ್ರಂಟ್ ಇಂಡಿಯಾ ಸಂಘಟನೆಯ ಸಕ್ರಿಯ ಕಾರ್ಯಕರ್ತ. ಇವನೆಷ್ಟು ಭಯಂಕರನೆಂದರೆ ಈತ ಕೊಲೆ ನಡೆಸಿದ್ದು ಹೆಚ್ಚಾಗಿ ಭಜರಂಗದಳ ಮತ್ತು ಬಿಜೆಪಿ ಮುಖಂಡರನ್ನೆ. ಮುಸ್ಲಿಂ ಹುಡುಗಿಯರ ಜೊತೆ ಮಾತಾಡಿದರೆ, ಮುಸ್ಲಿಂ ಹುಡುಗಿಯರು ಹಿಂದೂಗಳ ಹಿಂದೆ ಬಿದ್ದರೆ ಮುಖಮೂತಿ ನೋಡದೆ ಚಚ್ಚಿ ಬಿಡುತ್ತಿದ್ದ ಈ ಪಾಶಾ….

ಈತ ತನ್ನ ಒಂದೊಂದೇ ಕೃತ್ಯವನ್ನು ಪೊಲೀಸರ ಮುಂದೆ ಹೇಳುತ್ತಿದ್ದರೆ ಸ್ವತಃ ಪೊಲೀಸರೇ ದಿಗಿಲಿನಿಂದ ನೋಡುತ್ತಿದ್ದರು. ಅಬಿದ್ ಪಾಶ 2008, 2011 ಹಾಗೂ
2014ರಂದು ನಡೆಸಿದ 4 ಕೊಲೆ ಸರಣಿಗಳ ಬಗ್ಗೆ ಬಹಿರಂಗಪಡಿಸಿದ್ದಾನೆ. ಪಾಶಾ ಮತ್ತು ಆತನ ಸಹಚರರು ಕಳೆದ 8 ವರ್ಷಗಳಲ್ಲಿ ಬಲಪಂಥೀಯರನ್ನು ಗುರಿಯಾಗಿಸಿ ಕೊಲೆ, ಕೊಲೆಯತ್ನದಲ್ಲಿ ಭಾಗವಹಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು.

ಪೊಲೀಸರ ಪ್ರಕಾರ ಪಾಶಾ ಮತ್ತು ಈತನ ಸಹಚರರಿಗೆ ಮೈಸೂರಿನ ಬಿಜೆಪಿ, ಭಜರಂಗದಳ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರು ಮಾತ್ರವಲ್ಲ ಮಂಗಳೂರಿನ
ಬಲಪಂಥೀಯರು ಕೂಡಾ ಟಾರ್ಗೆಟ್ ಆಗಿದ್ದರು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇವರು ಬಲಪಂಥೀಯರನ್ನು ಟಾರ್ಗೆಟ್ ಮಾಡಲಾರಂಭಿಸಿರುವುದನ್ನು
ಪೊಲೀಸರು ಬಯಲು ಮಾಡಿದ್ದಾರೆ.

ಅಬಿದ್ ಪಾಶಾನ ಕೈಯಿಂದ ಮೊದಲು ಕೊಲೆಯಾಗಿದ್ದು ಒಬ್ಬರು ಭಜರಂಗದಳದ ಮುಖಂಡ. ಮೈಸೂರಿನ ಶಶಿಕುಮಾರ್ ಪಾಶಾನ ಕೈಯಿಂದ ಕೊಲೆಗೀಡಾದ
ಭಜರಂಗದಳದ ಮುಖಂಡ. ಶಶಿಕುಮಾರ್ ಅವರು ಮೈಸೂರಿನಲ್ಲಿ ಸಲೂನ್ ಹೊಂದಿದ್ದರು. ಇವರಿಗೆ ಮುಸ್ಲಿಂ ಹುಡುಗಿ ಜೊತೆ ಸಂಬಂಧ ಇದೆ ಎಂದು ಜುಲೈ 12,
2008ರಂದು ಸಲೂನ್‍ಗೆ ನುಗ್ಗಿದ ಪಾಶಾ ಮತ್ತು ಆತನ ಸಹಚರರು ಶಶಿಕುಮಾರ್‍ನನ್ನು ಕೊಂದು ಹಾಕಿದ್ದರು. ಇದು ಆತ ಮಾಡಿದ ಮೊದಲ ಕೊಲೆ. ಅಂದಿನ ಬಿಜೆಪಿ ಸರಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಪಾಶಾ ಬೇರೆ ಕೇಸ್‍ನಲ್ಲಿ ಸಿಕ್ಕಿಬಿದ್ದಾಗ ಈ ಕೊಲೆ ಮಾಡಿದ್ದು ಯಾರು ಎಂದು ಬೆಳಕಿಗೆ ಬಂದಿತ್ತು.

ಪಾಶಾನ ಮುಂದಿನ ಟಾರ್ಗೆಟ್ ಆಗಿದ್ದವರೇ ಆನಂದ ಪೈ. ಇವರು ಮೈಸೂರಿನ ಉದಯಗಿರಿ ನಿವಾಸಿ. ಅವರು ವಿಕ್ರಮ್ ಟೈರ್ ಫಾಕ್ಟರಿಯಲ್ಲಿ ತನ್ನ ಸಹೋದ್ಯೋಗಿ ರಮೇಶ್ ಎಂಬವರ ಜೊತೆ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಜೂನ್ 9, 2009ರಂದು ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭ ಹೊಂಚು ಹಾಕಿ ಕುಳಿತಿದ್ದ ಪಾಶಾ ಮತ್ತು ಆತನ ಕಡೆಯವರು ಇವರಿಬ್ಬರ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ರಮೇಶ್ ಸ್ಥಳದಲ್ಲೇ ಮೃತಪಟ್ಟರೆ ಪೈ ಗಂಭೀರ ಗಾಯಗೊಂಡಿದ್ದರು.

ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಮಸೀದಿ ಮತ್ತು ದೇವಸ್ಥಾನದ ಜಾಗದ ವಿಚಾರದಲ್ಲಿ 2009ರಂದು ಕೋಮುಗಲಭೆ ಸಂಭವಿಸಿತು. ಈ ವೇಳೆ ಜುಲೈಯಂದು ಮೈಸೂರಿನ ಬಿಜೆಪಿ ಯುವಮೋರ್ಛಾದ ಅಧ್ಯಕ್ಷ ಗಿರಿಧರ್ ಎಂಬವರ ಮೇಲೆ ದಾಳಿ ನಡೆಸಿತು. ಗಿರಿಧರ್ ಅವರು ಗಂಭೀರ ಗಾಯಗೊಂಡು 41 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ್ದರು. ಕೋಮುಗಲಭೆ ಆಗುವುದನ್ನೇ ಕಾಯುವ ಪಾಶಾ ಕಡೆಯವರು ಈ ಸಂದರ್ಭವನ್ನೇ ಉಪಯೋಗಿಸಿ, ಒಂದಷ್ಟು ಮಂದಿ ಬಲಪಂಥೀಯ ಮುಖಂಡರನ್ನು, ಬಿಜೆಪಿ ನಾಯಕರನ್ನು ಕೊಲ್ಲಲು ಕಾದು ಕುಳಿತಿದ್ದರು.

ಇದು ನಡೆದಿದ್ದು ನವೆಂಬರ್ 2009ರಂದು…. ಸಹೋದರರಿಬ್ಬರು ಬುಕ್ ಸ್ಟಾಲ್ ಹೊಂದಿದ್ದು, ಭಜರಂಗದಳಕ್ಕೆ ಧನ ಸಹಾಯ ಮಾಡುತ್ತಿದ್ದರು. ಇದೊಂದೇ ಕಾರಣಕ್ಕೆ ಸಹೋದರರ ಮೇಲೆ ಹಂತಕರು ದಾಳಿ ನಡೆಸಿದ್ದರು. ಇದರಲ್ಲಿ ಹರೀಶ್ ಎಂಬವರು ಕೊಲೆಗೀಡಾಗಿದ್ದರು.

ಮೇ 21, 2010ರಂದು ಪಾಶಾನ ಹುಟ್ಟಿದ ಮೈಸೂರಿನ ಹುನ್ಸೂರು ಎಂಬಲ್ಲಿನ ಹಾಲು ಮಾರುವ ಹುಡುಗನನ್ನೂ ಬಿಡಲಿಲ್ಲ. ಈತನಿಗೆ ಮುಸ್ಲಿಂ ಮಹಿಳೆ ಜೊತೆ ಸಂಬಂಧ ಇತ್ತೆಂದು ಪಾಶಾ ಕಡೆಯವರು ಆತನನ್ನು ಕೊಲೆ ಮಾಡಿದ್ದರು.

ಸೈಲೆಂಟಾಗಿ ಕೊಲೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಪಾಶಾ ಮತ್ತು ಆತನ ಗ್ಯಾಂಗ್ ಮೇಲೆ ಯಾರಿಗೂ ಸಂದೇಹವೇ ಇರಲಿಲ್ಲ. 2008ರಿಂದ 2010ರ ತನಕ ಹಲವು
ಕೊಲೆಗಳಲ್ಲಿ ಶಾಮೀಲಾಗಿದ್ದರೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಈತನ ಸಹಚರರು ಬೇರೆ ಕೇಸ್‍ಗಳಲ್ಲಿ ಸಿಕ್ಕಿಬಿದ್ದಾಗ ಅವರು ಪಾಶಾನ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು.. ಈತನ ಜೊತೆ ಹಲವರು ಶಾಮೀಲಾಗಿದ್ದು, ಅವರ ಹುಡುಕಾಟವೂ ನಡೆಯುತ್ತಿದೆ ಎಂದು ಅಂದಿನ ಮೈಸೂರು ಪೊಲೀಸ್ ಕಮೀಷನರ್ ಆಗಿದ್ದ ಬಿ. ದಯಾನಂದ ಹೇಳಿದ್ದರು.

ಪಾಶಾ ಒಮ್ಮೆಲೆ ಡಬಲ್ ಮರ್ಡರ್‍ನಲ್ಲಿ ಸಿಕ್ಕಿಬೀಳುವವರೆಗೆ ಆತನ ಕೃತ್ಯಗಳೆಲ್ಲವೂ ಹೊರಬೀರುತ್ತಿರಲಿಲ್ಲ. ಇದು ನಡೆದಿದ್ದು 2011ರಂದು. ಮೈಸೂರಿನ ಹುನ್ಸೂರಿನ ಉದ್ಯಮಿಯೊಬ್ಬರ ಮಕ್ಕಳಾದ ವಿಘ್ನೇಶ್ ಮತ್ತು ಸುಧೀಂದ್ರ ಎಂಬಬ್ಬಿರನ್ನು ಅಪಹರಿಸಿದ ಪಾಶಾನ ಕಡೆಯವರು 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ತನ್ನ ಸುಳಿವು ಸಿಕ್ಕಿದೆ ಎಂದು ತಿಳಿದ ಪಾಶಾ ಮಕ್ಕಳಿಬ್ಬರನ್ನೂ ನಿರ್ದಯವಾಗಿ ಕೊಂದು ಹಾಕಿದ್ದ.
ಪೊಲೀಸರು ಹಲವರನ್ನು ಬಂಧಿಸಿದಾಗ ಅವರು ಪಾಶಾ ಹೆಸರು ಕೂಡಾ ಬಂದಿತು. ಈ ವೇಳೆ ಆತನ ಕ್ರೂರ ವೃತ್ತಾಂತವನ್ನು ಕಂಡ ಪೊಲೀಸರೂ ಸಹ ಬೆಚ್ಚಿಬಿದ್ದಿದ್ದರು. ಅಂದಿನ ಸರಕಾರ ಆತನ ಎಲ್ಲಾ ಕೃತ್ಯದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿತು.

ಬೆಳಕಿಗೆ ಬಂದ ವಿಷಯವೇನು ಗೊತ್ತಾ?

ಅಬಿದ್ ಪಾಶಾ ಕೆಎಫ್‍ಡಿ ಅಂದರೆ ಕರ್ನಾಟಕ ಡಿಗ್ನಿಟಿ ಫಾರಂನ ಸಕ್ರಿಯ ಕಾರ್ಯಕರ್ತ. ಕೆಎಫ್‍ಡಿ ಕೇರಳ, ತಮಿಳುನಾಡಿನ ತೀವ್ರಗಾಮಿ ರಾಜಕೀಯ ಸಂಘಟನೆಗಳ ಜೊತೆ ವಿಲೀನಗೊಂಡ ಒಂದು ಮತೀಯ ಸಂಘಟನೆಯಾಗಿತ್ತು. ಈ ಸಂಘಟನೆಯೇ ಮುಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂದರೆ ಪಿಎಫ್‍ಐ ಎಂದಾಯಿತು. ಪಾಶಾ ಪಿಎಫ್‍ಐ ಸಂಘಟನೆಯಲ್ಲಿ ತೊಡಗಿಕೊಂಡೇ ಅನೇಕ ಹಿಂದೂ ಮುಖಂಡರನ್ನು ಸಿಗಿದುಹಾಕಿದ್ದ.

ಡಬಲ್ ಮರ್ಡರ್ ಕೃತ್ಯದಲ್ಲಿ ತೊಡಗಿದ ಬಳಿಕ ಪಾಶಾ ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹುನ್ಸೂರಿನಿಂದ ಮೈಸೂರಿಗೆ ತೆರಳಿದ್ದ.

ಪೊಲೀಸ್ ಮಾಹಿತಿಯ ಪ್ರಕಾರ ಪಾಶಾ ಒಬ್ಬರು ಮುಸ್ಲಿಂ ಮಹಿಳೆಯನ್ನೂ ಕೊಂದು ಹಾಕಿದ್ದ. ಆಕೆಯ ಹೆಸರು ಪರ್ವೀನ್ ತಾಜ್ ಅ ಕಾ. ಈಕೆಯನ್ನು ಜುಲೈ 8,
2014ರಂದು ಮುಸ್ಲಿಂ ಹುಡುಗಿಯರನ್ನು ವೇಶ್ಯಾವಾಟಿಕೆಗೆ ದೂಡುತಿದ್ದಾಳೆ ಎಂದು ಆರೋಪಿಸಿ ಕೊಲೆ ನಡೆಸಿ ಪ್ರತೀಕಾರ ತೀರಿಸಿದ್ದ.

ಇದಾದ ಬಳಿಕ ಇಡೀ ರಾಜ್ಯವೇ ಬೆಚ್ಚಿಬೀಳುವಂಥಾ ಕೊಲೆಗೆ ಮುನ್ನುಡಿ ಹಾಡಿದ್ದ. ಅದು ಬೇರ್ಯಾರ ಕೊಲೆಯೂ ಅಲ್ಲ ಭಜರಂಗದಳದ ಮುಖಂಡ ಕೆ. ರಾಜು. ಇವರು ಕಳೆದ ವರ್ಷ ಮಾರ್ಚ್ 13ರಂದು ಉದಯಗಿರಿಯ ಮಹತ್ಮಾ ಗಾಂಧೀಜಿ ವೃತ್ತದಲ್ಲಿನ ಟೀ ಅಂಗಡಿಯಲ್ಲಿ ಪೇಪರ್ ಓದುತ್ತಿದ್ದಾಗ ಬೈಕ್‍ನಲ್ಲಿ ಬಂದಿದ್ದ ಪಾಶಾ ಹಾಗೂ ಈತನ ಸಹಚರರು ರಾಜುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಕ್ಯಾತಮಾರನಹಳ್ಳಿಯ ಮಸೀದಿ ಮತ್ತು ದೇವಸ್ಥಾನದ ಜಾಗದ ವಿಚಾರದಲ್ಲಿ ವಿವಾದ ಏರ್ಪಟ್ಟಿದ್ದ ಸಂದರ್ಭದಲ್ಲಿ ಪಾಶಾ ರಾಜು ಅವರನ್ನು ಟಾರ್ಗೆಟ್ ಮಾಡಿದ್ದ. ಅಲ್ಲದೆ ವಿಘ್ನೇಶ್ ಮತ್ತು ಸುಧೀಂದ್ರ ಎಂಬಿಬ್ಬರ ಜೋಡಿ ಕೊಲೆಯ ಬಗ್ಗೆ ರಾಜು ಪೊಲೀಸರಿಗೆ ಸಾಕ್ಷ್ಯ ನುಡಿದಿದ್ದಲ್ಲದೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆಂಬ ಕಾರಣಕ್ಕೆ ಪಾಶಾ ಕೊಂದು ಹಾಕಿದ್ದ. ಈ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿತ್ತು. ಪ್ರಕರಣದಲ್ಲಿ ಅಬಿದ್ ಪಾಶಾ ಸೇರಿ ಜಾವಿದ್, ಹಮೀದ್, ಆಯುಬ್ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇವರೆಲ್ಲಾ ಪಿಎಫ್‍ಐ ಸಂಘಟನೆಯಲ್ಲಿ ಗುರುತಿಸಿಕೊಂಡವರೆಂದು ಪೊಲೀಸರು ಬಯಲು ಮಾಡಿದ್ದರು.

ರಾಜುವನ್ನು ಕೊಲೆ ನಡೆಸಿದ್ದ ಬಳಿಕ ಪಾಶಾ ಹಾಗೂ ಆತನ ಸಹಚರರು ಪೂಣೆಯ ಮದರಸಾದಲ್ಲಿ ತಪ್ಪಿಸಿಕೊಂಡಿದ್ದರು. ಪೊಲೀಸರು ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದಾಗ ಮೂವರು ಸೆರೆಯಾದರೆ ಪಾಶಾ ತಪ್ಪಿಸಿಕೊಂಡಿದ್ದ. ಹಲವಾರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಪಾಶಾನನ್ನು ಕೊನೆಗೂ ಆಗಸ್ಟ್ 7ರಂದು ಬಂಧಿಸಿದ್ದರು.

ಅಬಿದ್ ಪಾಶಾನಿಗಿತ್ತು ಚೋಟಾ ಶಕೀಲ್ ಜೊತೆ ಲಿಂಕ್!!!

ಅಂದಿನ ಕಮೀಷನರ್ ಆಗಿದ್ದ ದಯಾನಂದ್ ಅವರ ಪ್ರಕಾರ ಅಬಿದ್ ಪಾಶಾನಿಗೆ ಕೆಲವೊಂದು ಉಗ್ರಗಾಮಿ ಸಂಘಟನೆ, ಭೂಗತ ಲೋಕದ ಜೊತೆ ಲಿಂಕ್ ಇತ್ತು.
ದಾವೂದ್ ಇಬ್ರಾಹಿಂನ ಬಲಗೈ ಬಂಟ ಚೋಟಾ ಶಕೀಲ್‍ನ ನಿಕಟವರ್ತಿಯಾಗಿದ್ದ ಪಾಶಾ, ಮತೀಯವಾದವನ್ನು ಬೆಳೆಸಿಕೊಂಡು ಹಲವು ಬಲಪಂಥೀಯರನ್ನು ಕೊಲ್ಲಲು ಮುಂದಾಗಿದ್ದ. ಈತ ಮಂಗಳೂರಿನ ಇಬ್ಬರು ಬಲಪಂಥೀಯರ ಕೊಲೆಯಲ್ಲೂ ಪಾಲ್ಗೊಂಡಿದ್ದ ಎಂದು ತಿಳಿಸಿದ್ದಾರೆ.

ಪೊಲೀಸರು ಪಾಶಾನ ವಿರುದ್ಧ ಕಾನೂನು ಬಾಹಿರ ತಡೆ ಕಾಯಿದೆಯ ಪ್ರಕಾರ ಕಾನೂನು ಕ್ರಮ ಜರುಗಿಸಿ ತನಿಖೆ ನಡೆಸುತ್ತಿದ್ದಾರೆ. ಪಿಎಫ್‍ಐ ಮುಖಂಡನಾಗಿರುವ
ಪಾಶಾ ಅದೇ ಸಣಘಟನೆಯಲ್ಲಿದ್ದುಕೊಂಡು ಅನೇಕರನ್ನು ಕೊಲೆ ಮಾಡಿದ್ದ. ಅನೇಕ ದರುಂತಕ್ಕೆ ಕಾರಣವಾಗಿರುವ ಪಿಎಫ್‍ಐ ಕಾರ್ಯಕರ್ತರ ಮೇಲಿದ್ದ ಅನೇಕ
ಕೇಸ್‍ಗಳನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಿಟ್ಟಿದ್ದ. ಸಿದ್ದರಾಮಯ್ಯನ ಮುಸ್ಲಿಂ ಓಲೈಕೆಯ ಕಾರಣದಿಂದ ಇಂದು ಅನೇಕ ಹಿಂದೂಗಳು
ಕೊಲೆಗೀಡಾಗಬೇಕಾಯಿತು. ಇದರಲ್ಲಿ ಬಂಟ್ವಾಳದ ಶರತ್ ಮಡಿವಾಳನ ಕೊಲೆಯೂ ಇಂದು.

ಪಿಎಫ್‍ಐ ಮೇಲೆ ನಿಷೇಧದ ತೂಗುಗತ್ತಿ!

ಇಂಥಾ ಭಯೋತ್ಪಾದಕ ಸಂಘಟನೆಯ ಮೇಲೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ. ಉಗ್ರಗಾಮಿ ಸಂಘಟನೆಯ ಇನ್ನೊಂದು ರೂಪವಾದ ಪಿಎಫ್‍ಐ ಜಿಹಾದ್ ಮೂಲಕ ಭಾರತದಲ್ಲಿ ಇಸ್ಲಾಂ ವಿಸ್ತರಣಾವಾದದ ಅಜೆಂಡಾ ಇಟ್ಟುಕೊಂಡಿದೆ. ಕೊಲೆ ನಡೆಸುವುದು. ವದಂತಿ ಹಬ್ಬಿಸುವುದು, ಕೋಮುಗಲಭೆ ಎಬ್ಬಿಸುವುದು, ಲವ್ ಜಿಹಾದ್ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದೆ.

ಅಷ್ಟಕ್ಕೂ ಪಿಎಫ್‍ಐ ನಿಷೇಧವೇಕೆ ಗೊತ್ತಾ? ಪಿಎಫ್‍ಐ ಭಯೋತ್ಪಾದಕ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಇರುವುದರಿಂದ ಗೃಹಸಚಿವಾಲಯ ಕೊನೆಗೂ ಈ ನಿರ್ಧಾರಕ್ಕೆ ಬಂದಿದೆ. ಪಿಎಫ್‍ಐ ಸಂಘಟನೆ ಭಾರತದಲ್ಲಿ ಭಯೋತ್ಪಾದನೆ ಮಾಡಲು ಬಾಂಬ್‍ಗಳ ತಯಾರಿ, ಟೆರರ್ ಕ್ಯಾಂಪ್‍ಗಳ ನಿರ್ವಹಣೆ ಮುಂತಾದ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಎನ್‍ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಅಲ್ಲದೆ ಲವ್ ಜಿಹಾದ್ ಮುಖಾಂತರ ಹಿಂದೂ ಯುವತಿಯರನ್ನು ಮತಾಂತರ ನಡೆಸಿದ್ದಲ್ಲದೆ, ಮತಾಂತರಗೊಂಡ ಯುವತಿಯರನ್ನು ಆತ್ಮಹತ್ಯಾದಳಕ್ಕೆ ನೂಕಿದ ಮಾಹಿತಿಯನ್ನು ಐಎನ್‍ಎ ಸಂಗ್ರಹಿಸಿದೆ.

`ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ಯಡಿಯಲ್ಲಿ ಈ ಸಂಘಟನೆ ನಿಷೇಧಕ್ಕೆ ಅರ್ಹವೆಂದು ಎನ್‍ಐಎ ವರದಿಯಲ್ಲಿ ಶಿಫಾರಸು ಮಾಡಿರುವುದಾಗಿ
ಗೃಹಸಚಿವಾಲಯ ತಿಳಿಸಿದೆ.

ಪಿಎಫ್‍ಐ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದಕ್ಕೆ ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ, ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆÇ
್ರಫೆಸರ್ ಕೈ ಕಡಿದಿರುವುದು, ಕಣ್ಣೂರಿನಲ್ಲಿ ಸ್ಫೋಟಕ ತಯಾರಿ ತರಬೇತಿ ಶಿಬಿರಗಳಲ್ಲಿ ಭಾಗಿಯಾಗಿರುವ ಪ್ರಕರಣಗಳನ್ನು ಎನ್‍ಐಎ ಪ್ರಧಾನವಾಗಿ ಪರಿಗಣಿಸಿದೆ. ಯಾಕೆಂದರೆ ಕಣ್ಣೂರಿನಲ್ಲಿ ಕಚ್ಚಾ ಬಾಂಬ್ ಹಾಗೂ ಐಇಡಿ ತಯಾರಿಕೆಗೆ ಬಳಸುವ ವಸ್ತುಗಳನ್ನು ವಶಪಡೆದುಕೊಂಡಿದ್ದರು. ಜೊತೆಗೆ `ಇಸ್ಲಾಮಿಕ್ ಸ್ಟೇಟ್ ಅಲ್‍ಹಿಂದ್’ ಎಂಬ ಮತ್ತೊಂದು ಸಂಘಟನೆಯ ಜೊತೆಗೂಡಿ ದಕ್ಷಿಣ ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಪಿಎಫ್‍ಐ ಸಂಚು ರೂಪಿಸಿದ್ದನ್ನು ಎನ್‍ಐಎ ಉಗ್ರ ಕೃತ್ಯ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ದಕ್ಷಿಣ ಭಾರತದಲ್ಲಿ ಪಿಎಫ್‍ಐ ಅನೇಕ ಉಗ್ರ ಕೃತ್ಯಗಳಲ್ಲಿ ಪಾಲ್ಗೊಂಡಿರುವುದಕ್ಕೆ ಗೃಹಸಚಿವಾಲಯವು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದೆ. ಆದ್ದರಿಂದ ಇಂತಹಾ ಉಗ್ರ ಸಂಘಟನೆಯನ್ನು ನಿಷೇಧಿಸುವ ನಿರ್ಧಾರಕ್ಕೆ ಗೃಹಸಚಿವಾಲಯ ಬಂದಿದೆ. ಪಿಎಫ್‍ಐ ಪಾಪದ ಕೊಡ ತುಂಬಿದೆ ಎಂದೇ ಹೇಳಬಹುದು….

-ಚೇಕಿತಾನ

source: Secrets behind murders! Do you know this carpenter?!

Tags

Related Articles

Close