ಪ್ರಚಲಿತ

ಪಿಯು ಬೋರ್ಡ್ ನ ಅಕ್ರಮವನ್ನು ಬಯಲಿಗೆಳೆದ ಕನ್ನಡತಿ, ದಕ್ಷ ಅಧಿಕಾರಿ ಐದು ತಿಂಗಳಿಂದ ಕಾಣೆಯಾಗಿದ್ದಾರೆ! ಯಾರು ಧ್ವನಿ ಎತ್ತುತ್ತಿಲ್ಲವೇಕೇ?

ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಐಎಎಸ್ ಅಧಿಕಾರಿ ನಿಗೂಢವಾಗಿ ನಾಪತ್ತೆಯಾಗಿರುವ ಸ್ಫೋಟಕ ಸುದ್ದಿ ಇದೀಗ ಹೊರ ಬಿದ್ದಿದೆ!! ಹಲವಾರು ಅಕ್ರಮಗಳ ವಿರುದ್ದ ಸೆಟೆದು ನಿಲ್ಲುತ್ತಿದ್ದ ಖಡಕ್ ಅಧಿಕಾರಿ, ದಕ್ಷತೆಗೆ ಹೆಸರಾಗಿರೋ ಕನ್ನಡತಿ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಇದೀಗ ನಿಗೂಢ ನಾಪತ್ತೆಯಾಗಿದ್ದಾರೆ.

ಹೌದು… ರಜೆ ಮುಗಿದ್ರು ಮತ್ತೆ ಕೆಲಸಕ್ಕೆ ಹಾಜರಾಗದೇ ಇರುವ ಐಎಎಸ್ ಅಧಿಕಾರಿ ರಶ್ಮಿ ಎಲ್ಲಿ ಹೋಗಿದ್ದಾರೆ ಎನ್ನುವ ಪ್ರಶ್ನೆ ಇದೀಗ ಧ್ವನಿ ಎತ್ತಿದೆ!! ದೀರ್ಘಕಾಲದ ರಜೆ ತೆಗೆದುಕೊಂಡು ಮನೆಗೆ ತೆರಳಿ ವರ್ಷವೇ ಕಳೆದಿದ್ದರೂ ಕೂಡ ಈವರೆಗೂ ಇವರ ಪತ್ತೆಯೇ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ!! ಅಷ್ಟೇ ಅಲ್ಲದೇ, ಇವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದು, ಅಧಿಕೃತ ನಿವಾಸದಲ್ಲೂ ಇವರು ಕಾಣುತ್ತಿಲ್ಲ ಎಂದಾದರೇ ಎಲ್ಲಿ ಹೋಗಿದ್ದಾರೆ ರಶ್ಮಿ ಮೇಡಂ ಎನ್ನುವ ಪ್ರಶ್ನೆ ಇದೀಗ ಕಾಡಲಾರಂಭಿಸಿದೆ!!

ಯಾರೂ ಈ ಐಎಎಸ್ ಅಧಿಕಾರಿ ರಶ್ಮಿ ಮಹೇಶ್??

ದಕ್ಷತೆಗೆ ಇನ್ನೊಂದು ಹೆಸರಾಗಿರುವ ರಶ್ಮಿ ಮಹೇಶ್ ಪಿಯು ಬೋರ್ಡ್‍ನ ಅಕ್ರಮವನ್ನು ಬಯಲಿಗೆಳೆದ ಕನ್ನಡತಿ!! ಸರಕಾರಿ ಕೋಟಾಕ್ಕೆ ಮೆಡಿಕಲ್ ಸೀಟುಗಳನ್ನು ಒದಗಿಸದ ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದದ್ದು ಸೇರಿದಂತೆ ಇಲಾಖೆಯಲ್ಲಿ ವ್ಯಾಪಕ ಸುಧಾರಣೆ ತರಲು ಈ ಐಎಎಸ್ ಅಧಿಕಾರಿ ಕಾಳಜಿ ವಹಿಸಿದ್ದರು!!

ಅಷ್ಟೇ ಅಲ್ಲದೇ, ಬಡ ವಿದ್ಯಾರ್ಥಿ ಅಭಿವೃದ್ಧಿಗೆ ಹೋರಾಡಿದ ದಕ್ಷ ಅಧಿಕಾರಿ ವಿ. ರಶ್ಮಿ ಮಹೇಶ್ ಅವರು ಮೆಡಿಕಲ್ ಹಾಗೂ ಡೆಂಟಲ್ ಕಾಲೇಜಿನಲ್ಲಿ ಆಗುತ್ತಿದ್ದ ಅನ್ಯಾಯವನ್ನು ಬಯಲಿಗೆಳೆದು, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಾನೂನುಬಾಹಿರವಾಗಿ ಸೀಟು ಹಂಚಿಕೆ ಮಾಡುವ ಮೆಡಿಕಲ್ ಕಾಲೇಜುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದರಿಂದಾಗಿ ಪ್ರತಿ ವರ್ಷ ಸುಮಾರು 2000 ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಿದ್ದಲ್ಲದೇ ಈ ಕ್ರಮದಿಂದ ತೊಂದರೆಗೊಳಗಾದ ಖಾಸಗಿ ಸಂಸ್ಥೆಗಳು ಸರಕಾರದ ಮೇಲೆ ಒತ್ತಡ ತಂದು ರಶ್ಮಿ ಮಹೇಶ್ ಅವರಿಗೆ ಮಾನಸಿಕ ಹಿಂಸೆ ನೀಡಿ ರಜೆಯ ಮೇಲೆ ತೆರಳುವಂತೆ ಮಾಡಿದ್ದಾರೆ ಎನ್ನುವ ಅಂಶವು ತಿಳಿದು ಬಂದಿದೆ!!

ಅಷ್ಟೇ ಅಲ್ಲದೇ, ವೈದ್ಯಕೀಯ ಶಿಕ್ಷಣದ ಸೀಟನ್ನು ವ್ಯಾಪಾರಕ್ಕಿಟ್ಟಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕೊಡಗಿನವರೆಂದು, ಅಲ್ಪಸಂಖ್ಯಾತರೆಂದು ನಕಲಿ ಸರ್ಟಿಫಿ ಕೇಟ್‍ಗಳನ್ನು ಪಡೆದುಕೊಂಡು ಸೀಟು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಇಂತಹವುಗಳ ವಿರುದ್ಧ ಸಮರ ಸಾರಿ ವಿಚಾರಣೆಗೆ ಮುಂದಾದ ರಶ್ಮಿ ಅವರ ವರದಿ ಸರಕಾರವನ್ನು ಪೇಚಿಗೆ ಸಿಲುಕಿಸಿತ್ತು!! ಹಾಗಾಗಿ ಅವರನ್ನು ಕಡ್ಡಾಯ ರಜೆಯ ಶಿಕ್ಷೆಯನ್ನು ವಿಧಿಸಿತ್ತು!! ಆದರೆ ಇದೀಗ ದೀರ್ಘಕಾಲದ ರಜೆಯನ್ನು ತೆಗೆದುಕೊಂಡು ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ!!

ಎಲ್ಲಿ ಹೋದ್ರು ರಶ್ಮಿ ಮೇಡಂ?? ಕೆಲಸ ಕಸಿದುಕೊಂಡು ಈ ದಕ್ಷ ಅಧಿಕಾರಿಯನ್ನು ಮನೆಗೆ ಕಳುಹಿಸಿದ್ದಾರೆಯೇ ಎನ್ನುವ ಪ್ರಶ್ನೆಯೂ ಇದೀಗ ಮೂಡಿದೆ!!

ಬಿಬಿಎಂಪಿಯ ಹಣಕಾಸು ಜಾಹೀರಾತು ವಿಭಾಗದ ಮುಖ್ಯಾಧಿಕಾರಿ ಹಾಗೂ ರಾಜ್ಯದ ನಿಷ್ಠಾವಂತ ಐಎಎಸ್ ಅಧಿಕಾರಿ ನಾಪತ್ತೆಯಾಗಿದ್ದು ಅವರು ಎಲ್ಲಿ ಹೋಗಿದ್ದಾರೆ ಎನ್ನುವ ಮಾಹಿತಿ ಈವರೆಗೂ ಲಭ್ಯವಾಗಿಲ್ಲ!! ಕಳೆದ 5 ತಿಂಗಳಿನಿಂದ ಈ ಅಧಿಕಾರಿಯ ಸುಳಿವು ಇಲ್ಲದಾಗಿದ್ದು, ಅವರ ಅಧಿಕೃತ ನಿವಾಸದಲ್ಲಿಯೂ ಸುಳಿವು ಸಿಕ್ಕಿಲ್ಲ!! ಆದರೆ ಈ ನಿಷ್ಠಾವಂತ ಅಧಿಕಾರಿಯನ್ನು ಹುಡುಕಿ ಹುಡುಕಿ ಸುಸ್ತಾಗಿದ್ದಲ್ಲದೇ, ಇನ್ನೂ ಇವರ ಪತ್ತೆಯಾಗಿಲ್ಲ!!

ಪಿಯು ಬೋರ್ಡ್ ಅಕ್ರಮವನ್ನು ಬಯಲಿಗೆಳೆದಂತಹ ಈ ಅಧಿಕಾರಿ !!ದೀರ್ಘಕಾಲದ ರಜೆ ತೆಗೆದುಕೊಂಡು 5 ತಿಂಗಳಾದರೂ ಕೂಡ ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹಾಗಾಗಿ ಈ ಬಗ್ಗೆ ಅಧಿಕಾರಿಗಳೇ ಅಧಿಕೃತ ನಿವಾಸಕ್ಕೆ ತೆರಳಿ ಹುಡುಕಿದರೂ ಕೂಡ ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲದೇ ಇದ್ದು, ಇನ್ನು ರಶ್ಮಿ ಎಲ್ಲಿ ಹೋಗಿದ್ದಾರೆ ಎಂದು ಕಮೀಷನರ್ ಅವರನ್ನು ಕೇಳಿದರೂ ಕೂಡ ಅವರ ಬಳಿ ಯಾವುದೇ ಮಾಹಿತಿ ಇಲ್ಲ !!
ಹಾಗಾದರೆ ಎಲ್ಲಿ ಹೋಗಿದ್ದೀರಾ ರಶ್ಮಿ ಮೇಡಂ??

 

-ಅಲೋಖಾ

Tags

Related Articles

Close