ಪ್ರಚಲಿತ

ಮೋದಿಯನ್ನು ಟೀಕಿಸುತ್ತಿದ್ದ ಅಂಬೇಡ್ಕರ್ ಮೊಮ್ಮಗ ಬಿಜೆಪಿ ಬಗ್ಗೆ ಹೇಳಿದ್ದೇನು ಗೊತ್ತಾ?! ಅವರು ನುಡಿದ ಭವಿಷ್ಯವಾದರೂ ಏನು?!

ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷವನ್ನು ಪೂರ್ಣಗೊಳಿಸಿದ ಬಳಿಕವೂ ಪ್ರಧಾನಿಯಾಗಿಯೇ ಮುಂದುವರಿಯಬೇಕು ಎಂದು ಶೇ.70ರಷ್ಟು ಜನರು ಬಯಸಿದ್ದಾರೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿರುವ ಸಮೀಕ್ಷೆ ಈಗಾಗಲೇ ತಿಳಿಸಿದ್ದು, ಈ ಸಮೀಕ್ಷೆಯೂ ಕಾಂಗ್ರೆಸ್‍ನ ನಿದ್ದೆ ಕೆಡಿಸಿದ್ದಂತೂ ಅಕ್ಷರಶಃ ನಿಜ. ಆದರೆ ಇದೀಗ 2024ರ ವರೆಗೆ ಬಿಜೆಪಿ ಮಣಿಸುವುದು ಕಾಂಗ್ರೆಸ್’ಗೆ ಆಗದ ಮಾತು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ ಹಾಗೂ ದಲಿತ ಮುಖಂಡರಾದ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಹೌದು… ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿರುವ ಸಮೀಕ್ಷೆಯ ಪ್ರಕಾರ ಶೇ.70ರಷ್ಟು ಜನ ಮೋದಿ ಅವರು 2024ರ ವರೆಗೂ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಅಲ್ಲದೆ, ಶೇ. 62ರಷ್ಟು ಮಂದಿ ಮೋದಿ ಅವರ ಸಾಧನೆ ತೃಪ್ತಿ ತಂದಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷವನ್ನು ಪೂರ್ಣಗೊಳಿಸಿದ ಬಳಿಕವೂ ಪ್ರಧಾನಿಯಾಗಿಯೇ ಮುಂದುವರಿಯಬೇಕು ಎಂದು ಶೇ.70ರಷ್ಟು ಜನರು ಬಯಸಿದ್ದಾರೆ ಎಂದು ಸಮೀಕ್ಷೆ ತಿಳಿಸಿತ್ತು.

ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕೆಲ ನಿಲುವುಗಳ ಕಟು ಟೀಕಾಕಾರರಲ್ಲಿ ಒಬ್ಬರಾದ, ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ ಹಾಗೂ ದಲಿತ ಮುಖಂಡರಾದಪ್ರಕಾಶ್ ಅಂಬೇಡ್ಕರ್, 2024ರ ವರೆಗೆ ಬಿಜೆಪಿ ಮಣಿಸುವುದು ಕಾಂಗ್ರೆಸ್’ಗೆ ಆಗದ ಮಾತು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ವ್ಯಕ್ತಿತ್ವ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ ಎಂದು ಬಣ್ಣಿಸಿದ್ದಾರೆ.

Image result for prakash ambedkar

ಆದರೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದಲಿತರ ಓಲೈಕೆ ಯತ್ನವನ್ನು ಅಸ್ಪಷ್ಟ ಬೂಟಾಟಿಕೆ ಎಂದು ಟೀಕಿಸಿದ್ದ ಪ್ರಕಾಶ್ ಅಂಬೇಡ್ಕರ್, ಇತ್ತೀಚಿಗೆ ಸಂಭವಿಸಿದ ಭೀಮಾ-ಕೋರೆಗಾಂವ್ ಹಿಂಸಾಚಾರ ಖಂಡಿಸಿ ಭಾರಿಪ್ ಬಹುಜನ್ ಮಹಾಸಂಘದ ಮುಖ್ಯಸ್ಥರೂ ಆಗಿರುವ ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರ ಬಂದ್’ಗೆ ಕರೆ ನೀಡುವ ಮೂಲಕ ಸುದ್ದಿಯಾಗಿದ್ದಲ್ಲದೇ ಇದೀಗ 2024ರ ವರೆಗೆ ಬಿಜೆಪಿ ಮಣಿಸುವುದು ಕಾಂಗ್ರೆಸ್’ಗೆ ಆಗದ ಮಾತು ಎಂದು ಹೇಳಿದ್ದಾರೆ.

ಮುಂಬೈ ಮರಾಠಿ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಅವರು, “2018ರ ಡಿಸೆಂಬರ್’ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜೊತೆಗೆ ಲೋಕಸಭೆ ಚುನಾವಣೆ ನಡೆಸುವ ಆಯ್ಕೆಯನ್ನು ಬಿಜೆಪಿ ಆಯ್ದುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ತಪ್ಪುಗಳನ್ನು ಮಾಡಿರಬಹುದು. ಆದರೆ, ಭ್ರಷ್ಟಾಚಾರ ರಹಿತ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್’ನ ಹುಳುಕುಗಳನ್ನು ಎತ್ತಿತೋರಿಸುತ್ತಾರೆ. ಅದನ್ನು ಎದುರಿಸುವುದು ಕಾಂಗ್ರೆಸ್’ಗೆ ಸಾಧ್ಯವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಳ್ಳೆಯ ನಡತೆ ಹೊಂದಿದ್ದಾರೆ. ಆದರೆ, ಕಾಂಗ್ರೆಸ್’ನ ಇತರ ನಾಯಕರಿಗೆ ಇಂತಹ ವ್ಯಕ್ತಿತ್ವ ಇಲ್ಲ. ಹೀಗಾಗಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್’ಗೆ ಸಾಧ್ಯವಾಗುತ್ತಿಲ್ಲ. 2024ರ ವರೆಗೂ ಕಾಂಗ್ರೆಸ್ ಬಿಜೆಪಿಯನ್ನು ಮಣಿಸಿ ಅಧಿಕಾರ ಹಿಡಿಯಲಾರದು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ ಹಾಗೂ ದಲಿತ ಮುಖಂಡರಾದ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಇನ್ನು ಕಳೆದ ವರ್ಷ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ನರೇಂದ್ರ ಮೋದಿಯನ್ನುದ್ದೇಶಿಸಿ, “ದೇಶದಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆ ಏರುತ್ತಿರುವುದು ಅವರ ವಿರೋಧಿಗಳ ಮೇಲೂ ಪರಿಣಾಮ ಬೀರುತ್ತಿದೆ” ಎಂದು ಹೇಳಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಎದುರಿಸವಂತಹ ಛಾತಿ ಇರುವ ನಾಯಕ ಯಾರೂ ಇಲ್ಲ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಒಮರ್ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ, 2019 ಚುನಾವಣೆ ಗೆಲ್ಲುವುದು ಅಸಾಧ್ಯ. 2024ರ ಚುನಾವಣೆಗೆ ಕಾರ್ಯತಂತ್ರ ರೂಪಿಸಬೇಕಷ್ಟೇ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.

ಅಲ್ಲದೇ, “ಮೋದಿಯನ್ನು ಟೀಕಿಸಿದರೆ ಏನೂ ಉಪಯೋಗವಿಲ್ಲ. ನೀವೆಷ್ಟೇ ಟೀಕಿಸಿದರೂ ಇದಕ್ಕಿಂತ ಭಿನ್ನ ಫಲಿತಾಂಶ ಸಿಕ್ಕೋದಿಲ್ಲ” ಎಂದು ಹೇಳಿದ ಒಮರ್ ಅಬ್ದುಲ್ಲಾ, ಮೋದಿಯನ್ನು ಟೀಕಿಸುವುದು ಬಿಟ್ಟು ಸಕರಾತ್ಮಕವಾಗಿ ಜನರಿಗೆ ಪರ್ಯಾಯ ವ್ಯವಸ್ಥೆಯ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ ರಾಜ್ಯದಲ್ಲಿ ಬಿಜೆಪಿ ಪರ ಇಂತಹ ಪ್ರಬಲ ಅಲೆ ಇರುವುದು ತಜ್ಞರಿಗೆ ಏಕೆ ಗೊತ್ತಾಗಲಿಲ್ಲ. ಇದು ಒಂದು ಸಣ್ಣ ಕೊಳದಲ್ಲಿ ಆದ ಚಲನೆಯಲ್ಲ. ಇದು ಸುನಾಮಿ ಎಂದು ಬಣ್ಣಿಸಿದ್ದಾರೆ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕೆಲ ನಿಲುವುಗಳ ಕಟು ಟೀಕಾಕಾರರಲ್ಲಿ ಒಬ್ಬರಾದ, ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ ಹಾಗೂ ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್, 2024ರ ವರೆಗೆ ಬಿಜೆಪಿ ಮಣಿಸುವುದು ಕಾಂಗ್ರೆಸ್’ಗೆ ಆಗದ ಮಾತು ಎಂದು ಹೇಳಿದ್ದಾರೆ!!

Related image

ಕರ್ನಾಟಕ ಚುನಾವಣಾ ಭವಿಷ್ಯ, ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ನಿರ್ಧರಿಸುತ್ತದೆ!!

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಡ ಪಕ್ಷಗಳು ಬಿಜೆಪಿ ವಿರುದ್ಧ ಮಹಾಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ಹೋರಾಡಿದರೆ ರಾಜಕೀಯ ಚಿತ್ರಣ ಬದಲಾಗಬಹುದು. ಎಡಪಕ್ಷಗಳು ಮೋದಿ ಅವರ ಭ್ರಷ್ಟಾಚಾರ ರಹಿತ ವ್ಯಕ್ತಿತ್ವಕ್ಕೆ ಸಾಟಿಯಾಗಬಲ್ಲವು. ಎಡರಂಗ ತನ್ನ ವಿಶ್ವಾಸಾರ್ಹತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಒಂದು ವೇಳೆ ಹೀಗೇನಾದರೂ ಆದರೆ, ಬಿಜೆಪಿ ಸಂಖ್ಯೆ ಈಗ ಕಾಂಗ್ರೆಸ್ ಹೊಂದಿರುವ ಸಂಖ್ಯೆಗೆ ಕುಸಿಯಬಹುದು. ಕರ್ನಾಟಕ ಚುನಾವಣಾ ಭವಿಷ್ಯ ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ನಿರ್ಧರಿಸುತ್ತದೆ ಎಂದು ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ತಾವು ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿಯೂ ಪ್ರಕಾಶ್ ಅಂಬೇಡ್ಕರ್ ಘೋಷಿಸಿಕೊಂಡಿದ್ದಾರೆ.

ಹೌದು… 2024ರ ವರೆಗೆ ಬಿಜೆಪಿ ಮಣಿಸುವುದು ಕಾಂಗ್ರೆಸ್’ಗೆ ಆಗದ ಮಾತು ಎಂದು ಹೇಳಿರುವ ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್, ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ವ್ಯಕ್ತಿತ್ವ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ ಎಂದು ಬಣ್ಣಿಸಿರುವುದು ಹೆಮ್ಮೆಯ ವಿಚಾರವಾಗಿದೆ.

Image result for prakash ambedkar

– ಅಲೋಖಾ

Tags

Related Articles

Close