ಪ್ರಚಲಿತ

ಮೋದಿ ಏನೂ ಮಾಡಿಲ್ಲ ಎನ್ನುವವರಿಗೆ ಇಸ್ರೇಲ್ ಪ್ರಧಾನಿ ನೀಡಿದ ತಿರುಗೇಟು ಹೇಗಿತ್ತು ಗೊತ್ತಾ? ವಾವ್ ಎಂತಾ ಮಾತು ನೇತಾನ್ಯಹು ಜೀ…

ಪ್ರಧಾನಿ ಮೋದಿ ಕೋಟಿ ಕೋಟಿ ಅಭಿಮಾನಿಗಳ ಪಾಲಿಗೆ ಹೃದಯ ಸಾಮ್ರಾಟರಾದರೆ, ಕೆಲವೊಂದು ಸೋಗಲಾಡಿ ಬುದ್ಧಿಜೀವಿಗಳು ಹಾಗೂ ವಿರೋಧ ಪಕ್ಷಗಳಿಗೆ ಇವರು ನುಂಗಲಾರದ ತುತ್ತು. ಸಂಸತ್ ಪ್ರವೇಶಿಸುವಾಗಲೇ ಸಂಸತ್ತಿನ ಧ್ವಾರದ ಮೆಟ್ಟಿಲಿಗೆ ಹಣೆಯಿಟ್ಟು ಕೈ ಮುಗಿದು ಪ್ರವೇಶಿಸಿದ ಪ್ರಧಾನಿ ಮೋದಿ, ಸಂಸತ್ ಪ್ರವೇಶದ ನಂತರ ಭಾರತವನ್ನು ಯಾವ ರೀತಿ ಬದಲಾಯಿಸಿದ್ದಾರೆಂದರೆ ಇಡೀ ಜಗತ್ತೇ ಭಾರತವನ್ನು ಬಿಟ್ಟ ಕಣ್ಣು ಬಿಟ್ಟಂಗೆ ನೋಡುವ ಹಾಗೆ ಮಾಡಿದ್ದಾರೆ. “ಭಾರತ ಹಿಂದಿನ ಹಾಗಿಲ್ಲ. ಇಂದು ಭಾರತ ಬದಲಾಗಿದೆ” ಎಂಬ ಸಂದೇಶವನ್ನು ಕೇವಲ ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗೂ ಸಾರಿ ಹೇಳಿದ್ದಾರೆ ಪ್ರಧಾನಿ ಮೋದಿಯವರು.

ವಿಶ್ವನಾಯಕರ ಬಹುಪರಾಕ್…!!!

ಮೋದಿ ಪ್ರಧಾನಿಯಾದ ನಂತರ ವಿಶ್ವ ಅವರನ್ನು ಹಿಂತಿರುಗಿ ನೋಡಿದ್ದಂತು ಸುಳ್ಳಲ್ಲ. ಯಾಕೆಂದರೆ ಮೋದಿ ಅನ್ನುವ ಶಕ್ತಿ ಅಂತಹದ್ದೊಂದು ಮ್ಯಾಜಿಕ್ ಮಾಡಿತ್ತು. ತಾನು ಪ್ರಧಾನಿಯಾದ ಆರಂಭದಲ್ಲೇ ಯಾವುದೇ ದೊಡ್ಡ ದೊಡ್ಡ ದೇಶಗಳಿಗೆ ತೆರಳದೆ ಬೂತಾನ್, ಮಯನ್ಮಾರ್, ಬರ್ಮಾ ಅನ್ನುವ, ಜಗತ್ತೇ ಗುರುತಿಸದ ಸಣ್ಣ ದೇಶಗಳಿಗೆ ತೆರಳಿ ತನ್ನ ಸ್ನೇಹವನ್ನು ಗಟ್ಟಿಗೊಳಿಸಿದ್ದರು. ಮಾತ್ರವಲ್ಲದೆ ವೀಸಾ ಕೊಡೋದಿಲ್ಲ ಎಂದು ಬೊಬ್ಬೆ ಬಿಡುತ್ತಿದ್ದ ಅಮೇರಿಕಾದಂತಹ ದೇಶಗಳೇ ಮೋದೀಜಿಯನ್ನು ಪ್ರೀತಿಯಿಂದ ಆಹ್ವಾನಿಸಿ ತಬ್ಬಿಕೊಂಡಿದ್ದು ಇತಿಹಾಸ. ಮಾತ್ರವಲ್ಲದೆ ಚೀನಾ, ರಷ್ಯಾ, ಇಂಗ್ಲೆಂಡ್ ಹಾಗೂ ಸೌಧೀ ಅರೇಬಿಯಾ ಸಹಿತ ಅನೇಕ ಮುಸ್ಲಿಂ ರಾಷ್ಟ್ರಗಳೂ ಹಿಂದೂ ಹೃದಯ ಸಾಮ್ರಾಟ್ ಮೋದಿಯವರನ್ನು ಕರೆದು ಮೋದಿ ಹೇಳಿದಂತೆ ಅದೇ ಮುಸ್ಲಿಂ ರಾಷ್ಟ್ರಗಳಲ್ಲಿ ದೇವಸ್ಥಾನ ಕಟ್ಟಲು ಜಾಗ ಬಿಟ್ಟುಕೊಡುತ್ತಾರೆಂದರೆ ಅದು ಸುಮ್ನೇನಾ…

ಭಾರತಕ್ಕೆ ಆಗಮಿಸಿದ ಇಸ್ರೇಲ್ ದೊರೆ…

ಇಸ್ರೇಲ್ ಹಾಗೂ ಭಾರತದ ಸ್ನೇಹ ಇಂದು ಮೊನ್ನೆಯದಲ್ಲ. ಅದು 25 ವರ್ಷ ಹಳೆಯ ಸ್ನೇಹ. ಆದರೆ ಅದನ್ನು ಗಟ್ಟಿಗೊಳಿಸಿದ್ದು ಮಾತ್ರ ನರೇಂದ್ರ ಮೋದಿಯವರು. ಆ ವರೆಗೂ ಯಾವೊಬ್ಬ ಪ್ರಧಾನಿಯೂ ಇಸ್ರೇಲ್ ಭೇಟಿಗೆ ಮನಸು ಮಾಡಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಕಳೆದ ಬಾರಿ ಇಸ್ರೇಲ್‍ಗೆ ಐತಿಹಾಸಿಕ ಭೇಟಿ ನೀಡಿದ್ದರು. ಆ ವೇಳೆ ಆ ಪುಟ್ಟ ರಾಷ್ಟ್ರ ಭಾರತದಂತಹ ದೊಡ್ಡ ರಾಷ್ಟ್ರದ ನಾಯಕನನ್ನು ಸ್ವಾಗತಿಸಿದ ರೀತಿ ಮಾತ್ರ ಅದ್ಭುತ. “ಜಗತ್ತಿನ ಅತಿ ದೊಡ್ಡ ರಾಷ್ಟ್ರ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊದಿರುವ ಕೋಟಿ ಕೋಟಿ ಭಾರತೀಯರ ದೊರೆ ಇಸ್ರೇಲ್‍ಗೆ ಆಗಮಿಸುತ್ತಿದ್ದಾರೆ” ಎಂಬ ಪದಗಳು ಇಸ್ರೇಲ್‍ನ ದಿನಪತ್ರಿಕೆಗಳಲ್ಲಿ ಮಿಂಚುತ್ತಿದ್ದವು. ನಂತರ ನಡೆದದ್ದೇ ಇತಿಹಾಸ. ಮೋದಿಯನ್ನು ವಿಶೇಷವಾಗಿ ಸ್ವಾಗತಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮೀನ್ ನೇತಾನ್ಯಹು ಹೊಸ ಭಾಷ್ಯವನ್ನು ಬರೆದಿದ್ದರು.

ಪ್ರೀತಿ ಹೊತ್ತು ತಂದ ಬೆಂಜಮಿನ್…

ಈಗ ಅದೇ ಇಸ್ರೇಲ್ ದೇಶದ ಸರದಾರ ಭಾರತಕ್ಕೆ ಆಗಮಿಸಿದ್ದಾರೆ. “ಮೋದಿಯವರು ನನ್ನ ಬೆಸ್ಟ್ ಫ್ರೆಂಡ್” ಎನ್ನುತ್ತಲೇ ಭಾರತಕ್ಕೆ ಆಗಮಿಸಿದ ನೇತಾನ್ಯಾಹು ಇಂದು ಮೋದಿಯನ್ನು ಹಾಡಿ ಹೊಗಳಿದ್ದಾರೆ. ತಾನು ಆಗಮಿಸುವಾಗಲೇ ತನ್ನ ವಿಮಾನದಲ್ಲಿ ಭಾರತ ಹಾಗೂ ಇಸ್ರೇಲ್ ಧ್ವಜಗಳನ್ನು ಅಳವಡಿಸಿದ್ದ ಬೆಂಜಮಿನ್ ನೇತಾನ್ಯಾಹು ಭಾರತಕ್ಕೆ ವಿಶೇಷ ಗೌರವವನ್ನು ನೀಡಿ ಆಗಮಿಸಿದ್ದಾರೆ.

ಮೋದಿ ಕ್ರಾಂತಿಕಾರಿ ನಾಯಕ-ನೇತಾನ್ಯಾಹು…

“ನನ್ನ ಪಾಲಿಗೆ ಇದೊಂದು ಐತಿಹಾಸಿಕ ಯಾತ್ರೆಯಾಗಿದೆ. ಭಾರತದ ಪ್ರಧಾನಿ ಮೋದಿಯವರು ಓರ್ವ ಕ್ರಾಂತಿಕಾರಿ ನಾಯಕ. ಅವರಲ್ಲಿ ದೂರದ ಚಿಂತನೆಯಿದೆ. ಭಾರತ ಮತ್ತು ಇಸ್ರೇಲ್ ಎರಡೂ ದೇಶಗಳೂ ಇಂದು ಭಯೋತ್ಪಾದನಾ ಸಮಸ್ಯೆಯನ್ನು ಎದುರಿಸುತ್ತಿದೆ. ನಾವಿಬ್ಬರೂ ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲಬೇಕಾಗಿದೆ. ದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳಿಗೆ ಸೆಟೆದು ನಿಲ್ಲಬೇಕಾಗಿದೆ. ಭಾರತ ಹಾಗೂ ಇಸ್ರೇಲ್ ಸಂಬಂಧ ತುಂಬಾ ಹಳೆಯದು. ಆದರೆ ಈಗ ಸಿಗುತ್ತಿರುವ ಸ್ನೇಹ ಮಾತ್ರ ಹೊಸತನದ್ದು. ಈ ಉಭಯ ರಾಷ್ಟ್ರಗಳು ಇನ್ನಷ್ಟು ತಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಬೇಕಾಗಿದೆ. ಮೋದಿಯವರಂತಹ ನಾಯಕನಿದ್ದರೆ ಯಾವುದೇ ಸಮಸ್ಯೆಯನ್ನು ಎದುರಿಸಬಹುದಾಗಿದೆ. ಅವರೊಬ್ಬ ಕ್ರಾಂತಿಕಾರಿ ನಾಯಕ ಅನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಬೆಂಜಮಿನ್ ನೇತಾನ್ಯಾಹು ಹೇಳಿದ್ದಾರೆ.

ಹಿಬ್ರೂ ಭಾಷೆಯಲ್ಲಿ ಸ್ವಾಗತಿಸಿದ ಮೋದಿ…

ಇನ್ನು ಮೋದಿವರನ್ನು ಇಸ್ರೇಲ್ ಭೇಟಿ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ಸ್ವಾಗತಿಸಿದ್ದ ನೇತಾನ್ಯಾಹುವನ್ನು ಈ ಬಾರಿ ಭಾರತಕ್ಕೆ ಆಗಮಿಸಿದ ನೇತಾನ್ಯಾಹು ಅವರನ್ನು ಹಿಬ್ರೂ ಭಾಷೆಯಲ್ಲಿ ಸ್ವಾಗತಿಸಿದ್ದಾರೆ. ಹಿಬ್ರೂ ಭಾಷೆಯಲ್ಲಿ ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಿದ ಮೋದಿ ಇಸ್ರೇಲ್ ದೊರೆಯನ್ನು ಕೊಂಡಾಡಿದ್ದಾರೆ. “ನಿಮ್ಮ ಭಾರತ ಭೇಟಿ ನಮಗೆ ಅತ್ಯಂತ ಸಂತಸವನ್ನು ತಂದುಕೊಟ್ಟಿದೆ. ಗುಜರಾತಿನಲ್ಲಿ ನಾನು ನಿಮಗೆ ಔತಣವನ್ನು ನೀಡುತ್ತಿದ್ದೇನೆ. ನನ್ನ ತವರು ರಾಜ್ಯದಲ್ಲಿ ನಿಮ್ಮನ್ನು ಸ್ವಾಗತಿಸಿದ್ದು ಮತ್ತಷ್ಟು ಸಂತಸವನ್ನು ತಂದಿದೆ. ಇಸ್ರೇಲ್ ಪ್ರಧಾನಿಯೋರ್ವರು ಮೊದಲ ಬಾರಿಗೆ ಭಾರತಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ನಿಮಗೆ ಕೋಟಿ ಕೋಟಿ ಭಾರತೀಯರ ಪರವಾಗಿ ಸ್ವಾಗತ” ಎಂದು ಮೋದಿ ಹೇಳಿದ್ದಾರೆ.

9 ಒಪ್ಪಂದಗಳಿಗೆ ಸಹಿ…

ಕೃಷಿ, ವಿಜ್ನಾನ, ತಂತ್ರಜ್ನಾನ, ವೈಮಾನಿಕ, ಬಾಹ್ಯಾಕಾಶ, ಉಗ್ರನಿಗ್ರಹ, ರಕ್ಷಣಾ ಕ್ಷೇತ್ರ ಸಹಿತ ಒಟ್ಟು 9 ಮಹತ್ವದ ಒಪ್ಪಂದಗಳಿಗೆ ಭಾರತ ಹಾಗೂ ಇಸ್ರೇಲ್ ಸಹಿ ಹಾಕಲಿದೆ. ರಕ್ಷಣಾ ಕ್ಷೇತ್ರಗಳಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನವನ್ನು ಪಡೆದಿರುವ ಇಸ್ರೇಲ್ ಕೃಷಿ ಕ್ಷೇತ್ರದಲ್ಲೂ ಅಷ್ಟೇ ಪ್ರಾದಾಣ್ಯತೆಯನ್ನು ಪಡೆದಿದೆ. ಸಮುದ್ರದ ನೀರನ್ನೇ ಶುದ್ಧೀಕರಣಗೊಳಿಸಿ ಕೃಷಿ ಹಾಗೂ ಕುಡಿಯಲು ಉಪಯೋಗಿಸುತ್ತಿರುವ ಇಸ್ರೇಲ್, ತಂತ್ರಜ್ನಾನ ಕ್ಷೇತ್ರದಲ್ಲೂ ಬೇಶ್ ಅನ್ನಿಸಿಕೊಂಡಿದೆ.

ಒಟ್ಟಿನಲ್ಲಿ ಬೆಂಜಮಿನ್ ನೇತಾನ್ಯಾಹು ಭಾರತ ಭೇಟಿಯಿಂದಾಗಿ ಭಾರತದಲ್ಲಿ ಹೊಸ ಕಳೆ ಮಡುಗಟ್ಟಿದ್ದು, ಮೋದಿ ವಿರೋಧಿಗಳಿಗೆ ಮಾತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೋದಿ ವಿರೋಧಿಗಳು ಮೋದೀಜಿಯನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿದ್ದರೆ ವಿಶ್ವದ ಘಟಾನುಘಟಿ ನಾಯಕರೆಲ್ಲರೂ ಮೋದಿಯವನ್ನು ಹಾಗೂ ಅವರ ಕಾರ್ಯಕ್ರಮಗಳನ್ನು ಹಾಡಿ ಹೊಗಳುತ್ತಾರೆ.

-ಸುನಿಲ್ ಪಣಪಿಲ

Tags

Related Articles

Close