ಪ್ರಚಲಿತ

ಮೋದಿ ಚಹಾ ಮಾರಿದ ಬಗ್ಗೆ ಟ್ರಂಪ್ ಮಗಳು ಹೇಳಿದ್ದೇನು ಗೊತ್ತಾ?!

ನರೇಂದ್ರ ಮೋದಿ. ದೇಶ ಕಂಡ ಮಹಾ ನಾಯಕ. ದೇಶದ ಉದ್ಧಾರಕ್ಕಾಗಿ ತನ್ನ ಮನೆ, ಸಂಸಾರವನ್ನೆಲ್ಲಾ ತ್ಯಜಿಸಿ ಸಮಾಜ ಸೇವೆ ಮಾಡಲು ಹೊರಟ ಮಹಾ ಸಂತ. ಹಿಮಾಲಯಕ್ಕೆ ತೆರಳಿ ಸನ್ಯಾಸಿಯಾಗಬೇಕೆಂದು ಬಯಸಿದರೂ ಭಾರತಮಾತೆಯ ಸಂಕಲ್ಪ ಒಂದೇ ಆಗಿತ್ತು. ಅದು ದೇಶ ಸೇವೆ.

ಬಾಲ್ಯದಿಂದಲೇ ಸಂಘ ಜೀವನದಲ್ಲಿ ಬೆಳೆದು ಅದರ ಆದರ್ಶವನ್ನು ಮೈಗೂಡಿಸಿಕೊಂಡು “ನಮಸ್ತೇ ಸದಾ ವತ್ಸಲೇ” ಎಂಬ ಉದ್ಘೋಷವನ್ನು ಹೇಳುತ್ತಾ,
ತಂದೆಯೊಂದಿಗೆ ರೈಲು ನಿಲ್ದಾಣದಲ್ಲಿ ಚಾಹಾ ಮಾರುತ್ತಾ ಜೀವನ ಸಾಗಿಸಿದ್ದರು ಮೋದಿ. ಇದರ ಬಗ್ಗೆ ಹೆಚ್ಚೇನು ಹೇಳಬೇಕೆಂದೇನಿಲ್ಲ. ಯಾಕೆಂದರೆ ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಮೋದೀಜಿಯ ಆ ವ್ಯಕ್ತಿತ್ವ ಗೊತ್ತಿದೆ. ಅವರೊಬ್ಬ ವ್ಯಕ್ತಿಯಲ್ಲ. ಅದೊಂದು ಶಕ್ತಿ ಪುಂಜ ಅನ್ನೋದು ಜಗದ್ಜಾಹೀರು.

ಮೋದಿಯವರನ್ನು ದೇಶದ ವಿರೋಧ ಪಕ್ಷಗಳು ವಿನಾಕಾರಣ ಟೀಕಿಸಿದರೂ ಅವರು ವಿಶ್ವನಾಯಕರಾಗಿದ್ದಾರೆ. ಮೋದಿ ಪ್ರಧಾನಿಯಾದ ನಂತರ ನಡೆದ ವಿವಿಧ
ಸಮೀಕ್ಷೆಯಲ್ಲಿಯೂ ಮೋದಿಯೇ ಜಗತ್ತಿನ ಶ್ರೇಷ್ಟ ನಾಯಕ ಎಂಬ ಬಿರುದು ಕೊಟ್ಟಿದೆ. ಇತ್ತೀಚೆಗೆ ನಡೆದ, ಜಗತ್ತಿನ ಅತ್ಯಂತ ಜನರ ನಂಬುಗೆಯ ಸರ್ಕಾರ ಯಾವುದು ಎಂಬ ಪ್ರಶ್ನೆಗೂ ಮೋದಿ ಸರ್ಕಾರ ಎಂಬ ಪಟ್ಟ ಒದಗಿ ಬಂದಿದೆ. “ಭಾರತದ ಮೋದಿ ಸರ್ಕಾರ, ಜಗತ್ತಿನ ಅತ್ಯಂತ ನಂಬುಗೆಯ ಸರ್ಕಾರ” ಎಂಬ ಸತ್ಯವನ್ನು ಅತಿದೊಡ್ಡ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿತ್ತು. ಅಂದಹಾಗೆ ಈ ಸಮೀಕ್ಷೆಯನ್ನು ಮಾಡಿದ್ದು ಭಾರತದ ಸಂಸ್ಥೆಗಳಲ್ಲ. ಬದಲಾಗಿ ವಿದೇಶಿ ಸಂಸ್ಥೆಗಳೇ ಈ ಒಂದು ಸಮೀಕ್ಷೆಯನ್ನು ನಡೆಸಿ ಮೋದೀಜಿಗೆ ಬಹುಪರಾಕ್ ಎಂದಿದೆ.

ಇವಿಷ್ಟು ಮಾತ್ರವಲ್ಲ. ಇನ್ನೂ ಅನೇಕ ಸಮೀಕ್ಷೆಗಳು ಮೋದಿಯೇ ಸರ್ವಶ್ರೇಷ್ಟ ಎಂಬ ಸಂದೇಶವನ್ನು ಸಾರಿದೆ. ವಿಶ್ವದ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಮೊನ್ನೆ ಮೊನ್ನೆ ಪ್ರಧಾನಿಯಾದ ಮೋದಿಯನ್ನು ವಿಶ್ವನಾಯಕ ಎಂದು ಬಿಂಬಿಸುತ್ತಿದೆ ಜಗತ್ತಿನ ದಿಗ್ಗಜ ಸಂಸ್ಥೆಗಳು. ಮೋದಿ ದೇಶದ ಚುನಾವಣೆ ಮಾತ್ರವಲ್ಲದೆ ಜಗತ್ತಿನ ಯಾವ ಚುನಾವಣೆಯಲ್ಲೂ ಗೆಲ್ಲಬಹುದು. ಅಷ್ಟೊಂದು ಸಾಮಾಥ್ರ್ಯ ಮೋದೀಜಿಯಲ್ಲಿದೆ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ.

ಭಾರತಕ್ಕೆ ಬಂದಿದ್ದರು ಟ್ರಂಪ್ ಮಗಳು ಇವಾಂಕ-ಮೋದಿಗೆ ಕೊಟ್ಟಿದ್ದರು ಅಧ್ಭುತ ಶ್ರೇಯಾಂಕ…!!!

ಹೌದು… ನಿನ್ನೆ ತಾನೇ ಜಗತ್ತಿನ ದೊಡ್ಡಣ್ಣ ಅಮೇರಿಕಾ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ಮಗಳು ಅಮೇರಿಕಾ ಸರ್ಕಾರದ ಸಲಹೆಗಾರ್ತಿ ಇವಾಂಕ ಟ್ರಂಪ್ ಭಾರತಕ್ಕೆ
ಆಗಮಿಸಿದ್ದರು. ಹೈದರಬಾದ್‍ನಲ್ಲಿ ನಡೆದಿದ್ದ ಉಧ್ಯಮಶೀಲತಾ ಸಮ್ಮೇಳನದಲ್ಲಿ ತನ್ನ ಅಮೇರಿಕ ಸರ್ಕಾರದ ಇತರೆ ಅಧಿಕಾರಿಗಳೊಂದಿಗೆ ಇವಾಂಕ ಟ್ರಂಪ್
ಭಾಗವಹಿಸಿದ್ದರು. 1500ಕ್ಕೂ ಹೆಚ್ಚು ಮಹಿಳಾ ಉಧ್ಯಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು ಅವರನ್ನು ಉದ್ಧೇಶಿಸಿ ಇವಾಂಕ ಟ್ರಂಪ್ ಮಾತನಾಡಿದ್ದಾರೆ.
ಅಲ್ಲದೆ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರನ್ನು ಸಮ್ಮೇಳನಕ್ಕೂ ಮುನ್ನ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಭಾರತದಲ್ಲಿ ಬದಲಾವಣೆಯ ಹಾದಿ-ಇದಕ್ಕೆ ಕಾರಣ ಮೋದಿ…

ಭಾರತದಲ್ಲಿ ಸದ್ಯ ಬದಲಾವಣೆಯ ಗಾಳಿ ಬೀಸುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ ಎಂದು ಹೊಗಳಿದ್ದಾರೆ. ಮೋದಿ ಪ್ರಧಾನಿಯಾದ ನಂತರ ಭಾರತ ವಿಭಿನ್ನ ಧಿಕ್ಕಿನಲ್ಲಿ ಸಾಗುತ್ತಿದೆ. “ಚಾಹಾ ಮಾರುತ್ತಿದ್ದ ಓರ್ವ ವ್ಯಕ್ತಿ ಪ್ರಧಾನ ಮಂತ್ರಿಯಾಗಿ ದೇಶವನ್ನು ಆಳುತ್ತಿದ್ದಾರೆ. ಪ್ರಧಾನಿ ಮೋದಿಯ ಬದುಕೇ ಬದಲಾವಣೆಯ ಸಂಕೇತ” ಎಂದು ಹಾಡಿ ಹೊಗಳಿದ್ದಾರೆ.

ಹೈದರಬಾದ್‍ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಮಾತನಾಡಿದ ಟ್ರಂಪ್ ಮಗಳು ಇವಾಂಕ ಟ್ರಂಪ್, “ಬಾಲ್ಯದಲ್ಲಿ ಚಾಹಾ ಮಾರುತ್ತಿದ್ದ
ನೀವು ಈಗ ಪ್ರಧಾನಿಯಾಗಿ ಆಯ್ಕೆಯಾಗಿರುವುದೇ ಬದಲಾವಣೆ ಸಾಧ್ಯವಿದೆ ಎಂಬುವುದರ ಸಂಕೇತವಾಗಿದೆ. ಈಗ ನೀವು ನಿಮ್ಮ ದೇಶದ ಕೋಟಿಗಟ್ಟಲೆ ಜನರಿಗೆ ಈ ಬದಲಾವಣೆಯ ಭರವಸೆಯನ್ನು ಸಾಕಾರಗೊಳಿಸುತ್ತಿದ್ದೀರಿ” ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ ಭಾರತದ ಆರ್ಥಿಕ ಪ್ರಗತಿಯ ಬಗ್ಗೆಯೂ ಶ್ಲಾಘಿಸಿದ ಅವರು, “13 ಕೋಟಿಗೂ ಅಧಿಕ ಮಂದಿ ಭಾರತದಲ್ಲಿ ಸ್ವಯಂ ಉಧ್ಯಮ, ಉಧ್ಯಮಶೀಲತೆ, ಕಠಿಣ ಪರಿಶ್ರಮದಿಂದ ಬಡತನ ಹೋಗಲಾಡಿಸಿದ್ದಾರೆ. ಇದು ವಿಶ್ವದಲ್ಲೇ ಗಮನಾರ್ಹ ಸಂಗತಿ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಮಹಿಳಾ ಸಬಲೀಕರಣಗೊಳ್ಳದೆ ದೇಶ ಅಭಿವೃದ್ಧಿಯಾಗದು ಎಂದು ಮೋದಿ ಅರಿತಿದ್ದಾರೆ” ಎಂದು ಮೋದಿ ಬಗ್ಗೆ ಹೊಗಳಿಕೆಯ ಸುರಿಮಳೆಯನ್ನೇ ಗೈದಿದ್ದಾರೆ.

ಹಾಗಂತ ಇದು ಇದೇ ಮೊದಲಲ್ಲ. ಈ ಹಿಂದೆ ಅನೇಕ ವಿದೇಶಿ ಮುಖಂಡರು ಮೋದೀಜಿಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್, ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತಾನಿಯಾಹೋ ಸಹಿತ ಜಗತ್ತಿನ ಅತಿ ದೊಡ್ಡ ದೇಶಗಳ ದಿಗ್ಗಜರು ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಈಗ ಇವಾಂಕ ಟ್ರಂಪ್ ಸರದಿ ಅಷ್ಟೇ…

ಜಗತ್ತಿನ ದೊಡ್ಡಣ್ಣ ಅಮೇರಿಕದ ಅಧ್ಯಕ್ಷ ಟ್ರಂಪ್ ಮಗಳು ಇವಾಂಕ ಟ್ರಂಪ್ ಹೇಳಿದ್ದ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದಾ ಚಾಯ್ ವಾಲಾ ಎಂದು ಟೀಕಿಸುತ್ತಿದ್ದ ವಿರೋಧಿಗಳಿಗೆ ಅಮೇರಿಕದ ಹೆಣ್ಣೊಬ್ಬಳ ಹೊಗಳಿಕೆಯಿಂದ ಬೆಕ್ಕಸ ಬೆರಗಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವಾಂಕಾರ ಮಾತನ್ನು ಹಾಡಿ ಹೊಗಳಿದ್ದಾರೆ. ಕೆಲವರಂತು ಬಗೆ ಬಗೆಯ ಕಮೆಂಟ್‍ಗಳನ್ನು ಹಾಕುವ ಮೂಲಕ ಮೋದಿ ಸಾಧನೆಯನ್ನು ಬಣ್ಣಿಸಿದ್ದಾರೆ.

“ಚಾಯಾ ಮಾರುತ್ತಿದ್ದವರು ಈಗ ದೇಶವನ್ನು ಆಳುತ್ತಿದ್ದಾರೆ, ಆದರೆ ದೇಶವನ್ನು ಆಳುವವರು ಈಗ ಚಾಹಾ ಮಾರುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ” ಎಂದು
ಹಲವರು ಕಾಲೆಳೆದಿದ್ದಾರೆ. ಮೋದಿಯನ್ನು ಈ ದೇಶದ ಅನೇಕ ಜನರು ಮುಕ್ತ ಹೃದಯದಿಂದ ಪ್ರೀತಿಸುತ್ತಿದ್ದಾರೆ. ನಮೋ ನಮಃ ಎಂದರೆ ದೇವರು ಬರುತ್ತನೋ
ಇಲ್ಲವೋ ಗೊತ್ತಿಲ್ಲ, ಆದರೆ ನಮೋ ಎಂದು ಗೋಳಿಟ್ಟುಕೊಂಡು ಮೋದಿಗೆ ಒಂದು ಪತ್ರ ಬರೆದರೆ ಸಾಕು ಅದಕ್ಕೆ ಯಥಾ ಶೀಘ್ರ ಪರಿಹಾರ ದೊರಕುತ್ತದೆ.

ಇದಕ್ಕಲ್ಲವೇ ಮೋದಿಯನ್ನು ವಿದೇಶಿಗರು ಅಟ್ಟಕ್ಕೇರಿಸುವುದು. ಭಾರತ ಅಂದರೆ ಸುಮ್ನೇನಾ… ಅದು 125 ಕೋಟಿ ಜನರುಳ್ಳ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಇಲ್ಲಿ ಅಧಿಕಾರ ನಡೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೆ 56 ಇಂಚಿನ ಎದೆಯುಳ್ಳವರ ಅಶ್ಯಕತೆ ಇದ್ದೇ ಇದೆ. ಅದಕ್ಕಾಗಿಯೇ ಆ ಭಗವಂತ ಮೋದಿಯ ರೂಪತಾಳಿ ಭಾರತವನ್ನು ವಿಶ್ವಗುರು ಮಾಡುವತ್ತ ಹೆಜ್ಜೆ ಹಾಕಿದ್ದಾನೆ. ಇನ್ನಷ್ಟು ಯಶಸ್ವಿಯಾಗಲಿ. ಭಾರತ ಪ್ರಕಾಶಿಸಲಿ ಎಂಬುವುದೇ ಸಮಸ್ತ ಕೋಟಿ ಜನರ ಹರಕೆ…

-ಸುನಿಲ್ ಪಣಪಿಲ

Tags

Related Articles

Close