ಪ್ರಚಲಿತ

ಮೋದಿ ಬಗ್ಗೆ ಒಂಭತ್ತು ಭಾಷೆಯಲ್ಲಿ ಮಾಡಿದ ಸಮೀಕ್ಷೆಯೂ ಅವರ ಆಡಳಿತ ವೈಖರಿಯನ್ನು ಹೇಗೆ ಬಣ್ಣಿಸಿತು ಗೊತ್ತಾ?? ಮಾಧ್ಯಮ ಲೋಕದಲ್ಲಿ ಐತಿಹಾಸಿಕ ಫಲಿತಾಂಶ!!

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದಾಗಿ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತದೆಯಲ್ಲದೇ, ಭಾರತವನ್ನು ವಿಶ್ವದೆಲ್ಲೆಡೆ ಪರಿಚಯಿಸಿ ಬಲಿಷ್ಠ ರಾಷ್ಟ್ರವನ್ನಾಗಿಸಿ ಮಾಡಿದ ಹಿರಿಮೆ ಇವರದ್ದಾಗಿದೆ!! ಆದರೆ ಈಗಾಗಲೇ ಸಾಕಷ್ಟು ಸಂಸ್ಥೆಗಳು ನಡೆಸಿರುವ ವರದಿಗಳ ಪ್ರಕಾರ, ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿಯವರು ಭಾರತದ ಅತ್ಯಂತ ಜನಪ್ರಿಯ ನಾಯಕರೆಂದು ಬಿಂಬಿತರಾಗಿದ್ದಲ್ಲದೇ, ಇದೀಗ “ಟೈಮ್ಸ್ ಗ್ರೂಪ್” ನಡೆಸಿರುವ ಸಮೀಕ್ಷೆಯ ಮೂಲಕ ಮತ್ತೊಂದು ವರದಿಯನ್ನು ಬಿಡುಗಡೆ ಮಾಡಿದೆ.

ಹೌದು.. ಈಗಾಗಲೇ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಫೆÇರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದಲ್ಲದೇ, ಫೇಸ್ ಬುಕ್ ನಲ್ಲೂ ಕೂಡ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕೀಯದಲ್ಲಿಯೇ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಅಮೇರಿಕದ ಅಧ್ಯಯನ ಕೇಂದ್ರದ ಹೊಸ ಸಮೀಕ್ಷೆಯೊಂದು ಹೇಳಿತ್ತು!!

ಆದರೆ ಇದೀಗ “ಟೈಮ್ಸ್ ಗ್ರೂಪ್” ನಡೆಸಿದ ಮೆಗಾ ಆನ್ಲೈನ್ ಸಮೀಕ್ಷೆಯ ಪ್ರಕಾರ, ನರೇಂದ್ರ ಮೋದಿಯವರು ಇಂದಿಗೂ ಕೂಡ ಭಾರತದ ಅತ್ಯಂತ ಜನಪ್ರಿಯ ನಾಯಕರೆಂದು ಮತ್ತೊಮ್ಮೆ ಸ್ಪಷ್ಟವಾಗಿದೆ !! ನೋಟ್ ನಿಷೇಧದ ಹೊರತಾಗಿಯೂ ಜಿಎಸ್ ಟಿ ಯಂತಹ ಪರಿಮಾಣಕಾರಿ ಕ್ರಮಗಳ ನಂತರವೂ, “ಟೈಮ್ಸ್ ಗ್ರೂಪ್” ಮಾಧ್ಯಮ 9 ಭಾಷೆಗಳಲ್ಲಿ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಪ್ರಚಂಡ ಬೆಂಬಲ ವ್ಯಕ್ತವಾಗಿದೆ.

ಸಮೀಕ್ಷೆಯಿಂದ ಜಿಎಸ್ ಟಿ ನೋಟ್ ಬ್ಯಾನ್ ನಿರ್ಧಾರದಿಂದಾಗಿ ಈಗಾಗಲೇ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದಲ್ಲದೇ, ಭ್ರಷ್ಟಾಚಾರ, ತೆರಿಗೆ ವಂಚನೆಗೆ ಕಡಿವಾಣ ಹಾಕುವ ಕಾರಣ ದೇಶದ ಬಹುಸಂಖ್ಯಾತ ಜನರು ಈ ಕ್ರಮವನ್ನು ಬೆಂಬಲಿಸುತ್ತಾರೆ ಎಂದು ತಿಳಿದುಬಂದಿದೆ. ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿರುವ ನರೇಂದ್ರ ಮೋದಿ ಒಬ್ಬ ಪ್ರಭಾವಿ ರಾಜಕಾರಣಿಯಾಗಿದ್ದು, ತನ್ನ ವಾಕ್ ಚಾತುರ್ಯತೆಯಿಂದಾಗಿ ವಿಶ್ವದಲ್ಲೇ ಗಮನಸೆಳೆದಿದ್ದಾರೆ. ಹಾಗಾಗಿ ಆಸೀಸ್ ಬಿಲಿಯನೇರ್ ಮೋದಿ ಅವರನ್ನು ಪ್ರಶಂಸಿದ್ದಲ್ಲದೇ, ಮೋದಿಯವರ ವಿಷನ್ ಅನುಸರಿಸಲು ತಮ್ಮ ಆಸ್ಟ್ರೇಲಿಯ ಸರ್ಕಾರಕ್ಕೆ ಹೇಳಿದ್ದರು.

ಇನ್ನು “ಟೈಮ್ಸ್ ಗ್ರೂಪ್” ನಡೆಸಿರುವ ಮೆಗಾ ಆನ್ ಲೈನ್ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿಯವರು ಭಾರತದ ಅತ್ಯಂತ ಜನಪ್ರಿಯ ನಾಯಕರೆಂದು ಬಿಂಬಿತರಾಗಿರೋದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ, 2019 ರಲ್ಲಿಯೂ ಕೂಡ ಇದೇ ಜನಾಭಿಪ್ರಾಯ ವ್ಯಕ್ತವಾಗಲಿದೆ ಎಂದು ಸಮೀಕ್ಷೆ ನಡೆಸಿದ 79 ಪ್ರತಿಶತ ಜನರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ, “ಎದ್ದೇಳಿ… ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ” ಬರುತ್ತಿದ್ದಾರೆ ಎಂದು, ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಭೇಟಿ ನೀಡುತ್ತಿರುವ ವೇಳೆನರೇಂದ್ರ ಮೋದಿ ಅವರನ್ನು ಅಲ್ಲಿನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆ ಹಾಡಿ ಹೊಗಳಿತ್ತು. ಅಷ್ಟೇ ಅಲ್ಲದೇ, ಬ್ಯುಸಿನೆಸ್ ದಿನ ಪತ್ರಿಕೆ, ‘ದಿ ಮಾರ್ಕ್’ ಪತ್ರಿಕೆ ತನ್ನ ಭಾರತ-ಇಸ್ರೇಲ್ ಸಂಬಂಧಗಳ ಕುರಿತ ಲೇಖನದಲ್ಲಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಯಹೂದಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಇಸ್ರೇಲಿಗಳು ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ “ಅವರು ಹೆಚ್ಚು ಹೇಳಲಿಲ್ಲ”. ಈಗ 1.25 ಬಿಲಿಯನ್ ಜನರ ನಾಯಕ, ಭಾರಿ ಜನಪ್ರಿಯತೆ ಗಳಿಸುತ್ತಿರುವ ಮತ್ತು ಪ್ರಪಂಚದ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ಭೇಟಿ ನೀಡುತ್ತಿರುವುದು ಹೆಚ್ಚಿನ ಗಮನ ಸೆಳೆದಿದೆ ಎಂದು ವಿವರಿಸಿದ್ದರು!!

ಅಷ್ಟೇ ಅಲ್ಲದೇ, “ಬ್ಯಾಂಕ್ ಆಫ್ ಅಮೆರಿಕಾ”ವು ಮಾಡಿರುವ ವರದಿಯ ಪ್ರಕಾರ, ಭಾರತ ದಿನೇ ದಿನೇ ಬಲಿಷ್ಠ ರಾಷ್ಟ್ರವಾಗುತ್ತಿದೆಯಲ್ಲದೇ, 2028ರ ವೇಳೆಗೆ ಇಂಡಿಯಾ 3ನೇ ಸಧೃಡ ರಾಷ್ಟ್ರವಾಗುತ್ತದೆ ಎಂದು ಹೇಳಿತ್ತು. ಅಷ್ಟೇ ಅಲ್ಲದೇ, ಮುಂದಿನ ವರ್ಷ ಬ್ರಿಟನ್ ಮತ್ತು ಫ್ರಾನ್ಸ್ ನ ಆರ್ಥಿಕತೆಯನ್ನು ಭಾರತ ಹಿಂದಿಕ್ಕಳಿದ್ದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ತಿಳಿಸಿದೆ.

ಇನ್ನು, ‘ಹಿಂದುಸ್ತಾನ್ ಟೈಮ್ಸ್’ ಬಾಲಿವುಡ್ ಐಕಾನ್, ಪೆÇಲಿಟಿಕಲ್ ಐಕಾನ್, ಅತ್ಯುತ್ತಮ ಮಾದರಿ ವ್ಯಕ್ತಿ, ಸ್ಫೋಟ್ರ್ಸ್ ಐಕಾನ್ ಹೀಗೆ ಹಲವು ವಿಭಾಗಗಳ ಕುರಿತು ನಡೆಸಿರುವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಅತ್ಯುತ್ತಮ ಮಾದರಿ ವ್ಯಕ್ತಿ’ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ!! ಅಷ್ಟೇ ಅಲ್ಲದೇ, ಪ್ರಧಾನಿ ಮೋದಿಯವರು ಯೂತ್ ಐಕಾನ್ ಆಗಿಯೂ ಹೊರಹೊಮ್ಮಿರುವುದು ಇನ್ನೊಂದು ಉತ್ತಮ ಸಾಕ್ಷಿಯಾಗಿದೆ.

ಆದರೆ ಈ ಬಾರಿ “ಟೈಮ್ಸ್ ಗ್ರೂಪ್” 9 ಭಾಷೆಗಳಲ್ಲಿ ನಡೆಸಿರುವ ಮೆಗಾ ಆನ್ ಲೈನ್ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿಯವರು ಭಾರತದ ಅತ್ಯಂತ ಜನಪ್ರಿಯ ನಾಯಕರೆಂದು ಬಿಂಬಿತರಾಗಿರೋದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ, ಇತ್ತೀಚೆಗೆ ನಡೆದ ಪ್ರತಿಯೊಂದು ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವನ್ನು ಸಾಧಿಸಿರುವುದು ಗೊತ್ತೇ ಇದೆ. ಹಾಗಾಗಿ ಇದೇ ಯಶಸ್ಸು 2019 ರಲ್ಲಿಯೂ ಮುಂದುವರೆದರೆ ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ.

– ಅಲೋಖಾ

Tags

Related Articles

Close