ಪ್ರಚಲಿತ

ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆಯೇ ಎನ್ನುವ ಪ್ರಶ್ನೆಗೆ ರಾಷ್ಟ್ರಮಟ್ಟದ ಸಮೀಕ್ಷೆಯೊಂದು ಮಾಡಿದ ವರದಿಯಲ್ಲಿ ಏನಿತ್ತು ಗೊತ್ತೇ?

ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನೋಟ್ ಬ್ಯಾನ್, ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಇದು ನರೇಂದ್ರ ಮೋದಿಯವರ “ಎದೆಗಾರಿಕೆಯ ನಿರ್ಧಾರ” ಎಂದು ಬಣ್ಣಿಸಿದ್ದರು. ಅಷ್ಟೇ ಅಲ್ಲದೇ ಈಗಾಗಲೇ ವಿಶ್ವದ ಗಮನ ಸೆಳೆಯುತ್ತಿರುವ ನರೇಂದ್ರ ಮೋದಿಯವರು “ಭಾರತದ ಅತ್ಯುತ್ತಮ ಡಾಕ್ಟರ್” ಎಂದು ಕರೆಸಿಕೊಂಡಿದ್ದು, ಇದೀಗ ಮೋದಿ ಸರ್ಕಾರವು ಭರ್ಜರಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ಈಗಾಗಲೇ ನರೇಂದ್ರ ಮೋದಿಯವರು ಫೇಸ್ ಬುಕ್ ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟವನ್ನು ಗಿಟ್ಟಿಸಿಕೊಂಡಿದ್ದು, ತದನಂತರದಲ್ಲಿ ಭಾರತದ ರಾಜಕೀಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಅಮೇರಿಕದ ಅಧ್ಯಯನ ಕೇಂದ್ರದ ಹೊಸ ಸಮೀಕ್ಷೆಯೊಂದು ಹೇಳಿತ್ತು. ಆದರೆ ಇದೀಗ ರಾಷ್ಟ್ರಮಟ್ಟದಲ್ಲಿ ನಡೆಸಿದ ಸಮೀಕ್ಷೆಯೊಂದು 2019 ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರ ಏರಲಿದೆ ಎಂದು ಹೇಳಿದೆ.

ಹೌದು… 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್, ಈ ಎರಡು ಪಕ್ಷಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು. ಪ್ರಧಾನಮಂತ್ರಿ ನರೇಂದ್ರ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯತೆಯಿದೆಯೇ? ಅಥವಾ ರಾಹುಲ್ ಗಾಂಧಿಯವರು ಭಾರತದ ಮುಂದಿನ ಪ್ರಧಾನಮಂತ್ರಿಯಾಗುವ ಸಾಧ್ಯತೆಯಿದೆಯೇ? ಎಂಬ ಚುನಾವಣೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಎಬಿಪಿ ಚಾನೆಲ್ ರಾಷ್ಟ್ರಮಟ್ಟದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಹತ್ತರವಾದ ಫಲಿತಾಂಶ ದೊರೆತಿದ್ದು, ಈ ಸಮೀಕ್ಷೆಯ ಪ್ರಕಾರ 2019 ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮುನ್ಸೂಚನೆ ನೀಡಿದೆ.

ಈಗಾಗಲೇ ಭಾರತದ ರಾಜಕೀಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಅಮೇರಿಕದ ಅಧ್ಯಯನ ಕೇಂದ್ರದ ಸಮೀಕ್ಷೆಯೊಂದು ತಿಳಿಸಿತ್ತು! ಫೆಬ್ರವರಿ 21 ರಿಂದ ಮಾರ್ಚ್ 10ರ ನಡುವೆ ನಡೆಸಿದ ಅಮೇರಿಕದ ಅಧ್ಯಯನ ಕೇಂದ್ರದ ಸಮೀಕ್ಷೆಯಲ್ಲಿ 2,464 ಜನರು ಭಾಗವಹಿಸಿದ್ದು, ಮೋದಿಯವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿಂತ (58%) 30 ಪಾಯಿಂಟ್ (ಮೋದಿ 88%) ಮುಂದಿದ್ದಾರೆ!! ಅಷ್ಟೇ ಅಲ್ಲದೇ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗಿಂತ(57%) 49 ಪಾಯಿಂಟ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗಿಂತ (39%) ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ!!

ಆದರೆ ಎಬಿಪಿ ಚಾನೆಲ್ ರಾಷ್ಟ್ರಮಟ್ಟದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರಕಾರವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮುನ್ಸೂಚನೆ ನೀಡಿದ್ದು, ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿಯು ಭಾರತದ 18 ರಾಜ್ಯಗಳಲ್ಲಿ ಅಧಿಕಾರಕ್ಕೆ ಏರಿದೆ. ಈ ವರ್ಷ ನಡೆದ ಹಲವಾರು ಚುನಾವಣೆಗಳಲ್ಲಿ ಜಯಗಳಿಸಿದೆ ಎಂದು ಹೇಳಿದೆ.

ಎಬಿಪಿ ಚಾನೆಲ್ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರ ಅಭಿಪ್ರಾಯದ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ 61% ಜನರು ತೃಪ್ತಿ ಹೊಂದಿದ್ದಾರೆಂದು, 30% ರಷ್ಟು ಜನರು ಅತೃಪ್ತಿ ಹೊಂದಿದ್ದಾರೆಂದು, 9% ಜನರು ಪ್ರತಿಕ್ರಿಯಿಸಲಿಲ್ಲ ಎನ್ನುವುದನ್ನು ಸಮೀಕ್ಷೆ ವಿವರಿಸಿದೆ. ಅಲ್ಲದೇ, ಪೂರ್ವ ಭಾರತದಲ್ಲಿ 142 ಸ್ಥಾನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ .ಎ. ಗೆ 43% ಮತಗಳು ಲಭಿಸಲಿದೆ ಹಾಗೂ 142 ಸೀಟ್ ಗಳಲ್ಲಿ 68-76 ಸೀಟುಗಳು ಲಭಿಸಬಹುದು ಎಂದು ಹೇಳಿದೆ.

ಅಷ್ಟೇ ಅಲ್ಲದೇ, ದಕ್ಷಿಣ ಭಾರತದಲ್ಲಿ 25% ಮತಗಳು ಮತ್ತು 34 ಸೀಟುಗಳನ್ನು ಗೆಲ್ಲಬಹುದು. ಉತ್ತರ ಭಾರತದಲ್ಲಿ 151 ಸೀಟುಗಳಲ್ಲಿ 111 ಸೀಟುಗಳನ್ನು ಗಳಿಸಿ ಪ್ರಚಂಡ ಜಯಗಳಿಸಲಿದ್ದಾರೆ ಎಂದು ಎಬಿಪಿ ಚಾನೆಲ್ ಸಮೀಕ್ಷೆಯು ಫಲಿತಾಂಶವನ್ನು ಹೊರಹಾಕಿದೆ. ಒಟ್ಟಾರೆಯಾಗಿ ಬಿಜೆಪಿ ಪ್ರಧಾನಿ ಮೋದಿಯ ನೇತೃತ್ವದಲ್ಲಿ 2019 ರಲ್ಲಿಯೂ ಪ್ರಚಂಡ ಜಯಗಳಿಸಲಿದ್ದು, ನರೇಂದ್ರ ಮೋದಿಯವರನ್ನು ಸಮರ್ಥವಾಗಿ ಎದುರಿಸುವ ನಾಯಕ ದೇಶದಲ್ಲಿ ಯಾರೂ ಇಲ್ಲ ಎಂದು ಈ ಸಮೀಕ್ಷೆ ಬಹಿರಂಗ ಪಡೆಸಿದೆ.

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ದೇಶವು ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದ್ದು, ಈಡೀ ವಿಶ್ವವೇ ಇದೀಗ ಭಾರತವನ್ನು ಗೌರವಿಸುತ್ತಿದೆ. ಆದರೆ ಭಾರತದಲ್ಲಿ ನೋಟ್ ಬ್ಯಾನ್ ಭಾರತದ ಆರ್ಥಿಕತೆಯ ಮೇಲೆ ಪೆಟ್ಟು ನೀಡಿದೆ ಅಂತ ಪ್ರತಿ ಪಕ್ಷಗಳು ಆರೋಪಿಸಿದ್ದವು. ವ್ಯಾಪಾರಿಗಳ ಮೇಲೆ ಹೊರೆ ಹೊರೆಸಲಾಯಿತು ಅಂತಾ ಜಿಎಸ್ಟಿ ಯೋಜನೆಗಳ ಮೇಲೆ ಟೀಕೆಗಳು ಬಂದವು.

ಇದರಿಂದಾಗಿ ಮೋದಿಯವರ ಯಶಸ್ಸಿಗೆ ಪೆಟ್ಟು ಬಿದ್ದಿದೆ ಎಂದು ಹಲವಾರು ಮಂದಿ ಮಾತಾನಾಡಿಕೊಂಡರಲ್ಲದೇ, ಇದು ಚುನಾವಣೆ ವೇಳೆ ಒಂದು ದೊಡ್ಡ ಅಸ್ತ್ರವಾಗುತ್ತೆ ಅಂತಾ ಕೆಲವರು ತಮ್ಮೊಳಗೆ ಖುಷಿ ಪಟ್ಟುಕೊಂಡರು!! ವಿಪರ್ಯಾಸ ಎಂದರೆ, ಈ ಎಲ್ಲಾ ಯೋಜನೆಗಳು ಬಂದ ನಂತರನೇ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮೋದಿ ಹವ ಗುಗ್ಗಿಲ್ಲ ಅನ್ನೋದನ್ನು ಸಾಬೀತು ಪಡಿಸಿದೆ.
– ಅಲೋಖಾ

Tags

Related Articles

Close