ಪ್ರಚಲಿತ

ಯಾಕೆ ಗುಜರಾತ್ ನ ಚುನಾವಣೆ ಬಿಜೆಪಿಗೆ ಬಹಳ ಕಷ್ಟಕರವಾಗಿದೆ ಗೊತ್ತೇ?! ಗುಜರಾತಿನ ಚುನಾವಣಾ ಪೂರ್ವ ಸಮೀಕ್ಷೆಗಳನ್ನೂ ಸುಳ್ಳಾಗಿಸಿ ಬಿಜೆಪಿ ಕೇವಲ 100 ಕ್ಷೇತ್ರಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತೇಕೆ?!

ಸತತ 22 ನೇ ವರ್ಷವೂ ಸಹ ಬಿಜೆಪಿ ತೆಕ್ಕೆಗೆ ಬಿದ್ದಿದೆ ಗುಜರಾತ್! ಬಹುಷಃ ಇದು ಬಿಜೆಪಿಗೆ ನಿರಂತರವಾಗಿ ಗೆಲುವು ಕೊಟ್ಟಂತಹ ರಾಜ್ಯ! ಆದರೆ, ಈ ಚುನಾವಣೆಯಿಂದ ಬಿಜೆಪಿಗೆ ಕಲಿಯಲು ಒಂದಷ್ಟು ಪಾಠಗಳಿದೆ! ಅದೆಷ್ಟೋ ಮಾಧ್ಯಮಗಳು ಬಿಜೆಪಿಯೇ ಗೆಲ್ಲುತ್ತದೆ ಎಂದು ಪುಂಖಾನುಪುಂಖವಾಗಿ ನಿಖರವಾಗಿ ಹೇಳಿದ್ದರೂ ಸಹ, 100 ಸ್ಥಾನಗಳ ಮೇಲೆ ನಿಲ್ಲಲು ಯಾಕೆ ಕಷ್ಟ ಪಡುತ್ತಿದೆ ಗೊತ್ತೇ ಬಿಜೆಪಿ?!

ಯಾಕೆ ಬಿಜೆಪಿಯ ಸ್ಥಾನಗಳು ಕಡಿಮೆಯಾಗಿದೆ ಗೊತ್ತೇ?!

ಬಿಜೆಪಿಗೆ ಸ್ಥಾನ ಕಡಿಮೆಯಾಗಲು ಬಹಳಷ್ಟು ಕಾರಣಗಳಿವೆ!

1. ಪಾಟೀದಾರ ಸಮುದಾಯದ ಬಹಳಷ್ಟು ಮತಗಳು ಬಿಜೆಪಿಯಿಂದ ಹೊರ ಹೋಗಿದೆ. ಹಾರ್ದಿಕ್ ಪಟೇಲ್ ಯಶಸ್ವಿಯಾಗಿಯೇ ‘ಮೀಸಲಾತಿ’ ಯ ನೆಪ ಕೊಟ್ಟು ಪಾಟೀದಾರರನ್ನು ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿಗೆ ಋಣಾತ್ಮಕವಾದ ಅಂಶ!

2. 2014 ರ ನಂತರ ಗುಜರಾತ್ ನರೇಂದ್ರ ಮೋದಿಯಂತಹ ಪ್ರಭಾವಿ ಮುಖ್ಯಮಂತ್ರಿಯನ್ನು ಕಳೆದುಕೊಂಡಿತಲ್ಲದೇ, ನಂತರ ಬಂದ ಆನಂದಿಬೆನ್ ಮೋದಿಯ ಸ್ಥಾನವನ್ನು ತುಂಬಲು ಹೊರಟರೂ ಸಹ, ಗುಜರಾತಿಗಳನ್ನು ಒಂದು ಗೂಡಿಸಲು ಕಷ್ಟವಾಗತೊಡಗಿತು. ಪರಿಣಾಮ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಕೆಳಗಿಳಿಯಬೇಕಾಯಿತು.

3. ಮೋದಿಯ ನಂತರ ಬಂದ ಆನಂದಿ ಬೆನ್ ನಿರೀಕ್ಷೆಯಂತೆ ಮೋದಿಯ ಸ್ಥಾನವನ್ನು ತುಂಬುವುದಕ್ಕಾಗಲಿಲ್ಲ ಎಂಬ ಕಾರಣವೂ ಸಹ ಬಿಜೆಪಿಯ ಮತಗಳು ವಿಭಜನೆಯಾಗಲು ಒಂದು ಕಾರಣವಾಯಿತು.

4. ಗುಜರಾತಿಗಳು ಉದ್ಯಮಕ್ಕೆ ಹೆಸರುವಾಸಿ ಎಂಬುದು ಭಾರತಕ್ಕೇ ಗೊತ್ತಿದೆ. ಆದರೆ, ಜಿಎಸ್ ಟಿಗಳ ಸರಿಯಾದ ಅಳವಡಿಕೆ ಇಲ್ಲದೆ, ಉದ್ಯಮಕ್ಕೆ
ಸಾಕಷ್ಟು ತೊಂದರೆಯಾಯಿತು. ಇದೊಂದು ಕಾರಣದಿಂದಲೂ ಸಹ, ಬಹುತೇಕ ಉದ್ಯಮಿಗಳು ಬಿಜೆಪಿಯ ವಿರುದ್ಧ ಮತ ನೀಡಿದರು. ಅಲ್ಲದೇ, ನೋಟು ನಿಷೇಧ ಕೂಡ ಉದ್ಯಮಿಗಳಿಗೆ ತೊಂದರೆ ಯಾಯಿತು.

5. ಸ್ಪರ್ಧೆಗಳಿದ್ದದ್ದೂ ಸಹ ಎರಡೇ ಮುಖ್ಯ ಪಕ್ಷಗಳ ಜೊತೆ ಮಾತ್ರ! ಬಿಜೆಪಿ ಮತ್ತು ಕಾಂಗ್ರೆಸ್ ! ಕಳೆದ 22 ವರ್ಷಗಳಿಂದಲೂ ಗೆಲ್ಲುತ್ತ ಬಂದ ಸರಕಾರ ಬೇರೆ ಬೇಕೆನ್ನಿಸಿಬಹುದಾದರೂ, ಕಾಂಗ್ರೆಸ್ ನಂತಹ ಸರಕಾರವಲ್ಲ! ಆದರೆ, ಬೇರೆ ಯಾವುದೇ ಅವಕಾಶ ವಿಲ್ಲದ ಕಾರಣ ಕಾಂಗ್ರೆಸ್ ಗೆ ಮತ
ನೀಡಿರಬಹುದಷ್ಟೇ!

6. 2012 ರ ಚುನಾವಣೆಯಲ್ಲಿ ಬಿಜೆಪಿ 116 ಸ್ಥಾನಗಳ ಮೂಲಕ ನರೇಂದ್ರ ಮೋದಿಯ ನೇತೃತ್ವದಲ್ಲಿ ಅಧಿಪತ್ಯ ಸ್ಥಾಪಿಸಿತ್ತು. ಆಗ, ಕಾಂಗ್ರೆಸ್ ಗೆ ಸಿಕ್ಕಿದ್ದು ಕೇವಲ 60 ಸ್ಥಾನ! ಕಾಂಗ್ರೆಸ್ ಗೆ ನಿಖರವಾಗಿ ಬಹುಷಃ ಗೊತ್ತಿತ್ತು, ಮತಗಳು ವಿಭಜನೆ ಹೊಂದಲಿದೆ ಎಂದು. ಅದಕ್ಕೆ, ತರಾವರಿಯಲ್ಲಿ ರಾಹುಲ್ ಗಾಂಧಿಯನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಿತ್ತು ಕಾಂಗ್ರೆಸ್!

ಗುಜರಾತಿ ಮತಗಳ ವಿಭಜನೆಯೊಂದು ನಿಜಕ್ಕೂ ಸ್ವಾಗತಾರ್ಹ! ಯಾಕೆ ಗೊತ್ತೇ?!

ತೀರಾ ಸುಲಭವಾಗಿ ಗೆದ್ದಿದ್ದರೆ ಬೇರೆ ರಾಜ್ಯಗಳ ಚುನಾವಣೆಯನ್ನು ಬಿಜೆಪಿ ಕಡೆಗಣಿಸುತ್ತಿತ್ತೇನೋ! ಆದರೆ ಎಲ್ಲಿ ಸಾಧನೆಯ ಹಾದಿ ಕ್ಲಿಷ್ಟವಾಯಿತೋ, ಬಿಜೆಪಿ ತಾನೆಲ್ಲಿ ತಪ್ಪದ್ದೇನೆ ಎಂಬುದನ್ನು ತಿಳಿದು ಮುಂದಿನ ಚುನಾವಣೆ ಸುಗಮವಾಗಲಿದೆ!

ಪೋಸ್ಟ್ ಕಾರ್ಡ್ ಸಮೀಕ್ಷೆ ನಿಖರವಾಗಿತ್ತು!!

Party Seats won
BJP 98-105
Congress 60-65
Others 10-15
Total 182

2017 ರ ಗುಜರಾತ್ ಚುನಾವಣೆ ನಿಜಕ್ಕೂ ವಿಶಿಷ್ಟವಾದುದ್ಯಾಕೆ ಗೊತ್ತೇ?!

1. ಕಾಂಗ್ರೆಸ್ ನವರು ಮತಯಂತ್ರಗಳ ಬಗೆಗೆ ಬೊಬ್ಬಿರಿಯುತ್ತಿದ್್ದನ್ನು ನಿಲ್ಲಿಸಿದೆ.
2 . ಕೆಲ ಅಹಂಕಾರಿ ಬಿಜೆಪಿ ನಾಯಕರಿಗೆ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಅರಿವು ಮೂಡಿಸಲಿದೆ!
3. ನಮ್ಮ ಬ‌ಗ್ಗೆ ನಮಗೆ ಆತ್ಮಶೋಧನೆ ಮಾಡಿಕೊಳ್ಳಲೂ ಇದು ಸಹಾಯಕವಾಗಲಿದೆ!

ಆರನೇ ಬಾರಿ, ಗೆಲ್ಲುತ್ತಿರುವ ಮೋದಿ ಅಲೆಯಿಂದ ಮುಂಬರುವ 2019 ರ ಚುನಾವಣೆಗೂ ಸಹಕಾರಿಯಾಗಲಿದೆ. ಆದರೆ.. ಇವತ್ತು ಮಾತ್ರ ಬಿಜೆಪಿಗೆ ಸಂತಸದ ದಿನವೇ! ಬಹುಷಃ ಬಿಜೆಪಿಗೆ ಸೋಲಾಗಿದ್ದೇ ಆದರೆ ಅದು ಪ್ರಧಾನಿ ಮೋದಿಯ ಸೋಲೆಂದೇ ಬಿಂಬಿತವಾಗುತ್ತಿತ್ತೇನೋ! ಈಗ ಕಾಂಗ್ರೆಸ್ ಗೆ ಸೋಲಾಗುತ್ತಿದ್ದರೂ ಸಹ ಅದನ್ನು ರಾಹುಲ್ ಗಾಂಧಿಯ ಸೋಲು ಎಂದು ಹೇಳಕು ಯಾರೂ ತಯಾರಿಲ್ಲ ಎಂಬುದು ಹಾಸ್ಯಾಸ್ಪದ!

ಅರವಿಂದ್ ಕೇಜ್ರಿವಾಲ್ ನ ಹೀನಾಯ ಸೋಲು!

ಕೇವಲ 0.003% ಮತಗಳಷ್ಟೇ ಅರವಿಂದ್ ಕೇಜ್ರಿವಾಲ್ ಪಕ್ಷಕ್ಕೆ ಬಂದಿದೆಯಷ್ಟೇ! ಅದಕ್ಕೆ ತಕ್ಕನಾಗಿ, ಮುಂಚೆ ಕೇಜ್ರಿವಾಲ್ ನ ಬಂಟನಾಗಿದ್ದವರು ಸರಿಯಾಗಿ ತಿರುಗೇಟು ನೀಡಿದ್ದಾರೆ ಅರವಿಂದ್ ಕೇಜ್ರಿವಾಲ್ ಗೆ!

– ಪೃಥು ಅಗ್ನಿಹೋತ್ರಿ

Tags

Related Articles

Close