ಪ್ರಚಲಿತ

ರವಿ ಬೆಳಗೆರೆ ಎಂಬ ಬ್ಲಾಕ್ ಮೇಲ್ ಪತ್ರಿಕೋದ್ಯಮಿ ‘ಹಾಯ್ ಬೆಂಗಳೂರು’ ಎಂಬ ಪತ್ರಿಕೆಯನ್ನಿಟ್ಟುಕ್ಕೊಂಡು ಹದಿನೈದು ವರ್ಷ ಮಾಡಿದ ಕರ್ಮಕಾಂಡಗಳು ಏನೆಲ್ಲ ಗೊತ್ತೇ?

ಪತ್ರಿಕೋದ್ಯಮವೆಂದರೆ ಸಮಾಜವನ್ನು ತಿದ್ದುವ ಒಂದು ಹರಿತವಾದ ಸಾಧನ! ಇದೇ ಪತ್ರಿಕೋದ್ಯಮದ ಮೂಲಕ, ತಮ್ಮ ಲೇಖನಿಯ ಹೊಳಪಿನ ಮೂಲಕ ಅದೆಷ್ಟೋ ಅನ್ಯಾಯವನ್ನು ಬಯಲಿಗೆಳೆದದ್ದೂ ಅಷ್ಟೇ ಸತ್ಯ! ಆದರೆ, ಪತ್ರಿಕೋದ್ಯಮವೆಂಬ ತರ್ಕಕೆ ನಿಲುಕದ ಒಂದಷ್ಟು ಸತ್ಯಕ್ಕೆ ಅಪವಾದ ಎನ್ನುವಂತೆ ಬದುಕಿಬಿಡುವ ಒಂದಷ್ಟು ಪತ್ರಕರ್ತರಿಗೆ ಧಿಕ್ಕಾರವಿದೆಯಷ್ಟೇ! ಪತ್ರಿಕೋದ್ಯಮಕ್ಕೆ ತನ್ನದೇ ಆದ ಸಿದ್ಧಾಂತವಿದೆ! ರೀತಿಯಿದೆ! ನೀತಿಗಳಿದೆ! ದುಡ್ಡೆಂದರೆ ಪತ್ರಿಕೋದ್ಯಮದ ಮಟ್ಟಿಗೆ ‘ಮೈಲಿಗೆ’! ಆದರೆ.. ಅದೇ ಮೈಲಿಗೆಯಲ್ಲಿ ಅದೆಷ್ಟೋ ವರ್ಷ ಆಳಿಬಿಟ್ಟರು ಜನ!

ಸತ್ಯಸಂಧ ಪತ್ರಕರ್ತರೆನಿಸಿದ ರವಿ ಬೆಳೆಗರೆಯವರು ಯಾಕೋ ಇದ್ದಕ್ಕಿದ್ದ ಹಾಗೆ ತಮ್ಮ ಪ್ರಸಿದ್ಧವಾದ ಪತ್ರಿಕೆ ‘ಹಾಯ್ ಬೆಂಗಳೂರ’ನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡು ತಮ್ಮ ಪತ್ರಿಕೆಯಲ್ಲಿ ಸಕಾರಣವನ್ನೂ ಕೊಟ್ಟು ಓದುಗರ ಕಿವಿಯ ಮೇಲೆ ಒಂದಷ್ಟು ಹೂವಿಟ್ಟು ಸಿಗರೇಟು ಹಚ್ಚಿ ಕುಳಿತಿದ್ದಾರೆ! ರವಿ ಬೆಳಗೆರೆಯೆಂಬ ಸತ್ಯಸಂಧ ಎಂದೆನಿಸಿಕೊಂಡ, ಸದಾಕಾಲ ಎಲ್ಲರಿಗೂ ಅಪ್ಪನಾಗಿ ಕುಳಿತು ಪತ್ರಿಕೋದ್ಯಮವನ್ನೇ ದಂಧೆಯಾಗಿ ತೆಗೆದುಕೊಂಡ ಒಬ್ಬ ರವಿ ಬೆಳೆಗೆರೆಯ ಮೃಗತ್ವ ಬಹುಷಃ ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ!

ನೇರವಾಗಿಯೇ ಹೇಳಿಬಿಡುತ್ತೇನೆ!

ಹಾ! ಈ ರವಿ ಬೆಳಗೆರೆಯ ಹಾಯ್ ಬೆಂಗಳೂರಿನ ಪತ್ರಿಕೆಯ ತಿಂಗಳ ಸರಾಸರಿ ಸರ್ಕ್ಯುಲೇಷನ್ ಎಷ್ಟಿದ್ದಿರಬಹುದು?! ಒಂದು ಐದು ಸಾವಿರ?! ಬೇಡ! ಒಂದು ಹತ್ತು ಸಾವಿರ?! ಬೆಳಗೆರೆಯೇ ಹೇಳಿದಂತೆ ಹದಿನೈದು ವರ್ಷ ಈ ಪತ್ರಿಕೋದ್ಯಮವನ್ನು ಆಳಿದ್ದೇನೆಂದು ಹೇಳಿದ ಆತ ದುಡ್ಡು ಮಾಡಿದ್ದು 400 ಕೋಟಿಗೂ ಹೆಚ್ಚು! ಬಿಡಿ! ನಮ್ಮ ಪೋಸ್ಟ್ ಕಾರ್ಡ್ ನ ಒಂದು ತಿಂಗಳ ವೆಬ್ ಸರ್ಕ್ಯುಲೇಷನ್ ಒಂದು ಕೋಟಿಗೂ ಹೆಚ್ಚು! ಅಂತಾದ್ದರಲ್ಲಿ ಕೇವಲ, ಬರೇ ತಿಂಗಳಿಗೆ 10 ಸಾವಿರ ಓದುಗರನ್ನಿಟ್ಟುಕೊಂಡು, ತಿಂಗಳಿಗೆ ನಾಲ್ಕೇ ಪತ್ರಿಕೆಯನ್ನು ಪ್ರಕಟಿಸಿ ಹದಿನೈದೇ ವರ್ಷದಲ್ಲಿ ನಾನೂರು ಕೋಟಿ ಮಾಡುತ್ತಾನೆಂದರೆ ಅಬ್ಬಾಬ್ಬಾಬ್ಬಾ!!! ಪತ್ರಿಕೋದ್ಯಮದ ಧಂಧೆ ಯಶಸ್ಸಾದಂತೆಯೇ!!

ರವಿ ಬೆಳೆಗೆರೆಯೆಂಬ ಪಾತಕಿ ಹಿಡಿದದ್ದು ಪವಿತ್ರವಾದ ಲೇಖನಿಯನ್ನಷ್ಟೇ!

ಹೌದು! ಇದನ್ನು ರವಿಯ ಬಗ್ಗೆ ತಿಳಿದವರು ಒಪ್ಪುತ್ತಾರೆ! ಇದಾವುದೋ ಆಪಾದನೆಯಲ್ಲ! ಇದೊಂದು ವಾಸ್ತವ! ಹೇಗೆ ಪತ್ರಿಕೋದ್ಯಮದ ಹಿನ್ನೆಲೆಯನ್ನಿಟ್ಟು ದಂಧೆ ನಡೆಸಬಹುದೆಂಬುದಕ್ಕೆ ನೇರ ಉದಾಹರಣೆ ರವಿಯಷ್ಟೇ!!! ಒಂದೆರಡು ಘಟನೆಗಳನ್ನು ಹೇಳಿಬಿಡುತ್ತೇನೆ ಕೇಳಿ!

ಮಂಗಳೂರಿನ ಭೂಗತ ಲೋಕದ ಹಿನ್ನೆಲೆಯಿರುವ ವ್ಯಕ್ತಿಯ ಹತ್ತಿರ ಬಂದು ಐದು ಲಕ್ಷ ಕೊಟ್ಟರೆ ನಿನ್ನನ್ನು ಬೆಂಗಳೂರಿನ” ಡಾನ್” ಮಾಡ್ತೇನೆಂದು ಆಫರ್ ಕೊಟ್ಟ ರವಿ ಬೆಳಗೆರೆ ಸಿಟ್ಟಿಗೆದ್ದಿದ್ದು ಅದೇ ಪಾತಕಿ ರವಿಯನ್ನು ತಿರಸ್ಕರಿಸಿದಾಗ! ಕೊನೆಗೆ ಎರಡು ದಿನಗಳಲ್ಲಿಯೇ ‘ಮಂಗಳೂರಿನ ಪುಡಿ ರೌಡಿ’ ಎಂದು ಬಿರುದು ಕೊಟ್ಟುಬಿಟ್ಟಿದ್ದ.

ಬಿಡಿ! ಟಿವಿ9 ನಲ್ಲಿ ಕ್ರೈಂ ಸ್ಟೋರಿ ಅಂತ ರಾತ್ರಿ 10 ಗಂಟೆಗೆ ಅನಾಹುತಕಾರಿ ಸಂದೇಶಗಳನ್ನೇ ಬಿತ್ತರಿಸುತ್ತಿದ್ದ ಬೆಳಗೆರೆ ಒಂದು ದಿನ ಐಸಿಐಸಿಐ ಬ್ಯಾಂಕಿನ ಕಥೆಯನ್ನೇ ಹಿಡಿದು ಸುಮಾರು ಒಂದು ತಾಸು ಆರೋಪ ಮಾಡಿದ ಮೇಲೆ, ‘ಇನ್ನೂ ಇದೆ ಇವರ ಕರ್ಮಕಾಂಡ ಫ್ರೆಂಡ್ಸ್!! ನಾಳೆಗೆ ಇವರ ಇನ್ನಷ್ಟು ಕರ್ಮಕಾಂಡ ಮುಂದುವರೆಯಲಿದೆ. . . .’ ಎಂದು ಸೈನ್ ಆಫ್ ಮಾಡಿದ್ದ ಬೆಳೆಗೆರೆ ಮರುದಿನದ ಎಪಿಸೋಡ್ ನಲ್ಲಿ ಬೇರೆಯದೇ ಕಥೆ ಶುರು ಹಚ್ಚಿದ್ದ! ಯಾವ ಐಸಿಐಸಿಐ ಬ್ಯಾಂಕಿನ ಕಥೆಯೂ ಪ್ರಸಾರವಾಗಲೇ ಇಲ್ಲ! ಯಾಕೆ?! ಹಿಂದೆ ಕೋಟಿ ಹಣ ಕೊಟ್ಟ ಬ್ಯಾಂಕಿನವರಿಗೆ ಬೆಳಗೆರೆ ಸಂತೃಪ್ತನಾಗಿ ಎಣ್ಣೆ ಹೊಡೆಯುತ್ತಾ ಕೂತಿದ್ದನಷ್ಟೇ!

ಇನ್ನೊಂದು ಸ್ವಾರಸ್ಯಕರವಾದ ರವಿಯ ಡ್ರಾಮಾವನ್ನ ಹೇಳಿಬಿಡುತ್ತೇನೆ ಕೇಳಿ! ನೀವು ಹಾಯ್ ಬೆಂಗಳೂರಿನ ನಿಷ್ಠ ಓದುಗರಾಗಿದ್ದಿದ್ದರೆ ನಿಮಗೆ ಈ ಸೂಕ್ಷ್ಮಗಳೆಲ್ಲ ಅರ್ಥವಾಗಿರಬಹುದು! ಕೆಲ ವರ್ಷಗಳ ಹಿಂದೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಧಿಕಾ ಬಗ್ಗೆ ತ್ರಿಮೂರ್ತಿ ಸಿನಿಮಾ ಮಾಡ್ತೀನಿ ಅಂದು ಲೋಕನಾಥ್ ಎನ್ನುವ ನಟನನ್ನೂ ಹಿಡಿದು ಕೂರಿಸಿ, ಪೋಸ್ಟರ್ ಎಲ್ಲ ತಯಾರಿಸಿ, ಸಿನಿಮಾವೂ ಮುಗಿಯಿತೆಂದು ಅಂದ ಬೆಳೆಗೆರೆ ಕೇವಲ ಬೆದರಿಕೆಗೆ ಹೆದರಿದನೇ?!

ಆತನೇ ಹೇಳಿದಂತೆ ಮೂರು ಕೋಟಿ ಕೊಟ್ಟರೆ ಸುಮ್ಮನೆ ಬಿಡುವುದಾಗಿ ದೇವೇಗೌಡರ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದ ಬೆಳಗೆರೆ ಮೂರು ಕೋಟಿ ಕೊಡಬೇಕಲ್ಲವಾ ಎಂಬ ಬೆದರಿಕೆಗೆ ಹೆದರಿ ಸಿನಿಮಾ ಬಿಡುಗಡೆ ಮಾಡದೇ ಇದ್ದಿದ್ದಲ್ಲ, ಬದಲಾಗಿ ಗೌಡರ ಕುಟುಂಬಕ್ಕೆ ಬಹಿರಂಗವಾಗಿಯೇ ‘ಮಕ್ಕಳಾ! ಮೂರು ಕೋಟಿ ಕೊಟ್ರೆ ವಿಷಯವನ್ನ ಇಲ್ಲಿಗೇ ಬಿಡುತ್ತೇನೆ’ ಎಂಬ ಬೆದರಿಕೆ ಹಾಕಿದ್ದಷ್ಟೇ!

ಬೆಳಗೆರೆಯ ಕರ್ಮಕಾಂಡ ಇಲ್ಲಿಗೇ ಮುಗಿಲಿಲ್ಲ ಸ್ವಾಮಿ! ಆ ‘ಓ ಮನಸೇ’ ಎಂಬ ಪತ್ರಿಕೆಯಲ್ಲಿ ‘ಅಪ್ಪನ ಸಾಂತ್ವನ’ ಎಂಬ ಅಂಕಣ ಶುರು ಮಾಡಿ ಎಲ್ಲರಿಗೂ ಅಪ್ಪನಾಗಿದ್ದ ಬೆಳಗೆರೆ ಅದೇ ಮಕ್ಕಳ ಮುಂದೆ ಪಿಸ್ತೂಲಿಟ್ಟು ಮಾತಾಡಿದ್ದ! ಸತ್ಯ! ಅದೆಷ್ಟೋ ಹೆಣ್ಣು ಮಕ್ಕಳ ಸಮಸ್ಯೆಗಳು ಇನ್ನೂ ದೊಡ್ಡದಾಗಿದ್ದೇ ಈ ಬೆಳಗೆರೆಯಿಂದ! ಸಮಸ್ಯೆ ಕಡಿಮೆ ಇದ್ದರೆ ಪತ್ರಿಕೆಯಲ್ಲಿಯೇ ಉತ್ತರ! ಸ್ವಲ್ಪ ಜಾಸ್ತಿ ಎನ್ನಿಸಿದರೆ, ನನ್ನ ಕಛೇರಿಗೆ ಬಂದು ಮಾತಾಡು ಮಗಳೇ ಎನ್ನುತ್ತಿದ್ದ ಬೆಳಗೆರೆ ನಂಬಿ ಬಂದ ಹೆಣ್ಣುಮಕ್ಕಳ ಎದುರಿಗೆ ಪಿಸ್ತೂಲು ತೋರಿಸಿ ಬೆದರಿಕೆ ಹಾಕಿ ಹಣ ಕಿತ್ತದ್ದೂ ಕಿತ್ತದ್ದೂ ಅಲ್ಲದೇ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದ ರವಿ ಅದ್ಯಾವ ವಿಷಯವೂ ಸಮಾಜಕ್ಕೆ ಗೊತ್ತಾಗದಂತೆ ವ್ಯವಸ್ಥೆ ಮಾಡಿಬಿಡುತ್ತಿದ್ದನೆಂದರೆ ಆತನ ಸಾಹಸ ಮೆಚ್ಚಬೇಕು ಬಿಡಿ! ಆದರೂ, ಸುವರ್ಣಾ ವಾಹಿನಿಯಲ್ಲಿ ಇದೇ ವಿಷಯದ ಬಗ್ಗೆ ಚರ್ಚೆಯಾದಾಗ ಒಬ್ಬ ಮಹಿಳೆ ಬೆಳಗೆರೆ ಬೆದರಿಕೆ ಹಾಕಿದ್ದಾಗಿ ಒಪ್ಪಿದ್ದಳು! ಈ ರೀತಿ ಅದೆಷ್ಟು ಹೆಣ್ಣು ಮಕ್ಕಳ ಬದುಕು ಹಾಳಾಯಿತೋ?!

ಈ ಮುದಿಯನ ಚಪಲ ಕುಡಿದಾಗಲಷ್ಟೇ ಹೊರ ಬೀಳುತ್ತದೆಂಬುದು ಆತನ ಪ್ಲಸ್ ಪಾಯಿಂಟ್! ರಾತ್ರಿ ಎಣ್ಣೆ ಹೊಡೆದು ಕೂರುತ್ತಿದ್ದ ಬೆಳಗೆರೆಗೆ ಇದ್ದಕ್ಕಿದ್ದ ಹಾಗೆ ಒಂದಷ್ಟು ಹೆಣ್ಣು ಮಕ್ಕಳ ನೆನಪಾಗಿಬಿಡುತ್ತಿತ್ತು! ತಕ್ಷಣವೇ ಕರೆ ಮಾಡುತ್ತಿದ್ದ ಬೆಳಗೆರೆಗೆ ರಾತ್ರೋ ರಾತ್ರಿ ಅಪ್ಪನೆಂದು ಕರೆದ ಹೆಣ್ಣುಮಕ್ಕಳಿಗೆಲ್ಲ ಅಪ್ಪನೆಂಬ ಬೆಳಗೆರೆಯ ಬಿಟ್ಟಿ ಕಾಟವೂ ಸಿಗುತ್ತಿತ್ತೆನ್ನಿ! ಈತ ಹೇಳಿಕೊಳ್ಳುವುದಕ್ಕೊಬ್ಬ ಅಪ್ಪ!!!

ಅದ್ಯಾವುದೋ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ ‘ಬಿಬಿಸಿ’ ಎಂಬ ಕಾಫಿ ಅಂಗಡಿ ಶುರು ಮಾಡಿದ ಬೆಳೆಗೆರೆಯ ಜೊತೆ ಕಾಫಿ ಕುಡಿಯುತ್ತ ಬಿಸಿ ಚರ್ಚೆ ಮಾಡಲು ಯಾವನೂ ಬರಲೇ ಇಲ್ಲ! ಪಾಪ! ಕಿಸೆಯಲ್ಲಡಗಿಸಿಟ್ಟ ಪಿಸ್ತೂಲು ಟೇಬಲ್ಲಿನ ಮೇಲೆ ಬರದೇ ಇದ್ದದ್ದಕ್ಕೆ ಬಿಬಿಸಿ ಅಷ್ಟೇ ನಿಶ್ಯಬ್ದವಾಗಿ ನಿಂತಿತು!

ಅಲ್ಲ ಸ್ವಾಮಿ!!! ಈತನ ಕಟ್ಟಾ ಶತ್ರು ಅಗ್ನಿ ಶ್ರೀಧರ್ ಇವನ ತರಹವೇ ಪತ್ರಿಕೆ ಮಾಡಿ ಬುದ್ಧಿಜೀವಿ ಎಂಬ ಸೋಗು ಹಾಕಿದ ಹಿಂದೂ ವಿರೋಧಿಯಾಗಿದ್ದರೂ ಅವನನ್ನು ಒಂದು ನಿಮಿಷದ ಮಟ್ಟಿಗೆ ನಂಬಬಹುದು! ಆದರೆ, ರವಿ ಬೆಳಗೆರೆ ಯೆಂಬ ವಿಷಕಾರುವ ಜಂತುವನ್ನಲ್ಲ!

ರವಿ ಬೆಳಗೆರೆ ಈಗ ಗೆರೆಯೂ ಎಳೆಯಲಾಗದಷ್ಟು ಜೀರೋ!!!!

ಮುಂಚೆ ರವಿ ಬೆಳಗೆರೆಯ ಕರೆ ಬಂದರೆ ಜನ ನಡುಗುತ್ತಿದ್ದರು! ಹಾಯ್ ಬೆಂಗಳೂರಿನಲ್ಲಿ ಇನ್ಯಾರಿಗೆ ಕಾದಿದೆಯೋ ಗ್ರಹಚಾರ ಎನ್ನುತ್ತಿದ್ದರು! ಪತ್ರಿಕೋದ್ಯಮದಲ್ಲಿ ಆತನಿಗಿದ್ದ ಧೈರ್ಯವೊಂದು ಉಳಿದವರ ಧೈರ್ಯವನ್ನೂ ದಿಕ್ಕುಗೆಡಿಸುತ್ತಿತ್ತು! ಆದರೆ, ಈಗ ಅದೆಷ್ಟು ಸೋತಿದ್ದಾನೆಂದರೆ ಬೆಳಗೆರೆಯೆಂದರೆ ಇವತ್ತು ಮೀಸೆಯಡಿಯಲ್ಲಿ ನಗುತ್ತಾರೆ ಜನ!

ಹಾಯ್ ಬೆಂಗಳೂರಿಗೆ ಇವತ್ತು ಎಂತಹ ಗತಿ ಬಂದಿದೆಯೆಂದರೆ ನೆಟ್ಟಗೆ 100 ಜನವೂ ಓದದೇ ಇರುವ ದಯನೀಯ ಸ್ಥಿತಿಯಷ್ಟೇ! ಆದರೆ, ರವಿ ಬೆಳಗೆರೆಗೆ ಹಾಯ್ ಬೆಂಗಳೂರೆಂಬುದು ಭಾರತಾದ್ಯಂತ ಹೆಸರು ತಂದುಕೊಟ್ಟ ಪತ್ರಿಕೆ! ಅದನ್ನೇ ನಿಲ್ಲಿಸುವಾಗ ಜನ ಪ್ರಶ್ನೆ ಮಾಡುತ್ತಾರೆಂಬ ಕಾರಣಕ್ಕೆ ಸಮರ್ಥಿಸಿದ ರೀತಿ ಅದ್ಭುತ!

“ಓ ಮನಸೇ” ತೃಪ್ತಿ ತಂದಿದೆಯಾದ್ದರಿಂದ ಹಾಯ್ ಬೆಂಗಳೂರನ್ನು ನಿಲ್ಲಿಸಿ ಅದನ್ನು ಮುಂದುವರೆಸುತ್ತೇನೆಂದ ಬೆಳೆಗೆರೆಗೆ ಈಗಾಗಲೇ ಅರ್ಥವಾಗಿದೆ ಪಿಸ್ತೂಲು ಬೆದರಿಕೆ ನಡೆಯುವುದಿಲ್ಲ, ಇನ್ನೇನಿದ್ದರೂ ಎಮೋಷನಲ್ ಅತ್ಯಾಚಾರವೇ ಗತಿ ಎಂದು!

ತನಗೆ ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕು ಎಂದ ಅಜ್ಜನಿಗೆ ಎರಡನೇ ಹೆಂಡತಿಯ ಮಗನಾದ ಪುಟ್ಟ ಹಿಮವಂತನ ನೆನಪೂ ಇಲ್ಲದಿರುವುದು ದುರದೃಷ್ಟಕರವೋ ಅಥವಾ ಎಲ್ಲಿಯೂ ಎರಡನೇ ಹೆಂಡತಿಯ ಬಗ‌್ಗೆ ಹೇಳಲಾಗದೇ ಇರುವಷ್ಟು ಅನಿವಾರ್ಯತೆಯಿದೆಯೋ!

20 ರಿಂದ 25 ವರ್ಷ ಪತ್ರಿಕೋದ್ಯಮದಲ್ಲಿದ್ದೇನೆ, 85 ಪುಸ್ತಕ ಬರೆದಿದ್ದೇನೆ, ಅಕ್ಷರಶಃ ಹದಿನೈದು ವರ್ಷ ಆಳಿದ್ದೇನೆ ಎಂದ ಬೆಳೆಗೆರೆಯವರು ಬ್ಲಾಕ್ ಮೇಲ್ ನಿಂದ, ಪತ್ರಿಕೋದ್ಯಮಕ್ಕೇ ಮೈಲಿಗೆಯಾದ ಹಣದ ಆಸೆಯನ್ನೆಲ್ಲ ಇಟ್ಟು ಅಕ್ಷರಶಃ ಪತ್ರಿಕೋದ್ಯಮದ ಅರ್ಥವನ್ನೇ ನಾಶಪಡಿಸಿದರಷ್ಟೇ!

ಬೀದರ್ ನಲ್ಲಿ ಯಾವನಿಗೋ 10 ರೂಪಾಯಿಗಳ ಲಂಚ ಕೊಟ್ಟಿದ್ದನ್ನೇ ಎಷ್ಟಂತ ಬರೆಯಲಿ ಎಂದ ಬೆಳಗೆರೆಗೆ ಅದೇ 10 ವರ್ಷಗಳ ಹಿಂದೆ ಕೋಟಿ ಲಂಚ ತೆಗೆದುಕೊಂಡದ್ದೆಲ್ಲ ಪಾಪ! ಮರೆತು ಹೋಗಿದೆಯೇ?!

ಇಷ್ಟು ವರ್ಷವೂ ನಿಮ್ಮ ‘ಮೈಲಿಗೆ’ಯಾದ ಪತ್ರಿಕೋದ್ಯಮದ ರೀತಿಯನ್ನು ಒಪ್ಪಲು ಸಾಧ್ಯವೇ ಇಲ್ಲ! ಹಣದ ಕಂತೆಗಳಿಗೆ ಸರಿಯಾಗಿ ಎಲ್ಲೆಲ್ಲಿ ಯಾರಿಗೆ ಬಿಲ್ಡಪ್ ನೀಡಬೇಕೋ, ಯಾರ ವ್ಯಕ್ತಿತ್ವವನ್ನು ಹಾಳುಗೆಡವಬೇಕೋ ಎಂಬ ನಿಮ್ಮದೇ ಆದ ‘ಬೆಳಗೆರೆಯ ತತ್ವ ಚಿಂತನೆ’ ಯೊಂದು ಈ ಹದಿನೈದು ವರ್ಷಗಳೂ ಬಹಳ ಚೆನ್ನಾಗಿಯೇ ಬದುಕುಗಳನ್ನು ನಿರ್ನಾಮಗೊಳಿಸಿದೆ! ದೇವರು ದೊಡ್ಡವನೋ! ಅಥವಾ ನೀವೋ!!! ಅಂತೂ ಇಂತೂ ನಿಮ್ಮ ವಿಷ ತುಂಬಿದ ಲೇಖನಿಯನ್ನು ಕೆಳಗಿಟ್ಟಿದ್ದೀರಿ! ನಿಮ್ಮ ಬದುಕು ಬಂಗಾರವಾಗುತ್ತದೆ ಬಿಡಿ!

– ತಪಸ್ವಿ

Tags

Related Articles

Close