ಪ್ರಚಲಿತ

ರವಿ ಬೆಳಗೆರೆ ನೀಡಿದ ಸುಪಾರಿ ಕೊಲೆಗೆ ಸಾಕ್ಷಿ ಒದಗಿಸಿತೇ `ರಣಭೂಮಿಯಲ್ಲಿನ ಗಂಡನ ಶತ್ರುವಿನ ತೊಡೆ ಮೇಲಿನ ಹೆಂಡತಿ!!!?’

ಶತ್ರುವಿನ ತೊಡೆ ಮೇಲೆ ಪವಡಿಸಿದ ಹೆಂಡತಿಯೇ .....

ಭೀಮಾತೀರದ ಹಂತಕರಿಂದಾಗಿ ರವಿಬೆಳಗೆರೆ ಅವರು ರೌಡಿಸಂಗೆ ಎಂಟ್ರಿ ಪಡೆಯಲು ಕಾರಣವಾಯಿತೇ? ರೌಡಿಸಂ ಬಗ್ಗೆ ಬರೆಯುತ್ತಿದ್ದ ಕ್ರೈಂ ರಿಪೋರ್ಟರ್ ರವಿಬೆಳಗೆರೆ ಕೊನೆಗೊಂದು ದಿನ ಅದೇ ರೌಡಿಸಂನಿಂದಾಗಿ ಇಂದು ಪೊಲೀಸ್ ಕಸ್ಟಡಿಯಲ್ಲಿರುವಂತಾಗಿದೆ. ತನ್ನ ಗೆಳೆಯನ ಜೊತೆ ಬೈಟು ಕಾಫಿ ಹಂಚಿಕೊಳ್ಳುತ್ತಿದ್ದ ರವಿ ಬೆಳಗೆರೆ ಕೊನೆಗೊಂದು ದಿನ ಅದೇ ಗೆಳೆಯನ ಹತ್ಯೆಗೆ ಮಹೂರ್ತ ಫಿಕ್ಸ್ ಮಾಡುತ್ತಾನೆ..

ತನ್ನ ಪರಮ ಮಿತ್ರನೊಬ್ಬ ಶತ್ರುವಾಗಿ ಬದಲಾಗಿದ್ದು ಹೇಗೆ? ಶತ್ರುವಿನ ತೊಡೆ ಮೇಲೆ ಪವಡಿಸಿದ ಹೆಂಡತಿಯೇ ಇಂಥದೊಂದು ದುಷ್ಕøತ್ಯ ನಡೆಸಲು ರವಿಬೆಳಗೆರೆಗೆ ಸ್ಪೂರ್ತಿ ನೀಡಿತೇ? ಭೀಮಾ ತೀರದ ಹಂತ ಶಶಿ ಮುಂಡೇವಾಡಗಿ ಹಾಗೂ ಶಾರ್ಪ್ ಶೂಟರ್ ತಾಹಿರ್ ಸಿಕ್ಕಿಬೀಳದೇ ಹೋಗಿದ್ದರೆ ಇಂದು ಸುನಿಲ್ ಹೆಗ್ಗರವಳ್ಳಿಯ ಕಥೆ ಏನಾಗುತ್ತಿತ್ತೋ ಏನೋ.. ಗೌರಿ ಲಂಕೇಶ್ ಹತ್ಯಾ ಆರೋಪಿಗಳ ಸುಳಿವೇ ಸಿಗದಿರುವಾಗ ಸಂಭವನೀಯ ಇನ್ನೊಂದು ಕೃತ್ಯ ಕರ್ನಾಟಕವನ್ನೇ ಬೆಚ್ಚಿಬೀಳಿಸುತ್ತಿತ್ತು. ಅದ್ಯಾವನೋ ಸಂಘಪರಿವಾರದ ಕಾರ್ಯಕರ್ತ ಅನ್ಯಾಯವಾಗಿ ಜೈಲಲ್ಲಿ ಕುಳಿತು ಮುದ್ದೆ ಮುರಿಯಬೇಕಿತ್ತು. ಪ್ರಕಾಶ್ ರೈಯಂತಹಾ ಲೆಪ್ಟಿಸ್ಟ್‍ಗಳು ಬೀದಿಬದಿಯಲ್ಲಿ ನಿಂತು ಅರಚಿಕೊಳ್ಳುತ್ತಿದ್ದರು.

ಶತ್ರುವಿನ ತೊಡೆ ಮೇಲಿನ ಹೆಂಡತಿ ರವಿ ಬೆಳಗೆರೆಯ ಒಳಗೆ ಅವಿತುಕೊಂಡಿದ್ದ ಹಂತಕನೊಬ್ಬನನ್ನು ಹೊರ ಹಾಕಿದೆ. ಹಾಗಾದರೆ ಈ ವಾಕ್ಯ ಏನನ್ನು ಸೂಚಿಸುತ್ತದೆ? ಹಾಗಾದರೆ ಶತ್ರುವಿನ ತೊಡೆ ಮೇಲೆ ಕುಳಿತವರ್ಯಾರು? ರಣಭೂಮಿಯಲ್ಲಿದ್ದ ಗಂಡ ಯಾರು? ಈ ಒಂದು ಸಣ್ಣ ವಾಕ್ಯ ಕ್ರೈಲೋಕದ ಪಾತಕ ಲೋಕವನ್ನು ಬಿಚ್ಚಿಟ್ಟಿದ್ದು ಹೇಗೆ?

`ಹೆಜ್ಜೆ ಇಡುವಾಗ ತುಂಬಾ ಎಚ್ಚರ ಬೇಕು. ಗಂಡ ರಣಭೂಮಿಯಲ್ಲಿರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿರ್ವತೆಯೇ?’

ಈ ವಾಕ್ಯ ಯಾರದ್ದು ಗೊತ್ತೇ? ಖ್ಯಾತ ಪತ್ರಕರ್ತ ರವಿಬೆಳಗೆರೆಯವರದ್ದು. ಸುನಿಲ್ ಹೆಗ್ಗರವಳ್ಳಿ ಹತ್ಯೆ ಸುಪಾರಿಗೂ ಮುನ್ನ ರವಿಬೆಳಗೆರೆ ಅವರು ಫೇಸ್‍ಬುಕ್‍ನಲ್ಲಿ ಹಾಕಿರುವ ಸ್ಟೇಟಸ್ ಇಂದು ಭಾರೀ ಚರ್ಚೆಗೆ ಕಾರಣವಾಗಿದೆ. ತನ್ನ ಹೆಂಡತಿ ಜೊತೆಗಿನ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದ ರವಿಬೆಳಗೆರೆ ಆ ರೀತಿ ಸ್ಟೇಟಸ್ ಹಾಕಿದ್ದರು. ಆ ಸ್ಟೇಟಸ್ ಹಾಕಿ ಮೂರು ತಿಂಗಳಾಗುತ್ತಿದ್ದಂತೆ ಸುಪಾರಿ ಹತ್ಯೆಯ ಹಿನ್ನೆಲೆ ರವಿ ಅರೆಸ್ಟ್ ಆಗಿದ್ದಾರೆ. ಕ್ರೈಂ ಡೈರಿಯಲ್ಲಿ ಮಿಂಚುತ್ತಿದ್ದ ವ್ಯಕ್ತಿಯೊಬ್ಬ ಇಂದು ಪೊಲೀಸ್ ಡೈರಿಯಲ್ಲಿ ಖಾಯಂ ಸ್ಥಾನ ಪಡೆಯುವಂತಾಯಿತು. ಪಾಪಿಗಳ ಲೋಕದಲ್ಲಿ ಸಿಕ್ಕಿನಬೀಳುವಂತಾಯಿತು.

ರವಿಬೆಳಗೆರೆಗೆ ಎರಡನೇ ಹೆಂಡತಿ ಇದ್ದು ಆಕೆಗೊಬ್ಬ ಮಗನೂ ಇದ್ದಾನೆ. ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆಯ ಸಂದರ್ಭ ತನ್ನ ಹೆಂಡತಿ ಹಾಗೂ ಮಗನನ್ನು ಘಂಟಾಘೋಷವಾಗಿ ಪರಿಚಯ ಮಾಡಿಸಿದ್ದರು. ಆದರೆ ಅದೇ ಹೆಂಡತಿಯ ಮೇಲಿನ ಪ್ರೀತಿ ಇಂದು ರವಿಬೆಳಗೆರೆ ಕೈಗಳಿಗೆ ಉಕ್ಕಿನ ಕಡಗ ಬೀಳಿಸುವಂತೆ ಮಾಡಿದೆ. ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಶಶಿ ಮುಂಡೇವಾಡಗಿಗೆ ರವಿ 30 ಲಕ್ಷಕ್ಕೆ ಸುಪಾರಿ ನೀಡಿದ್ದರು. ಈತ ಶಾರ್ಪ್‍ಶೂಟರ್ ತಾಹಿರ್‍ನನ್ನು ನೇಮಿಸಿದ್ದು, ಇದಕ್ಕಾಗಿಯೇ ಆತ ಕಂಟ್ರಿಮೇಡ್ ಪಿಸ್ತೂಲ್ ಖರೀದಿಸಿದ್ದ. ಇದೆಲ್ಲಾ ಬೆಳಕಿಗೆ ಬರುತ್ತಿದ್ದಂತೆ ಈ ಮುಂಚೆ ರವಿ ಹಾಕಿದ್ದ ಫೇಸ್‍ಬುಕ್ ಪೋಸ್ಟ್ ಕೂಡಾ ಭಾರೀ ಸದ್ದು ಮಾಡುತ್ತಿದೆ. ಹೆಂಡತಿ ಮೇಲಿನ ಅತಿ ಪ್ರೀತಿ ರವಿಬೆಳಗೆರೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ರವಿಬೆಳಗೆರೆಯ ಎರಡನೇ ಹೆಂಡತಿಗೆ ಅಕ್ರಮ ಸಂಬಂಧ ಕಲ್ಪಿಸಲು ಕಾರಣವೇನು? ಇದರಲ್ಲಿ ಸುನಿಲ್ ಹೆಗ್ಗರವಳ್ಳಿಯ ಪಾತ್ರವೇನು ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಇನ್ನೊಬ್ಬರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಸೈಕಲಾಜಿಕಲ್ ರಿಲೀಫ್ ಕೊಡಿಸುತ್ತಿದ್ದ ರವಿ ಇಂದು ಮಾನಸಿಕ ದೌರ್ಬಲ್ಯದಿಂದಲೇ ತನ್ನ ಬೈಟು ಕಾಫಿ ಗೆಳೆಯ, ಸುನಿಲ್ ಹೆಗ್ಗರವಳ್ಳಿಯ ಕೊಲೆಗೆ ಮಹೂರ್ತ ಇಟ್ಟಿದ್ದಾನೆ ಎಂದರೆ ಒಂದು ದೊಡ್ಡ ಅಚ್ಚರಿಯ ಸಂಗತಿ.

ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎನ್ನುವುದು ಇದೀಗ ಬಟಾಬಯಲಾದ ಸತ್ಯ..

ವಿಜಯಪುರದ ಜೈಲಿನಲ್ಲಿದ್ದ ಕೈದಿ ನೀಡಿದ್ದ ಸುಳಿವು ಆಧರಿಸಿ ಸುಪಾರಿ ಕಿಲ್ಲರ್ ನನ್ನು ಬಂಧಿಸಿದ್ದ ಪೆÇಲೀಸರು, ಯಲಹಂಕ ಮನೆಯಲ್ಲಿ ಮೂರು ರಿವಾಲ್ವರ್ ವಶಪಡಿಸಿಕೊಂಡಿದ್ದರು. ಆರಂಭದಲ್ಲಿ ಈತ ನನಗೆ ಈ ಪ್ರಕರಣದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದನಾದರೂ ಎಸ್‍ಐಟಿ ಈ ಮನೆಯಲ್ಲಿ ತೀವ್ರ ಪರಿಶೋಧನೆ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಖಾಲಿ ಟಿವಿಯ ಒಳಗಡೆ 3 ರಿವಾಲ್ವರ್ ಸಿಕ್ಕಿತ್ತು.

ಇದೀಗ ರವಿ ಬೆಳಗೆರೆ ಸುಪಾರಿ ಕೊಲೆಗೆ ಸ್ಕೆಚ್ ಹಾಕಿರುವುದನ್ನು ಒಪ್ಪಿಕೊಂಡಿದ್ದು, ಐಪಿಸಿ ಸೆಕ್ಷನ್ 307ರ ಪ್ರಕಾರ ಕೊಲೆಗೆ ಸಂಚು, 120(ಬಿ) ಪ್ರಕಾರ ಪಿತೂರಿ ಮಾಡಿದ ಕೇಸ್‍ನಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಕೇಸ್ ದಾಖಲಾಗಿದೆ.

ಚೇಕಿತಾನ

Tags

Related Articles

Close