ಪ್ರಚಲಿತ

ರಷ್ಯಾದ ಈ ಪ್ರಸಿದ್ಧ ನಟಿಯ ಸೌಂದರ್ಯದ ರಹಸ್ಯದ ಹಿಂದಿನ ಪ್ರೇರಕ ಶಕ್ತಿ ನರೇಂದ್ರ ಮೋದಿ!! ಖಿನ್ನತೆಗೊಳಗಾಗಿದ್ದ ಈಕೆ ಉಡುಪಿಗೆ ಬಂದಿದ್ದಾದರೂ ಯಾಕೆ ಗೊತ್ತೇ?!

ಭಾರತದ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಬಹುರೂಪಿಯಾಗಿ ವಿಶ್ವಾದ್ಯಂತ ಹರಡಿರುವುದಲ್ಲದೇ ಆಧ್ಯಾತ್ಮಿಕ ಸಾಧನೆಗಾಗಿ ಭಾರತದ ಋಷಿ, ಮುನಿಗಳು ಪ್ರಾಚೀನ ಕಾಲದಲ್ಲಿ ಮಾಡುತ್ತಿದ್ದ “ಯೋಗ” ಇದೀಗ ವಿದೇಶಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಗೊತ್ತೇ ಇದೆ!! ಆದರೆ ಇದೀಗ ಅದ್ಬುತ ನಟನೆಯಿಂದ ಖ್ಯಾತಿ ಪಡೆದಿರುವ ರಷ್ಯಾದ ಖ್ಯಾತ ನಟಿಯೋರ್ವಳು ತಮ್ಮ ಮಾನಸಿಕ ಸಮಸ್ಯೆಯನ್ನು ಗುಣಪಡಿಸಿಕೊಳ್ಳೋದಕ್ಕೆ ಭಾರತದ ಆಯುರ್ವೇದ ಹಾಗೂ ಯೋಗದ ಮೊರೆ ಹೋಗಿದ್ದಾರೆ!!

ಹೌದು… ಶಿಲ್ಪಾ ಶೆಟ್ಟಿ ಭಾರತದ ಯೋಗ ಐಕಾನ್ ಆಗಿರುವುದಲ್ಲದೇ, ಬಿಪಾಶ ಬಸು ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಯೋಗ ಕಾರ್ಯಗಾರ ಮಾಡುತ್ತಿದ್ದಾರೆ. ಇನ್ನು, ಇಲಿಯಾನ, ಪರಿಣಿತಿ ಚೋಪ್ರಾ ಸ್ಲಿಮ್ ಆಗಲು ಯೋಗವನ್ನು ಅವಲಂಬಿಸಿದ್ದಾರಲ್ಲದೇ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದ ನಟ-ನಟಿಯರ ಫಿಟ್ನೆಸ್ ನ ಗುಟ್ಟು ‘ಯೋಗ’ವೇ ಆಗಿರುವುದ ಹೆಮ್ಮೆಯ ವಿಚಾರ!! ಆದರೆ ಇದೀಗ ವಿದೇಶಿ ನಟಿಯೊಬ್ಬಳು ಭಾರತದ ಆಯುರ್ವೇದ ಮತ್ತು ಯೋಗಕ್ಕೆ ಮೊರೆ ಹೋಗಿದ್ದಾರೆ ಎಂದರೆ ಯೋಗಕ್ಕೆ ಅದೆಷ್ಟು ಮಂದಿ ಮಾರುಹೋಗಿದ್ದಾರೋ ನಾ ಕಾಣೆ!!

ಭಾರತ ಸಂಜಾತ ಯೋಗವು ಇದೀಗ ವಿಶ್ವಮಾನ್ಯವಾಗಿದ್ದು, ಇದರ ಸಂಪೂರ್ಣ ಶ್ರೇಯಸ್ಸು ಭಾರತಕ್ಕೆ ಸಲ್ಲುತ್ತದೆ. ಪ್ರಾಚೀನ ಕಾಲದಲ್ಲಿ ಮಾಡುತ್ತಿದ್ದ ಯೋಗವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವ ವಿಖ್ಯಾತಿ ಮಾಡಿದ ನಂತರ ಈಗ ವಿದೇಶಿಯರನ್ನು ತನ್ನೆಡೆಗೆ ಸೆಳೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ!! ಅಮೆರಿಕದ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರಿಂದ ಹಿಡಿದು ಗೃಹಿಣಿಯರು, ವಿದ್ಯಾರ್ಥಿಗಳವರೆಗೆ ಎಲ್ಲರೂ ತಮ್ಮ ಒತ್ತಡವನ್ನು ನಿಭಾಯಿಸಲು ಯೋಗದ ಮೊರೆ ಹೋಗಿರುವುದೇ ಇದಕ್ಕೆ ಸಾಕ್ಷಿ.

“ಮಿಷೆಲ್ ಅವರು 50 ವರ್ಷದ ನಂತರವೂ ಆಕರ್ಷಕ ಮೈಕಟ್ಟು ಹೊಂದಿರಲು ಮುಖ್ಯ ಕಾರಣವೆಂದರೆ ಪ್ರತಿ ನಿತ್ಯ ಅವರು ಮಾಡುವ ಯೋಗ” ಎಂದು ನಿಯತಕಾಲಿಕವೊಂದು ವರದಿ ಮಾಡಿದೆ. ಅಷ್ಟೇ ಅಲ್ಲದೇ ಅಮೆರಿಕದಲ್ಲಿ ಅಂದಾಜು ಎರಡು ಕೋಟಿ ಜನ ಯೋಗ ರೂಢಿಸಿಕೊಂಡಿದ್ದಾರೆ. ಇದು ಸುಮಾರು ರೂ. 1.67 ಲಕ್ಷ ಕೋಟಿ (27 ಶತಕೋಟಿ ಅಮೆರಿಕ ಡಾಲರ್) ಮೌಲ್ಯದ ಉದ್ಯಮಕ್ಕೆ ದಾರಿಮಾಡಿಕೊಟ್ಟಿದೆ.

ರಷ್ಯಾದ ಖ್ಯಾತ ನಟಿ ಅನ್ನಾ ಅರ್ದೋವಾ ಆಯ್ದುಕೊಂಡಿರುವ ಸ್ಥಳ ಕರ್ನಾಟಕದ ಉಡುಪಿ!!

ಆದರೆ ಇದೀಗ ಅದ್ಬುತ ನಟನೆಯಿಂದ ಖ್ಯಾತಿ ಪಡೆದಿರುವ ರಷ್ಯಾದ ಖ್ಯಾತ ನಟಿ ಅನ್ನಾ ಅರ್ದೋವಾ ಅವರು ತಮ್ಮ ಮಾನಸಿಕ ಸಮಸ್ಯೆಯನ್ನು ಗುಣಪಡಿಸಿಕೊಳ್ಳೋದಕ್ಕೆ ಭಾರತದ ಆಯುರ್ವೇದ ಹಾಗೂ ಯೋಗದ ಮೊರೆ ಹೋಗಿದ್ದಾರೆ. ಅದರಲ್ಲೂ ಅವರು ಆಯ್ದುಕೊಂಡಿರುವ ಸ್ಥಳ ಕರ್ನಾಟಕದಲ್ಲಿರುವ ದೇವಳ ನಗರಿ ಎಂದು ಖ್ಯಾತಿಯಾಗಿರುವ ಉಡುಪಿಯಲ್ಲಿ ಎಂಬುದು ವಿಶೇಷ. ನಟಿ ಅರ್ದೋವಾ ಹಾಸ್ಯ ನಟಿಯಾಗಿದ್ದು, ತೆರೆಯ ಮೇಲೆ ಎಲ್ಲರನ್ನೂ ನಗಿಸುವ ಅರ್ದೋವಾ ತಾವೇ ಖಿನ್ನತೆಗೆ ಒಳಗಾಗಿದ್ದರಂತೆ. ಇದೀಗ ತಮ್ಮ ಮಾನಸಿಕ ಸಮಸ್ಯೆಗೆ ಅವರು ಉಡುಪಿಯ ಗೋಸ್ವಾಲ್ ಪಂಚಕರ್ಮ ಆ್ಯಂಡ್ ಹೆಲ್ತ್‍ನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದು ಉಲ್ಲಸಿತರಾಗಿದ್ದಾರೆ.

ಕಳೆದ ನವೆಂಬರ್ ಕೊನೆಯ ವಾರದಲ್ಲಿ ಅನ್ನಾ ಅವರು ಭಾರತಕ್ಕೆ ಬಂದಿದ್ದು, ಹಾಗಾಗಿ ಅವರಿಗೆ 12 ದಿನಗಳ ಕಾಲ ವಿರೇಚನ ಸಹಿತ ತೆರಪಿಗಳನ್ನು ನೀಡಲಾಗಿದೆ. ಇದರಿಂದ ಅವರು ಇದೀಗ ಹೊಸ ಚೈತನ್ಯ ಪಡೆದಿದ್ದಾರಲ್ಲದೇ ಗೋಸ್ವಾಲ್ ನ ಡಾ. ತನ್ಮಯ ಗೋಸ್ವಾಮಿ ಮಾರ್ಗದರ್ಶನದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗಿದೆ. ಈ ಹಿಂದೆ ರಷ್ಯಾದ ಮಾಸ್ಕೋದಲ್ಲಿ ಗೋಸ್ವಾಮಿ ಅವರು ನೀಡಿದ ಭಾರತೀಯ ಆರ್ಯುವೇದ ಹಾಗೂ ಯೋಗದ ಬಗೆಗಿನ ಉಪನ್ಯಾಸ ಕೇಳಿದ ನಟಿ ಅನ್ನಾ, ಗೋಸ್ವಾಮಿ ಅವರನ್ನು ಮನವಿ ಮಾಡಿಕೊಂಡು ಭಾರತಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ!!

ಯೋಗದ ಬಗ್ಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಗವನ್ನು ಜೀವನದ ಒಂದು ಭಾಗವನ್ನಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯೋಗದಿಂದ ಕೇವಲ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ನಿರಾಳ ನೀಡುವುದು ಎನ್ನುವುದು ಶಿಲ್ಪಾ ಶೆಟ್ಟಿ ಅಭಿಪ್ರಾಯ. ಇನ್ನು ಬಾಲಿವುಡ್ ನ ಮತ್ತೋರ್ವ ಸುಂದರಿ ಲಾರಾ ದತ್, ಕಳೆದ 12 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವುದಲ್ಲದೇ ಯೋಗ ವೈಯಕ್ತಿಕವಾಗಿ ತುಂಬಾ ಸಹಕಾರಿಯಾಗಿದೆಯಂತೆ. ಗರ್ಭಿಣಿ ಹೆಂಗಸರು ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತೆ ಎನ್ನುತ್ತಾರೆ ನಟಿ ಲಾರಾ ದತ್!!

Image result for russian actress anna ardova

ಬಾಲಿವುಡ್ ನ ಇನ್ನೋರ್ವ ನಟಿ ಬಿಪಾಶ ಬಸು ಶಿಲ್ಪಾ ಶೆಟ್ಟಿಯಂತೆ ಈಕೆಗೂ ಕೂಡ ಭಾರತದ ಯೋಗ ಐಕಾನ್. ದೇಹವನ್ನು ಆರೋಗ್ಯವಾಗಿರುವುದರ ಜೊತೆಗೆ ಶಾಂತಿ ಕಾಪಾಡಲು ಯೋಗ ಸಹಕಾರಿಯಂತೆ. ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಅವರಿಗೂ ಕೂಡ ಬಿಪಾಶ ಯೋಗ ಹೇಳಿ ಕೊಡುತ್ತಾರಂತೆ. ಬಾಲಿವುಡ್‍ನ ನಟಿಯಾಗಿರುವ ಮಲೈಕಾ ಅರೋರ ಅವರನ್ನು ನೋಡಿದ್ರೆ 15 ವರ್ಷದ ಮಗುವಿನ ತಾಯಿ ಎನ್ನುವಂತೆ ಕಾಣುವುದಿಲ್ಲ. ಅಷ್ಟರ ಮಟ್ಟಿಗೆ ಯೌವನ ಕಾಪಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಯೋಗ!! ಇವರಷ್ಟೇ ಅಲ್ಲದೇ, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಸೋನಮ್ ಕಪೂರ್, ಬಾಲಿವುಡ್ ನ ಯುವತಾರೆ ಆಲಿಯಾ ಭಟ್ ಹೀಗೆ ಅನೇಕ ನಟ – ನಟಿ ಮಣಿಯರು ಯೋಗದ ಮೊರೆ ಹೋಗಿರುವುದಲ್ಲದೇ ಯೋಗದ ಬಗ್ಗೆ ತಮ್ಮ ಅನಿಸಿಕೆಯನ್ನೂ ವ್ಯಕ್ತಪಡಿಸಿದ್ದಾರೆ.

ಇನ್ನು ತೆರೆಯ ಮೇಲೆ ಎಲ್ಲರನ್ನೂ ನಗಿಸುವ ಹಾಸ್ಯ ನಟಿ ಅನ್ನಾ ಅರ್ದೋವಾ ಖಿನ್ನತೆಗೆ ಒಳಗಾಗಿದ್ದರಿಂದ ಯೋಗಕ್ಕೆ ಮೊರೆ ಹೋಗಿದ್ದು, ಯೋಗ ಮತ್ತು ಆಯುರ್ವೇದದ ಬಗ್ಗೆ ಮಾತನಾಡಿರುವ ಅವರು “ಯಾವುದೇ ಅಡ್ಡ ಪರಿಣಾಮ ಇರದ ಉತ್ತಮ ಚಿಕಿತ್ಸೆ ಇದಾಗಿದೆ. ನಾನು ನಿರಂತರ ಯೋಗ ಅಭ್ಯಾಸ ಮಾಡುತ್ತಿರುತ್ತೇನೆ. ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಈ ಸುಂದರ ನೆನಪುಗಳನ್ನು ನಾನೆಂದಿಗೂ ಮರೆಯುವುದಿಲ್ಲ” ಎಂಬ ಮಾತುಗಳನ್ನಾಡಿದ್ದಾರೆ.

ಯೋಗದ ಗುರಿಗಳು ಆರೋಗ್ಯದ ಸುಧಾರಣೆಯಿಂದ ಹಿಡಿದು ಮೋಕ್ಷವನ್ನು ಸಾಧಿಸುವ ಉದ್ದೇಶಗಳವರೆಗೆ ಬೇರೆ ಬೇರೆಯಾಗಿದೆ. ಹಾಗಾಗಿ ಜೈನಧರ್ಮ ಹಾಗೂ ಅದ್ವೈತ ವೇದಾಂತ ಮತ್ತು ಶೈವಧರ್ಮಗಳ ಅದ್ವೈತ ಪಂಥಗಳಲ್ಲಿ, ಯೋಗದ ಗುರಿಯು ಲೌಕಿಕ ಯಾತನೆ ಮತ್ತು ಹುಟ್ಟುಸಾವುಗಳ ಆವರ್ತನೆ(ಸಂಸಾರ)ಗಳಿಂದ ಬಿಡುಗಡೆಯಾದ ಮೋಕ್ಷವಾಗಿರುತ್ತದೆ, ಆ ಸಂದರ್ಭದಲ್ಲಿ ಪರಮಶ್ರೇಷ್ಠ ಬ್ರಾಹ್ಮಣನಾಗಿ ಗುರುತಿಸಿಕೊಳ್ಳುವ ಸಾಕ್ಷಾತ್ಕಾರ ಸಿಗುತ್ತದೆ ಎಂದೂ ಹೇಳಲಾಗಿದೆ!!

ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವ ವಿಖ್ಯಾತಿ ಮಾಡಿದ ನಂತರ ಅದೆಷ್ಟೋ ಮಂದಿ ಭಾರತೀಯರಲ್ಲದೇ ವಿದೇಶಿಯರನ್ನು ಯೋಗ ತನ್ನತ್ತ ಸೆಳೆದಿರುವುದು ಹೆಮ್ಮೆಯ ವಿಚಾರ!!

– ಅಲೋಖಾ

Tags

Related Articles

Close