ಪ್ರಚಲಿತ

ರಸ್ತೆಬದಿಯಲ್ಲಿರುವ ಮೈಲುಕಲ್ಲುಗಳು ಬಣ್ಣ ಬಣ್ಣಗಳಿಂದ ಕೂಡಿರಲು ಕಾರಣವೇನು ಗೊತ್ತಾ?!

ಪ್ರತಿನಿತ್ಯ ನಾವು ಪ್ರಯಾಣಿಸುವ ಹಾದಿಯಲ್ಲಿ ಮೈಲು ಕಲ್ಲುಗಳನ್ನು ನೋಡುತ್ತೇವೆ!! ದೂರದ ಪ್ರಯಾಣವನ್ನು ಮಾಡುವಾಗ ಬಣ್ಣ ಬಣ್ಣದ ಮೈಲುಗಲ್ಲುಗಳನ್ನು
ಗಮನಿಸುತ್ತೇವೆ ಅಲ್ವೇ?? ಇನ್ನೂ ಕೆಲವರು ಈ ಮೈಲುಗಲ್ಲುಗಳ ಮೇಲೆ ಕುಳಿತು ಪೋಟೋ ಕ್ಲಿಕ್ಕಿಸುವ ಒಂದು ಕ್ರೇಝ್ ಅನ್ನು ಕೂಡ ಹೊಂದಿದ್ದಾರೆ, ಯಾಕೆಂದರೆ ನಾವು ಯಾವ ಊರನ್ನು ತಲುಪಲಿದ್ದೇವೆ ಎನ್ನುವ ದೃಷ್ಟಿಯಿಂದ!!! ಆದರೆ ಮೈಲಿಕಲ್ಲುಗಳು ಬೇರೆ ಬೇರೆ ಬಣ್ಣದಿಂದ ಯಾಕೆ ಕೂಡಿರುತ್ತವೆ ಎಂಬುವುದನ್ನು ನಾವು ಯಾವತ್ತು ಗಮನಿಸುವ ಗೋಜಿಗೆ ಹೋಗಿದ್ದೇ ಇಲ್ಲ!! ಈ ಮೈಲಿಗಲ್ಲುಗಳು ಬಣ್ಣ ಬಣ್ಣಗಳಿಂದ ಯಾಕೆ ಕಂಗೊಳಿಸುತ್ತವೆ ಎನ್ನುವುದನ್ನು ನಾವು ತಿಳಿದುಕೊಂಡಿಲ್ಲ!! ಹಾಗಾದರೆ ಈ ಮೈಲಿಗಲ್ಲುಗಳಲ್ಲಿ ಯಾವೆಲ್ಲಾ ಬಣ್ಣವನ್ನು ಬಳಸುತ್ತಾರೆ ಎಂಬುವುದು ನಿಮಗೆ ತಿಳಿದಿದೆಯೇ??

ಈ ಮೈಲಿಕಲ್ಲುಗಳು ಹಸಿರು, ಹಳದಿ, ಕಪ್ಪು, ಬಿಳಿ ಬಣ್ಣಗಳನ್ನು ಹೊಂದಿರುತ್ತದೆ. ಆದರೆ ಈ ಬೇರೆ ಬೇರೆ ಬಣ್ಣಗಳಲ್ಲಿರುವ ಈ ಮೈಲುಕಲ್ಲುಗಳಲ್ಲಿಯೂ ಒಂದೊಂದು
ವಿಶೇಷವಾದ ಅರ್ಥವು ಅಡಕವಾಗಿದೆ. ಪ್ರತಿ ಮೈಲುಗಲ್ಲುಗಳಲ್ಲಿರುವ ಪ್ರತಿ ಬಣ್ಣವೂ ಒಂದೊಂದು ವಿಷಯಗಳನ್ನು ಹೊಂದಿದೆ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇಬೇಕು!! ಯಾಕೆಂದರೆ ಈ ಬಣ್ಣಗಳ ಹಿಂದೆ ಅದರದೇ ಆದ ಕಾರಣಗಳಿದ್ದು, ಅವುಗಳು ಪ್ರಯಾಣಿಕರಿಗೆ ಹೆಚ್ಚಿನ ಉಪಕಾರವನ್ನು ಮಾಡುತ್ತದೆ. ಅಷ್ಟೇ ಅಲ್ಲದೇ ಈ ಕಲ್ಲಿನಲ್ಲಿರುವ ಬಣ್ಣದ ಆಧಾರದ ಮೇಲೆ ಯಾವ ಅರ್ಥವನ್ನು ಸೂಚಿಸುತ್ತದೆ ಅನ್ನೋದನ್ನು ಸರಕಾರ ಅಧಿಕೃತವಾಗಿ ತಿಳಿಸಿಕೊಟ್ಟಿದೆ!!! ಮೈಲುಕಲ್ಲು ಬೇರೆ ಬೇರೆ ಬಣ್ಣಗಳಿಂದ ಕೂಡಿರಲು ಕಾರಣವಾದರೂ ಏನು ಎಂಬುವುದು ನಿಮಗೆ ತಿಳಿದಿದೆಯೇ?? ಮೈಲಿಕಲ್ಲುಗಳು ಬೇರೆ ಬೇರೆ ಬಣ್ಣದಿಂದ ಕೂಡಿರುವುದಾದರೂ ಯಾಕೆ ಎಂಬುವುದಾದರೂ ಗೊತ್ತಾ?? ಹಾಗಾದರೆ ಇಲ್ಲಿದೆ ಮೈಲುಕಲ್ಲಿನ ಒಳಾರ್ಥ;

ಬಿಳಿ ಮತ್ತು ಹಳದಿ ಬಣ್ಣದ ಕಲ್ಲು ಯಾವ ಅರ್ಥವನ್ನು ಸೂಚಿಸುತ್ತದೆ ಗೊತ್ತೇ??

ನಾವು ರಸ್ತೆಯಲ್ಲಿ ಪ್ರಯಾಣಿಸುವ ವೇಳೆ ಮೈಲುಕಲ್ಲುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುವುದಿಲ್ಲ. ಅಷ್ಟೇ ಅಲ್ಲದೇ, ಕಲರ್ ಕಲರ್ ಮೈಲುಕಲ್ಲುಗಳನ್ನು ಯಾಕೆ
ಹಾಕುತ್ತಾರೆ ಎನ್ನುವ ಗೋಜಿಗೂ ನಾವು ಹೋಗುವುದಿಲ್ಲ!! ಆದರೆ ಸಾಮಾನ್ಯವಾಗಿ ಕಿಲೋಮೀಟರ್ ಗಳನ್ನು ತಿಳಿಯಲು ಈ ಕಲ್ಲುಗಳನ್ನು ಹಾಕುತ್ತಾರೆ ಎಂದು ತಿಳಿದರೆ ಅದು ನಮ್ಮ ತಪ್ಪು!!

ಪ್ರಯಾಣದಲ್ಲಿ ಕಿಲೋ ಮೀಟರನ್ನು ತಿಳಿಸುವ ರಸ್ತೆ ಬದಿಯ ಮೈಲುಗಲ್ಲಿನಲ್ಲಿರುವ ಬಣ್ಣ ಬಿಳಿ ಮತ್ತು ಹಳದಿ ಆಗಿದ್ದರೆ, ಬಿಳಿ ಬಣ್ಣವು ಕಿಲೋಮೀಟರ್ ಬಗ್ಗೆ ತಿಳಿಸುತ್ತದೆ ಆದರೆ ಹಳದಿ ಬಣ್ಣವು ರಾಷ್ಟ್ರೀಯ ಹೆದ್ದಾರಿ ಎನ್ನುವ ಅರ್ಥವನ್ನು ಸೂಚಿಸುತ್ತದೆ. ಹಾಗಾಗಿ ಬಿಳಿ ಮತ್ತು ಹಳದಿ ಬಣ್ಣಗಳಲ್ಲಿರುವ ಮೈಲುಕಲ್ಲನ್ನು ಕಂಡರೆ ಅದು ರಾಷ್ಟ್ರೀಯ ಹೆದ್ದಾರಿ ಎಂದರ್ಥ. ಅಷ್ಟೇ ಅಲ್ಲದೇ, ಈ ಬಣ್ಣವನ್ನು ಕೇವಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಬಳಸುತ್ತಾರೆ!!

ಬಿಳಿ ಮತ್ತು ನೀಲಿಬಣ್ಣ ಹಾಗೂ ಕಪ್ಪು ಬಣ್ಣದ ಕಲ್ಲುಗಳು ಇದ್ದರೆ ಏನರ್ಥ ??

ನೀವು ಗುರುತು ಪರಿಚಯವಿಲ್ಲದ ದೂರದ ಊರಿಗೆ ಹೋದಾಗ ಅನೇಕ ಬಾರಿ ನೀವು ಎಲ್ಲಿದ್ದೀರಿ?? ನಿಮ್ಮ ವಾಹನ ಯಾವ ಕಡೆಗೆ ಹೋಗುತ್ತಿದೆ ಎಂದು ತಿಳಿಯದೇ ಪಜೀತಿಗೆ ಬಿದ್ದಾಗ ಅದೇ ರಸ್ತೆಯಲ್ಲಿ ನಿಮಗೆ ಬಿಳಿ ನೀಲಿ ಕಪ್ಪು ಬಣ್ಣದ ಮೈಲಿಗಲ್ಲು ಕಾಣಿಸಿಕೊಂಡರೆ ನೀವು ನಗರಕ್ಕೆ ಸಮೀಪದಲ್ಲಿದ್ದೀರಿ ಎಂದು ಅರ್ಥ. ಸಿಟಿ ಎಡೆಗೆ ಪ್ರಯಾಣ ಮಾಡುತ್ತಿದ್ದೀರಿ ಎಂದು ಸೂಚಿಸುವ ಈ ಬಣ್ಣವು ಜಿಲ್ಲಾಡಳಿತದ ಅಧೀನದಲ್ಲಿರುವ ರಸ್ತೆಯಾಗಿರುತ್ತದೆ!!

ಹಸಿರು-ಬಿಳಿ ಬಣ್ಣವನ್ನು ಹೊಂದಿರುವ ಕಲ್ಲುಗಳು:

ಮೇಲೆ ತಿಳಿಸಿದಂತೆ ಬಿಳಿ ಬಣ್ಣವು ಕಿಲೋಮೀಟರ್ ಸೂಚಿಸುವ ಬಣ್ಣವಾಗಿದೆ. ಇದರ ಜೊತೆಗೆ ಹಸಿರು ಬಣ್ಣವಿದ್ದರೆ ರಾಜ್ಯ ಹೆದ್ದಾರಿ ಎಂದರ್ಥ!! ಹಾಗಾಗಿ ರಸ್ತೆ ಬದಿಯ ಮೈಲಿಗಲ್ಲು ಹಸಿರು ಬಿಳಿ ಬಣ್ಣದಿಂದ ಕೂಡಿದ್ದರೆ ನೀವು, ರಾಜ್ಯ ಹೆದ್ದಾರಿಯಲ್ಲಿದ್ದೀರಿ ಎಂದು ಅರ್ಥ!! ಹಾಗಾಗಿ ಬಿಳಿ ಮತ್ತು ಹಸಿರು ಬಣ್ಣದ ಕಲ್ಲುಗಳನ್ನು ಕೇವಲ ರಾಜ್ಯ ಹೆದ್ದಾರಿಯಲ್ಲಿ ಬಳಸುತ್ತಾರೆ.

ಕಿತ್ತಳೆ-ಬಿಳಿ ಬಣ್ಣದ ಕಲ್ಲುಗಳು ಏನ್ನನ್ನು ಸೂಚಿಸುತ್ತದೆ!!

ರಸ್ತೆ ಬದಿಯ ಮೈಲಿಕಲ್ಲು ಕಿತ್ತಳೆ ಮತ್ತು ಬಿಳಿ ಬಣ್ಣದಿಂದ ಕೂಡಿದ್ದರೆ ನೀವು ಆ ರಸ್ತೆ ಪ್ರಧಾನಿ ಗ್ರಾಮ ರಸ್ತೆ ಯೋಜನೆಯಡಿಯಲ್ಲಿ ನಿರ್ಮಾಣವಾಗಿದೆ ಎಂದು
ತಿಳಿದುಕೊಳ್ಳಿ. ಯಾಕೆಂದರೆ ಈ ರೀತಿಯ ಯಾವುದೇ ಮೈಲು ಕಲ್ಲು ಕಂಡರೆ ನೀವು ಯಾವುದೋ ಒಂದು ಹಳ್ಳಿ ಪ್ರದೇಶದ ಕಡೆ ಪ್ರಯಾಣಿಸುತ್ತಿದ್ದೀರಿ ಎಂದು
ತಿಳಿಯಬೇಕಾಗಿದೆ. ಯಾಕೆಂದರೆ ಇದನ್ನು ಹಳ್ಳಿ ಪ್ರದೇಶಗಳಲ್ಲಿ ಮಾತ್ರ ಬಳಸುತ್ತಾರೆ.

ಹಾಗಾದರೆ ಇನ್ನು ಮುಂದೆ ಯಾವುದೇ ರಸ್ತೆ ಬದಿಯಲ್ಲಿರುವ ಮೈಲುಕಲ್ಲುಗಳು ಕೇವಲ ಕಿಲೋಮೀಟರ್ ಗಳನ್ನು ತೋರಿಸಲು ನೆಟ್ಟಿದ್ದಾರೆ ಎಂದು ತಿಳಿದರೆ ಅದು ನಮ್ಮ ತಪ್ಪಾಗುತ್ತದೆ!! ಹಾಗಾಗಿ ಪ್ರತಿ ಬಣ್ಣದ ಕಲ್ಲುಗಳು ಆಯಾಯ ಪ್ರದೇಶಕ್ಕೆ ಸೀಮಿತವಾಗಿದ್ದು, ನಾವು ಯಾವ ಪ್ರದೇಶದೆಡೆಗೆ ಪ್ರಯಾಣವನ್ನು ಬೆಳೆಸುತ್ತಿದ್ದೇವೆ ಎನ್ನುವುದನ್ನು ಸೂಚಿಸುತ್ತದೆ ಎಂಬುವುದನ್ನು ನಾವು ಯಾವತ್ತು ಮರೆಯಬಾರದು!!

– ಅಲೋಖಾ

Tags

Related Articles

Close