ಪ್ರಚಲಿತ

ರಾಜ್ಯವೇ ಬಂದಾದರೂ ಆ ಎರಡು ಜಿಲ್ಲೆಗಳು ಸಾಮಾನ್ಯವಾಗಿರುತ್ತದೆ!! ಕರವೇ ತುರವೇ ಕಚ್ಚಾಡಿಕೊಂಡಿದ್ದು ಯಾಕೆ ಗೊತ್ತಾ!?

ಕರ್ನಾಟಕದಲ್ಲಿ ಮಹಾದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ. ರಾಜಕೀಯ ಪ್ರೇರಿತ ಈ ಬಂದ್ ಗೆ ಕೆಲ ರೋಲ್ ಕಾಲ್ಡ್ ಸಂಘಟನೆಗಳು ಬೆಂಬಲ ಸೂಚಿಸಿರುವುದರಿಂದ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಕರ್ನಾಟಕ ಮತ್ತು ಕನ್ನಡದ ಪರ ಎಂದು ಬೊಗಳೆ ಬಿಡುತ್ತಿರುವ ಕೆಲ‌ ಸಂಘಟನೆಗಳು ರಾಜ್ಯ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಜನರನ್ನು ಮೋಸಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ…!ದ
ಮಹಾದಾಯಿ ವಿಚಾರವಾಗಿ ರಾಜ್ಯ ಸರಕಾರ ಯಾವುದೇ ದಿಟ್ಟ ಕ್ರಮಗಳನ್ನು ಕೈಗೊಳ್ಲುತ್ತಿಲ್ಲ ಮತ್ತು ತನ್ನ ವೈಫಲ್ಯವನ್ನು ಮರೆಮಾಚಲು ಕೇಂದ್ರದ ಮೋದಿ ಸರಕಾರದತ್ತ ಬೆರಳು ಮಾಡಿ ಮಾತನಾಡುತ್ತಿದೆ. ಗೋವಾ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಮಹಾದಾಯಿ ನೀರಿನ ಕುರಿತಾದ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಪ್ರಯತ್ನ ನಡೆಸುತ್ತಿಲ್ಲ,ಬದಲಾಗಿ ಸ್ವತಃ ತಾನೇ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕ ಪ್ರವಾಸ ಮಾಡಲಿರುವುದರಿಂದ ‘ಬಂದ್’ ನೆಪದಲ್ಲಿ ಈ ಕಾಂಗ್ರೆಸ್ ರಾಜಕೀಯ ಲಾಭ ಗಳಿಸುವ ಯತ್ನ ನಡೆಸುತ್ತಿದೆ…! ಯಾಕೆಂದರೆ ಮೋದಿ – ಅಮಿತ್ ಷಾ ಮೋಡಿಗೆ ಈಗಾಗಲೇ ದೇಶದಲ್ಲಿ ನೆಲ ಕಚ್ಚಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕರ್ನಾಟಕದಲ್ಲೂ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದ ಇಂತಹ ಪ್ರಯತ್ನ ನಡೆಸುತ್ತಿದೆ.

ಅಮಿತ್ ಷಾ ಮೈಸೂರಿನಲ್ಲಿ ನಡೆಯುವ ಯಡಿಯೂರಪ್ಪ ನವರ ನೇತ್ರತ್ವದ ‘ಪರಿವರ್ತನಾ ಯಾತ್ರೆ’ ಯಲ್ಲಿ ಭಾಗವಹಿಸಲಿದ್ದು ಮುಂದಿನ ಕರ್ನಾಟಕ ಚುನಾವಣೆಯ ಹಿತದ್ರಷ್ಠಿಯಿಂದ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟುದ್ದಾರೆ. ಹೀಗಾಗಿ ಅಮಿತ್ ಷಾ ಕರ್ನಾಟಕ ಭೇಟಿಗೆ ಹೆದರಿದ ಕಾಂಗ್ರೆಸ್ ತನ್ನ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದೆ.

ಈಗಾಗಲೇ ಸಾವಿರಾರು ಕೋಟಿ ಸಾಲಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರಕಾರ ಇಂತಹ ಬಂದ್ ಗೆ ಪ್ರೇರೇಪಿಸಿ ಕರ್ನಾಟಕದ ಜನತೆಯನ್ನು ದಿವಾಳಿ ಮಾಡಲು ಹೊರಟಿದೆ.

ಇಡೀ ರಾಜ್ಯವೇ ಹೊತ್ತಿ ಉರಿದರೂ ತುಳುನಾಡು ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಮಾತ್ರ ತಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬಂತೆ ತಮ್ಮ ದಿನನಿತ್ಯದ ಜೀವನವನ್ನು ಎಂದಿನಂತೆ ಸಾಗಿಸುತ್ತಾರೆ…! ಹೌದು, ಇಡೀ ದೇಶದಲ್ಲೇ ವಿಭಿನ್ನತೆಗೆ ಹೆಸರುವಾಸಿಯಾದ ಕರಾವಳಿಯಲ್ಲಿ ಕರ್ನಾಟಕ ಬಂದ್ ನ ಬಿಸಿ ತಟ್ಟುವುದಿಲ್ಲ.

“ಬುದ್ಧಿವಂತರ ಜಿಲ್ಲೆ” ಎಂದು ಹೆಸರುವಾಸಿಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಯ ಜನತೆ ತಮ್ಮ ನಾಡಿನ ಆಚಾರ ವಿಚಾರ ಇಲ್ಲಿನ‌ ಸಂಸ್ಕೃತಿ ಸಂಪ್ರದಾಯಗಳಿಗೆ ಯಾವತ್ತಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ, ಮತ್ತು ತಮ್ಮ ನಾಡಿಗೆ ತೊಂದರೆ ಅಪಮಾನವಾದಾಗ ಜಾತಿ ಧರ್ಮ ಭೇದ ಮರೆತು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿಯುತ್ತಾರೆ.

ಕರಾವಳಿಯ ಜೀವಾಳವಾಗಿರುವ ‘ನೇತ್ರಾವತಿ’ ನದಿಯ ಉಳಿವಿಗಾಗಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಒಟ್ಟಾಗಿ ಬೀದಿಗಿಳಿದು ಹೋರಾಡುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದರು.ಕರಾವಳಿಯ ಜನತೆಯ ಈ ಒಗ್ಗಟ್ಟು ನೋಡಿ ಸ್ವತಃ ಸರ್ಕಾರವೇ ಕಂಗಾಲಾಗಿತ್ತು.
ಇದೇ ರೀತಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ‘ಕಂಬಳ’ದ ಉಳಿವಿಗಾಗಿ ಇಡೀ ಉಡುಪಿ ದಕ್ಷಿಣ ಕನ್ನಡದ ಜನತೆ ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದ್ದಾರೆ ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದ್ದರಿಂದಲೇ ಕರಾವಳಿಯ ಜನತೆ ತಾವು ಎಲ್ಲರಿಗಿಂತ ವಿಭಿನ್ನ‌ ಎಂದು ಸಾರುತ್ತಿದ್ದಾರೆ.
ತಮ್ಮ ಸಂಪ್ರದಾಯವನ್ನು ಗೌರವಿಸುವ ಪ್ರತಿಯೊಬ್ಬರಿಗೂ ಆತಿಥ್ಯ ನೀಡಿ ಗೌರವಿಸುತ್ತಾರೆ ಮತ್ತು ತಮ್ಮ ನಾಡಿಗೆ ತಮ್ಮ ಭಾಷೆಗೆ ಅವಮಾನ ಮಾಡುವವರಿಗೆ ಯಾವತ್ತಿಗೂ ಬೆಲೆ ಕೊಡುವುದಿಲ್ಲ…!

ಆದ್ದರಿಂದಲೇ ಮಹಾದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿದ ಕನ್ನಡ ಪರ ಸಂಘಟನೆಗಳ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಜನತೆ. ಕರಾವಳಿಯ ಜೀವನದಿಯಾಗಿರುವ ನಸಂಘಟನೆಗಳುಯ ಉಳಿವಿಗಾಗಿ ಯಾವುದೇ ಕರ್ನಾಟಕ ಪರ ಸಂಘಟನೆಗಳು ಬೆಂಬಲ ನೀಡಲಿಲ್ಲ.ಅದೇ ಕಾರಣಕ್ಕಾಗಿ ಮಹಾದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿದರೂ ಕರಾವಳಿಯಲ್ಲಿ ಮಾತ್ರ ತುಳುಪರ ಸಂಘಟನೆಗಳು ಇದ್ಯಾವುದಕ್ಕೂ ಕ್ಯಾರೇ ಅನ್ನದೆ ಬಂದ್ ಗೆ ಬೆಂಬಲ ಸೂಚಿಸಲಿಲ್ಲ.

ಇದರ ಮಧ್ಯೆ ಕರಾವಳಿಯನ್ನೂ ಬಂದ್ ಮಾಡಿಯೇ ತೀರುತ್ತೇವೆ ಎಂದು ಸವಾಲೆಸೆದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಮಂಗಳೂರಿನಲ್ಲಿ ಜನರೇ ಓಡಿಸಿದ್ದು ಮತ್ತೊಮ್ಮೆ ಕನ್ನಡ ಪರ ಸಂಘಟನೆಗಳಿಗೆ ಮುಜುಗರ ಪಡುವಂತೆ ಮಾಡಿದೆ. ಮಂಗಳೂರಿನ ಕೆಲ‌ ಪ್ರದೇಶಗಳಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಯತ್ನಿಸಿದಾಗ ಸ್ಥಳೀಯರೇ ಸೇರಿ ಕಾರ್ಯಕರ್ತರ ಬೆವರಿಳಿಸಿದರು.
ಕರಾವಳಿಯಲ್ಲೂ ತಮ್ಮ ದರ್ಪ ತೋರಲು ಬಂದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಮುಗಿಬಿದ್ದ ಕರಾವಳಿಗರಿಗೆ ಹೆದರಿ ಕಾರ್ಯಕರ್ತರು ಅಲ್ಲಿಂದ ಕಾಲ್ಕಿತ್ತರು.

ಈ ಮೂಲಕ ರಾಜಕೀಯ ಪ್ರೇರಿತವಾಗಿ ನಡೆಯುತ್ತಿರುವ ಈ ಬಂದ್ ಗೆ ತಮ್ಮ ಯಾವುದೇ ಬೆಂಬಲ ಇಲ್ಲ‌ ಎಂಬುದನ್ನು ಸ್ಪಷ್ಟಪಡಿಸಿದರು…! ಕಾಂಗ್ರೆಸ್ ಪ್ರೇರಿತ ಕನ್ನಡ ಸಂಘಟನೆಗಳು ಮಹಾದಾಯಿ ವಿಚಾರವಾಗಿ ನೇರವಾಗಿ ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿದೆ. ಆದ್ದರಿಂದಲೇ ಕರಾವಳಿಯಲ್ಲಿ ಕಾಂಗ್ರೆಸ್ ಪ್ರೇರಿತ ತ ಕನ್ನಡ ಸಂಘಟನೆಗಳ ಈ‌ ಬಂದ್ ಗೆ ಯಾವುದೇ ಬೆಂಬಲ ಸಿಗಲಿಲ್ಲ.

ತುಳುನಾಡು ಪ್ರತ್ಯೇಕವಾದ ರಾಜ್ಯ ಆಗಲೇಬೇಕು ಎಂದು ಕರಾವಳಿಯ ಜನತೆ ಹಲವಾರು ಬಾರಿ ಸರಕಾರಕ್ಕೆ ಮನವಿ ಮತ್ತು ಹೋರಾಟ ನಡೆಸುತ್ತಲೇ ಬಂದಿದ್ದರೂ ಈ ಬಗ್ಗೆ ಸರಕಾರ ಯಾವುದೇ ಒಂದು ಕ್ರಮ ಕೈಗೊಳ್ಳದೇ ಇರುವುದರಿಂದ ಕರಾವಳಿಗೆ ಕರ್ನಾಟಕ ಬಂದ್ ಬಿಸಿ ತಟ್ಟಲಿಲ್ಲ…!

–ಅರ್ಜುನ್

Tags

Related Articles

Close