ಪ್ರಚಲಿತ

ರಾಜ್ಯ ವಿಧಾನಸಭೆ ಚುನಾವಣೆಗೆ ರಾಜಕೀಯ ಚಾಣಕ್ಯನ ರಣತಂತ್ರ.!! ಬಹುತೇಕ ಟಿಕೆಟ್ ಯಾರಿಗೆ ಮೀಸಲಿಟ್ಟಿದ್ದಾರೆ ಗೊತ್ತೇ…!?

ಭಾರತದ ಪ್ರತೀ ರಾಜ್ಯದಲ್ಲೂ ಕೇಸರಿ ಪತಾಕೆ ಹಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಗುರಿ ಹೊಂದಿರುವ ಮೋದಿ ಪ್ರತೀ ರಾಜ್ಯದ ಚುನಾವಣೆಯಲ್ಲಿ ಗೆದ್ದು ತನ್ನ ಗುರಿ ಸಾಧಿಸುವತ್ತ ಸಾಗಿದ್ದಾರೆ. ಪ್ರತೀ ರಾಜ್ಯದ ಚುನಾವಣೆಯಲ್ಲೂ ಮ್ಯಾಜಿಕ್ ಮಾಡುತ್ತಿರುವ ಮೋದಿ ಒಂದೊಂದೆ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಾರೆ.

ಈ ಎಲ್ಲಾ ತಂತ್ರಗಳನ್ನು ಹೂಡಿ ಎಲ್ಲಾ ರಾಜ್ಯಗಳಲ್ಲೂ ಕೇಸರಿ ಪತಾಕೆ ಹಾರಿಸುವ ಜವಾಬ್ದಾರಿ ಹೊತ್ತಿರುವವರು “ರಾಜಕೀಯ ಚಾಣಕ್ಯ ಅಮಿತ್ ಷಾ”. ಹೌದು, ಕಾಂಗ್ರೆಸ್ ಮುಕ್ತ ಭಾರತದ ಗುರಿ ತಲುಪಲು ಅಮಿತ್ ಷಾ ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ತನ್ನ ಸೈನ್ಯದ ಜೊತೆ ದಂಡೆತ್ತಿಹೋಗಿ ಕಾಂಗ್ರೆಸ್ ನ್ನು ಧೂಳಿಪಟ ಮಾಡಿ ಬಿಟ್ಟಿದ್ದಾರೆ.
ಅಮಿತ್ ಷಾ ರವರ ರಾಜಕೀಯ ತಂತ್ರಕ್ಕೆ ಕಾಂಗ್ರೆಸ್ ತತ್ತರಿಸಿಹೋಗಿದೆ. ಚುನಾವಣೆ ನಡೆದ ಎಲ್ಲಾ ರಾಜ್ಯಗಳಲ್ಲೂ ಮಕಾಡೆ ಮಲಗಿರುವ ಕಾಂಗ್ರೆಸ್ ಮೇಲೆಳಲಾಗದ ಸ್ಥಿತಿಗೆ ತಲುಪಿದೆ.

ಮುಂದಿನ ಚುನಾವಣಾ ದ್ರಷ್ಠಿಯಿಂದ ಕರ್ನಾಟಕದ ಮೇಲೆ‌‌ ಕಣ್ಣಿಟ್ಟಿರುವ ರಾಜಕೀಯ ಚಾಣಕ್ಯ ಅಮಿತ್ ಷಾ ಕರ್ನಾಟಕದಲ್ಲೂ ಕಾಂಗ್ರೆಸ್ ನ್ನು ಕಿತ್ತೊಗೆಯಲು ತಂತ್ರ ಹೂಡಿದ್ದಾರೆ…!

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲಲೇಬೇಕು.ಅದಕ್ಕಾಗಿ ಎಲ್ಲಾ ತಯಾರಿಗಳು ಈಗಿನಿಂದಲೇ ಮಾಡಿಕೊಳ್ಳಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ಆಜ್ಞೆ ನೀಡಿ ಕೆಲವು ತಿಂಗಳುಗಳು ಕಳೆದಿವೆ.
ಈಗ ಸ್ವತಃ ತಾವೇ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ತಯಾರಿಯನ್ನು ಗಮನಿಸುತ್ತಿದ್ದಾರೆ.

ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ರಾಜ್ಯ ಬಿಜೆಪಿ ನಾಯಕರು ಮುಂಬರುವ ಚುನಾವಣೆಗೆ ತಯಾರಿ ನಡೆಸುತ್ತಿದ್ದರೆ ಇತ್ತ ಕಾಂಗ್ರೆಸಿಗರು ಕಂಗಾಲಾಗಿದ್ದಾರೆ…!

ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಬಗ್ಗೆ ಅಮಿತ್ ಷಾ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಈಗಾಗಲೇ ಈ ಬಗ್ಗೆ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

ಒಂದಲ್ಲ ಎರಡಲ್ಲ, ಮೂರು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಅಮಿತ್ ಷಾ ಸಿದ್ಧತೆ ನಡೆಸುತ್ತಿದ್ದಾರೆ.
ರಾಜ್ಯದ ಯಾವ ಕ್ಷೇತ್ರದಲ್ಲೂ ಟಿಕೆಟ್ ವಿಚಾರಕ್ಕೆ ಗೊಂದಲ ಉಂಟಾಗಿ ,ಅದರಿಂದ ಪಕ್ಷಕ್ಕೆ ಚುನಾವಣೆ ಸಂದರ್ಭದಲ್ಲಿ ತೊಂದರೆ ಉಂಟಾಗಬಾರದು ಎಂಬ ಲೆಕ್ಕಾಚಾರ ಹಾಕಿರುವ ಅಮಿತ್ ಷಾ ಇದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಮೊದಲು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ನಿರ್ಧರಿಸಿದೆ.
ವಲಸೆ ಬಂದ ನಾಯಕರಿಗೆ ,ಸಂಸದರ ಅಥವಾ ವಿಧಾನಪರಿಷತ್ ಸದಸ್ಯರಿಗೆ ಟಿಕೆಟ್ ನೀಡುವ ಕುರಿತು ಪಕ್ಷ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಟಿಕೆಟ್ ಆಕಾಂಕ್ಷಿ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಸಹ ಅಮಿತ್ ಷಾ ಎರಡು ಬಾರಿ ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ “ಚುನಾವಣಾ ದ್ರಷ್ಠಿಯಿಂದ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಖಡಕ್ ಆದೇಶ” ನೀಡಿದ್ದರು.ಆದ್ದರಿಂದ ಪಕ್ಷದ ಯಾವ ನಾಯಕರೂ ಬಹಿರಂಗವಾಗಿ ಹೇಳಿಕೆ ಕೊಡುತ್ತಿಲ್ಲ.

ರಾಜ್ಯದಲ್ಲಿ ಸಂಚಲನ ಮೂಡಿಸಿದ ಯಡಿಯೂರಪ್ಪ ನೇತ್ರತ್ವದ “ನವ ಕರ್ನಾಟಕ ಪರಿವರ್ತನಾ ಯಾತ್ರೆ” ಯಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಬಾರದು ಎಂದು ಅಮಿಶ್ ಷಾ ಯಡಿಯೂರಪ್ಪ ಸೇರಿದಂತೆ ಇತರ ನಾಯಕರಿಗೂ ಸೂಚನೆ ನೀಡಿದ್ದರಿಂದ ಎಲ್ಲೂ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿಲ್ಲ.

ಹಾಲಿ ಶಾಸಕರು ,ಹೊಸತಾಗಿ ಪಕ್ಷಕ್ಕೆ ಸೇರಿದವರು , ಪರಿಷತ್ ಮತ್ತು ಸಂಸತ್ ಸದಸ್ಯರು ಹೀಗೆ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಮೊದಲು ಹಾಲಿ ಶಾಸಕರು ಇರುವ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಮುಂದಿನ ಚುನಾವಣೆಯಲ್ಲಿ ಸ್ಥಳೀಯವಾಗಿ ವರ್ಚಸ್ಸು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲು ತೀರ್ಮಾನಿಸಿರುವ ಅಮಿತ್ ಷಾ ರಾಜ್ಯದ 140ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡುವ ಇಂಗಿತವನ್ನು ರಾಜ್ಯ ಆರ್ ಎಸ್ ಎಸ್ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ…!

ರಾಜಕೀಯ ಚಾಣಕ್ಯನ ಈ ನಿರ್ಧಾರದಿಂದ ಈಗಾಗಲೇ ‌ಹಾಲಿ ಹಾಗು ಮಾಜಿ ಶಾಸಕರಿಗೆ ನಡುಕ ಉಂಟಾಗಿದೆ. ಸ್ಥಳೀಯವಾಗಿ ವರ್ಚಸ್ಸು ಕಳೆದುಕೊಂಡಿರುವ ಮತ್ತು ಇತರ ಪಕ್ಷಗಳ ಜೊತೆ ಹೊಂದಾಣಿಕೆಯ ನೀತಿ ಅನುಸರಿಸುವ ಹಳಬರನ್ನು ಬದಲಾಯಿಸಿ ಶೇ 60ರಷ್ಟು ಹೊಸ ಮುಖಗಳಿಗೆ ಚುನಾವಣೆ ಟಿಕೆಟ್ ನೀಡುವುದಾಗಿ ಷಾ ಘೋಷಿಸಿದ್ದಾರೆ…!

ಆ ಮೂಲಕ ಉತ್ತರ ಪ್ರದೇಶದಲ್ಲಿ ಅನುಸರಿಸಿದ ನೀತಿಯನ್ನೇ ಕರ್ನಾಟಕದಲ್ಲೂ ಜಾರಿಗೊಳಿಸಿ ಕರ್ನಾಟಕದಲ್ಲೂ ಕೇಸರಿ ಪತಾಕೆ ಹಾರಿಸಲು ತಯಾರಾಗಿದ್ದಾರೆ. ಎರಡು ಸಮೀಕ್ಷೆಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ನಡೆಸಲಾಗುತ್ತಿದ್ದು ನಂತರ ಯಾರು ಅಭ್ಯರ್ಥಿ? ಎಂದು ಅಂತಿಮಗೊಳಿಸಲಾಗುತ್ತದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ…!

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಮೊದಲೇ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಗೊಂದಲ ನಿವಾರಿಸಲು ಬಿಜೆಪಿ ನಿರ್ಧರಿಸಿದೆ. ಫೈನಲ್ ಆಗಿ ಅಭ್ಯರ್ಥಿಗಳ ಹೆಸರು ಹೊರಬೀಳುತ್ತಿದ್ದಂತೆ ಅವರು ಅಧಿಕೃತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.

ಈ ಮೂಲಕ ಕರ್ನಾಟಕದಲ್ಲೂ ಕಾಂಗ್ರೆಸ್ ನ್ನು ಪಟ್ಟದಿಂದ ಇಳಿಸುವ ಯೋಜನೆಯನ್ನು ಹಾಕಿರುವ “ರಾಜಕೀಯ ಚಾಣಕ್ಯ” ಮತ್ತೊಂದು ದೊಡ್ಡ ರಾಜ್ಯವನ್ನು ಭಾರತೀಯ ಜನತಾ ಪಾರ್ಟಿಯ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ಹೂಡಿದ್ದಾರೆ…!

ಅಮಿತ್ ಷಾ ರವರ ಈ ರೀತಿಯ ತಂತ್ರಕ್ಕೆ ರಾಜ್ಯ ಬಿಜೆಪಿ ನಾಯಕರು ಚುರುಕಾಗಿದ್ದು ಕಾಂಗ್ರೆಸ್ ಕಂಗಾಲಾಗಿದೆ ಎಂಬೂದರಲ್ಲಿ ಸಂಶಯವಿಲ್ಲ…!!!

-ಅರ್ಜುನ್

Tags

Related Articles

Close