ಪ್ರಚಲಿತ

ರಾಹುಲ್ ಗಾಂಧಿಯ ಟೆಂಪಲ್ ರನ್ ವಿರುದ್ಧ ಸ್ವತಃ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಾಗ್ದಾಳಿ… ಬಯಲಾದ ರಾಹುಲ್ ನಾಟಕ!!

ರಾಜಕೀಯಕ್ಕಾಗಿ ಏನೂ ಮಾಡಲೂ ಹಿಂದೆ ಮುಂದೆ ನೋಡದ ಕಾಂಗ್ರೆಸ್ ಪಕ್ಷಕ್ಕೆ ಈಗ ಮತ್ತೊಂದು ಮಹಾ ಮುಜುಗರ ಎದುರಾಗಿದೆ. ರಾಜಕೀಯ ಹಾಗೂ ಚುನಾವಣೆಗಳಲ್ಲಿ ಗೆಲುವನ್ನು ಕಾಣಲು ಯಾವ ಮಟ್ಟಕ್ಕೂ ಈ ಪಕ್ಷ ಇಳಿಯುತ್ತದೆ ಎಂಬುವುದು ಮತ್ತೆ ಸಾಭೀತಾಗಿದೆ. ಅದೂ ಸ್ವತಃ ಕಾಂಗ್ರೆಸ್ ಮುಖಂಡರೊಬ್ಬರಿಂದಲೇ ಈ ವಿಚಾರ ಬಯಲಾಗಿದೆ.

ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದ ರಾಹುಲ್..!!!

ಕಾಂಗ್ರೆಸ್ ಅನ್ನುವ ರಾಷ್ಟ್ರೀಯ ಪಕ್ಷ ಅನೇಕ ಕಾಲದಿಂದಲೂ ಹಿಂದೂ ವಿರೋಧಿ ಧೋರಣೆಗಳನ್ನು ಅನುಸರಿಸಿಕೊಂಡೇ ಬರುತ್ತಿದ್ದ ಪಕ್ಷವಾಗಿದೆ. ಜಾತ್ಯಾತೀತವಾದದ ಮುಖವಾಡ ಹೊತ್ತುಕೊಂಡಿದ್ದ ಈ ಕಾಂಗ್ರೆಸ್ ಪಕ್ಷ ಹಿಂದೂ ಸಮಾಜವನ್ನು ಕಾಲ ಅಡಿಯಲ್ಲಿ ತುಳಿದುಕೊಂಡೇ ಮೇಲೆ ಬರುತ್ತಿತ್ತು. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಈಗ ರಾಹುಲ್ ಗಾಂಧಿ. ಇವಿಷ್ಟು ಗಾಂಧಿ ಪರಿವಾರದ ನಕಲಿ ಜಾತ್ಯಾತೀತ ವಾದಿಗಳಾದರೆ ಇನ್ನು ಅವರೇ ಬೆಳೆಸಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ನಲ್ಲಿ ಭಾರೀ ಜಾತ್ಯಾತೀತ ಮುಖವಾಡಗಳಿವೆ. ಅದು ಹಿಂದೂ ಸಮಾಜವನ್ನು ತುಳಿಯುತ್ತಲೇ ಬರುತ್ತಿತ್ತು.

ಕಳೆದ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಈ ಜಾತ್ಯಾತೀತ ಧೋರಣೆ ಭಾರೀ ನಷ್ಟವನ್ನು ಕಾಂಗ್ರೆಸ್ ಪಕ್ಷಕ್ಕೆ ತಂದು ಕೊಟ್ಟಿತ್ತು. ಕಾಂಗ್ರೆಸ್ ಎನ್ನುವ ಪಕ್ಷ ಕೇವಲ 43 ಸ್ಥಾನಗಳಿಗೆ ಕುಸಿದು ಲೋಕಸಭೆಯಲ್ಲಿ ಕನಿಷ್ಠ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿತ್ತು. ಭಾರತ ಹೊಸ ರಾಜಕೀಯ ಇತಿಹಾಸವನ್ನೇ ಸೃಷ್ಟಿಸಿತ್ತು. ಹಿಂದೂಗಳ ಪರವಾಗಿದ್ದ ಭಾರತೀಯ ಜನತಾ ಪಕ್ಷ ಜಯದ ನಗೆ ಬೀರಿತ್ತು.

ಇದರಿಂದ ತೀವ್ರ ಮುಜುಗರಕ್ಕೀಡಾದ ಕಾಂಗ್ರೆಸ್ ಪಕ್ಷ ತನ್ನ ನಡೆಯಲ್ಲಿ ಬದಲಾವಣೆ ತರಲು ಮುಂದಾಗುತ್ತೆ. ಕಳೆದ ಬಾರಿಯ ಗುಜರಾತಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ತನ್ನ ನಡೆಯನ್ನು ಬದಲಾಯಿಸಿಕೊಂಡಿದ್ದರು. ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳನ್ನೂ ಸುತ್ತಿದ್ದರು. ದೇವಾಲಯಗಳಿಗೆ ತೆರಳಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದ್ದರು.

 

ರಾಹುಲ್ ಗಾಂಧಿ ಗುಜರಾತ್ ಚುನಾವಣೆ ಗೆಲ್ಲಲು ಎಷ್ಟು ಪ್ರಯತ್ನ ಮಾಡಿದ್ದರು ಎಂದರೆ, ರಾಹುಲ್ ಗಾಂಧಿ ಹಿಂದೂನೇ ಅಲ್ಲ ಎಂದು ಲೇವಡಿ ಮಾಡುತ್ತಿದ್ದ ಭಾರತೀಯ ಜನತಾ ಪಕ್ಷದ ನಾಯಕರಿಗೆ ತನ್ನ ಜನಿವಾರವನ್ನು ಹೊರತೆಗೆದು ತೋರಿಸಿ ನಾನೂ ಹಿಂದೂನೆ. ಹಿಂದೂ ಬ್ರಾಹ್ಮಣ ಎಂದು ಹೇಳಿದ್ದರು. ಇದು ಕಳೆದ ಗುಜರಾತ್ ರಾಜ್ಯದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ನಾಟಕೀಯ ಬೆಳವಣೆಗೆಗಳು.

ರಾಹುಲ್ ಗಾಂಧಿಯ ಫೇಕ್ ಭಕ್ತಿ ಎಂದ ಕಾಂಗ್ರೆಸ್ ಮುಖಂಡ!

ರಾಹುಲ್ ಗಾಂಧಿಗೆ ದೇವರ ಮೇಲೆ ಭಕ್ತಿ ಅನ್ನೋದೆ ಇಲ್ಲ. ಅವರು ಮಾಂಸಾಹಾರ ಸೇವಿಸುತ್ತಾರೆ. ಅವರು ಬ್ರಾಹ್ಮಣ ಎಂದು ಹೇಗೆ ಹೇಳಿಕೊಳ್ಳುತ್ತಾರೆ ಎಂದು ಜನರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಲೇ ಇದ್ದರು. ಆದರೆ ಜನರ ಹಾಗೂ ಭಾರತೀಯ ಜನತಾ ಪಕ್ಷದ ನಾಯಕರ ಈ ಮಾತುಗಳನ್ನು ರಾಹುಲ್ ಗಾಂಧಿ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಸುಮ್ಮನಾಗಿದ್ದರು.

ಆದರೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ನೀಡಿದ್ದ ಹೇಳಿಕೆ ಮಾತ್ರ ರಾಹುಲ್ ಗಾಂಧಿಯ ಟೆಂಪಲ್ ರನ್‍ಗೆ ಭಾರೀ ಆಘಾತವನ್ನೇ ನೀಡಿದೆ. ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಶಶಿ ತರೂರ್ ರಾಹುಲ್ ಗಾಂಧಿಯ ಟೆಂಪಲ್ ರನ್‍ನ ನೈಜ ಕಹಾನಿಯನ್ನು ತೆರೆದಿಟ್ಟಿದ್ದಾರೆ. ರಾಹುಲ್ ಗಾಂಧಿ ಯಾಕೆ ಟೆಂಪಲ್ ರನ್ ಮಾಡುತ್ತಾರೆ ಎನ್ನುವ ವಿಚಾರವನ್ನು ಬಯಲಿಗೆಳೆದಿದ್ದಾರೆ.

“ರಾಹುಲ್ ಗಾಂಧಿ ಸಹಿತ ಎಲ್ಲರೂ ಮಾಡುವ ದೇವಸ್ಥಾನಗಳ ಭೇಟಿಯಲ್ಲಿ ನೈಜ ಭಕ್ತಿ ಅಡಗಿರುವುದಿಲ್ಲ. ಬದಲಾಗಿ ಅದರಲ್ಲಿ ರಾಜಕೀಯ ಕಳೆಗಳು ಮಾತ್ರ ಗೋಚರಿಸುತ್ತವೆ. ಹೀಗಾಗಿ ಅವರ ದೇವಸ್ಥಾನಗಳ ಭೇಟಿ ಎಲ್ಲಾ ನಕಲಿಯಾಗಿರುತ್ತದೆ. ಮನದಲ್ಲಿ ಯಾವುದೇ ಭಕ್ತಿ ಇಲ್ಲದೆ ಕೇವಲ ರಾಜಕೀಯ ತೋರ್ಪಡಿಕೆಗೋಸ್ಕರ ದೇವಾಲಯಗಳ ಭೇಟಿಯನ್ನು ನೀಡುತ್ತಿದ್ದಾರೆ. ಇಟ್ ಈಸ್ ವಂಡರ್‍ಫುಲ್ ಫೇಕ್ ಟೆಂಪಲ್ ರನ್”…

ಇದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಟೆಂಪಲ್ ರನ್ ಮಾಡುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಮೇಲೆ ಕಿಡಿ ಕಾರಿದ್ದ ಪರಿ.

ಶಶಿ ತರೂರ್ ಹೇಳಿಕೆಯ ಮರ್ಮವೇನು?

ಕಾಂಗ್ರೆಸ್ ಮುಖಂಡ ಶಶಿ ತರೂರ್ ತುಂಬಾನೆ ಬ್ರಿಲಿಯೆಂಟ್. ಕೇಂದ್ರದಲ್ಲಿ ಮಾಜಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಶಶಿ ತರೂರ್ ಒಂದು ಪ್ರಕರಣವನ್ನು ಎದುರಿಸಿದ್ದರು. ಅದು ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಮರ್ಡರ್ ಸ್ಟೋರಿ. ಬೆಟ್ಟಿಂಗ್ ವಿಚಾರದಲ್ಲಿ ಶಶಿ ತರೂರ್ ಹಾಗೂ ಅವರ ಪತ್ನಿ ಸುನಂದಾ ಪುಷ್ಕರ್ ನಡುವೆ ಭಾರೀ ಜಟಾಪಟಿಯಾಗಿ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾಳೆ. ಇದು ಶಶಿ ತರೂರ್ ಮಾಡಿರುವ ಕೊಲೆ ಎಂದು ಬಾಸವಾಗುತ್ತದೆ. ಸ್ವತಃ ಶಶಿ ತರೂರ್ ಈ ಬಗ್ಗೆ ತನಿಖೆಯನ್ನು ಎದುರಿಸುತ್ತಾರೆ.

ಕೇಂದ್ರದಲ್ಲಿ ಸರ್ಕಾರ ಬದಲಾಗುತ್ತೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಂದ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಲು ಆರಂಭಿಸುತ್ತಾರೆ. ಸ್ವಚ್ಚ ಭಾರತ ಹಾಗೂ ಮೋದಿಯವರ ಇನ್ನಿತರ ಕಾರ್ಯಕ್ರಮಗಳನ್ನು ಮುಕ್ತ ಕಂಠದಿಂದ ಹೊಗಳುತ್ತಾರೆ. ಈ ಮೂಲಕ ಸಿಬಿಐ ತನಿಖೆ ನಡೆಸುತ್ತಿರುವ ಸುನಂದಾ ಪುಷ್ಕರ್ ಸಾವಿನ ತನಿಖೆಯಿಂದ ಪಾರಾಗಲು ಯತ್ನಿಸುತ್ತಾರೆ.

ಈಗ ಮತ್ತೆ ತನ್ನದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ಟೆಂಪಲ್ ರನ್ ಬಗ್ಗೆ ಶಶಿ ತರೂರ್ ಕಿಡಿ ಕಾರಿದ್ದು ಭಾರೀ ಸಂಶಯಗಳಿಗೆ ಕಾರಣವಾಗಿದೆ. ಒಟ್ಟಾರೆ ರಾಹುಲ್ ಗಾಂಧಿಯ ದೇವಾಲಯಗಳ ಭೇಟಿಯು ರಾಜಕೀಯ ಲಾಭವನ್ನೇ ಕೂಡಿದೆ ಹೊರತು ಅದರಲ್ಲಿ ಯಾವುದೇ ತೆರನಾದ ಭಕ್ತಿಯು ಕಾಣುತ್ತಿಲ್ಲ ಎಂಬ ವಿಚಾರ ಬಟಬಯಲಾಗಿದೆ. ಶಶಿ ತರೂರ್‍ರ ಈ ಹೇಳಿಕೆ ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಭಾರೀ ಹೊಡೆತ ನೀಡುವುದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close