ಪ್ರಚಲಿತ

ಲವ್ ಜಿಹಾದ್ ಗೊಳಗಾದ ಹದಿಯಾ ಪ್ರಕರಣದಲ್ಲಿ ತನಿಖಾ ದಳಕ್ಕೆ ಸಿಕ್ಕಿರುವ ಪ್ರಬಲ ಸಾಕ್ಷಿ ಏನು ಗೊತ್ತೇ?!

ಹಿಂದೂ ಹುಡುಗಿಯರನ್ನು ಮೋಸದಿಂದ ಪ್ರೇಮಕ್ಕೆ ಸಿಲುಕಿಸಿ, ಅವರನ್ನು ಉಗ್ರವಾದಿ ಸಂಘಟನೆಗಳಿಗೆ ಸೇರಿಸುವ, ಮುಸ್ಲಿಮರ ಸಂಖ್ಯೆಯನ್ನು ಹೆಚ್ಚಿಸಿ ಇಸ್ಲಾಂ ಸ್ಟೇಟ್ ನಿರ್ಮಿಸುವ ಮುಸ್ಲಿಮರ ಷಡ್ಯಂತ್ರ ಲವ್‍ಜಿಹಾದ್ ಬಗ್ಗೆ ರಾಷ್ಟ್ರೀಯ ತನಿಖಾ ದಳ ಕೊನೆಗೂ ಪುರಾವೆ ಪತ್ತೆ ಹಚ್ಚಿದೆ. ಹಲವಾರು ಹಿಂದೂ ಹುಡುಗಿಯರು ನಿಗೂಢವಾಗಿ ನಾಪತ್ತೆಯಾಗಿರುವುದನ್ನು ಮನಗಂಡ ರಾಷ್ಟ್ರೀಯ ತನಿಖಾ ದಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಸಾಕ್ಷ್ಯ ಕಲೆ ಹಾಕುವ ಕೆಲಸವನ್ನು ನಡೆಸಿತ್ತು. ಆದರೆ ಪ್ರಕರಣದ ಜಾಡು ಹಿಡಿದ ತನಿಖಾ ದಳಕ್ಕೆ ಲವ್ ಜಿಹಾದ್ ಪ್ರಕರಣಕ್ಕೆ ಬಲವಾದ ಸಾಕ್ಷಿ ಸಿಕ್ಕಿದೆ. ತನಿಖಾ ದಳ 90 ಲವ್ ಜಿಹಾದ್ ಪ್ರಕರಣದ ಪುರಾವೆಗಳು ತಮಗೆ ಸಿಕ್ಕಿದೆ ಎಂದು ನ್ಯಾಯಾಲಯಕ್ಕೆ ಖುದ್ದಾಗಿ ಹೇಳಿಕೊಂಡಿದೆ. ಇದರಿಂದ ಲವ್‍ಜಿಹಾದ್ ಪ್ರಕರಣದ ತೀವ್ರಸ್ವರೂಪ ಕೊನೆಗೂ ಬಹಿರಂಗಗೊಂಡಂತಾಗಿದೆ.

ಲವ್‍ಜಿಹಾದ್ ಪ್ರಕರಣದ ಪ್ರಬಲ ಸಾಕ್ಷ್ಯ ಸಿಗಲು ಕಾರಣವಾಗಿದ್ದೇ ಕೇರಳದ ಹದಿಯಾ ಪ್ರಕರಣ. ಹದಿಯಾಳ ಮೂಲ ಹೆಸರು ಅಖಿಲಾ ಅಶೋಕನ್. ಹೋಮಿಯೋಪತಿ ಪದವಿ ಪಡೆಯುತ್ತಿದ್ದ ಅಖಿಲಾ ಪಿಎಫ್‍ಐಯ ಮಹಿಳಾ ಘಟಕದ ನಾಯಕಿ ಸೈನಾಬಾಳ ಪ್ರಭಾವದಿಂದ ಇಸ್ಲಾಂಗೆ ಮತಾಂತರಗೊಂಡಳು. ಅಖಿಲಳ ಮತಾಂತರ ಪ್ರಕ್ರಿಯೆ ನಡೆಸಿದ್ದು ಕೇರಳದ ತೆರ್ಬಿಯಾತ್ ಇಸ್ಲಾಮ್ ಎನ್ನುವ ಮಸೀದಿ. ಆ ಬಳಿಕ ಶಾಹಿನ್ ಜಹಾನ್ ಎಂಬಾತನನ್ನು ವರಿಸಿದ್ದಳು.

ಈ ಬಗ್ಗೆ ಗಾಬರಿಬಿದ್ದ ತಂದೆ ಅಶೋಕನ್ ಕೇರಳದ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ತನ್ನ ಮಗಳನ್ನು ಇಸ್ಲಾಂಗ್ ಮತಾಂತರಗೊಳಿಸಿ ಭಯೋತ್ಪಾದನೆಗೆ
ದೂಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಪ್ರಕರಣದ ತನಿಖೆ ನಡೆಸಿದಾಗ ನ್ಯಾಯಾಲಯಕ್ಕೆ ಲವ್ ಜಿಹಾದ್‍ಗೆ ಬಲಿಯಾದ ಅನೇಕ ಹುಡುಗಿಯರು
ನಾಪತ್ತೆಯಾಗಿದ್ದು, ಇವರನ್ನೆಲ್ಲಾ ಐಸಿಸ್ ಸೇರಿಸಲು ಅಪಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎನ್ನುವುದನ್ನು ಪತ್ತೆಹಚ್ಚಿತ್ತು.

ಅಖಿಲಾಳನ್ನು ಶಫೀನ್ ಜೆಹಾನ್ ಎಂಬಾತ ಲವ್ ಜಿಹಾದ್ ಮೂಲಕ ಮೋಸದಿಂದ ಮದುವೆಯಾಗಿ, ಹದಿಯಾಳಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ. ಐಸಿಸ್ ಕೇರಳದಲ್ಲಿ ತನ್ನ ಗುಂಪಿಗೆ ಯುವತಿಯರನ್ನು ಸೇರಿಸಿಕೊಳ್ಳಲು ಮದುವೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಅಖಿಲಾ ತಂದೆ ಅಶೋಕನ್
ವಾದಿಸುತ್ತಿದ್ದಾರೆ. ಜೊತೆಗೆ ಶಫೀನ್ ಜೆಹಾನ್ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿದ್ದು, ಈತನಿಗೂ ಐಸಿಸ್ ಜೊತೆ ನಂಟು ಇರುವುದನ್ನು ತನಿಖಾ ದಳ ಪತ್ತೆಹಚ್ಚಿತ್ತು.

ಕಳೆದ ಮೇಯಲ್ಲಿ ಹದಿಯಾ ಮತ್ತು ಶಫೀನ್ ಮದುವೆಯನ್ನು ಅಮಾನ್ಯಗೊಳಿಸಿದ್ದ ಕೇರಳ ಹೈಕೋರ್ಟ್ ಆಕೆಯನ್ನು ಕೊಟ್ಟಾಯಂ ಜಿಲ್ಲೆಯಲ್ಲಿರುವ ಹೆತ್ತವರ ಮನೆಗೆ
ಹೋಗುವಂತೆ ಸೂಚಿಸಿತ್ತು. ಆದರೆ, ಆಕೆಯ ಗಂಡ ಶಫೀನ್ ಜೆಹಾನ್ ಮದುವೆ ರದ್ದತಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ
ಸುಪ್ರೀಂಕೋರ್ಟ್ ಕಳೆದ ಆಗಸ್ಟ್‍ನಲ್ಲಿ ಐಸಿಸ್ ಕಾರ್ಯಾಚರಣೆ ಮತ್ತು ಹಿಂದೂ ಯುವತಿಯರ ಲವ್ ಜೆಹಾದ್ ಪ್ರಕರಣದ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಸೂಚಿಸಿತ್ತು.

ಪ್ರಕರಣದ ತನಿಖೆ ನಡೆಸಿದ ತನಿಖಾ ದಳಕ್ಕೆ ಈ ಮತಾಂತರದ ಹಿಂದೆ ಲವ್‍ಜಿಹಾದ್ ಷಡ್ಯಂತ್ರ ಇರುವುದನ್ನು ಪತ್ತೆ ಹಚ್ಚಿದೆ. ಕೇರಳದಲ್ಲಿ ಸಾವಿರಾರು ಮಂದಿ
ಹುಡುಗಿಯರು ಲವ್‍ಜಿಹಾದ್‍ಗೆ ಬಲಿಯಾಗಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದರೆ, ಇನ್ನುಳಿದ ಅನೇಕ ಹುಡುಗಿಯರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಇವರೆಲ್ಲಿದ್ದಾರೆನ್ನುವ ಕುರುಹು ಕೂಡಾ ಪತ್ತೆಯಾಗಿಲ್ಲ. ಲವ್ ಜಿಹಾದ್‍ನ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಅವುಗಳ ಬಗ್ಗೆ ತನಿಖೆ ಕೈಗೊಳ್ಳಲು ಹೇಳಿತ್ತು. ಆದರೆ ಇದೀಗ ತನಿಖಾದಳ ಖುದ್ದಾಗಿ ಲವ್‍ಜಿಹಾದ್‍ಗೆ ಸಾಕ್ಷಿ ಸಿಕ್ಕಿದೆ ಎಂದು ಹೇಳಿರುವುದರಿಂದ ಇದರ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡುವ ಸಾಧ್ಯತೆ ಇದೆ.

ಹದಿಯಾ ಪ್ರಕರಣ ಯಾಕಿಷ್ಟು ಮಹತ್ವ?

ಭಾರಿ ಕುತೂಹಲ ಕೆರಳಿಸಿರುವ ಹದಿಯಾ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟು ನೀಡುವ ತೀರ್ಪು ಭಾರೀ ಮಹತ್ವ ಪಡೆದಿದೆ. ಜೊತೆಗೆ ಲವ್ ಜಿಹಾದ್‍ಗೆ ಬಗ್ಗೆಯೂ
ತೀರ್ಪು ನೀಡುವ ಸಾಧ್ಯತೆಯೂ ಇದೆ. ಕೇರಳದ ಅಖಿಲಾ ಅಶೋಕನ್ ಅಲಿಯಾಸ್ ಹದಿಯಾ ಲವ್ ಜಿಹಾದ್ ಪ್ರಕರಣದಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿರುವ
ಸುಪ್ರೀಂಕೋರ್ಟ್, 24 ವರ್ಷದ ಯುವತಿಯ ಸ್ವಯಂ ವಿಚಾರಣೆಗೆ ಮುಂದಾಗಿದೆ. ನವಂಬರ್ 27ರಂದು ಹದಿಯಾ ಅವರನ್ನು ಕೋರ್ಟ್ ಮುಂದೆ
ಹಾಜರುಪಡಿಸುವಂತೆ ಸೋಮವಾರ ಆಕೆಯ ತಂದೆ ಅಶೋಕನ್ ಅವರಿಗೆ ಸೂಚನೆ ನೀಡಿದೆ. ಮದುವೆಗೆ ಸಂಬಂಧಿಸಿ ಹದಿಯಾ ಅಭಿಪ್ರಾಯವೇ ಪ್ರಧಾನ ಎಂಬ
ಅಭಿಪ್ರಾಯ ವ್ಯಕ್ತಪಡಿಸಿರುವ ಕೋರ್ಟ್, 27ರಂದು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಸಂಕೇತವನ್ನು ನೀಡಿದೆ. ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‍ನ ದುಷ್ಟ ತಂತ್ರಗಳು ಮತ್ತು ದೇಶದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಲವ್ ಜಿಹಾದ್ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಪ್ರಕರಣ ಇದಾಗಿದ್ದು, ರಾಷ್ಟ್ರದ ದೃಷ್ಟಿ ಇದರ ಮೇಲೆ ನೆಟ್ಟಿದೆ.

ಹದಿಯಾಳ ಮದುವೆಯೂ ಈ ತಂತ್ರದ ಭಾಗವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ ಕೋರ್ಟ್, ಯುವತಿಯನ್ನು ತಂದೆ ಮನೆಯಲ್ಲಿರುವಂತೆ
ಸೂಚಿಸಿತ್ತು. ಈ ಪ್ರಕರಣದಲ್ಲಿ ಹುಡುಗಿಯ ಅಭಿಪ್ರಾಯ ಅತ್ಯಂತ ಪ್ರಧಾನ. ಹಾಗಾಗಿ ಮುಕ್ತ ನ್ಯಾಯಾಲಯದಲ್ಲಿ ಆಕೆಯ ಜತೆಗೆ ಸಮಾಲೋಚನೆ ನಡೆಸುತ್ತೇವೆ,”
ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಆಕೆಯ ಮಾನಸಿಕ ಸ್ಥಿತಿಯನ್ನು ಅರಿಯುವ ಉದ್ದೇಶದಿಂದ ಸಮಾಲೋಚನೆ
ನಡೆಸಲಾಗುತ್ತದೆ. ಆಕೆಯನ್ನು ಮರುಳು ಮಾಡಲಾಗಿದೆಯೇ, ಬ್ರೈನ್ ವಾಶ್ ಮಾಡಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಯಲಿದ್ದು, ಸೂಕ್ತ ಅಧಿಕಾರಿಗಳು ಇದರ ಮೇಲ್ವಿಚಾರಣೆ ವಹಿಸಲಿದ್ದಾರೆ ಎಂದು ಪೀಠ ಹೇಳಿದೆ.

“ನನ್ನನ್ನು ಹೇಗಾದರೂ ಇಲ್ಲಿಂದ ಪಾರು ಮಾಡಿ. ಇವತ್ತಲ್ಲ, ನಾಳೆ ನಾನು ಸತ್ತೇ ಹೋಗ್ತೇನೆ. ನನಗದು ಖಚಿತವಾಗಿದೆ. ನನ್ನ ಅಪ್ಪನಿಗೆ ಸಿಟ್ಟು ಬರುವುದು ನನಗೆ
ಅರ್ಥವಾಗುತ್ತಿದೆ…” ಎಂದು ಕಳೆದ ಆಗಸ್ಟ್‍ನಲ್ಲಿ ಚಿತ್ರೀಕರಿಸಿದ್ದೆಂದು ಹೇಳಲಾದ ವೀಡಿಯೊದಲ್ಲಿ ಅಖಿಲಾ ಹೇಳಿದ್ದಳು. ಆದರೆ ಈ ವಿಡಿಯೋ ನಕಲಿ ಎಂದು
ಅಶೋಕನ್ ಆಪಾದಿಸಿದ್ದು, ಇದರಲ್ಲಿರುವ ಧ್ವನಿ ಅಖಿಳಾಲಿಗೆ ಹೋಲುತ್ತಿಲ್ಲ ಎಂದು ತನ್ನ ಅಪಾದನೆಯನ್ನು ನಿರಾಕರಿಸಿದ್ದಾರೆ

90 ಲವ್ ಜಿಹಾದ್ ಸಾಕ್ಷ್ಯ ಪತ್ತೆ ಹಚ್ಚಿದ ರಾಷ್ಟ್ರೀಯ ತನಿಖಾ ದಳ..

ಹದಿಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಷ್ಟ್ರೀಯ ತನಿಖಾ ದಳ ಲವ್ ಜಿಹಾದ್ ಪ್ರಕರಣದ ಜಾಡುಹಿಡಿದುಕೊಂಡು ಹೋಗಿತ್ತು. ಈ ವೇಳೆ ಲವ್‍ಜಿಹಾದ್ ಬಗ್ಗೆ ಅನೇಕ ಸಾಕ್ಷ್ಯಗಳನ್ನು ಕಲೆಹಾಕಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ಕೇರಳದಲ್ಲಿ ಹದಿಯಾ ಮಾದರಿಯ ಧಾರ್ಮಿಕ ಬ್ರೈನ್‍ವಾಶ್ ಮತ್ತು ಮತಾಂತರದ 90 ಪ್ರಕರಣಗಳು ನಡೆದಿರುವ ಬಗ್ಗೆ ತನ್ನ ಬಳಿ ಪುರಾವೆಗಳಿವೆ ಎಂದು ರಾಷ್ಟ್ರೀಯ ತನಿಖಾ ದಳ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದೆ. ಹೀಗಾಗಿ ಕೋರ್ಟ್ ಆಕೆಯನ್ನು ಶಫೀನ್ ಜತೆ ಕಳುಹಿಸುವ ಸಾಧ್ಯತೆಗಳು ಕ್ಷೀಣಿಸಿವೆ. ಅಲ್ಲದೆ ಲವ್‍ಜಿಹಾದ್ ಬಗ್ಗೆ ಸುಪ್ರೀಂಕೋರ್ಟ್ ನಿರ್ಧಾರವನ್ನೂ ಪ್ರಕಟಿಸುವ ಸಾಧ್ಯತೆ ಇದೆ.

ಲವ್ ಜಿಹಾದ್ ಹಿಂದಿರುವುದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎನ್ನುವ ಮುಸ್ಲಿಂ ಸಂಘಟನೆ. ಮೊದಲು ಸಿಮಿ ಆಗಿದ್ದು, ಅದು ನಿಷೇಧಗೊಂಡ ಬಳಿಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎನ್ನುವ ಹೆಸರಾಗಿ ಬದಲಿಸಿಕೊಂಡಿತು. ಈ ಸಂಘಟನೆ ದೇಶದಲ್ಲಿ ಅನೇಕ ವಿದ್ವಂಸಕ ಕೃತ್ಯಗಳನ್ನು ನಡೆಸಿದ ಪರಿಣಾಮ ಇದು ಕೂಡಾ ನಿಷೇಧದ ಹತ್ತಿರ ಬಂದು ನಿಂತಿದೆ. ಪಿಎಫ್‍ಐ ಸಂಘಟನೆ ಲವ್ ಜಿಹಾದನ್ನು ಅಜೆಂಡಾವಾಗಿಸಿಕೊಂಡು ಹಿಂದೂ ಹುಡುಗಿಯರನ್ನು ಮೋಸದಿಂದ ಪ್ರೇಮದ ಜಾಲಕ್ಕೆ ಸಿಲುಕಿಸಿ ಮತಾಂತರಗೊಳಿಸುತ್ತಿತ್ತು. ಇನ್ನುಕೆಲವು ಹುಡುಗಿಯರನ್ನು ಅಪಹರಿಸಿ ಅವರನ್ನು ಐಸಿಸ್‍ಗೆ ಸೇರಿಸುತ್ತಿರುವುದನ್ನೂ ಪತ್ತೆ ಹಚ್ಚಲಾಗಿದೆ. ಆದ್ದರಿಂದ ಈ ಸಂಘಟನೆಯ ಮೇಲೂ ನಿಷೇಧದ ತೂಗುಗತ್ತಿ ನೇತಾಡುತ್ತಿದೆ.

-ಚೇಕಿತಾನ

Tags

Related Articles

Close