ಪ್ರಚಲಿತ

ಮೋದಿಯನ್ನು ದೇಶದ ಅತ್ಯುತ್ತಮ ಡಾಕ್ಟರ್ ಎಂದು ಕರೆದ ಆ ಪ್ರಭಾವಿ ನಾಯಕ ಯಾರು ಗೊತ್ತೇ?

ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಆಗಿರುವ ನರೇಂದ್ರ ಮೋದಿಯವರು ಪ್ರಧಾನಿಯಾಗಿನಿಂದ ದೇಶ ಸಾಕಷ್ಟು ಬದಲಾವಣೆಯನ್ನೂ ಕಾಣುತ್ತ ಹೋಗಿದೆಯಲ್ಲದೇ, ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯ ಹೆಜ್ಜೆಗಳನ್ನು ಇಡುತ್ತಿರುವ ವಿಚಾರವೂ ತಿಳಿದೇ ಇದೆ!! ಆದರೆ ವಿಶ್ವದ ಗಮನ ಸೆಳೆಯುತ್ತಿರುವ ನರೇಂದ್ರ ಮೋದಿಯವರು ಈಗಾಗಲೇ “ಸಾಮಾಜಿಕ ವಿಜ್ಞಾನಿ” ಎನ್ನುವ ಹೆಸರನ್ನು ಪಡೆದುಕೊಂಡಿದ್ದು, ಇದೀಗ “ಭಾರತದ ಅತ್ಯುತ್ತಮ ಡಾಕ್ಟರ್” ಎಂದೂ ಕರೆಸಿಕೊಂಡಿದ್ದಾರೆ!!

ಹೌದು…. ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ದೇಶವು ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದ್ದು, ಈಡೀ ವಿಶ್ವವೇ ಇದೀಗ ಭಾರತವನ್ನು ಗೌರವಿಸುತ್ತಿದೆ. ಆದರೆ ಭಾರತದಲ್ಲಿ ನೋಟ್ ಬ್ಯಾನ್ ಭಾರತದ ಆರ್ಥಿಕತೆಯ ಮೇಲೆ ಪೆಟ್ಟು ನೀಡಿದೆ ಅಂತ ಪ್ರತಿ ಪಕ್ಷಗಳು ಆರೋಪಿಸಿದ್ದವು. ವ್ಯಾಪಾರಿಗಳ ಮೇಲೆ ಹೊರೆ ಹೊರೆಸಲಾಯಿತು ಅಂತಾ ಜಿಎಸ್ಟಿ ಯೋಜನೆಗಳ ಮೇಲೆ ಟೀಕೆಗಳು ಬಂದವು.

ಇದರಿಂದಾಗಿ ಮೋದಿಯವರ ಯಶಸ್ಸಿಗೆ ಪೆಟ್ಟು ಬಿದ್ದಿದೆ ಎಂದು ಹಲವಾರು ಮಂದಿ ಮಾತಾನಾಡಿಕೊಂಡರಲ್ಲದೇ, ಇದು ಚುನಾವಣೆ ವೇಳೆ ಒಂದು ದೊಡ್ಡ ಅಸ್ತ್ರವಾಗುತ್ತೆ ಅಂತಾ ಕೆಲವರು ತಮ್ಮೊಳಗೆ ಖುಷಿ ಪಟ್ಟುಕೊಂಡರು!! ವಿಪರ್ಯಾಸ ಎಂದರೆ, ಈ ಎಲ್ಲಾ ಯೋಜನೆಗಳು ಬಂದ ನಂತರನೇ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮೋದಿ ಹವ ಗುಗ್ಗಿಲ್ಲ ಅನ್ನೋದನ್ನು ಸಾಬೀತು ಪಡಿಸಿದೆ.

ಭವ್ಯ ಭಾರತದ ಕನಸನ್ನು ಕಾಣುತ್ತಿರುವ ನರೇಂದ್ರ ದಾಮೋದರ ದಾಸ್ ಮೋದಿಯವರು ಅದರೆಡೆಗೆ ಸಾಗುತ್ತಿದ್ದಾರಲ್ಲದೇ, “ಲಕ್ಷಾಂತರ ಭಾರತೀಯರಿಗೆ ಪ್ರೇರಣೆಯಾದ ಮಾಜಿ ರಾಷ್ಟ್ರಪತಿ ಕಲಾಂ ಅವರು ಮೂಲತಃ ವಿಜ್ಞಾನಿಯಾಗಿದ್ದ ಕಾರಣ ನಾನು ಅವರನ್ನು “ಬಾಹ್ಯಾಕಾಶ ವಿಜ್ಞಾನಿ” ಎಂದು ಕರೆಯುತ್ತಿದ್ದೇನೆ, ಆದರೆ ನಾನು ಮೋದಿಯವರನ್ನು “ಸಾಮಾಜಿಕ ವಿಜ್ಞಾನಿ” ಎಂದು ಕರೆಯುತ್ತೇನೆ ಎಂದು ಭಾರತದ 14ನೇ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಈಗಾಗಲೇ ಬಣ್ಣಿಸಿದ್ದರು. ಆದರೆ ಇದೀಗ ಎಂ.ಬಿ.ಬಿ.ಎಸ್. ಪದವಿ ಹೊಂದಿಲ್ಲದಿದ್ದರು ನರೇಂದ್ರ ಮೋದಿಯವರು “ಭಾರತದ ಅತ್ಯುತ್ತಮ ವೈದ್ಯರು” ಎಂದು ಭಾರತದ ಕೇಂದ್ರ ಸಚಿವರೊಬ್ಬರು ಮೋದಿಯನ್ನು ಕೊಂಡಾಡಿದ್ದಾರೆ.

ನರೇಂದ್ರ ಮೋದಿಯವರು ಎಂ.ಬಿ.ಬಿ.ಎಸ್. ಪದವಿ ಹೊಂದಿಲ್ಲದೇ ಇರಬಹುದು ಆದರೆ ದೇಶಕ್ಕೆ ಭಾದಿಸಿದ ರೋಗಗಳಿಗೆ ಚಿಕಿತ್ಸೆ ನೀಡಲು ಅವರೊಂದು ಅತ್ಯುತ್ತಮ ವೈದ್ಯರಾಗಿದ್ದಾರೆ ಎಂದು ಹೇಳಿದವರು ಬೇರಾರು ಅಲ್ಲ ಕೇಂದ್ರ ಸಚಿವರಾಗಿರುವ ಅರ್ಜುನ್ ರಾಮ್ ಮೇಘವಾಲ್!! ಈಗಾಗಲೇ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು “ಭಾರತದ ಭವಿಷ್ಯವನ್ನು ಬದಲಿಸುವ ಕ್ರಾಂತಿಕಾರಿ ನಾಯಕ” ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಬಣ್ಣಿಸಿದ್ದು, ಇದೀಗ ಅರ್ಜುನ್ ರಾಮ್ ಮೇಘವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಭಾರತದ ಅತ್ಯುತ್ತಮ ಡಾಕ್ಟರ್” ಎಂದು ಕರೆದಿದ್ದಾರೆ.

ಗೋವಾದಲ್ಲಿ ನಡೆದ ಸಮಾವೇಶದಲ್ಲಿ ಮೋದಿಯನ್ನುದ್ದೇಶಿಸಿ ಮಾತಾನಾಡಿದ ಕೇಂದ್ರ ಸಚಿವ ಅರ್ಜುನ್ ರಾಮ್, “1947 ರಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ಇದೇ ವೇಳೆ ಹಲವು ದೇಶಗಳಿಗೆ ಸ್ವಾತಂತ್ರ್ಯ ಲಭಿಸಿರಲಿಲ್ಲ ಆದರೆ ಈ ದೇಶಗಳು ಅತಿ ವೇಗದಲ್ಲಿ ಅಭಿವೃದ್ಧಿ ಹೊಂದಿದವು. ಆದರೆ ಭಾರತ ಸ್ವಾತಂತ್ರ್ಯ ಗಳಿಸಿ 70 ವರ್ಷ ಕಳೆದರೂ ಕೂಡ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರದಿರುವುದು ಮಾತ್ರ ದುರಂತ” ಎಂದು ಅರ್ಜುನ್ ರಾಮ್ ಬೇಸರ ವ್ಯಕ್ತಪಡಿಸಿದ್ದಾರೆ..

ಅಷ್ಟೇ ಅಲ್ಲದೇ, ಸ್ವಚ್ಛತೆ, ಭ್ರಷ್ಟಾಚಾರ, ಬಡತನ, ಕೋಮುವಾದ, ಜಾತೀಯತೆ ಮತ್ತು ಭಯೋತ್ಪಾದನೆ ಭಾರತಕ್ಕೆ ಭಾದಿಸಿರುವ ಆರು ಖಾಯಿಲೆಗಳು. ಇದರ ವಿರುದ್ಧ ಪ್ರಧಾನಿ ಮೋದಿಯವರು ನಿರಂತರ ಹೋರಾಡುತ್ತಿದ್ದಾರೆ ಎಂದು ಇತ್ತೀಚಿನ ಅಂತರಾಷ್ಟ್ರೀಯ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಯ ಸಾಧನೆಯನ್ನು ಉಲ್ಲೇಖಿಸಿ ಮಾತಾನಾಡಿರುವ ಇವರು ದೇಶಕ್ಕೆ ಭಾದಿಸಿದ ರೋಗಗಳಿಗೆ ಚಿಕಿತ್ಸೆ ನೀಡಲು ನರೇಂದ್ರ ಮೋದಿಯವರು ಒರ್ವ ಅತ್ಯುತ್ತಮ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ!!

ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ಮೋದಿ ತೆಗೆದುಕೊಂಡ ನೋಟ್ ಬ್ಯಾನ್ ಹಾಗೂ ಪರಿಣಾಮಕಾರಿ ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ಮೋದಿಯ “ಎದೆಗಾರಿಕೆಯ ನಿರ್ಧಾರ” ಎಂದು ಬಣ್ಣಿಸಿದ್ದಾರೆ!! ಒಟ್ಟಿನಲ್ಲಿ ದೇಶಕ್ಕೆ ಅಂಟಿದ ಒಂದೊಂದೇ ರೋಗಗಳನ್ನು ನಿರ್ಮೂಲನೆ ಮಾಡುತ್ತಲೇ ಬರುತ್ತಿರುವ ನರೇಂದ್ರ ಮೋದಿಯವರು ದೇಶಕಂಡಂತಹ ಅಪ್ರತಿಮ ಪ್ರಧಾನಿಯಾಗಿರುವುದಂತೂ ಅಕ್ಷರಶಃ ನಿಜ.

ಈ ಹಿಂದೆ ಭಾರತವನ್ನು ಹಿಂದುಳಿದ ರಾಷ್ಟ್ರ ಅಂತ ಕೈ ಜೋಡಿಸಲು ಹಿಂದೆ ಸರಿಯುತ್ತಿದ್ದ ರಾಷ್ಟ್ರಗಳೆಲ್ಲ ಮೋದಿಯ ಪ್ರಭಾವದಿಂದಾಗಿ ನಾ ಮುಂದು ತಾ ಮುಂದು ಅಂತ ಭಾರತದ ಸ್ನೇಹಕ್ಕಾಗಿ ಸಾಲುಕಟ್ಟಿ ನಿಲ್ಲುತ್ತಿದೆ ಎಂದರೆ ಅದು ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಎನ್ನುವುದನ್ನು ನಾವು ಮರೆಯಬಾರದು. ಇಷ್ಟೇ ಅಲ್ಲದೇ, ಮೋದಿಯ ಹವಾ ಪ್ರಪಂಚದ ಮೂಲೆ ಮೂಲೆಗೆ ಹರಡಿದ್ದು, ಇದು ಜಾಗತಿಕ ಸಮೀಕ್ಷೆಯಿಂದ ದೃಢಪಟ್ಟಿದೆ!!

ಈಗಾಗಲೇ ಮೋದಿಯ ಕಾರ್ಯವೈಖರಿಗೆ ವಿಶ್ವದ ದೊಡ್ಡಣ್ಣನಾದ ಅಮೇರಿಕ ಕೂಡ ತಲೆ ಬಾಗಿದೆಯಲ್ಲದೇ, ಶಕ್ತಿಶಾಲಿಯಾದ ರಾಷ್ಟ್ರ ರಷ್ಯ ಕೂಡ ಮೋದಿಗೆ ಜೈಕಾರ ಹಾಕಿದೆ. ಇನ್ನು ಮುಂದಿನ 10 ವರ್ಷಗಳಲ್ಲಿ ಭಾರತ ಜಪಾನ್ ಮತ್ತು ಜರ್ಮನಿ ಎರಡೂ ದೇಶಗಳನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಲಿದೆ, ಆದರೆ ಈ ಸುಧಾರಣೆಗಳು ಸ್ಥಿರವಾಗಿರಲು ಭಾರತ ಸಾಮಾಜಿಕ ವಲಯಕ್ಕೆ ಹೆಚ್ಚು ಗಮನ ಹರಿಸಬೇಕು ಎಂದು ಬ್ರಿಟಿಶ್ ಬ್ರೋಕರೇಜ್ ಎಚ್‍ಎಸ್ಬಿಸಿ ಹೇಳಿದೆ.

ಅಷ್ಟೇ ಅಲ್ಲದೇ ಮೇಕ್ ಇನ್ ಇಂಡಿಯಾ ಮತ್ತು 4 ಜಿ ಸೇವೆಗಳ ವ್ಯಾಪಕ ಅಭಿವೃದ್ಧಿ ಭಾರತ ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದ ಎರಡನೆಯ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯ ಹೆಗ್ಗಳಿಕೆ ಗಳಿಸಲು ಸಹಾಯ ಮಾಡಿದೆ. ಹಾಗಾಗಿ ಭಾರತ ಈಗ ಕೇವಲ ಚೀನಾಗಿಂತ ಹಿಂದಿದೆ ಎಂದು ವಿಶ್ಲೇಷಕ ಸಂಸ್ಥೆಯಾದ ಕ್ಯಾನಾಲಿಸ್ಟ್ ಹೊಸ ವರದಿಯೊಂದನ್ನು ಬಹಿರಂಗ ಪಡಿಸಿದೆ..! 2017 ರ ದ್ವಿತೀಯ ತ್ರೈಮಾಸಿಕದಲ್ಲಿ ತೀವ್ರವಾಗಿ ಚೇತರಿಸಿಕೊಂಡಿದ್ದಲ್ಲದೆ, ಮೂರನೇ ತ್ರೈಮಾಸಿಕದಲ್ಲಿ ಶೇ 23 ರಷ್ಟು ಹೆಚ್ಚಳವಾಗಿದ್ದು ಬರೋಬ್ಬರಿ 40 ದಶಲಕ್ಷ ಯೂನಿಟ್ ಗಳನ್ನು ತಲುಪಿದೆ ಎಂದು ಕ್ಯಾನಾಲಿಸ್ ವಿಶ್ಲೇಷಕರು ತಿಳಿಸಿದ್ದಾರೆ.

ಹಾಗಾಗಿ ಮೋದಿಯ ರಾಜತಾಂತ್ರಿಕತೆಯ ಯಶಸ್ಸು ವಿಶ್ವದೆಲ್ಲೆಡೆ ಪಸರಿದ್ದು, ಭಾರತ ಮುಂದಿನ ಕೇಲವೇ ಕೆಲವು ವರ್ಷಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೆನಿಸುತ್ತಿದೆ.

– ಅಲೋಖಾ

Tags

Related Articles

Close