ಪ್ರಚಲಿತ

ಸತ್ತವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾಯ್ತು! ಈಗ ಮಕ್ಕಳನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿ ಚುನಾವಣೆ ಗೆಲ್ಲಲು ಹೊರಟಿದೆಯಾ ಕರ್ನಾಟಕ ಕಾಂಗ್ರೆಸ್?!

ಬಡವರ ಪರ, ಸಮಾಜವಾದಿ ಎನ್ನುತ್ತ ಕೋಟಿ ರೂಪಾಯಿ ವಾಚ್ ಕಟ್ಟಿಕೊಂಡು ಐಷರಾಮಿ ಜೀವನವನ್ನೇ ನಡೆಸಿರುವ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರ ರಾಜ್ಯದಲ್ಲಿ ಅದೆಷ್ಟೋ ಭ್ರಷ್ಟಚಾರಗಳು, ಅವ್ಯವಹಾರಗಳು ತಾಂಡವವಾಡಿದೆಯೋ ಅದಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಆದರೆ ಸತ್ತವರನ್ನೂ ಬದುಕಿಸಿ ಓಟು ಕೀಳುತಿದ್ದ ರಾಜಕಾರಣಿಗಳು ಇದೀಗ ಮತದಾನದ ವಯಸ್ಸನ್ನು ತಲುಪದ ಮಕ್ಕಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಅವರಿಂದಲೇ ಓಟು ಕೀಳಿಸುವ ತಂತ್ರವನ್ನೂ ಈ ಬಾರಿ ಹೆಣೆದಿದ್ದಾರೆ ಎಂದರೆ ನಂಬ್ತೀರಾ??

ಆದರೆ ಇದನ್ನು ನಂಬಲೇಬೇಕು!! ಯಾಕೆಂದರೆ ಈ ಹಿಂದೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಟ್ಟ ಹಾಕಲು ಕರ್ನಾಟಕದ ಕಾಂಗ್ರೆಸ್ ಪಕ್ಷವು ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ. ಯಾಕಂದರೆ ಈ ಹಿಂದೆ ಸಿ.ಎಂ ಸಿದ್ದರಾಮಯ್ಯ ನವರು ಯಾವ ರೀತಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದರು ಎನ್ನುವ ರಹಸ್ಯವನ್ನು ಬಿಚ್ಚಿಟ್ಟು ವಿವಾದವನ್ನು ಸೃಷ್ಟಿಸಿದ್ದರು.

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಸಿ ಎಂ ಸಿದ್ದರಾಮಯ್ಯನವರು ಹುಮ್ಮಸ್ಸಿನಲ್ಲಿ ಅಂದು ನಕಲಿ ಮತದಾನ ನಡೆದಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಜೊತೆಗೆ ಅಂದಿನ ಉಪಚುನಾವಣೆಯಲ್ಲಿ ಸತ್ತವರ ಓಟನ್ನೂ ಪಡೆದ ಬಗ್ಗೆ ಜನರ ಜೊತೆ ಖುಷಿ ಹಂಚಿಕೊಂಡಿದ್ದರು!! ಆದರೆ ಈ ಬಾರಿ ಯಾವ ರೀತಿಯಾಗಿ ಮತವನ್ನು ಪಡೆದುಕೊಳ್ಳುತ್ತಾರೆ ಎಂಬುವುದು ಗೊತ್ತಿಲ್ಲ!!

ಆದರೆ, ಮತದಾನದ ವಯಸ್ಸನ್ನು ತಲುಪದ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ ಎಂಬ ಆರೋಪ ಇದೀಗ ಕೇಳಿ ಬಂದಿದ್ದು, ಅಚ್ಚರಿಯನ್ನು ಸೃಷ್ಟಿಸಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳದಲ್ಲಿ ಮತದಾನಕ್ಕೆ ಅರ್ಹರಲ್ಲದ ಹೈಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಿ 2018ರ ವಿಧಾನಸಭೆಗೆ ಮತದಾನ ಮಾಡಲು ಅವರನ್ನು ತಯಾರಿ ಮಾಡಲಾಗುತ್ತಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಈ ಕುರಿತು ಮುಧೋಳ ಶಾಸಕ ಗೋವಿಂದ ಕಾರಜೋಳ ಅವರು ಈ ಅಕ್ರಮ ತಡೆಗಟ್ಟಬೇಕು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಇದು ಕೇವಲ ನಾಗರಾಳ ಗ್ರಾಮವೊಂದರಲ್ಲಿ ನಡೆದಿರುವ ಘಟನೆಯಲ್ಲ. ಕ್ಷೇತ್ರದಲ್ಲಿ ಇರುವ 202 ಬೂತ್ ಗಳ ಪೈಕಿ ಅನೇಕ ಕಡೆಗೆ ಇದೇ ತೆರನಾಗಿ ವಿದ್ಯಾರ್ಥಿಗಳ ಹೆಸರು ಸೇರಿಸುವ ಕಾರ್ಯ ನಡೆದಿದೆ ಎನ್ನುವುದನ್ನು ಅವರು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಕೆಲ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ, ಯಾರದ್ದೋ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಚುನಾವಣೆಯಲ್ಲಿ ವಿಜಯಶಾಲಿಯಾಗಲು ಮಕ್ಕಳ ಮತವನ್ನು ಪಡೆಯಲು ಯತ್ನಿಸುತ್ತಿದ್ದಾರೆ ಎಂದರೆ ಅದು ನಾಚಿಕೆಗೇಡಿನ ವಿಚಾರ!!

ಯಾಕೆಂದರೆ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ತಾನು ಸತ್ತವರ ಓಟಿನಿಂದಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು. ಸತ್ತವರನ್ನು ಮತದಾನ ಪಟ್ಟಿಯಲ್ಲಿ ಸೇರಿಸಿ ಅವರಿಂದ ಓಟು ಕೀಳಿಸಿಸುವ ತಂತ್ರಗಳು ನಡೆಸಿರುವ ರಾಜಕೀಯ ಪಕ್ಷಗಳು ಕುತಂತ್ರದಿಂದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು ಮಾತ್ರ ಅಕ್ಷಮ್ಯ ಅಪರಾಧ.

ಆದರೆ ಈ ಬಾರಿಯ ವಿಧಾನ ಸಭೆಯ ಚುನಾವಣೆಗೆ ಭರದಿಂದ ಸಿದ್ಧತೆಗಳನ್ನು ನಡೆಸಿರುವ ಎಲ್ಲಾ ಪಕ್ಷಗಳು ಮತದಾನಕ್ಕೆ ಅರ್ಹರಲ್ಲದ ಹೈಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಿ 2018ರ ವಿಧಾನಸಭೆಗೆ ಮತದಾನ ಮಾಡಲಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ ಮಕ್ಕಳನ್ನು ಚುನಾವಣೆಗೆ ಯಾರು ತಯಾರಿ ಮಾಡುತ್ತಿದ್ದಾರೆ ಎಂಬುವುದು ಮಾತ್ರ ಗೊತ್ತಾಗುತ್ತಿಲ್ಲ!!

ಇದು ಕೇವಲ ಒಂದು ಗ್ರಾಮದ ಪ್ರಶ್ನೆಯಲ್ಲ!! ಯಾಕೆಂದರೆ ಕೇವಲ ಒಂದು ಗ್ರಾಮದಲ್ಲಿ ಈ ರೀತಿ ನಡೆದಿದ್ದರೆ ಇದನ್ನು ಪಿ.ಡಿ.ಒ ಗಳು ಅಥವ ಕೆಲ ಅಧಿಕಾರಗಳ ನಿರ್ಲಕ್ಷ್ಯ ಎನ್ನಬಹುದು. ಆದರೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳ ಗ್ರಾಮ ಮಾತ್ರವಲ್ಲದೇ, 202 ಬೂತ್ ಗಳ ಪೈಕಿ ಅನೇಕ ಕಡೆಗೆ ಇದೇ ತೆರನಾಗಿ ವಿದ್ಯಾರ್ಥಿಗಳ ಹೆಸರು ಸೇರಿಸುವ ಕಾರ್ಯ ನಡೆದಿದೆ ಎಂದರೆ ಅದು ಅಕ್ರಮವಲ್ಲದೇ ಬೇರೆನೂ??

ಆದರೆ ಮಕ್ಕಳನ್ನು ಚುನಾವಣೆಗೆ ದಾಳವಾನ್ನಾಗಿ ಬಳಸಿ, ವಿದ್ಯಾರ್ಥಿಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಈ ಕುರಿತು ಮುಧೋಳ ಶಾಸಕ ಗೋವಿಂದ ಕಾರಜೋಳ ಅವರು ಈ ಅಕ್ರಮ ತಡೆಗಟ್ಟಬೇಕು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದು, ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಮತ್ತು ಮಾಡುತ್ತಿರುವವರು ಯಾರು ಎನ್ನುವ ನಿಖರ ಮಾಹಿತಿ ಇನ್ನು ತಿಳಿಯಬೇಕಾಗಿದೆ.

– ಅಲೋಖಾ

ಮತದಾರರ ಪಟ್ಟಿಯಲ್ಲಿ ಹೈಸ್ಕೂಲ್​ ವಿದ್ಯಾರ್ಥಿಗಳ ಹೆಸರು; ಅಕ್ರಮ ತಡೆಗಟ್ಟುವಂತೆ ಶಾಸಕ ಕಾರಜೋಳ ಮನವಿ

Tags

Related Articles

Close