ಪ್ರಚಲಿತ

ಸದಾಕಾಲ ರಾಹುಲ್ ಗಾಂಧಿಗೆ ಚಳಿ ಜ್ವರ ಬಿಡಿಸುವ, ಬೆಂಕಿ ಚೆಂಡಾದ ಈ ಮಹಿಳಾ ರಾಜಕಾರಣಿ ಗುಜರಾತಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆಯೇ?!

ಗುಜರಾತ್ ಪ್ರಧಾನಿ ಮೋದಿಯ ಪ್ರಭಾವಿ ನಾಯಕತ್ವವನ್ನು ಮತ್ತೆ ಮತ್ತೆ ಬಯಸುತ್ತಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ ಬಿಡಿ! ಗುಜರಾತ್ ಗೆ ‘ಮೋದಿ’ ಬೇಕೆನ್ನುವ ಕೂಗು ಪ್ರತೀ ಬಾರಿಯೂ ಎದ್ದಿತ್ತು! ನರೇಂದ್ರ ಮೋದಿ ನಂತರ ಬಂದ ಮುಖ್ಯಮಂತ್ರಿ ಆನಂದಿಬೆನ್ ಗೆ ಮೋದಿಯ ಗೈರನ್ನು ತುಂಬಲು ಸಾಧ್ಯವಾಗಲೇ ಇಲ್ಲ. ಅಲ್ಲದೇ, ಗುಜರಾತಿನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಬಿಟ್ಟರೆ, ಗುಜರಾತಿಗಳ ಯಾವ ಬೆಂಬಲವೂ ಸಿಗದೇ ಹೋಯಿತು! ನಂತರ ಬಂದ ಮುಖ್ಯಮಂತ್ರಿ ವಿಜಯ್ ರೂಪಾನಿ ಮೋದಿಯವರ ಸ್ಥಾನವನ್ನು ಅರ್ಧದಷ್ಟು ತುಂಬಿದ್ದರೂ, ಸ್ವತಃ ರೂಪಾನಿಯವರೇ, ಮೋದಿಯವರ ಸ್ಥಾನವನ್ನು ತುಂಬಲು ಸೂಕ್ತ ಅಭ್ಯರ್ಥಿಗಳಿಲ್ಲ ಎಂದು ಒಪ್ಪಿದ್ದರು.

ವಿಜಯ್ ರೂಪಾನಿ 25000 ಮತಗಳಿಂದ ಗೆದ್ದರೂ ಸಹ, ಬಿಜೆಪಿಗೆ ಮುಖ್ಯಮಂತ್ರಿಯನ್ನಾಗಿ ವಿಜಯ್ ರೂಪಾನಿಯವರನ್ನು ಆಯ್ಕೆ ಮಾಡುವಲ್ಲಿ ಗೊಂದಲಕ್ಕೀಡಾಗಿದೆ. ಅದಲ್ಲದೇ, ಈಗ ಮುಖ್ಯಮಂತ್ರಿ ಸ್ಥಾನದ ಚುನಾವಣಾ ಕಣಕ್ಕೆ ದೇಶ ಕಂಡ ಅದ್ಭುತ ಮಹಿಳಾ ರಾಜಕಾರಣಿ ಸ್ಮೃತಿ ಇರಾನಿ ರಂಗ ಪ್ರವೇಶ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಜವಳಿ, ಮಾಹಿತಿ ಮತ್ತು ಪ್ರಸರಣ ಸಚಿವೆಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಮೃತಿ ಇರಾನಿ ಗುಜರಾತಿಗಳಿಗೆ ಚಿರಪರಿಚಿತವೂ ಹೌದು! ಜೊತೆ ಜೊತೆಗೆ ಸ್ವತಃ ಪ್ರಧಾನಿಯೇ ಆಕೆಯ ಕೆಲಸವನ್ನು ನೋಡಿ ಪ್ರಶಂಸಿಸಿದ್ದರು!

ಅಂದುಕೊಳ್ಳುವಷ್ಟು ಗೆಲುವು ಸಿಗದಿದ್ದರೂ ಸಹ, ಮತಗಳ ವಿಭಜನೆಯಾದರೂ ಸಹ, ಬಿಜೆಪಿಯ ಗೆಲುವಿಗೇನೂ ತೊಂದರೆಯಾಗಲಿಲ್ಲ. ಅದರರ್ಥ ಇನ್ನೂ ಗುಜರಾತಿಗಳು ಬಿಜೆಪಿಯೆಡೆ ಒಲವನ್ನು ಹೊಂದಿದ್ದಾರೆಂಬುದು ಮಾತ್ರವೇ! ಇಷ್ಟು ದಿನವೂ, ಮೋದಿಯ ನಂತರ ಬಂದ ಮುಖ್ಯಮಂತ್ರಿಗೆ ಮೋದಿಯವರ ಸ್ಥಾನವನ್ನು ತುಂಬಲಿಕ್ಕಾಗಲಿಲ್ಲ ಎನ್ನುವುದಕ್ಕಿಂತ, ಗುಜರಾತ್ ಗೆ ಒಬ್ಬ ಪ್ರಭಾವೀ ರಾಜಕಾರಣಿಯ ಅಗತ್ಯವಿದೆ ಎಂದೆನಿಸಿದ್ದೇ, ಬಿಜೆಪಿ ಸ್ಮೃತಿ ಇರಾನಿಯ ಕಡೆ ನೋಡಿದೆ!

ಈ ಹಿಂದೆ ಅದೆಷ್ಟೋ ಪ್ರಭಾವಿ ರಾಜಕಾರಣಿಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು ಸ್ಮೃತಿ ಇರಾನಿ!

ವಾಸ್ತವವಾಗಿ, ಸ್ಮೃತಿ ಇರಾನಿ ಎಂದಾಕ್ಷಣ ಕಣ್ಣೆದುರಿಗೆ ಬರುವುದು ನಗುಮೊಗದ ಇರಾನಿ ಯಷ್ಟೇ! ಅದೇ, ರಾಷ್ಟ್ರದ ಪ್ರಶ್ನೆ ಬಂದಾಗ, ಹಿಂದುತ್ವದ ಪ್ರಶ್ನೆ ಬಂದಾಗ ಸಿಡಿದೆದ್ದ ರೀತಿ ಟೀಕಾಕಾರರ ನಗುವನ್ನೇ ಮರೆಸಿ ಬೆವರಿಳಿಸಿಬಿಟ್ಟಿತ್ತು!

1. ಯಾವಾಗ, ಕಾಂಗ್ರೆಸ್ ನ ಹಿರಿಯ ನಾಯಕನಾದ ಪಿ.ಚಿದಂಬರಮ್ ‘ಕಾಶ್ಮೀರಿಗಳಿಗೆ ಸ್ವಾತಂತ್ರ್ಯ ಬೇಕಾಗಿದೆ ಅಷ್ಟೇ!” ಎಂದಿದ್ದಾಗ, ಸ್ಮ್ರತಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು!

“ನನಗನ್ನಿಸುವ ಹಾಗೆ ಪಿ.ಚಿದಂಬರಮ್ ಇವತ್ತು ಭಾರತದ ಒಗ್ಗಟ್ಟನ್ನು ಒಡೆದು ಚೂರಾಗಿಸುವ ಮಾತನಾಡುತ್ತಿರುವುದು ನಿಜಕ್ಕೂ ಅಸಹ್ಯ ಮತ್ತು ಆಘಾತಕರ! ಅಷ್ಟಾದರೂ ನನಗೆ ಈ ಮಾತುಗಳನ್ನು ಕೇಳಿ ಆಶ್ಚರ್ಯವಾಗುತ್ತಿಲ್ಲ! ಯಾಕೆಂದರೆ, ಪಿ.ಚಿದಂಬರಮ್ ಕಾಂಗ್ರೆಸ್ ನ ಮನಃಸ್ಥಿತಿಯನ್ನು ಬಿಂಬಿಸುತ್ತಿದ್ದಾರಷ್ಟೇ!

2. ಈ ಹಿಂದೆ, ಬರ್ಕ್ಲೆಯ ಕ್ಯಾಲಿಫೋರ್ನಿಯನ್ ವಿಶ್ವ ವಿದ್ಯಾನಿಲಯದಲ್ಲಿ ಭಾರತದ ಬಗ್ಗೆ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರು. ‘ಭಾರತ ರಾಜಕಾರಣ ಪರಂಪರೆಯಿಂದ ಆಳಲ್ಪಡುತ್ತಿದೆ’ ಎಂದು ಟೀಕಿಸಿದ್ದರು. ಅಷ್ಟಾಗುತ್ತಿದ್ದಂತೆ, ಸ್ಮೃತಿ ಇರಾನಿ ತಕ್ಷಣ ಪ್ರತಿಕ್ರಿಯಿಸಿದ್ದರು! ರಾಹುಲ್ ಗಾಂಧಿಯನ್ನು ‘ಒಬ್ಬ ವಿಫಲ ರಾಜಕಾರಣಿ ಎಂದು ಜರಿದಿದ್ದ ಸ್ಮೃತಿ ಇರಾನಿ, “ವಿಫಲವಾದ ಪರಂಪರೆಯೊಂದು ಇವತ್ತು ವಿಫಲವಾದ ರಾಜಕೀಯ ಯಾತ್ರೆಯ ಬಗ್ಗೆ ಅಮೇರಿಕಾದಲ್ಲಿ ಮಾತನಾಡಲು ತೊಡಗಿದೆ! ದೇಶವಂತೂ ಇವರ ಮಾತು ಕೇಳುತ್ತಿಲ್ಲ. ಅದಕ್ಕೇ ಅಲ್ಲೆಲ್ಲೋ ಅಮೇರಿಕಾದಲ್ಲಿ ಕುಳಿತು ಮಾತನಾಡುತ್ತಿದೆ! ವಾಸ್ತವವಾಗಿ, ಪ್ರಧಾನಿಯನ್ನು ರಾಹುಲ್ ಟೀಕಿಸುತ್ತಿರುವುದು ನಿರೀಕ್ಷೆ ಮಾಡಿದಂತೆ ಸರಿಯಾಗಿದೆ! ಇದು ಬೇರಿನ್ನೇನಲ್ಲ! ವಿಫಲವಾದ ರಾಜಕೀಯ ತಂತ್ರವಷ್ಟೇ! ”

ಇಷ್ಟೇ ಸಾಕು! ಸ್ಮೃತಿ ಇರಾನಿ ಎಂತಹವರನ್ನೂ ರಾಷ್ಟ್ರದ ವಿಚಾರವಾಗಿ ಅಷ್ಟು ಸುಲಭಕ್ಕೆ ಬಿಡುವುದಿಲ್ಲ ಎಂಬುದು!

ಮೋದಿ ಸರಕಾರದಲ್ಲಿ ಮಹಿಳೆಯರಿಗೆ ಸಿಗುವ ಗೌರವಾದರಗಳು ಹೇಗಿವೆ ಎಂದು ಮತ್ತೆ ಹೇಳಬೇಕಾಗಿಲ್ಲ! ವಿದೇಶಾಂಗ ಸಚಿವೆಯಾಗಿರುವ ಸುಷ್ಮಾ ಸ್ವರಾಜ್ ಅಸಾಮಾನ್ಯವಾಗಿ ಕರ್ತವ್ಯಪಾಲನೆ ಮಾಡುತ್ತಿರುವುದು ಮೋದಿ ಸಹಕಾರದಿಂದಲೇ! ಜಗತ್ತಿನ ಯಾವ ಕಡೆಯಿಂದಲೇ ಸಹಾಯ ಯಾಚಿಸಿ ಬರಲಿ, ಸುಷ್ಮಾ ಸ್ವರಾಜ್ ತಕ್ಷಣವೇ ಕಾರ್ಯನಿವ್ರತ್ತರಾಗುತ್ತಾರೆ!

ಇಬ್ಬರಲ್ಲದೇ, ಅತ್ಯುನ್ನತ ಹುದ್ದೆಯಲ್ಲಿರುವ, ಇಂದಿನ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಕೂಡಾ, ಮೋದಿ ಬೆಂಬಲದಿಂದ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಅನಾಯಾಸವಾಗಿ ಹೊತ್ತಿದ್ದಷ್ಟೇ! ಅಧಿಕಾರ ಸ್ವೀಕರಿಸಿದ ಮೊದಲ ದಿನವೇ, ದೇಶದ ಭದ್ರತಾ ಯೋಜನೆಗಳಿಗೆ ಬಿಲಿಯನ್ ಡಾಲರ್ ಗಳಷ್ಟು ಹಣ ಅನುದಾನ ಮಾಡಲು ಸಹಿ ಹಾಕಿದ‌್ದರು. ಗಡಿ ಭಾಗದ ಚೀನಾ ಸೈನಿಕರ ಜೊತೆ ಮಾಡಿದ ಮಾತುಕಥೆ ನೋಡಿ ಸ್ವತಃ
ಚೀನಾವೇ ಬೆದರಿತ್ತು!

ಇವೆಲ್ಲ ಬೆಳವಣಿಗೆಗಳು, ಮೋದಿ ಸರಕಾರದ ‘ಬೇಟಿ ಬಚಾವೋ! ಬೇಟಿ ಪಡಾವೋ!’ ಎಂಬ ಸಿದ್ಧಾಂತಕ್ಕೆ ತಕ್ಕನಾಗಿ ಆಡಳಿತ ನಡೆಸುತ್ತಿರುವ ಕುರುಹುಗಳಷ್ಟೇ! ಅಲ್ಲದೇ, ಮೋದಿ ಸರಕಾರ ಮಹಿಳೆಯರ ಯುಕ್ತಿಯ ಬಗೆಗೆ ನಂಬಿಕೆ ಇಟ್ಟಿರುವುದರಿಂದ ಗುಜರಾತಿನ ಮುಖ್ಯಮಂತ್ರಿ ಯಾಗಿ ಸ್ಮೃತಿ ಆಯ್ಕೆಯಾದರೂ ಸಹ ಯಾವುದೇ ಆಶ್ಚರ್ಯವಿಲ್ಲವಷ್ಟೇ! ಇದನ್ನು ಸ್ಮೃತಿ ಇರಾನಿ, ‘ಅವಶ್ಯವಾಗಿ ನಾನು ಸ್ಫರ್ಧಿಯಲ್ಲ’ ಎಂಬುವುದನ್ನು ಹೇಳಿದರೂ ಸಹ, ಗುಜರಾತ್ ಸ್ಮ್ರತಿ ಇರಾನಿಗೆ ಪರೋಕ್ಷವಾಗಿಯೇ ಬೆಂಬಲಿಸತೊಡಗಿದೆ!

ವಿಜಯ್ ರೂಪಾನಿ, ಸ್ಮೃತಿ ಇರಾನಿ ಅಲ್ಲದೇ, ರಸ್ತೆ, ಸಾರಿಗೆ ಸಚಿವರಾಗಿರುವ, ರೈತರ ಮೆಚ್ಚುಗೆ ಪಡೆದಿರುವ, ಗುಜರಾತಿಗಳ ನೆಚ್ಚಿನ, ಸೌರಾಷ್ಟ್ರದ ಮಾನ್ಸುಕ್ ಎಲ್ ಮಾಂಡ್ವಿಯಾ ಕೂಡ ಕಣದಲ್ಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ನೀಡಿದೆ.

– ಪೃಥು ಅಗ್ನಿಹೋತ್ರಿ

Tags

Related Articles

Close