ಪ್ರಚಲಿತ

ಹಿಂದುವಿನಿಂದ ಹಿಂದುವಿಗೊಂದು ಬಹಿರಂಗ ಪತ್ರ!!

ಪ್ರೀತಿಯ ಹಿಂದು ಮಿತ್ರರೇ,
ನಿಮಗಿದೋ‌ ಬಹಿರಂಗ ಪತ್ರ

ಈ ಪತ್ರವನ್ನು ಬರೆಯಲು ಕೂತಾಗ ಮನಸ್ಸಿಗೆ ತುಂಬಾ ನೋವಾಯಿತು. ಆದರೂ ಬರೆಯುತ್ತಾ ಇದ್ದೇನೆ…!ನಮಗೆ ಇಲ್ಲಿ ಯಾರೂ ಅಪಾಯಕಾರಿಯಲ್ಲ. ನಮಗೆ ನಾವೇ ಅಪಾಯಕಾರಿ ಆಗುತ್ತಿದ್ದೇವೆ. ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದೇ ಇರುವುದರಿಂದಲೇ ನಮ್ಮನ್ನು ಒಡೆದು ಹಾಕುವ ಕೈಗಳು ಹೆಚ್ಚಾಗುತ್ತಿರುವುದು.

ಇತಿಹಾಸದಲ್ಲಿ ಭಾರತಕ್ಕೆ ಅನೇಕ ವಿದೇಶಿಗರು ಬಂದು ನಮ್ಮನ್ನು ಆಳ್ವಿಕೆ ನಡೆಸಿದ್ದರು. ಮೊಘಲರು 700 ವರ್ಷಗಳ ಕಾಲ ಭಾರತವನ್ನು ಆಳ್ವಿಕೆ ನಡೆಸಿದ್ದಾರೆ.

ಭಾರತದಲ್ಲಿ ರಾಜರ ಆಳ್ವಿಕೆಯ ಸಂದರ್ಭವದು.ರಾಜರ ಆಡಳಿತದಲ್ಲಿ ಭಾರತ ಸಂಪದ್ಭರಿತ ದೇಶವಾಗಿತ್ತು.
ಆದರೆ ಇಲ್ಲಿನ ರಾಜರ ಮಧ್ಯೆ ಒಗ್ಗಟ್ಟು ಎಂಬುದು ಮಾತ್ರ ಇರಲಿಲ್ಲ. ಇದನ್ನೇ ಬಂಡವಾಳವಾಗಿ ಪಡೆದ ವಿದೇಶಿಗರು ಭಾರತಕ್ಕೆ ಬಂದು ಇಲ್ಲಿನ ರಾಜರುಗಳ ವೈಫಲ್ಯವನ್ನೇ ತಾವು ಭಾರತದಲ್ಲಿ ಆಳ್ವಿಕೆ ನಡೆಸಲು ದಾರಿಯನ್ನಾಗಿ ಮಾಡಿಕೊಂಡರು.

ಇಡೀ ಜಗತ್ತನ್ನೇ ಗೆಲ್ಲಲು ಹೊರಟಂತಹ ಅಲೆಗ್ಸಾಂಡರ್ ಭಾರತವನ್ನು ಪ್ರವೇಶಿಸಲೂ ಆಗಲಿಲ್ಲ.
ಯಾಕೆಂದರೆ ಇಲ್ಲಿ “ಚಾಣಕ್ಯ” ಎಂಬ ಮಹಾನ್ ಪಂಡಿತನ ಮಾತಿಗೆ ಅಷ್ಟು ಗೌರವ ಸಿಗುತ್ತಿತ್ತು.
ಚಾಣಕ್ಯನ ಮಾತಿನಿಂದ ಒಗ್ಗಟ್ಟಾಗಿದ್ದ ಹಿಂದೂಗಳಿಂದಾಗಿ ಅಲೆಗ್ಸಾಂಡರ್ ಭಾರತವನ್ನು ಪ್ರವೇಶಿಸಲು ಆಗಲಿಲ್ಲ.
ಭಾರತೀಯರ ಸಹಾಯ ಇಲ್ಲದೆ ಭಾರತವನ್ನು ಏನೂ ಮಾಡಲು ಆಗುವುದಿಲ್ಲ ಎಂದು ಅರಿತ ಅಲೆಗ್ಸಾಂಡರ್ “ಅಂಬಿಕುಮಾರ” ಎಂಬ ರಾಜನ ಜೊತೆ ಕೆಲವು ಒಪ್ಪಂದಗಳಿಗೆ ಸಹಿ ಹಾಕಿ ಅವನ ಸಹಾಯದಿಂದ ಭಾರತಕ್ಕೆ ಬಂದನು.
ಇಲ್ಲಿಂದ ಬ್ರಿಟೀಷರ ಆಗಮನವೂ ಶುರುವಾಯಿತು.

ಭಾರತದಲ್ಲಿ ತಾವು ಆಳ್ವಿಕೆ ನಡೆಸಬೇಕಾದರೆ ಇಲ್ಲಿನ ಹಿಂದೂಗಳ ಒಗ್ಗಟ್ಟು ಮುರಿಯಬೇಕು ಎಂದು ಅರಿತಿದ್ದ ಬ್ರಿಟೀಷರು ಭಾರತಕ್ಕೆ ಬಂದು ಇಲ್ಲಿನ ರಾಜರುಗಳ‌ ಮಧ್ಯೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದರು.

ಬ್ರಿಟೀಷರ ಮುಖ್ಯ ತತ್ವವೇ “ಒಡೆದು ಆಳುವ ನೀತಿ”. ಇದೇ ತತ್ವವನ್ನು ಅನುಸರಿಸಿ ಭಾರತದಲ್ಲಿ ಆಳ್ವಿಕೆ ನಡೆಸಲು ಆರಂಭಿಸಿ ಇಡೀ ದೇಶದ ಸಂಪತ್ತನ್ನು ದೋಚಿಕೊಂಡು ಹೋದರು. ಇಷ್ಟಾದರೂ ನಮ್ಮ ದೇಶದ ಹಿಂದೂಗಳಿಗೆ ಅರ್ಥವಾಗದೇ ಇರುವುದೇ ದುರಾದ್ರಷ್ಟಕರ. ಯಾಕೆಂದರೆ ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದೇ ಇರುವುದರಿಂದಲೇ ಭಾರತದಲ್ಲಿ ಇಂದಿಗೂ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದು.

ಪ್ರಥ್ವಿರಾಜ್ ಚೌಹಾಣನಂತಹ ಹಿಂದೂ ರಾಜನನ್ನು ಅದೆಷ್ಟು ಬಾರಿ ಸೋಲಿಸಲು ಪ್ರಯತ್ನಿಸಿದರು ಅದಾಗದೇ ಇದ್ದಾಗ ಜಯಚಂದ್ ಎಂಬ ಮಂತ್ರಿಯ ಸಹಾಯದಿಂದ ಮಹಮ್ಮದ್ ಘೋರಿಯು ಪ್ರಥ್ವಿರಾಜ್ ಚೌಹಾಣನ ಮೇಲೆ ಆಕ್ರಮಣ ಮಾಡಿ ಸೋಲಿಸಿದ್ದನು.

ಇದೇ ರೀತಿ ಮೋಸದಿಂದಲೇ ನಮ್ಮ ಹಿಂದೂ ರಾಜರುಗಳನ್ನು ಸೋಲಿಸಿದ್ದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಯ ಜೊತೆ ಹೋರಾಡಿ ಹಿಂದೆ ಸರಿದಿದ್ದ ಬ್ರಿಟೀಷರು ಕುದುರೆಯೊಂದನ್ನು ಉಡುಗೊರೆಯಾಗಿ ನೀಡುವ ನೆಪದಲ್ಲಿ ಯುದ್ದಕ್ಕೆ ನಾಲಾಯಕ್ ಆದ ಕುದುರೆಯನ್ನು ನೀಡಿ ರಾಣಿಯನ್ನು ಮೋಸದಿಂದ ಸೋಲಿಸಿದ್ದರು.

ನಂತರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಜೊತೆಗೆ ಯುದ್ದ ಮಾಡಿ ಸೋತಿದ್ದ ಬ್ರಿಟೀಷರು ಇನ್ನು ಈ ರಾಣಿಯನ್ನು ಸೋಲಿಸಲು ಆಗುವುದಿಲ್ಲ ಎಂದು ಹಿಂದೆಸರಿದಿದ್ದ ಬ್ರಿಟೀಷರಿಗೆ ಚೆನ್ನಮ್ಮನ ಮಂತ್ರಿಮಂಡಲದಿಂದಲೇ ಮೋಸಮಾಡಲಾಗಿತ್ತು. ರಾಣಿ ಚೆನ್ನಮ್ಮನ ಕೆಲ ಮಂತ್ರಿಗಳ ಸಹಾಯದಿಂದ ಚೆನ್ನಮ್ಮಳನ್ನು ಬ್ರಿಟೀಷರು ಸೋಲಿಸಿದ್ದರು.

ಇದೇ ರೀತಿಯಲ್ಲಿ ಉಳ್ಳಾಲದ ವೀರ ವನಿತೆ ಅಬ್ಬಕ್ಕ ರಾಣಿಯ ಜೊತೆಗೆ ಯುದ್ದಕ್ಕೆ ಇಳಿದಿದ್ದ ಪೋರ್ಚುಗೀಸರು ಸತತ ಆರು ಬಾರಿ ಅಬ್ಬಕ್ಕಳ ಸೈನ್ಯದ ಎದುರು ಸೋತಿದ್ದರು. ಅಷ್ಟು ಬಲಿಷ್ಠ ಸೈನ್ಯ ಹೊಂದಿದ್ದ ಅಬ್ಬಕ್ಕ ರಾಣಿಗೆ ತನ್ನನ್ನು ಬಿಟ್ಟುಹೋಗಿದ್ದ ಮೊದಲನೇ ಗಂಡ ಪೋರ್ಚುಗೀಸರಿಗೆ ಸಹಾಯ ಮಾಡುವ ಮೂಲಕ ರಾಣಿಯನ್ನು ಸೋಲಿಸಿದ್ದರು.

ಇವೆಲ್ಲವೂ ನಡೆಯಲು ಕಾರಣ ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದರಿಂದ. ನಮ್ಮವರ ಏಳಿಗೆಗೆ ನಾವೇ ಕತ್ತರಿ ಹಾಕುವುದರಿಂದಲೇ ನಮ್ಮ ಮೇಲೆ ಆಕ್ರಮಣಗಳು ನಡೆಯುತ್ತಲೇ ಇದೆ. ಆದರೂ ಹಿಂದೂಗಳಿಗೆ ಅರ್ಥವಾಗುತ್ತಿಲ್ಲ.

ಇವೆಲ್ಲವನ್ನೂ ನಾವು ಸ್ವಾತಂತ್ರ್ಯ ಪೂರ್ವದಲ್ಲಿ ನೋಡಿದರೆ ,ಸ್ವಾತಂತ್ರ್ಯ ನಂತರದಲ್ಲಿ ಇದಕ್ಕಿಂತಲೂ ಹೆಚ್ಚಾಗಿ ಒಡೆದು ಆಳುವ ರಾಜಕಾರಣಿಗಳು ಹುಟ್ಟಿಕೊಂಡರು. ನಮ್ಮ ದುರಾಸೆಯಿಂದಲೇ ಸುಮಾರು ಸಾವಿರ ವರುಷಗಳ ಕಾಲ ಗುಲಾಮಗಿರಿಯಲ್ಲಿ ಬದುಕಿದ್ದೇವೆ. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಕೂಡ ಬ್ರಿಟೀಷರ “ಒಡೆದು ಆಳುವ ನೀತಿ” ಯನ್ನೇ ಅನುಸರಿಸಿಕೊಂಡು ಬಂದಿದೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಕೂಡಲೇ ಪ್ರಧಾನಿ ಗದ್ದುಗೆ ಏರಿದ್ದ ಜವಹರಲಾಲ್ ನೆಹರು ಭಗತ್ ಸಿಂಗ್ ಚಂದ್ರ ಶೇಖರ್ ಆಜಾದ್,ಸುಭಾಷ್ ಚಂದ್ರ ಬೋಸ್ ರಂತಹ ಮಹಾನ್ ನಾಯಕರನ್ನು ಮುಗಿಸುತ್ತಾ ಬಂದರು.
ರಾಜಕೀಯ ಲಾಭಕ್ಕಾಗಿ ಭಾರತವನ್ನು ಮತ್ತೆ ದೋಚಲು ಶುರುಮಾಡಿದರು.

ಇದೀಗ ವಿಶ್ವ ಹಿಂದು ಪರಿಷತ್ ನ ರಾಷ್ಟ್ರೀಯ ನಾಯಕ ಪ್ರವೀಣ್ ಭಾಯ್ ತೊಗಾಡಿಯಾರ ವಿಚಾರವಾಗಿ ಮತ್ತೆ ಹಿಂದೂಗಳ ಒಗ್ಗಟ್ಟು ಮುರಿಯುವ ಪ್ರಯತ್ನ ನಡೆಯುತ್ತಿದೆ. ಯಾಕೆಂದರೆ ನಾಪತ್ತೆಯಾಗಿದ್ದ ಪ್ರವೀಣ್ ಭಾಯ್ ತೊಗಾಡಿಯಾ ರವರು ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮತ್ತು ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಿಂದಲೇ ಸುದ್ದಿಗೋಷ್ಟಿ ನಡೆಸಿದ ತೊಗಾಡಿಯಾ ರ ಹೇಳಿಕೆ ಇದೀಗ ಮತ್ತೆ ಬಲಪಂಥೀಯರ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡುತ್ತಿದೆ.

ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ನೂರಾರು ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರನ್ನು ಕಾಂಗ್ರೆಸ್ ಕೊಲೆ ಮಾಡಿಸಿತ್ತು. ಇದೀಗ ಅದೇ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿತ ಕೆಲವರು ತೊಗಾಡಿಯಾ ಭೇಟಿ ಮಾಡಲು ಸಾಲು ನಿಂತಿದ್ದಾರೆ ಎಂದರೆ ಮತ್ತೆ ತಮ್ಮ “ಒಡೆದು ಆಳುವ ನೀತಿ” ಯನ್ನು ಪ್ರಯೋಗಿಸುತ್ತಿದ್ದಾರೆ.

ಮೋದಿಯನ್ನು ವಿರೋಧಿಸುವವರೆಲ್ಲರೂ ತೊಗಾಡಿಯಾರನ್ನು ಭೇಟಿ ಮಾಡುತ್ತಿದ್ದು ತಮ್ಮ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದೇ ಅರ್ಥ…!

ಇದೇ ಕಾಂಗ್ರೆಸ್ ಪ್ರವೀಣ್ ಭಾಯ್ ತೊಗಾಡಿಯರನ್ನು “ಕೇಸರಿ ಭಯೋತ್ಪಾದಕ” ಎಂದು ಕರೆದಿತ್ತು.
ಹಾಗಾದರೆ ತೊಗಾಡಿಯಾರವರು ಕಾಂಗ್ರೆಸ್ ಹಿಂದೂಗಳಿಗೆ ಮಾಡಿದ ಮೋಸವನ್ನು ಮರೆತು ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತಾರೆಯೇ…!?

ಇದೀಗ ತೊಗಾಡಿಯರನ್ನು ಭೇಟಿ ಮಾಡುತ್ತಿರುವ ಹಾರ್ಧಿಕ್ ಪಟೇಲ್ ಗುಜರಾತ್ ಚುನಾವಣಾ ಸಂದರ್ಭಗಳಲ್ಲಿ ದಲಿತರ ಮತ್ತು ಗುಜರಾತಿಗರ ಮಧ್ಯೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿ ತಮ್ಮ ರಾಜಕೀಯ ಲಾಭ ಗಳಿಸುವ ಯತ್ನ ನಡೆಸುತ್ತಿದ್ದಾನೆ.

ಹಾರ್ಧಿಕ್ ಪಟೇಲ್ ಗುಜರಾತ್ ನಲ್ಲಿ ಪಟೇಲ್ ಸಮುದಾಯದ ಪರ ಧ್ವನಿ ಎತ್ತದವನಾದರೂ ಇವನ ಜೊತೆಗಿರುವವರು ಉಗ್ರರಿಗೆ ಬೆಂಬಲ ಸೂಚಿಸುವವರು. ಉಮರ್ ಖಾಲಿದ್ ಮತ್ತು ಜಿಗ್ನೇಶ್ ಮೇವಾನಿ ಯಂತಹ ದೇಶವಿರೋಧಿಗಳ ಜೊತೆ ಕೈಜೋಡಿಸಿಕೊಂಡಿರುವ ಹಾರ್ಧಿಕ್ ಪಟೇಲ್ ಇದೀಗ ತೊಗಾಡಿಯರನ್ನು ಭೇಟಿ ಮಾಡಿದ್ದು ಮತ್ತೆ ಹಿಂದೂಗಳ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದ್ದಾನೆ.

ಮಹಾರಾಷ್ಟ್ರದಲ್ಲಿ ಮರಾಠರ ಮತ್ತು ದಲಿತರ ನಡುವೆ ನಡೆದ ಸಂಘರ್ಷದಲ್ಲಿ ಇಸ್ಲಾಂ ಬಾವುಟಗಳು ಕಂಡುಬಂದಿದ್ದು ದಲಿತರನ್ನು ಮುಂದಿಟ್ಟುಕೊಂಡು ದೇಶವಿರೋಧಿ ಚಟುವಟಿಕೆಗಳನ್ನು ಕಾಂಗ್ರೆಸ್ ಮಾಡುತ್ತಿದೆ. ವಿದೇಶದಿಂದ ಸಿಗುವ ಹಣದ ಆಸೆಗೆ ಹಾರ್ಧಿಕ್ ಪಟೇಲ್ ದೇಶವನ್ನು ಒಡೆಯಲು ಸಿದ್ದನಾಗಿದ್ದಾನೆ ಎಂಬುದು ಈಗಾಗಲೇ ಸಾಬೀತಾಗಿದೆ.

ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶವಿರೋಧಿಗಳು ಕಂಗಾಲಾಗಿದ್ದಾರೆ. ಅದಕ್ಕಾಗಿಯೇ ಮೋದಿಯವರ ವಿರುದ್ಧ ಏನಾದರೊಂದು ಪಿತೂರಿ ನಡೆಸುತ್ತಲೇ ಬಂದಿದ್ದಾರೆ. ಆದರೆ ಇದ್ಯಾವುದಕ್ಕೂ ಜಗ್ಗದ ಮೋದಿಯವರು ನೋಟ್ ಬ್ಯಾನ್ ನಂತಹ ದೊಡ್ಡ ದೊಡ್ಡ ನಿರ್ಧಾರವನ್ನು ಕೈಗೊಳ್ಳುತ್ತಾ ಬಂದರು ಮತ್ತು ಅದರಲ್ಲಿ ಯಶಸ್ಸು ಕಂಡರು.
ಹಜ್ ಯಾತ್ರೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸುವ ಮೂಲಕ ಮಹತ್ತರವಾದ ನಿರ್ಧಾರವನ್ನು ತಂದರು.

ಇಡೀ ವಿಶ್ವವೇ ಇಂದು ಭಾರತದ ಸ್ನೇಹ ಬಯಸುತ್ತಿದೆ ಎಂದರೆ ಅದಕ್ಕೆ ಕಾರಣ “ಶ್ರೀನರೇಂದ್ರ ಮೋದಿ”. ಭಾರತದಲ್ಲಿ ಹಿಂದೂಗಳಿಗೆ ಹಿಂದೂಗಳೇ ವಿರೋಧಿಗಳಾದರೆ ಇದನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ” ಕೈ ” ಗಳು ಸಾಕಷ್ಟಿದೆ…!

ಇನ್ನಾದರೂ ಹಿಂದೂಗಳು ಜೊತೆಯಾಗಿ ರಾಷ್ಟ್ರ ನಾಯಕನ ಜೊತೆ ಸಾಗೋಣ. ಭಾರತವನ್ನು ಜಗದ್ಗುರು ಸ್ಥಾನಕ್ಕೆ ಕೊಂಡೊಯ್ಯೋಣ…!

“ಜೈ ಹಿಂದ್”

–ಅರ್ಜುನ್

Tags

Related Articles

Close