ಪ್ರಚಲಿತ

ಸಿದ್ದರಾಮಯ್ಯ ಸರಕಾರ ಈ ರೀತಿ ಮಾಡುವುದನ್ನು ಬಿಟ್ಟು ನಮಗೆ ಹಿಂದೂಗಳ ಓಟು ಬೇಡ ಎಂದು ನೇರವಾಗಿ ಹೇಳಬಹುದಿತ್ತು…!!!

ಪಕ್ಷಪಾತ… ಹಿಂದೂಗಳಿಗೊಂದು ನ್ಯಾಯ ಮುಸ್ಲಿಮರಿಗೊಂದು ನ್ಯಾಯ… ಮುಸ್ಲಿಂ ಓಲೈಕೆ… ಹಿಂದೂಗಳ ತುಷ್ಟೀಕರಣ. ಇದು ಕರ್ನಾಟಕದ ಕಾಂಗ್ರೆಸ್ ಸರಕಾರ ಇದುವರೆಗೆ ನಡೆಸಿಕೊಂಡು ಬಂದಿರುವ ಆಡಳಿತ ಶೈಲಿ.. ಇದರ ಬದಲು ನಮಗೆ ಮುಸ್ಲಿಮರ ಓಟು ಮಾತ್ರ ಸಾಕು.. ಹಿಂದೂಗಳ ಓಟೇ ಬೇಡ ಎಂದು ನೇರವಾಗಿ ಹೇಳಿಬಿಡಬಹುದಿತ್ತಲ್ವಾ? ಮುಂದಿನ ಬಾರಿಯೂ ಸಿದ್ದರಾಮಯ್ಯನ ಕಾಂಗ್ರೆಸ್ ಪಕ್ಷಕ್ಕೇ ಓಟು ಹಾಕಬೇಕೆಂದು ಭಾವಿಸುವವರೂ ಕೂಡಾ ಗಂಭೀರ ಚಿಂತನೆ ನಡೆಸಬೇಕಾದ ಕಾಲ ಕೂಡಿ ಬಂದಿದೆ.

ಕರ್ನಾಟಕದ ಹಿಂದೂಗಳು ಅದ್ಯಾವ ಪಾಪ ಮಾಡಿದ್ದಾರೋ ಏನೋ? ತನ್ನ ಬೋಳೇತನದಿಂದ ಕಾಂಗ್ರೆಸನ್ನು ಗೆಲ್ಲಿಸಿದ ತಪ್ಪಿಗೆ ಪ್ರಾಯಶ್ಚಿತ ಅನುಭವಿಸುವ ಕಾಲ ಬಂದೊದಗಿದೆ. ಇದೀಗ ಅದೇ ಕಾಂಗ್ರೆಸ್ ಸರಕಾರ ಹಿಂದೂಗಳ ಕಣ್ಣಿಗೆ ಸುಣ್ಣ, ಅಲ್ಪಸಂಖ್ಯಾತರ ಕಣ್ಣಿಗೆ ಬೆಣ್ಣೆ ಹಚ್ಚಲು ಮುಂದಾಗಿದೆ. ಹಿಂದೂಗಳು ಕೂಡಾ ಈ ಪಕ್ಷಕ್ಕೆ ಓಟು ಹಾಕಿದ ತಪ್ಪಿಗೆ ಹಣೆ ಚಚ್ಚಿಕೊಳ್ಳುವಂತಾಗಿದೆ. ಹಾಗಾದರೆ ಕಾಂಗ್ರೆಸ್ ಅಂಥದ್ದೇನು ಹಿಂದೂಗಳಿಗೆ ದ್ರೋಹ ಬಗೆಯಿತು ಗೊತ್ತೇ..

ರಾಜ್ಯದ ಆಯವ್ಯಯದ ಯೋಜನಾ ವೆಚ್ಚದಲ್ಲಿ ಬರೋಬ್ಬರಿ ಶೇ.15 ಅನುದಾನವನ್ನು ಬರೇ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿಯೇ ಮೀಸಲಾಗಿ ಬಳಸುವ ಸಂಬಂಧ ಸಂಪುಟ ಉಪ ಸಮಿತಿ ಸಭೆಯಲ್ಲಿ ರ್ಚಚಿಸಿ, ಸಂಪುಟದ ಮುಂದೆ ತರಲು ಕಾಂಗ್ರೆಸ್ ನಿರ್ಧರಿಸಿದೆ. ಇದರಿಂದ ಬಜೆಟ್‍ನಲ್ಲಿ ಹೆಚ್ಚು ಹಣವನ್ನು ಬರೇ ಅಲ್ಪಸಂಖ್ಯಾತರಿಗಷ್ಟೇ ಬಳಸಲು ನಿರ್ಧರಿಸಿದ್ದು, ಸಿದ್ದರಾಮಯ್ಯನ ಅಲ್ಪಸಂಖ್ಯಾತ ಪ್ರೇಮ ಮುಂದುವರಿದಿದೆ.

ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಅಲ್ಪಸಂಖ್ಯಾತರ ಇಲಾಖೆ, ರಾಜ್ಯ ಅಲ್ಪಸಂಖ್ಯಾತರ ಆಯೋಗ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದ ರಮೇಶ್ ಕುಮಾರ್ ಈ ವಿಚಾರ ಪ್ರಸ್ತಾಪಿಸಿದರು.

ಯೋಜನಾ ವೆಚ್ಚದಲ್ಲಿ ಮುಸ್ಲಿಮರಿಗೆ ಬರೋಬ್ಬರಿ ಶೇ.10 ಹಣ ಮೀಸಲು!!!

ಯೋಜನಾ ವೆಚ್ಚದಲ್ಲಿ ಶೇ.10 ಹಣ ಮುಸ್ಲಿಮರಿಗಾಗಿ, ಇತರೆ ಅಲ್ಪಸಂಖ್ಯಾತರಿಗೆ ಶೇ.5 ಹಣ ಪ್ರತಿ ವರ್ಷ ಮೀಸಲಿಡಬೇಕು. ಈ ಹಣ ಅದೇ ಆರ್ಥಿಕ ವರ್ಷದಲ್ಲಿ ಖರ್ಚಾಗದೇ ಹೋದಲ್ಲಿ ಅದು ಮರು ವರ್ಷದ ಮೀಸಲು ಹಣದೊಂದಿಗೆ ಸೇರುವಂತಾಗಬೇಕೆಂಬ ಬೇಡಿಕೆ ಬಂದಿರುವುದರಿಂದ ಈ ಬಗ್ಗೆ ಪರಾಮರ್ಶೆ ನಡೆಸಿ ತೀರ್ವನಿಸಲಾಗುವುದು ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ. ಹಾಗೆಯೇ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಅಲ್ಪಸಂಖ್ಯಾತರ ವಿರುದ್ಧ ದಾಖಲಾಗುವ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಅನುಮತಿ ಪಡೆಯಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಅರೆನ್ಯಾಯಿಕ ಶಾಸನಾತ್ಮಕ ಪ್ರಾಧಿಕಾರ ರಚಿಸಲು ಮುಂದಿನ ಹತ್ತು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ನೇಮಕದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ನೀಡಬೇಕು, ವಕ್ಪ್ ಆಸ್ತಿ ನೋಂದಣಿಗೆ ಸ್ಟ್ಯಾಂಪ್ ಡ್ಯೂಟಿಯಲ್ಲಿ ರಿಯಾಯಿತಿ, ಭೂಮಿ ಸಾಫ್ಟ್‍ವೇರ್‍ನಲ್ಲಿ ವಕ್ಪ್ ಆಸ್ತಿ ದಾಖಲೆ, ಸರ್ಕಾರದಿಂದ ಮನೆ ನೀಡುವಾಗ ಅಲ್ಪಸಂಖ್ಯಾತರಿಗೆ ಆದ್ಯತೆ, ಸೇರಿ ಹತ್ತಾರು ಬೇಡಿಕೆ ಸರ್ಕಾರದ ಮುಂದಿದೆ. ಈ ಬೇಡಿಕೆಗಳಲ್ಲಿ ಕೆಲವನ್ನು ತಕ್ಷಣವೇ ಅನುಷ್ಠಾನ ಮಾಡುತ್ತೇವೆ. ಕೆಲವು ಸಂಪುಟ ಉಪಸಮಿತಿ ಸಭೆಯಲ್ಲಿ ರ್ಚಚಿಸಿ ಸಂಪುಟ ಸಭೆ ಮುಂದೆ ತರುತ್ತೇವೆ ಎಂದು ರಮೇಶ್ ತಿಳಿಸಿದ್ದಾರೆ.

ಎಷ್ಟು ಕೊಟ್ಟರೂ ಸಾಕಾಗುವುದಿಲ್ಲ ಇನ್ನೂ ಬೇಕು…

ಸಿದ್ದರಾಮಯ್ಯ ಸರಕಾರ ಮುಸ್ಲಿಮರಿಗೆ ಎಷ್ಟೇ ಮೊಗೆದು ಮೊಗೆದು ಕೊಡುತ್ತಿದ್ದರೂ ಅದು ಇನ್ನೂ ಸಾಕಾಗೋದಿಲ್ಲವಂತೆ.. ಈ ಬಗ್ಗೆ ಸಭೆಯ ಆರಂಭದಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ನಾಸೀರ್ ಅಹ್ಮದ್, ರಾಜ್ಯದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಅಲ್ಪಸಂಖ್ಯಾತರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ 14 ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯವೇ ಇಲ್ಲ. ವಿವಿಧ ಘಟನೆಗಳು ನಡೆದ ಸಂದರ್ಭದಲ್ಲಿ ಪೆÇಲೀಸ್ ತನಿಖೆ ನಡೆಯುವ ಮುನ್ನವೇ ಕೆಲವು ಸಂಘಟನೆಗಳು ಅಲ್ಪಸಂಖ್ಯಾತರ ವಿರುದ್ಧ ಅಪಪ್ರಚಾರದಲ್ಲಿ ತೊಡಗುತ್ತಿವೆ. ಇದು ಮೊದಲು ನಿಲ್ಲಬೇಕು, ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ಸಿಗಬೇಕು ಎಂದಿದ್ದಾರೆ.

ದೇಶದಲ್ಲಿ ದಲಿತರಿಗಿಂತ ಅಲ್ಪಸಂಖ್ಯಾತರ ಸ್ಥಿತಿ ಹೀನಾಯವಾಗಿದೆಯಂತೆ…!!!

ದೇಶದಲ್ಲಿ ಜನರ ವಸತಿ, ನಿರುದ್ಯೋಗ, ಹಸಿವು, ಮಹಿಳಾ ದೌರ್ಜನ್ಯದ ಬಗ್ಗೆ ಚರ್ಚೆಯಾಗುವ ಬದಲು ಘರ್ ವಾಪ್ಸಿ, ಭಗವದ್ಗೀತೆ, ತಾಜ್‍ವುಹಲ್, ರಾಷ್ಟ್ರೀಯತೆ ಬಗ್ಗೆ ಚರ್ಚೆಯಾಗುತ್ತಿರುವುದು ದೇಶದ ಗಂಡಾಂತರ ಎಂದು ನಿವೃತ್ತ ನ್ಯಾಯಾಧೀಶ ನಾಗಮೋಹನ ದಾಸ್ ಕಳವಳ ವ್ಯಕ್ತಪಡಿಸಿದರು. ನೈಜವಾಗಿ ಚರ್ಚೆಯಾಗಬೇಕಾದ ವಿಚಾರಗಳ ಬಗ್ಗೆ ರ್ಚಚಿಸದೇ ಕಾಲಕಾಲಕ್ಕೆ ಬೇರೆ ಬೇರೆ ವಿಚಾರ ತಂದು ದಿಕ್ಕು ತಪ್ಪಿಸಲಾಗುತ್ತಿದೆ. ಕೋಮುವಾದಿ ಶಕ್ತಿಗಳು, ಮೂಲಭೂತ ವ್ಯಾಧಿಗಳು ಐಕ್ಯತೆ ಮುರಿದಿವೆ, ವಿಷಬೀಜ ಬಿತ್ತಿವೆ.

ಶಾಂತಿ ಕದಡಿವೆ. ಸಂವಿಧಾನ ನೀಡಿರುವ ಹಕ್ಕುಗಳನ್ನು ಪಕ್ಕಕ್ಕೆ ತಳ್ಳಿ ಮನು ಹೇಳಿದ್ದೇ ಮೆನು ಎಂಬಂತಾಗಿದೆ. ಆಹಾರ, ಬಟ್ಟೆ ವಿಚಾರದಲ್ಲಿ ಯಾರೇ ಪ್ರಶ್ನಿಸಿದರೂ ದೇಶದ್ರೋಹಿ ಎನ್ನುತ್ತಾರೆ. ಜೈಲಿಗೂ ಹಾಕುತ್ತಾರೆ. ದೇಶದಲ್ಲಿ ದಲಿತರಿಗಿಂತ ಅಲ್ಪಸಂಖ್ಯಾತರ ಸ್ಥಿತಿ ಹೀನಾಯವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನ್ಯಾ.ಸಾಚರ್ ನೀಡಿರುವ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿ ಹತ್ತು ವರ್ಷಗಳೇ ಕಳೆದಿದ್ದು, ಅದನ್ನು ಅನುಷ್ಠಾನ ಮಾಡಲು ರಾಜಕೀಯ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಇನ್ನಾದರೂ ವರದಿ ಒಪ್ಪಿ ಕ್ರಮಕೈಗೊಳ್ಳಲಿ ಎಂದರು.

ಈ ಮನುಷ್ಯ ಬರೇ ಅಲ್ಪಸಂಖ್ಯಾತರ ಕಷ್ಟವನ್ನಷ್ಟೇ ತಿಳಿದುಕೊಂಡಿದ್ದಾರೆ. ಬಡ ಹಿಂದೂಗಳ ಕಷ್ಟದ ಬಗ್ಗೆ ಒಬ್ಬ ನ್ಯಾಯಾಧೀಶರಾಗಿ ಅರ್ಥ ಮಾಡಿಕೊಂಡಿಲ್ಲ. ಇದ್ಯಾವ ನ್ಯಾಯ ಎಂದು ಅರ್ಥವೇ ಆಗುವುದಿಲ್ಲ.

ಹಿಂದೂಗಳಿಗೆ ಏನಿಲ್ಲ, ಬರೀ ಮುಸ್ಲಿಮರಿಗಷ್ಟೇ…

ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ ಇದುವರೆಗೆ ಮುಸ್ಲಿಮರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಶಾದಿಭಾಗ್ಯ, ವಾಹನ ಅನುದಾನ, ಮುಸ್ಲಮರಿಗಾಗಿ ಪ್ರತ್ಯೇಕ ಕಾನೂನು ಛೇ ಈ ರೀತಿ ಹಲವಾರು ಯೋಜನೆಗಳನ್ನು ಮುಸ್ಲಿಮರಿಗಾಗಿಯೇ ಜಾರಿಗೆ ತರಲಾಗಿದೆ. ಹಿಂದೂಗಳಿಗೆ ಯಾವುದನ್ನೂ ಕೊಡದ ಕಾಂಗ್ರೆಸಿಗರು ನಿರಂತರವಾಗಿ ಮೋಸ ಮಾಡುತ್ತಾ ಬರುತ್ತಿದ್ದಾರೆ ಎನ್ನುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಮುಂದಿನ ಬಾರಿಯೂ ಕಾಂಗ್ರೆಸ್‍ಗೇ ಓಟು ಹಾಕಬೇಕೆಂದು ಕೆಲವು ಹಿಂದೂಗಳು ಭಾವಿಸಿದ್ದರೆ ಸಿದ್ದರಾಮಯ್ಯ ಸರಕಾರದ ಈ ತಾರತಮ್ಯ ಧೋರಣೆಯನ್ನು ಕೂಡಲೇ ಅರ್ಥ ಮಾಡಿಕೊಳ್ಳಬೇಕಾಗಿದೆ.

source: https://goo.gl/nTueDf

ಚೇಕಿತಾನ

Tags

Related Articles

Close