ಪ್ರಚಲಿತ

ಸಿದ್ದು ಸರಕಾರದಿಂದಲೇ ಟಿಪ್ಪು ಕ್ರೂರಿಯೆಂಬ ಮಾಹಿತಿ ಬಹಿರಂಗ! ಮತ್ತೊಂದು ವಿವಾದಕ್ಕೆ ಸಿಲುಕಿದ ಸಿದ್ಧು ದರ್ಬಾರ್!

ರಾಜ್ಯದ ಕಾಂಗ್ರೆಸ್ ಸರಕಾರ ಮುಸ್ಲಿಮರ ಓಟಿಗಾಗಿ ಟಿಪ್ಪು ನಾಟಕ ಆಡಿರುವುದು ಕೊನೆಗೂ ಬಟಾಬಯಲಾಗಿದ್ದು, ಸರಕಾರದ ಮಾನ ಮೂರಾಬಟ್ಟೆಯಾಗಿದೆ.
ಟಿಪ್ಪುವಿನ ಹೆಸರಲ್ಲಿ ಜಯಂತಿ ಆಚರಿಸಿ ಹಿಂದೂ-ಮುಸ್ಲಿಮರ ಮಧ್ಯೆ ಕೋಮುದಳ್ಳುರಿ ಎಬ್ಬಿಸಿ, ದೂರದಲ್ಲಿ ನಿಂತು ಚಂದ ನೋಡಿಕೊಂಡು ಅದನ್ನು ಓಟುಗಳಾಗಿ
ಪರಿವರ್ತಿಸುವ ಮಹಾನ್ ಮೋಸದ ಜಾಲವೊಂದು ಬಯಲಾಗಿದೆ. ಹೌದು, ಸರಕಾರವೇ ಮುಂದಾಗಿ ನಿಂತು ಪ್ರಕಟಿಸಿದ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಒಬ್ಬ ಮಹಾನ್ ಕ್ರೂರಿ ಎಂದು ಬರೆದು ಕೊನೆಗೂ ಸತ್ಯ ಒಪ್ಪಲಾಗಿದ್ದು, ಆತನ ಮತಾಂಧ ಮುಖ, ಸಾಮೂಹಿಕ ನರಮೇಧ, ದೇವಸ್ಥಾನ, ಚರ್ಚ್ ಧ್ವಂಸ ಮುಂತಾದ ನೈಜ ವಿಚಾರವನ್ನು ಬರೆಯಲಾಗಿದೆ.

ಮುಸ್ಲಿಮರ ಓಟಿಗಾಗಿ ಟಿಪ್ಪುವೊಬ್ಬ ಜಾತ್ಯತೀತ, ಆತನೊಬ್ಬ ಸ್ವತಂತ್ರ ಹೋರಾಟಗಾರ ಎಂದು ಬಿಂಬಿಸಿ ಆತನ ಜಯಂತಿ ಆಚರಿಸುವ ಮೂಲಕ ಆಡಿದ್ದ ಕಾಂಗ್ರೆಸ್‍ನ ಮಹಾ ನಾಟಕವೊಂದು ಬಯಲಾಗಿದೆ.

ಸರಕಾರವೇ ಸುಮಾರು 50 ಲಕ್ಷ ರೂ. ಖರ್ಚು ಮಾಡಿಕೊಂಡು `ಮಂಗಳೂರು ದರ್ಶನ’ ಎಂಬ ಮೂರು ಸಂಪುಟಗಳಲ್ಲಿ ಟಿಪ್ಪುವಿನ ಕ್ರೂರ ಆಡಳಿತದ ಬಗ್ಗೆ ಐತಿಹಾಸಿಕ ಸತ್ಯಗಳನ್ನು ಉಲ್ಲೇಖಿಸಲಾಗಿದೆ. ಮಂಗಳೂರು ದರ್ಶನ ಪುಸ್ತದ ಸಂಪುಟ -1 ಪುಟ ಸಂಖ್ಯೆ 199, 200 ಮತ್ತು 201ರಲ್ಲಿ ಟಿಪ್ಪುವಿನ ಅನಾಚಾರಗಳ ಕುರಿತು ವಿವರಗಳು ದಾಖಲಾಗಿವೆ. ಬಿ.ಎ. ವಿವೇಕ ರೈ ಅವರು ಸಂಪಾದಿಸಿದ ಪುಸ್ತಕ ಇದಾಗಿದ್ದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇದರ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಈ ಪುಸ್ತಕವನ್ನು 2016ರಲ್ಲೇ ಮಂಗಳೂರಿನಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಬಿಡುಗಡೆಗೊಳಿಸಿದ್ದರು. ಅಲ್ಲದೆ ಅರಣ್ಯ ಸಚಿವ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಸಮ್ಮುಖದಲ್ಲೇ ಈ ಪುಸ್ತಕ ಬಿಡುಗಡೆಗೊಂಡಿದ್ದು, ಈ ಪುಸ್ತಕದ ವೆಚ್ಚವನ್ನೆಲ್ಲಾ ಸರಕಾರವೇ ಭರಿಸಿತ್ತು.

ಒಟ್ಟಾರೆ ಮಂಗಳೂರು ದರ್ಶನದಲ್ಲಿ ಟಿಪ್ಪುವಿನ ಕ್ರೂರ ಇತಿಹಾಸವನ್ನು ಬಯಲು ಮಾಡಲಾಗಿದ್ದು, ಆತನೊಬ್ಬ ಕ್ರೂರ, ಮತಾಂಧ ಎನ್ನುವದಕ್ಕೆ ಸಾಕ್ಷಿಗಳನ್ನೂ
ಒದಗಿಸಲಾಗಿದೆ. ಟಿಪ್ಪೂ ಮೈಸೂರು ಹಾಗೂ ಮಂಗಳೂರಿಗೆ ದಾಳಿ ನಡೆಸಿ ಅಲ್ಲಿನ ಚರ್ಚ್, ದೇವಸ್ಥಾನಗಳನ್ನು ಧ್ವಂಸಗೊಳಿಸಿ ಸಾವಿರಾರು ಮಂದಿ ಹಿಂದೂ, ಕೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಕಾಲ್ನಡಿಗೆಯಲ್ಲೇ ಕರೆದೊಯ್ದ. ಮಂಗಳೂರಿನಲ್ಲಿಯೂ ಚರ್ಚ್‍ಗಳನ್ನು ಧ್ವಂಸಗೊಳಿಸಿ ಕ್ರೈಸ್ತರನ್ನು ಸೆರೆಹಿಡಿದು ಅವನ್ನು ಕಾಲ್ನಡಿಗೆಯಲ್ಲೇ ಶ್ರೀರಂಗಪಟ್ಟಣಕ್ಕೆ ಕರೆದೊಯ್ದ. ಈ ವೇಳೆ ಅನೇಕ ಕ್ತೈಸ್ತರು ಅಸುನೀಗಿದರು. ಆರೋಗ್ಯವಂತರಾಗಿರುವವರನ್ನು ಸೈನ್ಯಕ್ಕೆ ಸೇರಿಸಿದ. ಉಳಿದವರನ್ನು ಜೈಲಿಗಟ್ಟಿದ. ಟಿಪ್ಪುವಿನ ಅವಸಾನವಾದ ಬಳಿಕ ಕ್ರೈಸ್ತರನ್ನು ಬಿಡುಗಡೆ ಮಾಡಲಾಗಿದ್ದು, ಉಳಿದವರು ಮತ್ತೆ ವಾಪಸ್ ಆದರು. ಈತನ ಕೃತ್ಯದಿಂದ ಸಾವಿರಾರು ಮಂದಿ ಕ್ರೈಸ್ತರು ನಾಶಹೊಂದಿದರು ಎಂದು ಬರೆಯಲಾಗಿದೆ.

ಮತ್ತೊಂದು ಕಡೆ ಟಿಪ್ಪು ಸ್ವಾತಂತ್ರ್ಯಕ್ಕಾಗಿ ಹೋರಾಡಿರುವುದಕ್ಕೆ ಅನುಮಾನ ವ್ಯಕ್ತಪಡಿಸಿಲಾಗಿದೆ. ಟಿಪ್ಪು ಚರ್ಚ್‍ಗಳನ್ನು ನಾಶ ಮಾಡಿ ಅದರ ಕಲ್ಲಿನಿಂದ ಮಸೀದಿ
ಕಟ್ಟಿದ್ದಾನೆ. ಶ್ರೀರಂಗಪಟ್ಟಣದಲ್ಲಿ ಹಲವರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ. ಮತಾಂತರಗೊಂಡ ಹಿಂದೂ, ಕ್ತೈಸ್ತ ದೃಢಕಾಯ ಯುವಕರನ್ನು ಮಹಮ್ಮದೀಯರಾಗಿ ಗುರುತಿಸಿಕೊಂಡ. ಟಿಪ್ಪು ಒಬ್ಬ ಮತಾಂಧನಾಗಿದ್ದಾನೆ. ಸಂಪುಟ 1 ಪುಟ ಸಂಖ್ಯೆ 200ರಲ್ಲಿ ಕ್ರೈಸ್ತರು ಟಿಪ್ಪುವಿನಿಂದ ಅನುಭವಿಸಿದ ಬವಣೆಗಳನ್ನು ಉಲ್ಲಖಿಸಲಾಗಿದೆ. 201ರಲ್ಲಿ ಕೊಡವರು, ಕ್ರೈಸ್ತರು, ಮಲಬಾರಿನ ನಾಯರ್‍ಗಳು ಟಿಪ್ಪುವಿನ ಬಗ್ಗೆ ಆಕ್ರೋಶಗೊಂಡಿರುವುದನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ಕೆಲವು ಬ್ರಿಟಿಷ್ ದಾಖಲೆಗಳನ್ನೂ ಒದಗಿಸಲಾಗಿದೆ.

ಸರಕಾರದ ಪ್ರಕಾರ ಟಿಪ್ಪು ಒಬ್ಬ ಮತಾಂಧ ಎಂದು ಒಪ್ಪಿಕೊಂಡಿದ್ದು, ಆದರೆ ಮುಸ್ಲಿಮರ ಓಟಿಗಾಗಿ ಟಿಪ್ಪು ಒಬ್ಬ ಮಹಾನಾಯಕನಂತೆ ಬಿಂಬಿಸಿರುವುದು
ಬಟಾಬಯಲಾಗಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಆತನನ್ಯಾಕೆ ಕಾಂಗ್ರೆಸಿಗರು ಹೀರೋ ಮಾಡಿದ್ದಾರೆ. ಆತನ ಜಯಂತಿ ಆಚರಿಸುತ್ತಿರುವುದು ಯಾಕೆ ಎಂಬೆಲ್ಲಾ ಚರ್ಚೆ
ಆರಂಭವಾಗಿದೆ. ನವೆಂಬರ್ 11 ರಂದು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಎಂದು ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಿಗೆ ಸರ್ಕಾರದ ಮುಖವಾಡ ಇದರಿಂದ ಕಳಚಿದಂತಾಗಿದೆ.

ಟಿಪ್ಪು ಮತಾಂಧ ಕ್ರೂರಿ ಎಂದು ಹೇಳುವ ಬಿಜೆಪಿಯನ್ನು ಕಾಮಾಲೆ ಕಣ್ಣಿನಿಂದ ರಾಜಕಾರಣ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವಕಾಶ ಸಿಕ್ಕಾಗೆಲ್ಲಾ
ಟೀಕಿಸುತ್ತಲೇ ಇದ್ದಾರೆ. ಆದರೆ ಇದೀಗ ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರ ಮುಜುಗರಕ್ಕೆ ಒಳಗಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಸರಕಾರದ ಮುಖವಾಡ
ಕಳಚಿದೆ.

-ಚೇಕಿತಾನ

Tags

Related Articles

Close