ಪ್ರಚಲಿತ

ಸಿದ್ಧರಾಮಯ್ಯನವರೇ ನಿಮ್ಮಲ್ಲಿ ತಾಕತ್ತು ಅನ್ನೋದೇನಾದ್ರು ಇದ್ರೆ ಹಿಂದೂ ದೇವಾಲಯಗಳನ್ನು ಸರ್ಕಾರದ ಸುಪರ್ದಿಗೆ ತೊಗೊಳ್ಳೋ ಹಾಗೆ ಚರ್ಚ್ ಮತ್ತು ಮಸೀದಿಗಳನ್ನು ಸುಪರ್ದಿಗೆ ತೊಗೊಳ್ಳಿ!!

ಸಮಾಜಸೇವೆಯನ್ನೇ ಉಸಿರಾಗಿಸಿಕೊಂಡು ಹೆಗ್ಗಡೆ ಪರಿವಾರದವರು ನೋಡಿಕೊಳ್ಳುತ್ತಿರುವ ಮೇಲೆ ನಿಮ್ಮ ಕಣ್ಣೇಕೆ?

ಮುಜರಾಯಿ ಇಲಾಖೆಯ ಸುಪರ್ದಿಗೆ ತೆಗೆದುಕೊಂಡ ದೇವಸ್ಥಾನಗಳ ಸ್ಥಿತಿ-ಗತಿಗಳ ಬಗ್ಗೆ ಗೊತ್ತಿದೆ.

ದೇಶದಲ್ಲಿ ನಾಲ್ಕನೇ ಅತ್ಯಧಿಕ ದೇವಾಲಯಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು ಎರಡೂವರೆ ಲಕ್ಷ ದೇವಾಲಯಗಳು ಸರಕಾರದ ಸುಪರ್ದಿಯಲ್ಲೇ ಇವೆ. ದೇವಾಲಯಗಳಿಂದ ಬರುವ 70% ಆದಾಯ ಮದ್ರಸಾಗಳಿಗೆ, ಹಜ್ ಯಾತ್ರೆಗೆ ಬಳಸಲ್ಪಡುತ್ತದೆ.

ಕರ್ನಾಟಕದ ಅತ್ಯಧಿಕ ಆದಾಯದ ದೇವಸ್ಥಾನ ಕುಕ್ಕೆ!!

ಭಕ್ತರು ಸೇವೆ, ಕಾಣಿಕೆ ರೂಪದಲ್ಲಿ ಒಟ್ಟು ಸುಮಾರು 200 ಕೋಟಿ ವಾರ್ಷಿಕವಾಗಿ ಸಲ್ಲಿಸುತ್ತಾರೆ. 200 ಕೋಟಿ ಆದಾಯ ಇದ್ದರೂ, ದೇವಾಲಯದ ಸುತ್ತ ಮುತ್ತ
ಕೊಚ್ಚೆ ನಾರುತ್ತಿದೆ.ಅಲ್ಲಿ ನಿಲ್ಲೋದಕ್ಕೂ ಆಗಲ್ಲ. ಈ ಸ್ಥಿತಿಗತಿಗಳ ಬಗ್ಗೆ ಗೊತ್ತಿದ್ದೆ ನಾವು ವಿರೋಧ ಮಾಡ್ತಿರೋದು.

ಮುಜಾರಾಯಿ ಇಲಾಖೆಯ ಸುಪರ್ದಿಗೆ ಹೋದ ಎಷ್ಟೋ ದೇವಾಲಯಗಳು ಪಾಳು ಬಿದ್ದು ಹೋಗಿವೆ. ಹಲವು ದೇಗುಲಗಳನ್ನು ಊರಿನವರೇ ಚಂದಾ ಎತ್ತಿ
ಜೀರ್ಣೋದ್ದಾರ ಮಾಡಿ, ಅರ್ಚಕರನ್ನು ನೇಮಿಸಿ ತಮ್ಮ ಕೈಯಿಂದಲೇ ಅವರಿಗೆ ಅಷ್ಟಿಷ್ಟು ವೇತನ ಕೊಡುತ್ತಾರೆ.

ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ ಸುಮಾರು ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. ಭಾರತದಲ್ಲಿ ಸುಮಾರು ನಲವತ್ತು ಲಕ್ಷ ಸಣ್ಣ-ದೊಡ್ಡ ದೇವಸ್ಥಾನಗಳಿವೆ. ಇವುಗಳಲ್ಲಿ 99% ದೇಗುಲಗಳನ್ನು ಕಟ್ಟಿದ್ದು ಹಲವು ಶತಮಾನಗಳ ಹಿ೦ದೆ ಈ ನೆಲವನ್ನಾಳಿದ ಭಾರತೀಯ ರಾಜರು. ರಾಜ್ಯ ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ಒಟ್ಟು “ಹಿಂದೂ ದೇವಾಲಯಗಳ” ಸಂಖ್ಯೆ 34,559.

10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ದೇವಳಗಳನ್ನು “B” ಗ್ರೇಡ್,ಕಡಿಮೆ ಆದಾಯ ಇರುವ ದೇವಾಲಯಗಳನ್ನು “C” ಗ್ರೇಡ್ ಎಂದು ವರ್ಗೀಕರಿಸಲಾಗಿದೆ…!ಇದರಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 25ಲಕ್ಷ ರೂ. ಆದಾಯ ತರುವ 120 ದೇವಸ್ಥಾನಗಳಿವೆ…!

ಇಷ್ಟೆಲ್ಲಾ ಆದಾಯವಿದ್ದರೂ ಹಿಂದು ದೇವಾಲಯಗಳೇಕೆ ವರ್ಷಗಳಿಂದ ಸುಣ್ಣ-ಬಣ್ಣ ಕಾಣದೆ ಸೊರಗುತ್ತಿರುವುದೇಕೆ?

ದೇವಾಲಯದ ದೀಪದ ಎಣ್ಣೆಗೂ ಅರ್ಚಕರಿಗೆ ಸಂಬಳ ಕೊಟ್ಟಿಲ್ಲ… ಹಾಗಾದರೆ ಕರ್ನಾಟಕದ ಮುಜರಾಯಿ ಇಲಾಖೆಯ 34,559 ಹಿಂದು ದೇವಾಲಯಗಳ
ಕೋಟ್ಯಂತರ ರೂಪಾಯಿ ಹಣ ಎಲ್ಲಿ ಹೋಯ್ತು,???

25ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ದೇವಳಗಳನ್ನು “A” ಗ್ರೇಡ್, A ಗ್ರೇಡ್ ದೇವಾಲಯಗಳಿಂದ 2010-11ನೇ ಸಾಲಿನಲ್ಲಿ 207.61 ಕೋಟಿ
ರೂಪಾಯಿಗಳು. 2011-12ನೇ ಸಾಲಿನಲ್ಲಿ 261.14 ಕೋಟಿ ರೂಪಾಯಿಗಳು. B ಗ್ರೇಟ್ ದೇವಾಲಯಗಳಿಂದ 20.18 ಕೋಟಿ ರೂಪಾಯಿಗಳು ಹಾಗೂ
21.58 ಕೋಟಿ ರೂಪಾಯಿಗಳು. 2017ರಲ್ಲಿ ದುಪ್ಪಟ್ಟಾಗಿರಬಹುದು ಆದರೆ ಅದನ್ನೆಲ್ಲಾ ಹಜ್ ಯಾತ್ರೆಗೆ ಕೊಟ್ಟಿದ್ದೀರಾ ಸಿದ್ದರಾಮಯ್ಯನವರೇ?

ಕರ್ನಾಟಕದಲ್ಲಿ 2003ರಲ್ಲಿ ದೇವಾಲಯಗಳಿಂದ 79ಕೋಟಿ ಸಂಗ್ರಹ ಮಾಡಲಾಗಿತ್ತು. ಆದರೆ ದೇವಸ್ಥಾನಗಳ ಅಭಿವೃದ್ಧಿಗೆ ಖರ್ಚು ಮಾಡಿದ್ದು ಬರೀ 7 ಕೋಟಿ! ಹಜ್ ಯಾತ್ರೆಗೆ 59 ಕೋಟಿ, ಚರ್ಚ್ ಗಳಿಗೆ 13 ಕೋಟಿ. ರಾಜ್ಯಾದ್ಯಂತ ದೇವಾಲಯಗಳಿಂದ ಬಂದ ಹಣದಲ್ಲೇ ಮುಲ್ಲಾ, ಪಾದರಿಗಳಿಗೂ ಸಂಬಳ ಪಾವತಿಯಾಗುತ್ತದೆ. ಯಾವ ರೀತಿಯ ನ್ಯಾಯ ಸ್ವಾಮಿ ಇದು?

ಒಮ್ಮೆ ಸರಕಾರದ ಸುಪರ್ದಿಗೆ ಹೋದರೆ ದೇವಾಲಯ ತನ್ನ ಮೂಲಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ, ಶಿಕ್ಷಣಕ್ಕೆ,
ಅನ್ನ-ಅಕ್ಷರ ದಾಸೋಹಗಳಿಗೆ ಕತ್ತರಿ ಬೀಳುತ್ತದೆ. ಅರ್ಚಕರಿಗೆ ಸಂಬಳ ಸಿಗದೆ ಅವರು ತಿಂಗಳುಗಟ್ಟಲೆ ಸರಕಾರೀ ನೌಕರರಂತೆ ತಮ್ಮ ಸಂಬಳಕ್ಕೆ ಅಲೆದಾಡುವಂತೆ ಮಾಡುತ್ತದೆ ಸರಕಾರ.

ಹಾಗಾದರೆ ದೇವಸ್ಥಾನದ ದುಡ್ಡು ಹಜ್ ಯಾತ್ರೆಯ ಸಬ್ಸಿಡಿಗಳಲ್ಲಿ, ಚರ್ಚಿನ ಉದ್ಧಾರಕ್ಕಾಗಿ ಖರ್ಚಾಗ್ತಿದಿಯಾ?

1997ರ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಮುಜರಾಯಿ ಕಾಯ್ದೆ ಪ್ರಕಾರ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಅನ್ಯಧರ್ಮೀಯರನ್ನು ನೇಮಕ
ಮಾಡುವಂತಿಲ್ಲ ಎಂಬ ನಿಯಮವಿದೆ. ಸರ್ಕಾರ ನಿಯಮವನ್ನು ಉಲ್ಲಂಘಿಸಿದ್ದು , ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿತ್ತು. ಆಗ ವಿಹೆಚ್‍ಪಿ ಮುಖಂಡ ಗಿರೀಶ್ ಭಾರದ್ವಾಜ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದರು.

ಮುಜರಾಯಿ ಇಲಾಖೆ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಅನ್ಯಧರ್ಮೀಯ ನೌಕರರನ್ನು ನೇಮಕ ಮಾಡುವ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆ ತಂದಿತ್ತು. ಯಾವ ರೀತಿಯ ನ್ಯಾಯ ಸ್ವಾಮಿ ಇದು?

ಈ ವರ್ಷ 12ನೇ ಬಾರಿಗೆ ದಾಖಲೆ ಬಜೆಟ್ ಮಂಡಿಸಿದ ಹಣಕಾಸು ಖಾತೆಯನ್ನೂ ಹೊಂದಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಳೆದ ಬಾರಿಯಂತೆ ಈ ಬಾರಿಯು ಮುಜರಾಯಿ ಇಲಾಖೆಗೆ ಅನುದಾನ ನೀಡಿಲ್ಲ. ಸರ್ಕಾರದ ಸುಪರ್ದಿಗೆ ಹೋದ ದೇವಸ್ಥಾನಗಳ ಗತಿಯೇ ಹೀಗೆ ಅದಕ್ಕಾಗಿ ನಾವು ಸರ್ಕಾರದ ಸುಪರ್ದಿಗೆ ಕೊಡಲು ವಿರೋಧ ಮಾಡೋದು.

ದೇಶದ ಯಾವ ಚಚ್೯ ಅಥವಾ ಮಸೀದಿಯಿ೦ದಲೂ ಇದುವರೆಗೆ ಯಾವ ಸರಕಾರವೂ ಒ೦ದು ಪೈಸೆ ದುಡ್ಡನ್ನು ವಸೂಲಿ ಮಾಡಿಲ್ಲ. ಆದರೆ ಪ್ರತಿವಷ೯ದ ಹಜ್
ಯಾತ್ರೆಗಳಿಗೆ ಸಬ್ಸಿಡಿ ಕೊಡುವುದಕ್ಕೆ೦ದೇ 800 ಕೋಟಿ ರುಪಾಯಿಗಳನ್ನು ಎತ್ತಿಡುತ್ತಿತ್ತು. ಯಾವ ರೀತಿ ನ್ಯಾಯ ಸ್ವಾಮಿ ಇದು.

ದೇವಸ್ಥಾನದ ಹುಂಡಿಗೆ ಬರುವ ಕಾಣಿಕೆಗೆ ಮುಜರಾಯಿ ಇಲಾಖೆ ಇದೆ. ಆದರೆ ಮಸೀದಿ ಮತ್ತು ಚರ್ಚಗಳಿಗೆ ಬರುವ ಹಣಕ್ಕೆ ಯಾವ್ ಇಲಾಖೆ ಇದೆ?

ಮುಜರಾಯಿ ಎ೦ಬ ಇಲಾಖೆ ಹುಟ್ಟಿಕೊ೦ಡದ್ದು ಮುಸ್ಲೀಂ ಆಳ್ವಿಕೆಯ ಕಾಲದಲ್ಲಿ. ಮುಜರಾಯಿ ಪದದ ಅಥ೯ ಮುರಿದುಕೊಳ್ಳುವುದು ಎಂದರ್ಥ. ಮುಸ್ಲೀಂ ರಾಜರು ಶುರುಮಾಡಿದ ನ೦ತರ ಬ೦ದ ಬ್ರಿಟಿಷರು ಮುಂದುವರಿಸಿದರು. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಹಿಂದೂ ವಿರೋಧಿ ಸರ್ಕಾರ ಬಂದು ಇಲ್ಲಿನ ದೇವಸ್ಥಾನಗಳನ್ನು ಲೂಟಿ ಹೊಡೆದವು.

ಕಾಂಗ್ರೆಸ್ಸಿಗರೇ ಮೂಢನಂಬಿಕೆ ಮೂಢನಂಬಿಕೆ ಅಂತ ಬೊಂಬ್ಡಾ ಹೊಡೀತೀರಲ್ಲ ಮೂಢನಂಬಿಕೆಗಳಿಂದ ಕೂಡಿರೋ ಹಿಂದೂ ದೇವಸ್ಥಾನಗಳನ್ನ ಮುಜರಾಯಿ
ಇಲಾಖೆ(ಧಾರ್ಮಿಕ ದತ್ತಿ ಇಲಾಖೆ)ಗೆ ಒಳಪಡಿಸೋದು ಯಾಕೆ?

ವಯಸ್ಸಾಗಿರೋ ಗೋವುಗಳನ್ನ ಏನು ಮಾಡಲಿ ಅಂತ ನೀವು ಅಂದ್ರೆ ಕಾಂಗ್ರೆಸ್ ಪಾಪಿಗಳು ಕೇಳ್ತೀರಲ್ವಾ?

ಮುಜರಾಯಿ ಇಲಾಖೆ ಹಿಂದುಗಳ ಧಾರ್ಮಿಕ ಕೇಂದ್ರಗಳಿಂದ ಸಂಗ್ರಹಿಸಿರೋ ಹಣವನೆಲ್ಲಾ ಹೊಸ ಗೋಶಾಲೆಗಳ ನಿರ್ಮಾಣ , ಹಳೇ ಗೋಶಾಲೆಗಳ ಅಭಿವೃದ್ಧಿ ,ಗೋವುಗಳ ಮೇವಿಗೆ ಬಳಸಿಕೊಳ್ಳಿ ಅದನ್ನ ಬಿಟ್ಟು ಮಸೀದಿ,ಚರ್ಚಗಳಿಗೆ ಉಪಯೋಗಿಸಿದರೆ ನಾವು ಸಹಿಸಲ್ಲ.

ಧರ್ಮಸ್ಥಳದಿಂದ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ವೇಳೆ ಸರಕಾರ ಈ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ ಈ ಎಲ್ಲಾ ಕಾರ್ಯಗಳಿಗೆ ಕತ್ತರಿ ಬೀಳೋದಂತು ನಿಜ.

ಸಮಾಜಸೇವೆಯನ್ನೇ ಉಸಿರಾಗಿಸಿಕೊಂಡು ಹೆಗ್ಗಡೆ ಪರಿವಾರದವರು ನೋಡಿಕೊಳ್ಳುತ್ತಿರುವ ಧರ್ಮಸ್ಥಳದ ಮೇಲೆ ಕಣ್ಣು ಹಾಕಬೇಡಿ.

-ಮಹೇಶ್

Tags

Related Articles

Close