ಅಂಕಣದೇಶಪ್ರಚಲಿತರಾಜ್ಯ

ಸಿಫೋರ್ ಸಮೀಕ್ಷೆಗಿಂತ ದೊಡ್ಡ ಜೋಕ್ ಇನ್ನೊಂದಿಲ್ಲ..! ತಿಳಿಯಿರಿ ಸತ್ಯಾಸತ್ಯತೆ

ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನ ಸಭಾ ಚುನಾಚಣೆ ನಡೆಯಲಿದೆ. ಚುನಾವಣೆ ನಡೆದು ಫಲಿತಾಂಶ ಬರುವ ಮುಂಚೆಯೇ ಸಿಫೋರ್ ತನ್ನ ಸಮೀಕ್ಷೆಯಲ್ಲಿ ಮುಂದಿನ ಬಾರಿಯೂ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತನ್ನ ಸಮೀಕ್ಷಾ ವರದಿಯನ್ನು ಬಹಿರಂಗಪಡಿಸಿದೆ. ವರದಿಯನ್ನು ನೋಡಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರೆಲ್ಲಾ ಸೇರಿ ಹರ್ಷಚಿತ್ತರಾಗಿದ್ದಾರೆ. ಕರ್ನಾಟಕದಲ್ಲಿ ಇನ್ನಷ್ಟು ಹಗರಣಗಳನ್ನು ನಡೆಸಿ ಸಾಕಷ್ಟು ದುಡ್ಡು ಮಾಡಬಹುದೆಂದು ಮಂಡಿಗೆ ಮೆಲ್ಲುತ್ತಿದ್ದಾರೆ.
ಈ ಸಮೀಕ್ಷೆ ನಿಜವಾಗಿಯೂ ನಿಜವಾಗಬಹುದಾ? ಇದರ ಹಿಂದಿನ ಅಸಲಿಯತ್ ಏನು ಎಂಬುವುದನ್ನು ನೋಡಿದಾಗ ಸಿಫೋರ್ ಸಂಸ್ಥೆ ನಡೆಸಿದ ಸಮೀಕ್ಷೆಯೇ ಒಂದು ದೊಡ್ಡ ನಾಟಕದಂತೆ ಕಂಡುಬರುವುದು ಸುಳ್ಳಲ್ಲ. ಸಿಫೋರ್ 2018ರಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯನ್ನು ಮುಂದಿಟ್ಟುಕ್ಕೊಂಡು ಜುಲೈ 19ರಿಂದ ಆಗಸ್ಟ್ 10ರ ತನಕ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಸರ್ವೆ ನಡೆಸಿತು. ಕರ್ನಾಟಕದ 224 ಕ್ಷೇತ್ರಗಳಲ್ಲಿ ಸಿಫೋರ್ ಆಯ್ಕೆ ಮಾಡಿದ್ದು 165 ಕ್ಷೇತ್ರಗಳನ್ನು. ಇಷ್ಟು ಕ್ಷೇತ್ರದಲ್ಲಿ ಬರೇ 24,679 ಮತರಾರರ ಅಭಿಪ್ರಾಯ ಸಂಗ್ರಹಿಸಿದೆ. ಇನ್ನೊಂದು ದೊಡ್ಡ ಜೋಕ್ ಎಂದ್ರೆ ಇಷ್ಟು ದೊಡ್ಡ ಕರ್ನಾಟಕದಲ್ಲಿ ಸಿಫೋರ್ ಆಯ್ಕೆ ಮಾಡಿದ್ದು ಕೇವಲ 340 ನಗರ ಹಾಗೂ 540 ಹಳ್ಳಿಗಳಲಷ್ಟೇ ಸಮೀಕ್ಷೆ ನಡೆಸಿದೆ.
ಇಷ್ಟು ಚಿಕ್ಕ ವ್ಯಾಪ್ತಿಯ ಜನರ ಅಭಿಪ್ರಾಯಗಳನ್ನು ಗಮನಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್ 133 ಸ್ಥಾನ ಪಡೆದ್ರೆ, ಬಿಜೆಪಿ 70ರ ಆಸುಪಾಸಿನ ಸ್ಥಾನ ಪಡೆಯಲಿದೆಯಂತೆ. ಇನ್ನು ಜೆಡಿಎಸ್ 35 ಆಸುಪಾಸಿನಲ್ಲಿ ಸೀಟು ಪಡೆಯಲಿದೆಯಂತೆ. ತನ್ನ ಸರ್ವೆಯಲ್ಲಿ 46 ಶೇ. ಸಿದ್ದರಾಮಯ್ಯನವರಿಗೆ ಓಟ್ ಹಾಕಿದ್ರೆ, ಯಡಿಯೂರಪ್ಪಂಗೆ 27 ಶೇ, ಕುಮಾರ ಸ್ವಾಮಿಗೆ 18 ಶೇ. ಜನ ಓಟ್ ಮಾಡಿದ್ದಾರಂತೆ. ಸಿದ್ದರಾಮಯ್ಯನ ಅನ್ನ ಭಾಗ್ಯ ಹಾಗೂ ಮಧ್ಯಾಹ್ನದ ಬಿಸಿಯೂಟ ನೋಡಿ ಜನರು ಓಟ್ ಹಾಕುತ್ತಾರಂತೆ. ಆದ್ದರಿಂದ ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರ ಏರುವುದು ಖಡಾಖಂಡಿತ ಎಂದು ಸಮೀಕ್ಷೆ ತಿಳಿಸುತ್ತದೆ.
ಈ ಸಮೀಕ್ಷೆಯ ಸತ್ಯಾಸತ್ಯತೆ ಏನು ಎಂದು ಒಂದೊಂದಾಗಿ ಬಯಲು ಮಾಡುತ್ತಾ ಹೋದಾಗ ಸಿಫೋರು ನಡೆಸಿದ ಸಮೀಕ್ಷೆ ಕೇವಲ ಬೋಗಸ್ ಎಂದು ತಿಳಿಯಬಹುದು. ಯಾಕೆಂದರೆ ಕರ್ನಾಟಕದಲ್ಲಿ ಬರೋಬ್ಬರಿ 3 ಕೋಟಿಗಿಂತಲೂ ಅಧಿಕ ಮತದಾರರಿದ್ದಾರೆ. ಇದರಲ್ಲಿ ಎಲ್ಲರೂ ಓಟ್ ಹಾಕುತ್ತಾರೆಂಬ ನಂಬಿಕೆಯೂ ಇಲ್ಲ. ಮೂರು ಕೋಟಿ ಜನರ ಪೈಕಿ ಸಿಫೋರ್ ಆಯ್ಕೆ ಮಾಡಿದ್ದು ಬರೇ 24,679 ಜನರನ್ನು ಮಾತ್ರ. ಒಂದು ಕ್ಷೇತ್ರದ ಒಂದು ಬೂತ್‍ನಲ್ಲಿಯೇ ಇದಕ್ಕಿಂತ ಜಾಸ್ತಿ ಜನರಿರುತ್ತಾರೆ. ಇಷ್ಟೆಲ್ಲಾ ಇರುವಾಗ ಬರೀ 24 ಸಾವಿರ ಮಂದಿಯ ಸಮೀಕ್ಷೆ ಮುಂದಿನ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ.
ಇನ್ನು ರಾಜ್ಯದಲ್ಲಿ 224 ಕ್ಷೇತ್ರಗಳಿವೆ. ಆದರೆ ಸಿಫೋರ್ ಆಯ್ಕೆ ಮಾಡಿದ್ದು 165 ಕ್ಷೇತ್ರಗಳನ್ನು. ಉಳಿದ ಕ್ಷೇತ್ರಗಳನ್ನು ಯಾಕೆ ಬಿಟ್ಟುಬಿಟ್ಟಿದೆ ಎಂಬ ಸಂಶಯ ಕಾಡಲಾರಂಭಿಸಿದೆ. ಆಯ್ಕೆ ಮಾಡಿದ 165 ಕ್ಷೇತ್ರಗಳಲ್ಲಿ ಸಿಫೋರ್ ಆಯ್ಕೆ ಮಾಡಿರುವ ಜನರ್ಯಾರು? ಅವರ ಜಾತಿ ಯಾವುದು, ಧರ್ಮ ಯಾವುದು ಎಂಬ ಲೆಕ್ಕಾಚಾರ ಮಾಡಬೇಕಿದೆ. ಅಲ್ಲದೆ ಕಾಂಗ್ರೆಸ್ ಪ್ರಾಬಲ್ಯ ಇರುವ ಹಳ್ಳಿ, ಪಟ್ಟಣಗಳನ್ನು ಆಯ್ಕೆ ಮಾಡಿರುವ ಸಾಧ್ಯತೆ ಇರುವುದರಿಂದ ಸಿಫೋರ್ ಸಮೀಕ್ಷೆ ಬೋಗಸ್ ಎಂದು ಇದರಲ್ಲೇ ಸ್ಪಷ್ಟವಾಗಿ ತಿಳಿಯಬಹುದು. ಮೈಸೂರು ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವು ಕಡೆಗಳಲ್ಲಿ ಬಿಜೆಪಿ ವೀಕ್ ಇದ್ದು, ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಇಲ್ಲಿ ನಡೆಸಿದ ಸಮೀಕ್ಷೆ ವರ್ಕೌಟ್ ಆಗುವ ಸಾಧ್ಯತೆಯೇ ಇಲ್ಲ. ಆದ್ದರಿಂದ ಸಿಫೋರ್ ಆಯ್ಕೆ ಮಾಡಿದ ಜನರು, ಪ್ರದೇಶ, ಕ್ಷೇತ್ರ, ವ್ಯಾಪ್ತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಸಿಫೋರ್ ನಡೆಸಿರುವುದು ಸುಳ್ಳು ಸಮೀಕ್ಷೆ ಎಂದು ಆರಂಭಲ್ಲೇ ಅಂದಾಜಿಸಬಹುದು. ಅಷ್ಟಕ್ಕೂ ಕಾಂಗ್ರೆಸ್ ಗೆಲ್ಲುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕೆಂದ್ರೆ ಸಿದ್ದರಾಮಯ್ಯ ಅಧಿಕಾರ ವಹಿಸಿದ ಬಳಿಕ ಮಾಡಿದ ಎಡವಟ್ಟು, ಅಹಿಂದ ವರ್ಗಗಳನ್ನು ಓಲೈಸಿದ ಪರಿ ಎಲ್ಲವನ್ನೂ ನೋಡಿದಾಗ ಕಾಂಗ್ರೆಸ್ ಮುಂದಿನ ಬಾರಿ ಯಾವ ಆಧಾರಲ್ಲಿ ಗೆಲ್ಲಲು ಸಾಧ್ಯ ಎಂದು ಸಿಫೋರ್ ಲೆಕ್ಕಾಚಾರ ಮಾಡಿದ ಹಾಗೆ ಕಾಣಿಸುತ್ತಿಲ್ಲ. ಇಡೀ ಭಾರತದಲ್ಲಿ ಕಾಂಗ್ರೆಸ್ ಮುಕ್ತವಾಗುವ ಈ ಹೊತ್ತಲ್ಲಿ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅರಳುತ್ತದೆ ಎಂದು ಸಮೀಕ್ಷೆ ನೋಡಿದಾಗ ಇದೆಲ್ಲಾ ಸೀಮಿತ ಜನರ ಅಂದರೆ ಕಾಂಗ್ರೆಸ್ ಮತದಾರರ ಅಭಿಪ್ರಾಯವಷ್ಟೆ, ಎಲ್ಲರ ಒಮ್ಮತದ ಅಭಿಪ್ರಾಯ ಅಲ್ಲ ಎಂಬ ನಿರ್ಧಾರಕ್ಕೆ ಬರಬಹುದು.
ಕಳೆದ ಬಾರಿ ಬಿಬಿಎಂಪಿ ಚುನಾವಣೆ ನಡೆದಾಗ ಕಾಂಗ್ರೆಸ್ ಸೋತು ಬಿಜೆಪಿ ಗೆದ್ದಿದೆ. ಸ್ವತಃ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿದ್ದರೂ ಬಿಬಿಎಂಪಿಯನ್ನು ಗೆಲ್ಲಲಾಗದ ಸರಕಾರ ಮತ್ತೊಮ್ಮೆ ಅಧಿಕಾರ ಹಿಡಿಯುತ್ತದೆ ಎಂದರೆ ಇದಕ್ಕಿಂತ ದೊಡ್ಡ ಸುಳ್ಳು ಬೇರೊಂದಿಲ್ಲ ಅನಿಸುತ್ತದೆ.
ಒಂದು ಸರಕಾರ ಆಡಳಿತ ನಡೆಸಿದ ನಂತರ ಆ ಸರಕಾರದ ಬಗ್ಗೆ ಜನರಿಗೆ ಆಡಳಿತ ವಿರೋಧಿ ಅಲೆ ಮೂಡುವುದು ಸಹಜವೇ. ಒಂದು ಸರಕಾರದ ವಿರುದ್ಧ ಜನರು ಸಾಕಷ್ಟು ರೋಸಿ ಹೋಗಿರುವುದರಿಂದ ಅಥವಾ ಜನರಿಗೆ ಸರಕಾರದ ಬಗ್ಗೆ ಬೋರ್ ಎನಿಸಿ ಬದಲಾವಣೆ ಬಯಸುವುದರಿಂದ ಸಿಫೋರ್ ಸಮೀಕ್ಷೆ ಸ್ಪಷ್ಟವಾಗಲು ಸಾಧ್ಯವೇ ಇಲ್ಲ ಎಂದೆನಿಸುವುದು ಸಹಜ.
ಇನ್ನು ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆದಿದೆ. ರಾಜ್ಯದಲ್ಲಿ ಬರೋಬ್ಬರಿ 1002 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಶೇ.200ಕ್ಕಿಂತಲೂ ಹೆಚ್ಚು. ಒಂದು ವೇಳೆ ಸಿಫೋರ್ ಈ ಜಾಗದಲ್ಲಿ ಸಮೀಕ್ಷೆ ನಡೆಸಿದ್ದರೆ ಫಲಿತಾಂಶ ಬೇರೆಯದ್ದೇ ಆಗಿರುತ್ತಿತ್ತು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಬರ ಪರಿಹಾರ ಕೊಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಅನೇಕ ಮಂದಿ ರೈತರಿಗೆ ಬರದ ಹಣವೇ ಸಿಕ್ಕಿಲ್ಲ. ಬರದ ಹಣ ಎಲ್ಲಿಗೆ ಹೋಗಿದೆ ಎಂದೇ ಗೊತ್ತಿಲ್ಲ. ಬರ ಪರಿಹಾರ ರೈತರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ವಿಫಲವಾಗಿರುವುದರಿಂದ ಮುಂದಿನ ಬಾರಿಯೂ ರೈತರು ಕಾಂಗ್ರೆಸಿಗೆ ಒತ್ತುತ್ತಾರೆಂದರೆ ಅದನ್ನೆಲ್ಲಾ ನಂಬುವ ಹಾಗೆಯೇ ಇಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ನಡೆಸಿದ ಹಗರಣಗಳನ್ನು ನೋಡಿದರೆ ಅದೊಂದು ಮೆಗಾ ಸೀರಿಯಲ್ ಆಗಬಹುದೇನೋ.. ಇದರ ಸ್ಯಾಂಪಲ್ ಹೇಳುವುದಾದದರೆ, ಸಿಎಂ ಸಿದ್ದರಾಮಯ್ಯ ವಾಚ್ ಹಗರಣ. ಬರೋಬ್ಬರಿ 70 ಲಕ್ಷದ ವಾಚ್ ಕಟ್ಟಿಕೊಂಡು ಸಮಾಜವಾದಿ ಎಂದು ಬೊಗಳೆ ಬಿಡುವ ಅವರ ಅಸಲಿ ಮುಖ ಬಟಾಬಯಲಾಗಿದೆ. ಇಷ್ಟೆಲ್ಲಾ ಆಗೋ ಹೊತ್ತಿಗೆ ಮೇಟಿಯ ರಾಸಲೀಲೆ ಹಗರಣ ಹೊರಬಂದಿತು. ಇಡೀ ದೇಶದ ಜನರು ಮೇಟಿಯ ವೀಡಿಯೋವನ್ನು ನೋಡಿ, ಛೀ ಥೂ ಎಂದು ಉಗಿದಿದ್ದಾರೆ. ತನ್ನ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಿದ್ದರಾಮಯ್ಯ ಮಾಡಿದ ಹೆಣಗಾಟವನ್ನು ನೋಡಿದ ಜನರು ಮತ್ತೆ ಓಟ್ ಹಾಕ್ತಾರೆ ಎಂದರೆ ಅದೆಲ್ಲಾ ಕಾಗಕ್ಕ ಗುಬ್ಬಕ್ಕನ ಕಥೆಯಂತಿದೆ.
ಸಿದ್ದು ಸರಕಾರ ಬಂದ ಮೇಲೆ ಸಾಕಷ್ಟು ಹಿಂದೂ ಕಾರ್ಯಕರ್ತರ ರಕ್ತ ಚೆಲ್ಲಿದೆ. ಅಧಿಕಾರ ವಹಿಸುತ್ತಿದ್ದಂತೆ ಸಿದ್ದರಾಮಯ್ಯ ಪಿಎಫ್‍ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದರು. ಇದಾದ ಬಳಿಕ ಸಾಕಷ್ಟು ಹಿಂದೂಗಳ ಹತ್ಯೆ ನಡೆಯಿತು. ಕೇವಲ ಮತಾಂಧ ಉದ್ದೇಶದಿಂದಲೇ ಕುಟ್ಟಪ್ಪ, ರಾಜು, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಸೇರಿ ಹಲವಾರು ಮಂದಿಯ ನರಹತ್ಯೆ ನಡೆದಿದೆ. ಇದರ ಹಿಂದೆ ಮುಸ್ಲಿಂ ಮೂಲಭೂತವಾದ ಇದೆ ಎಂದು ವರದಿಗಳು ತಿಳಿಸಿದರೂ ಸಿದ್ದರಾಮಯ್ಯ ಕುರುಡಾದಂತೆ ವರ್ತಿಸಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ಸಾಕಷ್ಟು ಕೇಸ್ ಜಡಿದಿರುವುದರಿಂದ ಇಂದಿಗೂ ಅನೇಕ ಮಂದಿ ಅಮಾಯಕರು ಜೈಲಲ್ಲಿದ್ದಾರೆ. ಹಲವಾರು ಮಂದಿ ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ. ರಾಜ್ಯದಲ್ಲಿ ನಡೆದ ಕೋಮುಗಲಭೆ, ಅಲ್ಪಸಂಖ್ಯಾತರ ಪರವಾಗಿ ಮಾತಾಡಿರುವುದು, ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸಿರುವುದು ಇವುಗಲ್ಲಾ ರಾಜ್ಯ ಸರಕಾರಕ್ಕೆ ಕಪ್ಪು ಚುಕ್ಕೆ. ರಾಜ್ಯದಲ್ಲಿ ನಡೆದಿರುವ ಗೋಹತ್ಯೆ, ಗೋಕಳ್ಳತನ ಇತ್ಯಾದಿಗಳನ್ನು ನಿಲ್ಲಿಸಲು ಸರಕಾರ ವಿಫಲವಾಗಿರುವುದರಿಂದ ರೈತರು ಯಾವ ಮುಖ ಓಟ್ ಹಾಕುತ್ತಾರೆಂದು ಸಿಫೋರ್ ಸಮೀಕ್ಷೆ ನಡೆಸಬೇಕಿದೆ.
ಡಿ.ಕೆ ರವಿ ನಿಗೂಢ ಆತ್ಮಹತ್ಯೆ ಪ್ರಕರಣ, ಮಲ್ಲಿಕಾರ್ಜುನ್ ಬಂಡೆ ಪ್ರಕರಣ, ಅನುರಾಗ್ ತಿವಾರಿ ಕೊಲೆ, ಎಂ.ಕೆ ಗಣಪತಿ ಆತ್ಮಹತ್ಯೆ, ಹೀಗೆ ಸಾಕಷ್ಟು ಪ್ರಕರಣಗಳು ನಡೆದಿದೆ. ಪೊಲೀಸರ ವರ್ಗಾವಣೆ, ಅಧಿಕಾರಿಗಳ ಜೊತೆ ದರ್ಪ, ಅಧಿಕಾರದ ದುರಿಪಯೋಗ ಹೀಗೆ ಹಲವಾರು ಪ್ರಕರಣಗಳು ನಡೆದಿರುವಾಗ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರೆ ಅದು ದೊಡ್ಡ ಜೋಕ್ ಎಂದೇ ಹೇಳಬಹುದು. ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ನಂದಿತಾ ನಿಗೂಢ ಆತ್ಮಹತ್ಯೆ ಪ್ರಕರಣ, ಗೋಹತ್ಯೆ ನಿಷೇಧ ಕಾಯಿದೆಯನ್ನು ವಾಪಸ್ ತೆಗೆದುಕೊಂಡಿರುವುದು, ಹಿಂದೂಗಳ ದೇವಸ್ಥಾನನದ ಹಣದ ದುರುಪಯೋಗ ಹೀಗೆ ಬರೆಯುತ್ತಾ ಹೋದರೆ ಇನ್ನೂ ಸಾಕಷ್ಟಿದೆ.
ಟಿಪ್ಪು ಜಯಂತಿ ಆಚರಿಸಲು ಹೋಗಿ ಕೊಡಗು ಹೊತ್ತಿ ಉರಿಯಿತು. ಇದಾದ ನಂತರ ನಡೆದ ಗಲಭೆಯಲ್ಲಿ ಅನೇಕರು ಪ್ರಾಣ ಕಳೆದುಕೊಂಡರು. ಸರಕಾರ ಹಠಕ್ಕೆ ಬಿದ್ದಂತೆ ಟಿಪ್ಪು ಜಯಂತಿ ಆಚರಿಸಿದ ಪರಿಣಾಮ ಜಿಲ್ಲೆಯಲ್ಲಿ ದೊಡ್ಡ ಕೋಮುಗಲಭೆಯೊಂದು ನಡೆಯಿತು. ದಕ್ಷಿಣ ಕನ್ನಡದಲ್ಲಿ ನಡೆದ ಕೋಮುಗಲಭೆ ಇದಕ್ಕೆಲ್ಲಾ ಸರಕಾರವೇ ಕಾರಣ ಎಂದು ಎಲ್ಲರಿಗೂ ಸ್ಪಷ್ಟವಾಗಿ ಗೊತತಿದೆ. ನೋಟು ಅಮಾನ್ಯ ಸಂದರ್ಭ ಕರ್ನಾಕದಲ್ಲಿ ಸಾಕಷ್ಟು ಕಡೆಗಳಲ್ಲಿ ದುಡ್ಡು ಕಂತೆಕಂತೆಯಾಗಿ ಸಿಕ್ಕಿತು. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಸಾಕಷ್ಟು ಪ್ರಕರಣ ನಡೆದಿದೆ. ಇದರ ನಡುವೆ ಡಿಕೆಶಿ ಮನೆಗೆ ಐಟಿ ದಾಳಿ ನಡೆದು ಕೋಟ್ಯಂತರ ರೂ ಹಣ, ಆಸ್ತಿ, ದಾಖಲೆ ಪತ್ರಗಳನ್ನು ವಶಪಡಿಸಲಾಯಿತು. ಇಷ್ಟೆಲ್ಲಾ ಹಗರಣಗಳು ನಡೆದಿರುವಾಗ ರಾಜ್ಯದ ಜನರು ಯಾವ ಮುಖ ಹೊತ್ತು ಕಾಂಗ್ರೆಸಿಗೆ ಓಟು ಹಾಕುತ್ತಾರೆ ಎಂಬುವುದು ಯಕ್ಷ ಪ್ರಶ್ನೆ.
ಸಿಫೋರ್ ನಡೆಸಿರುವ ಸಮೀಕ್ಷೆ ಕಾಂಗ್ರೆಸ್ ಸರಕಾರವನ್ನು ಓಲೈಸಲು ಮಾಡಿದ ಒಂದು ಕ್ರಮದಂತಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಲು ಹೆಣಗಾಡುತ್ತಿರುವಾಗ, ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ಮೂಲನೆ ಆಗುತ್ತಿರುವಾಗ, ಕಾಂಗ್ರೆಸ್‍ನ ಒಂದೊಂದೋ ಮುಖದ ಅನಾವರಣವಾಗುತ್ತಿದ್ದಾಗ ಜನರು ಮತ್ತೆ ಕಾಂಗ್ರೆಸ್‍ಗೆ ಓಟು ಹಾಕುತ್ತಾರೆಂದರೆ ಕರ್ನಾಕಟದ ಜನರಿಗೇನು ಬುದ್ಧಿ ಇಲ್ಲವೇ? ಆದ್ದರಿಂದ ಈ ಸಮೀಕ್ಷೆ ಬರೀ ಬುಡುಬುಡುಕೆ ಎಂದರೂ ತಪ್ಪಾಗಲಾರದು.
ಈ ಎಲ್ಲಾ ಸಮೀಕ್ಷೆಗೆ ಸವಾಲಾಗಿ `ಪೋಸ್ಟ್ ಕಾರ್ಡ್ ಸಮೀಕ್ಷೆ ನಡೆಸಲಿದ್ದು, ಸಿಫೋರ್‍ನ ಸಮೀಕ್ಷೆಯ ಅಸಲಿಯತ್ತನ್ನು ಬಯಲುಗೊಳಿಸಲಿದೆ. ಜನರು ಪ್ರಜ್ಞಾವಂತರಾಗಿದ್ದು, ಜನವಿರೋಧಿ, ಭ್ರಷ್ಟಾಚಾರಿ ಕಾಂಗ್ರೆಸ್ ಸರಕಾರವನ್ನು ಮತ್ತೊಮ್ಮೆ ಗೆಲ್ಲಿಸುವ ತಪ್ಪು ಖಂಡಿತಾ ಮಾಡಲಾರರು.
-ಚೇಕಿತಾನ
Tags

Related Articles

Close