ಪ್ರಚಲಿತ

ಸುದ್ಧಿ ವಾಹಿನಿ ಬಿಚ್ಚಿಟ್ಟಿತು ಕಾಂಗ್ರೆಸ್‍ನ ಕರಾಳ ಮುಖ… ಸಾಧ್ಯನೇ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ತೆರೆಮರೆಯಲ್ಲಿ ಮಾಡುತ್ತಿದೆ ಈ ನಾಟಕ..!!!

ಕಾಂಗ್ರೆಸ್  ದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ರಾಷ್ಟ್ರೀಯ ಪಕ್ಷ. ಭ್ರಷ್ಟಾಚಾರಗಳಿಂದಲೇ ಹೆಸರುವಾಸಿಯಾಗಿರುವ ಈ ಪಕ್ಷ ಹಿಂದೂ ವಿರೋಧಿ ನೀತಿಗಳಿಂದಲೂ ಹೆಸರು ಮಾಡಿಕೊಂಡಿದೆ. ಹಿಂದುತ್ವ ಎಂದರೆ ಈ ಕಾಂಗ್ರೆಸ್ ಪಕ್ಷಕ್ಕೆ ಅದೇನೋ ಭಯ.

ಯಾಕೆಂದರೆ ಹಿಂದೂಗಳು ತಮ್ಮ ಶಕ್ತಿಯನ್ನು ಒಮ್ಮೆ ಪ್ರದರ್ಶನ ಮಾಡಿದರೆ ಮತ್ತೆ ತಾನು ಎದ್ದು ಬರೋದೇ ಕಷ್ಟ. ಹೀಗಾಗಿ ಹಿಂದೂ ಎಂಬ ಪದವನ್ನು ಸಾಧ್ಯವಾದಷ್ಟು ದೂರ ಮಾಡುತ್ತಲೇ ಇದೆ ಈ ರಾಷ್ಟ್ರೀಯ ಪಕ್ಷ. ಈ ಕಾರಣದಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಇತಿಹಾಸ ಕಂಡು ಕೇಳರಿಯದಂತಹ ಸೋಲು ಕಂಡು ಮೂಲೆ ಸೇರಿದ್ದು.

ನಂತರ ದೇಶದಲ್ಲಿ ಅದೆಷ್ಟೋ ರಾಜ್ಯಗಳ ವಿಧಾನ ಸಭಾ ಚುನಾವಣೆಗಳೂ ನಡೆದವು. ಆದರೆ ನಂತರ ನಡೆದ ಈ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಮಖಾಡೆ ಮಲಗಿತ್ತು. ಬರೋಬ್ಬರಿ 19 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಕಂಡು ಕೇಳರಿಯ ಸೋಲನ್ನು ಅನುಭವಿಸಿತ್ತು. ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಉತ್ತರಕಾಂಡ್, ಗುಜರಾತ್, ಹಿಮಾಚಲ ಪ್ರದೇಶ, ರಾಜಸ್ಥಾನ, ಝಾರ್ಕಾಂಡ್ ಸಹಿತ ಅನೇಕ ರಾಜ್ಯಗಳಲ್ಲಿ ಭಾರಯತೀಯ ಜನತಾ ಪಕ್ಷ ತನ್ನ ಕೇಸರೀ ಧ್ವಜವನ್ನು ಹಾರಿಸಿ ಬಿಟ್ಟಿದೆ.

ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷ ಹಿಂದೂಗಳ ಪಕ್ಷ, ಕೋಮುವದಿಗಳ ಪಕ್ಷ ಎಂದು ಬೊಬ್ಬೆ ಬಿಡುತ್ತಿದ್ದ ವಿರೋಧಿಗಳಿಗೆ ಜಮ್ಮು ಕಾಶ್ಮೀರದ ಚುನಾವಣೆಯೂ ತಕ್ಕ ಪಾಠ ಕಳಿಸಿದೆ. ಜಮ್ಮು ಕಾಶ್ಮೀರ ಎಂಬುವುದು ಮಾಸಲ್ಮಾನ ಬಾಹುಲ್ಯವುಳ್ಳ ರಾಜ್ಯ. ಅಲ್ಲಿ ಏನಿದ್ದರೂ ಮುಸ್ಲಿಮರದ್ದೇ ಕಾರುಬಾರು. ಭಾರತದ ಬದ್ಧ ವೈರಿ ರಾಷ್ಟ್ರ ಪಾಕಿಸ್ಥಾನದ ಉಪಟಳವನ್ನು ಸದಾ ಅನುಭವಿಸುವ ಕಾಶ್ಮೀರದಲ್ಲೇ ಭಾರತೀಯ ಜನತಾ ಪಕ್ಷ ತನ್ನ ಪ್ರಭಾವವನ್ನು ಬೀರಿತ್ತು. ಪ್ರತ್ಯೇಕವಾದಿಗಳು ಹಾಗೂ ಭಯೋತ್ಪದಕರ ಮಧ್ಯೆಯೂ ಬಿಜೆಪಿ ತನ್ನ ಪ್ರಭಾವವನ್ನು ಬೀರಿ ಇತಿಹಾಸವನ್ನು ಸೃಷ್ಟಿಸಿತ್ತು.

ಮುಂದಿನ ಸರದಿ ಕರ್ನಾಟಕ…

ಈ ಎಲ್ಲಾ ರಾಜ್ಯಗಳಲ್ಲಿ ಕೇಸರೀ ಪಕ್ಷ ತನ್ನ ಪ್ರಭಾವವನ್ನು ಬೀರಿ ಸರ್ಕಾರವನ್ನು ರಚಿಸಿದೆ. ಈಗ ಭಾರತೀಯ ಜನತಾ ಪಕ್ಷದ ದೃಷ್ಟಿ ನೆಟ್ಟಿರುವುದು ಕರ್ನಾಟಕ ರಾಜ್ಯದ ಮೇಲೆ. ಕಳೆದ ಬಾರಿ ಕೆಲವು ತಪ್ಪಿನಿಂದ ಆಡಳಿತವನ್ನು ಕಳೆದುಕೊಂಡಿದ್ದ ರಾಜ್ಯ ಕರ್ನಾಟಕ ಬಿಜೆಪಿ. ಹೀಗಾಗಿ ಈ ಬಾರಿ ಹೇಗಾದರೂ ಮಾಡಿ ರಾಜ್ಯದಲ್ಲಿ ಮತ್ತೆ ಅಧಿಕಾರವನ್ನು ಮರುಸ್ಥಾಪಿಸಬೇಕೆ ಎಂಬ ಹಠಕ್ಕೆ ಬಿದ್ದಿದ್ದಾರೆ ಭಾರತೀಯ ಜನತಾ ಪಕ್ಷದ ನಾಯಕರು.

ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷದ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ರಾಜ್ಯ ಕರ್ನಾಟಕ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದೇ ಕರ್ನಾಟಕ. ಹೀಗಾಗಿ ಮತ್ತೊಮ್ಮೆ ಈ ರಾಜ್ಯದಲ್ಲಿ ಕಮಲವನ್ನು ಅರಳಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಭಾರತೀಯ ಜನತಾ ಪಕ್ಷದ ರಾಷ್ಟ್ರ ನಾಯಕರು.

ಜಾತಿಯ ವಿಷ ಬೀಜ ಬಿತ್ತಿದ ಕಾಂಗ್ರೆಸ್..!

ಭಾರತೀಯ ಜನತಾ ಪಕ್ಷದ ನಾಯಕರು ಹೇಗಾದರು ಮಾಡಿ ಈ ಬಾರಿ ಕರ್ನಾಟಕದಲ್ಲಿ ಚುನಾವಣೆ ಗೆಲ್ಲೋದು ಖಚಿತ ಎಂಬ ಸುಳಿವು ಅದಾಗಲೇ ರಾಜ್ಯ ಕಾಂಗ್ರೆಸ್‍ಗೆ ಗೊತ್ತಾಗಿಯೇ ಬಿಟ್ಟಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ಕಾಂಗ್ರೆಸ್ ನಾನಾ ರೀತಿಯ ಸ್ಟಾಟರ್ಜಿಗಳನ್ನು ಮಾಡುವತ್ತ ದಾಪುಗಾಲುಗಳನ್ನು ಇಡುತ್ತಾ ಇದೆ.

ಗುಜರಾತ್ ಚುನಾವಣೆಯ ರೀತಿಯಲ್ಲೇ ಇಲ್ಲಿ ಕೂಡಾ ಡಿವೈಡ್ ಆಂಡ್ ರೂಲ್ ತತ್ವವನ್ನೇ ಅನುಸರಿಸುತ್ತಾರೆ. ಗುಜರಾತ್‍ನಲ್ಲಿ ಪಟೇಲ್ ಹಾಗೂ ದಲಿತ ಸಮುದಾಯಗಳನ್ನು ಎತ್ತಿಕಟ್ಟಿ ತಮ್ಮ ರಾಜಕೀಯ ಬೇಳೆಗಳನ್ನು ಬೇಯಿಸಿಕೊಂಡಿದ್ದರು ಅಲ್ಲಿನ ಕಾಂಗ್ರೆಸ್ ನಾಯಕರು. ಆದರೆ ಅದು ಸಫಲವಾಗಿಲ್ಲ ಅನ್ನೋದು ಸರ್ವವಿಧಿತ.

ಈ ತಂತ್ರಗಾರಿಕೆಯನ್ನು ಈಗ ಕರ್ನಾಟಕದಲ್ಲೂ ಮುಂದುವರೆಯವ ಲಕ್ಷಣಗಳು ಗೋಚರಿಸುತ್ತಾ ಇದೆ. ಈಗಾಗಲೇ ಕರ್ನಾಟಕದಲ್ಲಿ ಬಹುದೊಡ್ಡ ಜಾತಿಯಾದ ಲಿಂಗಾಯಿತ ವೀರಶೈವರನ್ನು ಬೇರ್ಪಡಿಸಿ ಅದರಲ್ಲೂ ಜಾತಿ ರಾಜಕೀಯ ಮಾಡಲು ಹುನ್ನಾರ ನಡೆಸುತ್ತಿದೆ. ಲಿಂಗಾಯುತ ಜಾತಿ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಾಗಿ ದಿನೇ ದಿನೇ ಹೋರಾಟವನ್ನು ಬಲಪಡಿಸುತ್ತಿದೆ ರಾಜ್ಯ ಕಾಂಗ್ರೆಸ್.

ಜಾತಿಗೊಬ್ಬ ನಾಯಕನನ್ನು ಹುಟ್ಟುಹಾಕಿ ಅದರಲ್ಲಿ ಬೇಳೆ ಬೇಯಿಸಿಕೊಂಡು ಅವರನ್ನು ಭಾರತೀಯ ಜನತಾ ಪಕ್ಷದ ವಿರುದ್ಧವಾಗಿ ಎತ್ತಿಕಟ್ಟುವ ಹುನ್ನಾರವನ್ನು ನಡೆಸುತ್ತಿದೆ ರಾಜ್ಯ ಕಾಂಗ್ರೆಸ್. ಇದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಕೃಪಾ ಕಟಾಕ್ಷನೂ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಾತಿ ಎನ್ನುವ ವಿಚಾರ ರಾಜ್ಯದ ವಿಧಾನ ಸಭಾ ಚುನಾವಣೆಯ ಪ್ರಮುಖ ವಿಷಯವೇ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬಂತಾಗಿದೆ.

ದೇಶದ್ರೋಹಿಗಳ ಮೊರೆ ಹೋಗಿದೆ ರಾಜ್ಯ ಕಾಂಗ್ರೆಸ್…

ಇಲ್ಲ. ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದೇ ಇಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ರಾಜ್ಯ ಕಾಂಗ್ರೆಸ್ ನಾಯಕರು ಈಗ ದೇಶದ್ರೋಹಿಗಳೊಂದಿಗೆ ಕದ್ದು ಮುಚ್ಚಿ ಹೊಂದಾಣಿಕೆ ಮಾಡಿಕೊಂಡಿರುವ ವಿಚಾರ ಬಟಬಯಲಾಗಿದೆ. ಅದೂ ಮುಸಲ್ಮಾನರ ಓಟಿಗಾಗಿ. ಈ ಬಾರಿ ಮುಸಲ್ಮಾನರ ಪಕ್ಷವಾದ ಎಸ್‍ಡಿಪಿಐ ಹಾಗೂ ಅಕ್ಬರುದ್ದೀನ್ ಓವೈಸಿಯ ಎಐಎಮ್‍ಐಎಮ್ ಪಕ್ಷವು ರಾಜ್ಯದಲ್ಲಿ ವಿಧಾನ ಸಭೆಗೆ ಸ್ಪರ್ಧೆಗೆ ಇಳಿಯುವುದು ಖಚಿತವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್‍ಗೆ ನಡುಕ ಉಂಟಾಗುತ್ತೆ. ತಾವು ನಂಬಿಕೊಂಡಿರುವುದೇ ಮುಸಲ್ಮಾನರ ಮತಗಳನ್ನು. ಅದಕ್ಕೆ ಕಲ್ಲು ಬಿದ್ದರೆ ನಾವು ಏನು ಮಾಡೋದು ಎಂಬ ಚಿಂತೆ ಕಾಡುತ್ತಲೇ ಇತ್ತು ರಾಜ್ಯ ಕಾಂಗ್ರೆಸ್‍ಗೆ. ಹೀಗಾಗಿ ಕಾಂಗ್ರೆಸ್ ಅನುಸರಿಸಿದ ಮಾರ್ಗವೇ ಹೊಂದಾಣಿಕೆ.

ಬಯಲಾಯಿತು ಕಾಂಗ್ರೆಸ್ಸಿನ ಕಳ್ಳ ಮುಖ..!

ಹೌದು. ನಾವು ಯಾರೊಂದಿಗೂ ಹೊಂದಾನಿಕೆ ಮಾಡಿಕೊಳ್ಳುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ರಾಜ್ಯ ಕಾಂಗ್ರೆಸ್ ಈಗ ತೆರೆಮರೆಯಲ್ಲಿ ಮುಸಲ್ಮಾನ ಪಕ್ಷಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗುತ್ತಿದೆ. ತನ್ನ ಪ್ರಬಲ ಓಟ್ ಬ್ಯಾಂಕ್ ಆಗಿರುವ ಮುಸಲ್ಮಾನರನ್ನು ಬಿಟ್ಟು ಕೊಡಲು ಕಾಂಗ್ರೆಸ್ ಪಕ್ಷ ಸುತಾರಾಮ್ ತಯಾರಾಗಿಲ್ಲ. ಹೀಗಾಗಿ ಮುಸಲ್ಮಾನ ಪಕ್ಷಗಳು ರಾಜ್ಯ ವಿಧಾನ ಸಭೆಯಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್‍ಗೆ ಸೋಲು ಅನ್ನೋದು ಕಟ್ಟಿಟ್ಟ ಬುತ್ತಿ. ಹೀಗಾಗಿಯೇ ಅಕ್ಬರುದ್ದೀನ್ ಓವೈಸಿ ಹಾಗೂ ಎಸ್‍ಡಿಪಿಐ ಪಕ್ಷಗಳನ್ನು ಹೊಂದಾನಿಕೆ ಮಾಡಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದ್ದಾರೆ ರಾಜ್ಯ ಕಾಂಗ್ರೆಸ್ ಮುಖಂಡರು.

ರಾಜ್ಯದಲ್ಲಿ ಮುಸಲ್ಮಾನ ಬಾಹುಳ್ಯವುಳ್ಳ ಪ್ರದೇಶದಲ್ಲಿ ಎಸ್‍ಡಿಪಿಐ ಸ್ಪರ್ಧಿಸಿದರೆ ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡಿ ಗೆಲ್ಲಿಕೊಟ್ಟು ನಂತರ ಅವರನ್ನು ಕಾಂಗ್ರೆಸ್‍ಗೆ ಸೇರ್ಪಡೆಗೊಳಿಸುವ ತಂತ್ರವನ್ನೂ ಕಾಂಗ್ರೆಸ್ ಅನುಸರಿಸಿಕೊಂಡಿದೆ. ಈ ಬಗ್ಗೆ ಸುದ್ಧಿ ವಾಹಿನಿಯೊಂದು ಕಾಂಗ್ರೆಸ್‍ನ ಒಳಗುಟ್ಟೊಂದನ್ನು ಬಟಬಯಲು ಮಾಡಿದ್ದು ರಾಜ್ಯ ಕಾಂಗ್ರೆಸ್‍ನಲ್ಲಿಯೇ ಭಾರೀ ಕೋಲಾಹಲ ಉಂಟಾಗಿದೆ.

ಮುಸಲ್ಮಾನ ಪಕ್ಷ ಎನಿಸಿಕೊಂಡಿರುವ ಆ ಪಕ್ಷದಲ್ಲಿ ಇರೋರೆಲ್ಲರೂ ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಿರಾತಕರು. ಕುತ್ತಿಗೆಗೆ ಕತ್ತಿ ಇಟ್ಟರು ಭಾರತ್ ಮಾತಾ ಕೀ ಜೈ ಅನ್ನಲ್ಲ ಎಂದು ಬೊಗಳಿದ ದೂರ್ಥ ಓವೈಸಿ. ಆತನೊಂದಿಗೆ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಹೊಂದಾನಿಕೆ ಮಾಡಿಕೊಳ್ಳಲು ಮುಂದಾಗಿದೆ ರಾಜ್ಯ ಕಾಂಗ್ರೆಸ್ ಪಕ್ಷ.

ಒಟ್ಟಾರೆ ರಾಜ್ಯ ಕಾಂಗ್ರೆಸ್ ಪಕ್ಷ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗೆಲ್ಲಲು ಯಾವ ತಂತ್ರವನ್ನೂ ಅನುಸರಿಸಲು ಸಿದ್ದವಿದೆ ಎಂಬುವುದನ್ನು ಮತ್ತೊಮ್ಮೆ ಸಾಭೀತು ಪಡಿಸಿದೆ. ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆ ದೇಶದ್ರೋಹಿಗಳು ಹಾಗೂ ದೇಶಪ್ರೇಮಿಗಳ ನಡುವಿನ ಚುನಾವಣೆ ಆಗುವುದರಲ್ಲಿ ಯಾವ ಸಂದೇಹವೂ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close