ಪ್ರಚಲಿತ

ಸುನಂದಾ ಪುಷ್ಕರ್ ನ ಹತ್ಯೆಯಾಗುವ ದಿನ ಪ್ರಸಿದ್ಧ ಪತ್ರಕರ್ತೆಯರಾದ ಬರ್ಖಾ ದತ್ ಹಾಗೂ ಸಾಗರಿಕಾ ಘೋಸ್ ಗೆ ಸಂದೇಶವನ್ನು ಕಳುಹಿಸಿದ್ದರೇ?! ಪೋಲಿಸರಿಂದ ವಿಷಯವನ್ನು ಮುಚ್ಚಿಟ್ಟರೇ ಪತ್ರಕರ್ತೆಯರು?!

ಸುನಂದಾ ಪುಷ್ಕರ್. ಕೆಲವು ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ಮಹಿಳೆ. ಈಕೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್‍ರವರ ಪತ್ನಿ. ಆಕೆ ನಿಗೂಢವಾಗಿ ಸಾವನ್ನಪ್ಪಿ ಕೆಲ ವರ್ಷಗಳೇ ನಡೆದರೂ ಅದರ ಬಗ್ಗೆ ಇನ್ನೂ ಸರಿಯಾದ ತನಿಖೆ ನಡೆಯದೆ ಪ್ರಕರಣ ತುಂಬಾನೆ ನಿಶ್ಶಬ್ಧವಾಗಿದೆ. ಸುನಂದಾ ಪುಷ್ಕರ್ ತನ್ನ ಪತಿ ಶಶಿ ತರೂರ್ ಬಗ್ಗೆ ರಹಸ್ಯ ವಿಷಯವನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ್ದ ಕೆಲವೇ ದಿನಗಳಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಾರೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ, ಅಂದರೆ 3 ವರ್ಷಗಳ ಹಿಂದೆ ಪುಷ್ಕರ್ ನಿಗೂಢವಾಗಿ ಸಾವನ್ನಪ್ಪಿದ್ದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ್ದರೂ ಈವರೆಗೂ ಯಾವುದೇ ಪ್ರಗತಿಯಾಗಿಲ್ಲ.

ಈ ಬಗ್ಗೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಾರೆ. ಅತ್ತ ಪೋಸ್ಟ್ ಮಾರ್ಟನ್ ರಿಪೋರ್ಟ್ ಬರೋದಕ್ಕೂ ಮುಂಚೆನೇ ಪೊಲೀಸರ ಮುಂದೆ ಶಶಿ ತರೂರ್ ಹೇಳಿಕೆಯೊಂದನ್ನು ನೀಡುತ್ತಾರೆ. “ತನ್ನ ಪತ್ನಿಗೆ ಲೂಪಸ್ ಎಂಬ ಚರ್ಮ ರೋಗಕ್ಕೆ ಸಂಬಂಧಿಸಿದ ಕಾಯಿಲೆ ಇತ್ತು. ಇದರಿಂದ ಆಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಹಾಗೂ ಅದರಿಂದ ಹೊರಬರುವ ಸಲುವಾಗಿ ವಿಪರೀತ ಮಾತ್ರೆಗಳನ್ನು ಸೇವಿಸುತ್ತಿದ್ದಳು. ನಂತರ ಎಳನೀರನ್ನು (ಸಿಯಾಳ) ಹೆಚ್ಚಾಗಿ ಸೇವಿಸುತ್ತಿದ್ದಳು. ಇದರಿಂದ ಆಕೆ ಸಾವನ್ನಪ್ಪಿರಬಹುದು” ಎಂಬ ಹೇಳಿಕೆಯನ್ನು ನೀಡುತ್ತಾರೆ. ಆದರೆ ಆ ಹೊತ್ತಿನಲ್ಲಿ ಪತ್ನಿಯ ಪೋಸ್ಟ್ ಮಾರ್ಟಮ್ ಕೂಡಾ ಆಗಿರುವುದಿಲ್ಲ ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

ದೆಹಲಿ ಪೊಲೀಸರು ಸರ್ಕಾರದ ಅಡಿಯಲ್ಲಿ ಹಾಗೂ ಅಂದಿನ ಕೇಂದ್ರ ಸಚಿವ ಶಶಿ ತರೂರು ಕೃಪಾ ಕಟಾಕ್ಷದಲ್ಲಿದ್ದರು. ಶಶಿ ತರೂರ್ ಹೇಳಿದಂತೆ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಹೀಗಾಗಿಯೇ ಪೋಸ್ಟ್ ಮಾರ್ಟಮ್ ವರದಿ ಬರೋದಕ್ಕೂ ಮುಂಚೆನೇ ದೆಹಲಿ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ತಮ್ಮ ಪೊಲೀಸ್ ವರದಿಯಲ್ಲೂ ಇದೊಂದು ಆತ್ಮಹತ್ಯೆ ಎಂದು ಕಾಣಿಸುತ್ತಾರೆ. ಆದರೆ ನಂತರ ಬಂದ ಪೋಸ್ಟ್ ಮಾರ್ಟಮ್ ವರದಿಯಲ್ಲಿ, ಸುನಂದಾ ಪುಷ್ಕರ್ ಸೇವಿಸಿದ ಆಹಾರದಲ್ಲಿ ವಿಷ ಪತ್ತೆಯಾಗಿದೆ ಎಂಬ ಸ್ಪೋಟಕ ಮಾಹಿತಿಯನ್ನು ನೀಡಿದ್ದರು. ಆದರೆ ನಂತರ ಸೈಲೆಂಟಾಗಿದ್ದ ವೈದ್ಯರಾದ ಡಾ.ಸುಧೀರ್ ಮುಂದೊಂದು ದಿನ ಸುದ್ಧಿಗೋಷ್ಠಿ ನಡೆಸಿ, “ಕೇಂದ್ರ ಸಚಿವ ಗುಲಾಬ್ ನಬಿ ಆಜಾದ್ ನನಗೆ ಆತ್ಮಹ್ಯೆ ಎಂದು ವರದಿ ನೀಡುವಂತೆ ಒತ್ತಡ ಹಾಕಿದ್ದರು” ಎಂದು ಬಹಿರಂಗಪಡಿಸಿದ್ದರು.

ಅಷ್ಟಕ್ಕೂ ಆತ್ಮಹತ್ಯೆ ಎಂದು ವರದಿ ನೀಡುವಂತೆ ಕಾಂಗ್ರೆಸ್ ಸಚಿವರು ಒತ್ತಾಯಿಸಿದ್ದಾದರೂ ಯಾಕೆ? ಕಾಂಗ್ರೆಸ್ಸಿಗೆ ಹತಾಶ ಮನೋಭಾವ ಕಾಡಿತ್ತಾ?

ಸಾವನ್ನಪ್ಪಿದ್ದು ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್. ಆದರೆ ಈ ವಿಷಯ ಉಳಿದ ಕಾಂಗ್ರೆಸ್ಸಿಗರಿಗೆ ಭಯವನ್ನು ತಂದಿಟ್ಟಿತ್ತು. ಇದ್ಯಾಕೆ ಹೀಗೆ ಎಂದು ಕೆದಕುತ್ತಾ ಹೋದಾಗ ಶಶಿ ತರೂರ್ ಅವರ ಐಪಿಎಲ್ ಕ್ರಿಕೆಟ್ ನಂಟು ಗೋಚರಿಸುತ್ತೆ. ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಶಶಿ ತರೂರ್ ಹಾಗೂ ಉಳಿದ ಕಾಂಗ್ರೆಸ್‍ನ ಪ್ರಭಾವಿ ಮುಖಂಡರುಗಳ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಬಿಡುಗಡೆಗೊಳಿಸಲು ತಯಾರಾಗಿದ್ದರು. ಹೀಗೇನಾದ್ರು ಬಿಡುಗಡೆಯಾಗುತ್ತಿದ್ದರೆ ಕಾಂಗ್ರೆಸ್‍ನ ಹಲವಾರು ಮುಖಂಡರುಗಳ ಬಣ್ಣ ಬಯಲಾಗುತ್ತಿತ್ತು. ಎಲ್ಲರೂ ಜೈಲು ಪಾಲಾಗುತ್ತಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಸುನಂದಾ ಪುಷ್ಕರ್ ಸಾವನ್ನಪ್ಪುತ್ತಾರೆ.

ಇದರ ಇಡೀ ಕಥನವು 2010ರಲ್ಲಿ ಆರಂಭವಾಗುತ್ತದೆ. ಅಂದಿನ ಐಪಿಎಲ್ ಹಗರಣವು ಭಾರೀ ಸುದ್ಧಿ ಮಾಡಿತ್ತು. ಅಂದು ಐಪಿಎಲ್‍ನ ಕೊಚ್ಚಿ ಟಸ್ಕರ್ಸ್ ತಂಡವು ಸುನಂದಾ ಪುಷ್ಕರ್ ನೇತೃತ್ವದಲ್ಲಿ ಇತ್ತು. ಆದರೆ ಇದರ ಹಿಂದೆ ಕಾಂಗ್ರೆಸ್ ಮುಖಂಡರ ಹಿಡಿತವಿತ್ತು. ಸತ್ಯಾಂಶವೆಂದರೆ, ಶಶಿ ತರೂರ್ ಸಹಿತ ಅನೇಕ ಕಾಂಗ್ರೆಸ್ ಮುಖಂಡರು ಕೊಚ್ಚಿ ಟಸ್ಕರ್ಸ್ ತಂಡವನ್ನು ಖರೀದಿಸಿದ್ದರು. ಆದರೆ ರಾಜಕೀಯ ಹಿತಧೃಷ್ಟಿಯಿಂದ ಯಾವೊಬ್ಬ ಮುಖಂಡನೂ ಮುಂದೆ ಬರಲು ಒಪ್ಪಲಿಲ್ಲ. ಹೀಗಾಗಿಯೇ ಸುನಂದಾ ಪುಷ್ಕರ್‍ರವರನ್ನು ಮುಂದೆ ನಿಲ್ಲಿಸಿ, ಹಿಂಬಾಗಿಲ ಮೂಲಕ ಭಾರೀ ಭ್ರಷ್ಟಾಚಾರವನ್ನು ಈ ಮುಖಂಡರುಗಳು ಎಸಗಿದ್ದರು. ಇದರಲ್ಲಿ 75 ಕೋಟಿಯನ್ನು ಸುನಂದಾ ಪುಷ್ಕರ್‍ಗೆ ನೀಡಿದ್ದರು. ಆದರೆ ಹಿಂದೆ ನಡೆಯುತ್ತಿದ್ದ ಭಾರೀ ಭ್ರಷ್ಟಾಚಾರವನ್ನು ಅರಿತ ಸುನಂದಾ ಪುಷ್ಕರ್ ಈ ಬಗ್ಗೆ ಬಹಿರಂಗಪಡಿಸುವುದಾಗಿ ಹೇಳಿದ್ದರು.

ಸುನಂದಾ ಪುಷ್ಕರ್ ಅವರನ್ನು ತೋರಿಸಿ ತೆರೆಮರೆಯಲ್ಲಿ ಶಶಿ ತರೂರ್ ಹಾಗೂ ಇತರ ಕಾಂಗ್ರೆಸ್ ನಾಯಕರು ವ್ಯವಹಾರವನ್ನು ಮಾಡುತ್ತಿದ್ದರು. ಈ ಬಗ್ಗೆ ಐಪಿಎಲ್‍ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಬಹಿರಂಗಪಡಿಸುತ್ತಾರೆ. ಕೇರಳದ ಕೊಚ್ಚಿ ತಂಡವು ಪಾರದರ್ಶಕವಾಗಿಲ್ಲ ಹಾಗೂ ಸುನಂದಾ ಪುಷ್ಕರ್ ಹಿಂದೆ ಉಳಿದ ಪ್ರಭಾವಿಗಳ ಕೈವಾಡವಿದೆ ಎಂದು ತಿಳಿಸಿದರು. ಈ ಸಮಯದಲ್ಲಿ ಶಶಿ ತರೂರ್ ಗೃಹ ಇಲಾಖೆಯ ಎಮ್‍ಓಎಸ್ ಆಗಿದ್ದರು.

ಈ ಘಟನೆ ನಡೆದ ನಂತರ ಶಶಿ ತರೂರ್ ಹಾಗೂ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ನಡುವೆ ಭಿನ್ನಾಭಿಪ್ರಾಯ ಬುಗಿಲೇಳುತ್ತದೆ. ಈ ಮಧ್ಯೆ ಕೇರಳದ ಕೊಚ್ಚಿ ತಂಡದ ಪ್ರಾಂಚೈಸಿಯಲ್ಲಿ ಉಳಿದ ಪ್ರಭಾವಿ ಕಾಂಗ್ರೆಸ್ಸಿಗರ ಪೈಕಿ ಶಶಿ ತರೂರ್ ಕೂಡಾ ಒಬ್ಬರಾಗಿದ್ದಾರೆ ಎಂದು ನೇರವಾಗಿ ಲಲಿತ್ ಮೋದಿ ಆರೋಪಿಸುತ್ತಾರೆ. ಹಾಗೂ ಈ ವ್ಯವಹಾರದಲ್ಲಿ 1530 ಕೋಟಿ ಹಣಗಳನ್ನು ಸುನಂದಾ ಪುಷ್ಕರ್ ಮೂಲಕ ಈ ಮುಖಂಡರುಗಳು ಪಡೆದಿದ್ದರು ಹಾಗೂ ಇದರ ಸಹಾಯಕ್ಕಾಗಿ ಸುನಂದಾ ಪುಷ್ಕರ್‍ಗೆ 75 ಕೋಟಿಯಷ್ಟು ಹಣವನ್ನು ಉಡುಗೊರೆಯಾಗಿ ನೀಡಿದ್ದರು. ಈ ಹಗರಣವನ್ನು ಕೆಲವೇ ತಿಂಗಳುಗಳಲ್ಲಿ ಬಹಿರಂಗಗೊಳಿಸುತ್ತಾರೆ. ಈ ಹಗರಣ ಹೊರಬೀಳುತ್ತಿದ್ದಂತೆ ತಾನು ನಿರ್ವಹಿಸುತ್ತಿದ್ದ ಜವಬ್ಧಾರಿಗೆ ಶಶಿ ತರೂರ್ ರಾಜೀನಾಮೆ ನೀಡಬೇಕಾಯ್ತು.

ಈ ಕೇರಳ ಕೊಚ್ಚಿ ತಂಡದ ಫ್ರಾಂಚೈಸಿ ವಹಿಸಿದ್ದ ತಂಡದಲ್ಲಿ ಕೇವಲ ಶಶಿ ತರೂರ್ ಮಾತ್ರವೇ ಇರಲಿಲ್ಲ. ಅಥವಾ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಮಾತ್ರವೇ ಇರಲಿಲ್ಲ. ಬದಲಾಗಿ ಇದರ ಹಿಂದೆ ದೇಶದಲ್ಲಿ ಅಂದು ಆಳ್ವಿಕೆಯನ್ನು ನಡೆಸುತ್ತಿದ್ದ ಗಾಂಧಿ ಪರಿವಾರದ ವ್ಯಕ್ತಿ ಇದ್ದರು. ಈ ಒಂದು ಮಹಾ ಆರೋಪವನ್ನು ಮಾಡಿದ್ದವರು ಬಿಜೆಪಿ ಮುಖಂಡ ಸುಭ್ರಹ್ಮಣ್ಯ ಸ್ವಾಮಿ. ಗಾಂಧಿ ಪರಿವಾರದ ಆ ಪ್ರಭಾವಿ ವ್ಯಕ್ತಿಯೇ ರಾಬರ್ಟ್ ವಾದ್ರಾ…

ಈ ಭ್ರಷ್ಟಾಚಾದ ವಿಷಯ ಕೇವಲ ಗಾಂಧಿ ಪರಿವಾರದವರೆಗೆ ಮಾತ್ರವೇ ವಿಸ್ತರಿಸದೆ, ಪಾಕಿಸ್ಥಾನದ ಐಎಸ್‍ಐ ವರೆಗೂ ವಿಸ್ತರಿಸಿತ್ತು ಎನ್ನುವ ಸ್ಪೋಟಕ ವಿಚಾರ ಬಹಿರಂಗವಾಗಿತ್ತು. ಇದರ ಬಹುಪಾಲು ಹಣ ಐಎಸ್‍ಐಗೆ ಸಂದಾಯವಾಗುತ್ತಿತ್ತು ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಪಾಕಿಸ್ಥಾನದ ಐಎಸ್‍ಐ ನ ಮೆಹ್ರ್ ತೆರರ್ ಎಂಬಾತ ಇದರ ಮಧ್ಯಸ್ಥಿಕೆಯನ್ನು ವಹಿಸಿದ್ದನು. ಈ ವಿಚಾರವನ್ನು ಸ್ವತಃ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್‍ರವರೇ ಬಹಿರಂಗಪಡಿಸಿದ್ದರು. ಆದೆರೆ ಇದು ಬಹಿರಂಗಪಡಿಸಿ ಕೆಲವೇ ದಿನಗಳಲ್ಲಿ ಸುನಂದಾ ಪುಷ್ಕರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಐಪಿಎಲ್ ಹೆಸರಿನಲ್ಲಿ ಬಹುದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡಿದ್ದರು ಈ ಖತರ್ನಾಕ್ ಮುಖಂಡರುಗಳು. ಅಷ್ಟಕ್ಕೂ ಗೆಲ್ಲುವ ತಂಡವನ್ನು ಆ ಮೊದಲೇ ನಿಗದಿ ಮಾಡಲಾಗಿತ್ತು. ಐಪಿಎಲ್ ಎಂಬ ಕಿಕ್ರೆಟ್ ಆಟವನ್ನು ಕೇವಲ ಜೂಜಾಡಲು ಬಳಸುತ್ತಿದ್ದರೇ ವಿನಹ ಅದರಲ್ಲಿ ಯಾವ ಪಾರದರ್ಶಕತೆಯೂ ಇರಲಿಲ್ಲ ಎಂಬುವುದು ಬಟಬಯಲಾಗಿತ್ತು.

ಆದರೆ ತಮ್ಮ ನೀಚ ಕೆಲಸಗಳು ಮಾಧ್ಯಮದ ಮೂಲಕ ಸಮಾಜಕ್ಕೆ ಗೋಚರಿಸಬಾರದು ಎಂಬ ಕಾರಣಕ್ಕೆ ಸುನಂದಾ ಪುಷ್ಕರ್‍ರವರನ್ನು ಮುಂದಿಟ್ಟು ಕೆಲಸ ಮಾಡಲಾಗುತ್ತಿತ್ತು.

ಆದರೆ ಇದ್ಯಾಕೋ ಸುನಂದಾ ಪುಷ್ಕರ್‍ಗೆ ತಪ್ಪು ಮಾಡುತ್ತಿದ್ದೇವೆ ಎಂಬುದು ಬಾಸವಾಗುತ್ತದೆ. ಈ ಕಾರಣಕ್ಕಾಗಿಯೇ ಆಕೆ ಈ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸಲು ಮುಂದಾಗುತ್ತಾಳೆ. ಅದಕ್ಕಿಂತಲೂ ಈ ವಿಷಯ ಯಾವಾಗ ತನ್ನ ವ್ಯಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೋ ಅಂದು ಆಕೆ ಸುಮ್ಮನಿರಲು ತಯಾರಿರಲಿಲ್ಲ. ಈ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸಲು ಮುಂದಾದ ಪುಷ್ಕರ್ ಬಗ್ಗೆ ಈ ಕಾಂಗ್ರೆಸ್ ಮುಖಂಡರುಗಳಿಗೆ ಭಯ ಬೀಳುತ್ತೆ. ಆವಾಗಲೇ ಹಲವಾರು ಹಗರಣಗಳ ಮೂಲಕ ದೇಶದ ಮುಂದೆ ತನ್ನ ಮಾನವನ್ನು ಹರಾಜು ಮಾಡಿಸಿಕೊಂಡಿದ್ದ ಕಾಂಗ್ರೆಸ್ಸಿಗರಿಗೆ ಈ ಹಗರಣದ ಬಯಲಿಗೆ ಬರಬಾರದೆಂಬ ಉದ್ಧೇಶವನ್ನು ಇಟ್ಟುಕೊಂಡಿದ್ದರು. 2014 ಮಹಾ ಚುನಾವಣೆ ಬೇರೆ ಹತ್ತಿರದಲ್ಲಿತ್ತು. ಆ ಸಂದಭದಲ್ಲಿ ಇನ್ನೊಂದು ಹಗರಣವನ್ನು ಎದುರಿಸುವಷ್ಟು ಧೈರ್ಯ ಈ ಭ್ರಷ್ಟರಿಗಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಸುನಂದಾ ಪುಷ್ಕರ್‍ರವರನ್ನು ಶಾಶ್ವತವಾಗಿ ಮೌನವಾಗಿರಿಸುವ ಬಗ್ಗೆ ಯೋಚಿಸಿ ಕೆಲಸ ಮಾಡಿದ್ದರು.

ಹೀಗಾಗಿ ಸುನಂದಾ ಪುಷ್ಕರ್‍ರನ್ನು ಸಾಯಿಸಬೇಕೆಂದು ಅವರು ಬಯಸಿದ್ದರು. ಇದಕ್ಕಾಗಿ ಪಕ್ಕಾ ಯೋಜನೆ ಹಾಕಿಕೊಂಡು ಲೀಲಾ ಹೊಟೇಲ್‍ಗೆ ಕರೆದೊಯ್ದಿದ್ದರು. ಆದರೆ ಇದು ಪುಷ್ಕರ್‍ಗೆ ಇಷ್ಟವಿರಲಿಲ್ಲ. ಆದರೂ ಅಸಮಾಧಾನಗೊಂಡು ಹೊಟೇಲಿನತ್ತ ತೆರಳಿದ್ದರು. ಅದೆಷ್ಟೋ ಬಾರಿ ಮಾಧ್ಯಮದ ಮುಂದೆ ಹೋಗಲು ಪುಷ್ಕರ್ ಬಯಸಿದ್ದರು. ಆದರೆ ಇದನ್ನು ಪತಿ ಶಶಿ ತರೂರ್ ತಡೆಯುತ್ತಿದ್ದರು ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ.

ಸುನಂದಾ ಪುಷ್ಕರ್‍ಗೆ ಅದ್ಯಾಕೋ ಜೀವ ಭಯ ಕಾಡುತ್ತಲೇ ಇತ್ತು. ಹೀಗಾಗಿಯೇ ಆಕೆ ಪತ್ರಕರ್ತರನ್ನು ಭೇಟಿಯಾಗಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಅದಕ್ಕೆ ಶಶಿ ತರೂರ್ ಯಾವುದೇ ಅವಕಾಶವನ್ನೂ ನೀಡಲೇ ಇಲ್ಲ. ಹೀಗಾಗಿಯೇ ಆಕೆ ಬರ್ಕಾ ದತ್ ಹಾಗೂ ಸಾಗರಿಕಾ ಎಂಬ ಪತ್ರಕರ್ತರಿಗೆ ಸಂದೇಶಗಳನ್ನು ಕಳಿಸಿದ್ದರು. ನಿಮ್ಮಲ್ಲಿ ಏನೋ ಹೇಳಲಿಕ್ಕಿದೆ ಎಂಬ ಮೆಸೆಜ್‍ನ್ನು ಕಳಿಸಿದ್ದರು ಪುಷ್ಕರ್. ಮಾತ್ರವಲ್ಲದೇ ಪತ್ರಕರ್ತ ರಾಹುಲ್ ಕನ್ವಾಲ್ ಎಂಬಾತನಿಗೂ ಮೆಸೆಜ್ ಮಾಡಿದ್ದರು. ಆದರೆ ಅಂದೇ ಸುನಂದಾ ಪುಷ್ಕರ್ ನಿಗೂಢವಾಗಿ ಸಾವನ್ನಪ್ಪುತ್ತಾರೆ. ಹೀಗಾದ ನಂತರವೂ ಆಕೆಯ ಸಂದೇಶಗಳನ್ನು ಸ್ವೀಕರಿಸಿದ್ದ ವಿಷಯವನ್ನು ಪತ್ರಕರ್ತರು ಬಹಿರಂಗಪಡಿಸಲೇ ಇಲ್ಲ. ಅದನ್ನು ಗೌಪ್ಯವಾಗಿಯೇ ಇಟ್ಟಿದ್ದರು.

ಆಕೆಯ ಮರಣದ ನಂತರ ಕಾಂಗ್ರೆಸ್ ಮುಖಂಡರುಗಳು ಸಾಧ್ಯವಾದಷ್ಟು ತನಿಖೆಯನ್ನು ವಿಳಂಬ ಮಾಡಲು ಪ್ರಯತ್ನಿಸಿದರು. ಪ್ರಕರಣವನ್ನು ಆತ್ಮಹತ್ಯೆ ಎಂದು ವರದಿ ತಯಾರಿಸಿ ಎಂದು ಪೊಲೀಸರಿಗೆ ಹಾಗೂ ವೈದ್ಯರಿಗೆ ಒತ್ತಡ ಹಾಗೂ ಬೆದರಿಕೆಗಳನ್ನು ಹಾಕಿದ್ದರು. ಆರಂಭದಲ್ಲಿ ಪೊಲೀಸರು, ಪುಷ್ಕರ್ ದೇಹದಲ್ಲಿ ಯಾವುದೇ ವಿಷವಿಲ್ಲ ಎಂಬ ವರದಿಯನ್ನು ನೀಡಿದ್ದರು. ಆದರೆ ಪ್ರಕರಣ ಗಂಭೀರ ಸ್ವರೂಪವನ್ನು ಪಡೆಯುತ್ತಿದ್ದಂತೆ ಪುಷ್ಕರ್ ದೇಹದ ಮಾದರಿಯನ್ನು ಪರೀಕ್ಷೆಗೆಂದು ಯುಎಸ್‍ಎ ಗೆ ಕಳಿಸಿಕೊಡಲಾಗಿತ್ತು. ಹೀಗೆ ಅಲ್ಲಿಂದ ಬಂದ ವರದಿಯಲ್ಲಿ ಆಕೆಯ ದೇಹದಲ್ಲಿ ವಿಕಿರಣ ಸೂಸುವ ಅಂಶಗಳು ಪತ್ತೆಯಾಗಿವೆ ಎಂಬ ವರದಿಗಳನ್ನು ನೀಡಲಾಯಿತು.

ಸುಬ್ರಹಣ್ಯ ಸ್ವಾಮಿ ಹೇಳುವ ಪ್ರಕಾರ, ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್‍ರನ್ನು ಹತ್ಯೆ ಮಾಡಲು ದುಬೈನಿಂದ ಎಕ್ಸ್‍ಪರ್ಟ್ ಕಿಲ್ಲರ್‍ಗಳನ್ನು ಕರೆಸಲಾಗಿತ್ತು. ಅವರಿಂದ ವಿಕಿರಣಶೀಲ ರಾಸಾಯನಿಕಗಳನ್ನು ಕೊಲೆಗಾರರು ಬಳಸುತ್ತಿದ್ದರು ಎಂಬುವುದು ಬಹಿರಂಗವಾಗಿತ್ತು. ಪುಷ್ಕರ್ ಸಾವನ್ನಪ್ಪಿ ಕೆಲ ದಿನಗಳ ನಂತರ ಪರೀಕ್ಷೆ ನಡೆಸಿದ್ದರಿಂದ ಸಂಪೂರ್ಣವಾಗಿ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಈಗ ರಿಪಬ್ಲಿಕ್ ಟಿವಿ ಈ ಎಲ್ಲಾ ಕಥೆಗಳನ್ನು ತೆರೆದು ಟೇಪ್‍ಗಳ ಮೂಲಕ ಸಂಪೂರ್ಣ ವಾಗಿ ಬಯಲಿಗೆಳೆದಿದೆ ಮತ್ತು ಅದನ್ನು ದೃಢೀಕರಿಸಲಾಗಿದೆ. ಶಶಿ ತರೂರ್ ಸಂಪೂರ್ಣವಾಗಿ ಸುಳ್ಳು ಹೇಳಿದ್ದು ತನಿಖೆಯ ಧಿಕ್ಕನ್ನು ತಪ್ಪಿಸುವಲ್ಲಿ ಪ್ರಯತ್ನಿಸಿದ್ದಾರೆ ಎಂದಿದೆ. ತನ್ನ ಪತ್ನಿ ಸುನಂದಾ ಪುಷ್ಕರ್ ಕೊಲೆಯ ಬಗ್ಗೆ ನಿಖರವಾಗಿ ತಿಳಿದಿದ್ದ ಶಶಿ ತರೂರ್ ಸುಮ್ಮನಾಗಿದ್ದರು.

ಸದ್ಯ ಪ್ರಕರಣ ಪೊಲೀಸ್ ಹಾಗೂ ನ್ಯಾಯಾಲಯದಲ್ಲಿದೆ. ಕಾಂಗ್ರೆಸ್‍ನಲ್ಲಿರುವ ಭ್ರಷ್ಟ ಕುಳಗಳನ್ನು ಬಯಲಿಗೆಳೆಯಲು ಹೋಗಿ ನಂತರ ಅವರ ಶೀತಲ ಸಮರದಲ್ಲಿ ಸುನಂದಾ ಪುಷ್ಕರ್ ಕೊಲೆಯಾಗಿದ್ದು ವಿಪರ್ಯಾಸವೇ ಸರಿ.

-ಸುನಿಲ್

Tags

Related Articles

Close