ಪ್ರಚಲಿತ

ಸೋನಿಯರ ರಾಯ್ ಬರೇಲಿ ಮತ್ತು ರಾಹುಲನ ಅಮೇಥಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿದ ಕಾಂಗ್ರೆಸ್ : ಇತಿಹಾಸದಲ್ಲೆ ಅತೀ ದೊಡ್ಡ ಮುಖಭಂಗ!!

ಉತ್ತರ ಪ್ರದೇಶದಲ್ಲಿ ದೊಡ್ಡ ಚಂಡ ಮಾರುತ!! ಅದರ ಹೆಸರು ‘ಯೋಗಿ ಆದಿತ್ಯನಾಥ್!”!!! ಉತ್ತರ ಪ್ರದೇಶದ ನಾಗರಿಕ ಚುನಾವಣಾ ಫಲಿತಾಂಶ ಯೋಗಿ ಅಲೆಯನ್ನು ಇನ್ನಷ್ಟು ವೈಭವೀಕರಿಸಿದ್ದು ಒಂದು ಕಡೆಯಾದರೆ, ಕಾಂಗ್ರೆಸ್ ಗೆ ಅದೆಷ್ಟೋ ಕ್ಷೇತ್ರಗಳಲ್ಲಿ ಸಿಕ್ಕಿರುವುದು ಶೂನ್ಯಾಂಕ! ಉತ್ತರ ಪ್ರದೇಶದಲ್ಲಿಯೇ ನಂ.1 ಎನ್ನುತ್ತಿದ್ದ ಕಾಂಗ್ರೆಸ್ ಇವತ್ತು ನಂ. ಲಾಸ್ಟ್ ಆಗಿದೆ!

ಮುನ್ನುಗ್ಗುತ್ತಿದೆ ಭಾರತೀಯ ಜನತಾ ಪಕ್ಷ!!

ಬಿಜೆಪಿಯ ಮೇಯರ್ ಅಭ್ಯರ್ಥಿಗಳು ಸಹರಣ್ ಪುರ, ಘಾಜಿಯಾಬಾದ್, ಫಿರೋಜಾಬಾದ್, ಕಾನ್ಪುರ, ಲಕ್ನೋ, ವಾರಣಾಸಿ, ಅಲಹಾಬಾದ್, ಬರೇಲಿ, ಮೊರ್ದಾಬಾದ್, ಗೋರಖ್ ಪುರ ಮತ್ತು ಅಯೋಧ್ಯಾ ಕ್ಷೇತ್ರಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿಸಿದ್ದಾರೆ! ಮಾಯಾವತಿಯ ಬಿಎಸ್ಪಿ ಪಕ್ಷ ಅಲಿಗರ್, ಮೀರತ್ , ಆಗ್ರಾ ಹಾಗೂ ಝಾನ್ಸಿಯಲ್ಲಿ ಮುಂಚೂಣಿಯಲ್ಲಿದೆ!

ಅಲಹಾಬಾದ್ ನಲ್ಲಿ 6922 ಮತಗಳಿಂದ ಬಿಜೆಪಿ ಮುಂಚೂಣಿಯಲ್ಲಿದ್ದರೆ, ಎಸ್ ಪಿ 2934 ಮತಗಳು ಹಾಗೂ ಬಿಎಸ್ ಪಿ 999 ಮತಗಳಿಂದ ಮೂರನೇ ಸ್ಥಾನದಲ್ಲಿದೆ!

ಮೇಯರ್ಸ್ – ಮತಯಂತ್ರ ದ ಮೂಲಕ. . .

16/16
ಬಿಜೆಪಿ : 14
ಬಿಎಸ್ಪಿ : 2

ನಗರ ಪಾಲಿಕೆ – ಮತಚೀಟಿಯ ಮೂಲಕ,

140/198
ಬಿಜೆಪಿ : 66
ಎಸ್ಪಿ : 28
ಬಿಎಸ್ಪಿ : 40
ಕಾಂಗ್ರೆಸ್ : 02
ಇತರೆ : 04

ನಗರ ಪಂಚಾಯತ್ – ಮತ ಚೀಟಿಯ ಮೂಲಕ..

526/652

ಬಿಜೆಪಿ : 278
ಎಸ್ಪಿ : 53
ಬಿಎಸ್ಪಿ : 85
ಕಾಂಗ್ರೆಸ್ : 16
ಇತರೆ : 94

ರಾಹುಲ್ ಗಾಂಧಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನಷ್ಟೇ!

ಕಳೆದ 40 ವರ್ಷಗಳಿಂದ ಅಮೇಥಿಯ ಮೇಲೆ ತನ್ನ ಹಿಡಿತ ಸಾಧಿಸಿಕೊಂಡು ಬಂದಿರುವ ಕಾಂಗ್ರೆಸ್ ಗೆ ಇವತ್ತು ಭಾರೀ ಮುಖಭಂಗವಾಗಿದೆ! ಇವತ್ತು ನಡೆದಿರುವ ಐತಿಹಾಸಿಕ ಆಘಾತವೊಂದು ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲುಗಾಡಿಸಿದೆ! ರಾಹುಲ್ ಗಾಂಧಿಯ ಯಾವ ಆಟವೂ ಈ ಸಲ ಅಮೇಥಿಯಲ್ಲಿ ನಡೆಯದೇ, ತನ್ನದೇ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದೆ! ಅಮೇಥಿಯನ್ನು ಭಾರತೀಯ ಜನತಾ ಪಕ್ಷ ತನ್ನದಾಗಿಸಿಕೊಂಡಿದೆ!

ಗೋರಖ್ ಪುರ ಮತ್ತೆ ಸ್ವಾಗತಿಸಿದೆ ಭಾರತೀಯ ಜನತಾ ಪಕ್ಷವನ್ನು!

ನೆನಪಿದೆಯಾ?! ಇದೇ ಸ್ಥಳದಲ್ಲಿಯೇ ಅಂಟು ರೋಗದಿಂದ ಜನ ಅತಿ ಹೆಚ್ಚು ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು ವರದಿಯಾಗಿತ್ತು! ತೀರಾ ಎಂದರೆ, ಇದೇ ಎರಡು ತಿಂಗಳ ಹಿಂದೆ, ಗೋರಖ್ ಪುರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಕ್ಕಳು ಸಾವನ್ನಪ್ಪಿದ್ದರು! ಅದಾದ ಮೇಲೆ ಕಾಂಗ್ರೆಸ್ ಯೋಗಿ ಆದಿತ್ಯನಾಥ್ ರವರನ್ನು ಗುರಿಯಾಗಿಸಿತ್ತು! ಆದರೆ,70 ಘಟಕಗಳಲ್ಲಿಯೂ ಕೂಡ ಭಾರತೀಯ ಜನತಾ ಪಕ್ಷವೇ ಗೆದ್ದಿದೆ! ಇನ್ನೊಂದು ಪ್ರಮುಖ ವಿಚಾರವೆಂದರೆ, ಕಾಂಗ್ರೆಸ್ ನನ್ನು ಇತರೆ ಸ್ವತಂತ್ರ್ಯ ಅಭ್ಯರ್ಥಿಗಳೂ ಸೋಲಿಸಿದ್ದಾರೆ!

https://twitter.com/rishibagree/status/936497074031300608

ಅದರರ್ಥ ಇಷ್ಟೇ! ಉತ್ತರ ಪ್ರದೇಶದ ಜನ ಯೋಗಿ ಸರಕಾರದ ಆಡಳಿತದೊಂದಿಗೆ ಸಮೃದ್ಧಿಯಿಂದ ಬದುಕು ನಡೆಸುತ್ತಿದ್ದಾರೆ!

ನ್ಯಾಯಾಂಗ ಅಧಿಕಾರಿಗಳು ‘ಮತಗಳ ಎಣಿಕೆ ಮಾಡಬೇಕಾದ ಸಮಯದಲ್ಲಿ ಹಾಗೂ ಫಲಿತಾಂಶ ಹೊರಬಿದ್ದಾಗ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶವಿಲ್ಲ” ಎಂದು ತಿಳಿಸಿದ್ದಾರೆ! ಕಚೇರಿ ಮೂಲಗಳ ಪ್ರಕಾರ 16 ಮುನ್ಸಿಪಲ್ ಕಾರ್ಪೊರೇಷನ್, 198 ಮುನ್ಸಿಪಾಲಿಟಿ ಹಾಗೂ 498 ನಿರ್ದೇಶಿತ ಪ್ರದೇಶಗಳ ಕೌನ್ಸಿಲ್‍ಗಳಲ್ಲಿ ಸರಾಸರಿ 52.6 ಶೇ. ಮತದಾನ ನಡೆದಿದ್ದು, ಒಟ್ಟು 3.32 ಕೋಟಿ ಮತಗಳ ಚಲಾವಣೆಯಾಗಿದೆ.

100 ವರ್ಷಗಳಲ್ಲಿ ಮೊದಲ ಮಹಿಳಾ ಮೇಯರ್;

ಉ.ಪ್ರದೇಶ ರಾಜಧಾನಿ ಲಖ್ನೌದಲ್ಲಿ ಬಿಜೆಪಿಯಿಂದ ಭರ್ಜರಿ ಗೆಲುವು ಸಾಧಿಸಿದ ಸಂಯುಕ್ತ ಭಾಟಿಯಾ ಅವರು ಮೊದಲ 100 ವರ್ಷಗಳಲ್ಲಿ ಮೊದಲ ಮಹಿಳಾ ಮೇಯರ್ ಆಯ್ಕೆಯಾಗಲಿದ್ದಾರೆ. ಎಣಿಕೆ ಶುರುವಾಗುವ ಮುಂಚೆ 70 ವರ್ಷದ ವೃದ್ಧ ಮಹಿಳೆಯೊಬ್ಬರು ಗುರುದ್ವಾರದ ಎರಡು ದೇಗುಲಕ್ಕೆ ತೆರಳಿ ಭಾಟಿಯಾ ಪರವಾಗಿ ಪ್ರಾರ್ಥಿಸಿಕೊಂಡು ಬಂದಿದ್ದು ಅದು ಫಲಿಸಿದೆ.

ಇನ್ನುಳಿದ ಕಾಂಗ್ರೆಸ್ ಇದ್ದ ಪ್ರದೇಶಗಳಲ್ಲಿ ಬಿಜೆಪಿ ಕ್ಲೀನ್‍ಸ್ವೀಪ್‍ನಲ್ಲಿ ಗೆದ್ದುಕೊಂಡಿದೆ. ಮಧುರಾದ ವಾರ್ಡ್ ನಂಬರ್ 56 ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಇಬ್ಬರೂ ಕೂಡಾ 874 ವೋಟು ಪಡೆದಿದ್ದರು. ಆಗ ಲಕ್ಕಿಡ್ರಾ ಮೊರೆ ಹೋಗಲಾಯಿತು. ಆದರೆ ಈ ವೇಳೆ ಬಿಜೆಪಿಯ ಮೀನಾ ಅಗರ್ವಾಲ್ ಲಕ್ಕಿ ಡ್ರಾದಲ್ಲಿ ವಿಜೇತರಾದರು.

ಇನ್ನುಳಿದಂತೆ ಶಾಪುರ್ ನಗರ ಪಂಚಾಯತ್‍ನಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಪಕ್ಷದ ಅಭ್ಯರ್ಥಿ ಪ್ರಮೋದ್ ಸಾಯಿನಿ ಆಯ್ಕೆಯಾಗಿದ್ದಾರೆ. ಅಯೋಧ್ಯಾದಲ್ಲಿ ಬಿಜೆಪಿಯ ಹೃಷಿಕೇಶ್ ಹಾಗೂ ಎಸ್‍ಪಿಯ ಮಂಗಳಮುಖಿಯೊಬ್ಬರು ಎರಡನೇ ಸ್ಥಾನ ಗಳಿಸಿದ್ದಾರೆ.

ಈ ಚುನಾವಣೆಯ ಪ್ರಕಾರ ಸೋನಿಯರ ರಾಯ್ ಬರೇಲಿ ಮತ್ತು ರಾಹುಲನ ಅಮೇಥಿಯಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ತೀವ್ರ ಮುಖಭಂಗ ಉಂಟಾಗಿದೆ. ಯೋಗಿ ಆದಿತ್ಯನಾಥ್ ಮುಂದೆ ರಾಹುಲ್ ಗಾಂಧಿಯ ವರ್ಚಸ್ಸು ಕಳೆಗುಂದಿದೆ.

– PriChe Team

Tags

Related Articles

Close