ಪ್ರಚಲಿತ

ಸೋನಿಯಾ ಅಳಿಯನ ಇಬ್ಬರು ಆಪ್ತರ ಬಂಧನ!! ರಾಬರ್ಟ್ ವಾದ್ರನ ಬಂಧನಕ್ಕೆ ಇನ್ನೊಂದೇ ಹೆಜ್ಜೆ..!!!

ತಾನೊಬ್ಬ ಸಾಮಾನ್ಯ ಅಂಗಡಿಯ ಉದ್ಯೋಗಿಯಾಗಿದ್ದು ಕೇವಲ ನೆಹರೂ ಪರಿವಾರದ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಮಾತ್ರಕ್ಕೆ ಅಗರ್ಭ ಶ್ರೀಮಂತನಾದ ರಾಬರ್ಟ್ ವಾದ್ರಾನ ಕಥೆ ಎಲ್ಲರಿಗೂ ಗೊತ್ತಿರುವ ವಿಷಯವೆ. ಈ ಹೊತ್ತಿಗೆ ಎಲ್ಲೋ ಕುಳಿತು ಸಾಮಾನ್ಯರಂತೆ ಕೆಲಸ ಮಾಡಬೇಕಾಗಿದ್ದ ಈ ರಾಬರ್ಟ್ ವಾದ್ರಾ ಈಗ ಈ ಮಟ್ಟಿಗೆ ಬೆಳೆಯಬೇಕಾದರೆ ಅದಕ್ಕೆ ನೆಹರೂ ಪರಿವಾರ ಅಲ್ಲದೆ ಬೇರಾರೂ ಕಾರಣರಲ್ಲ. ಆ ಕುಟುಂಬದ ಕಾರಣದಿಂದಲೇ ವಾದ್ರಾ ಈ ಹಂತಕ್ಕೆ ಬಂದಿದ್ದಾನೆಯೇ ಹೊರತು ಸ್ವಂತ ಸಾಧನೆಯಿಂದ ಅಲ್ವೇ ಅಲ್ಲ.

ಸೋನಿಯಾ ಗಾಂಧಿ ಕೃಪಾ ಕಟಾಕ್ಷವೇ ಶ್ರೀ ರಕ್ಷೆ…

ತನ್ನ ಮಗಳು ಪ್ರಿಯಾಂಕ ಗಾಂಧಿ ಪ್ರೀತಿಸಿ ಮಾದುವೆಯಾದ ರಾಬರ್ಟ್ ವಾದ್ರಾನನ್ನು ಗಿಣಿಯಂತೆ ಸಾಕಿದ್ದು ಇದೇ ಸೋನಿಯಾ ಗಾಂಧಿ. ಎಷ್ಟರ ಮಟ್ಟಿಗೆ ಎಂದರೆ ತನ್ನ ಅಳಿಯ ರಾಬರ್ಟ್ ವಾದ್ರನಿಗೆ ವಿಮಾನ ನಿಲ್ದಾಣದಲ್ಲೂ ತಪಾಸನೆ ಮಾಡಬಾರದು ಅಷ್ಟರ ಮಟ್ಟಿಗೆ ಆತನನ್ನು ಸಾಕಿ ಸಲಹುತ್ತಿದ್ದರು. ಇದರಿಂದ ಕೊಬ್ಬಿದ್ದ ರಾಬರ್ಟ್ ವಾದ್ರಾ ತನ್ನೆಲ್ಲಾ ಅಕ್ರಮ ಚಟುವಟಿಕೆಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ಮಾಡುತ್ತಿದ್ದ. ದೇಶದಲ್ಲಿ ಯಾವ ಕಡೆಗಳಲ್ಲಿ ಹೇಗೆ ಅಕ್ರಮಗಳು ನಡೆಸಬೇಕೆಂಬುವುದು ವಾದ್ರಾನಿಗೆ ಚೆನ್ನಾಗಿಯೇ ಅರಿವಿತ್ತು. ಅಂತೆಯೇ ತನಗೆ ಇಷ್ಟ ಬಂದ ಹಾಗೆ ಅಕ್ರಮಗಳನ್ನು ಎಸಗಿದ್ದನು ಈ ಗಾಂಧಿ ಪರಿವಾರದ ಅಳಿಯ.

ಎಗ್ಗಿಲ್ಲದೆ ನಡೆಯುತ್ತಿತ್ತು ರಿಯಲ್ ಎಸ್ಟೇಟ್ ದಂಧೆ…

ಏನೇ ಆದರೂ ತನ್ನ ಅತ್ತೆಯ ಸರಕಾರ ತಾನೇ ಆಡಳಿತ ನಡೆಸುತ್ತಿರೋದು. ಎಷ್ಟು ಬೇಕಾದರೂ ಅಕ್ರಮ ನಡೆಸಬಹುದು ಎಂಬ ದೃಢ ನಿರ್ಧಾರ ರಾಬರ್ಟ್ ವಾದ್ರಾನಲ್ಲಿತ್ತು. ಹೀಗಾಗಿಯೇ ತನಗೆ ಬೇಕಾದ ದಂಧೆಗಳನ್ನು ಆರಾಮಾಗೆ ಮಾಡುತ್ತಿದ್ದ. ಈತನ ಅನೇಕ ಅಕ್ರಮ ದಂಧೆಗಳಲ್ಲಿ ರಿಯಲ್ ಎಸ್ಟೇಟ್ ದಂಧೆಯೂ ಒಂದು. ಕಾಂಗ್ರೆಸ್ ಸರಕಾರದ ಸಾರ್ಧನೆಯೇ ಹಾಗೆ ಇತ್ತು. ಅನೇಕ ಜಾಗಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ಅದನ್ನು ಜಾಸ್ತಿ ಬೆಲೆಗೆ ಮಾರಾಟ ಮಾಡುವ ಖತರ್ನಾಕ್ ಐಡಿಯಾ ಕಾಂಗ್ರೆಸ್‍ಗಲ್ಲದೆ ಮತ್ತಿನ್ನಾರಿಗೆ ಬರಬಹುದು…

ಇದರಲ್ಲಿ ರಾಬರ್ಟ್ ವಾದ್ರಾನೂ ಹೊರತಾಗಿಲ್ಲ. ತನ್ನ ಪರಿವಾರದ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಸಿಕ್ಕ ಸಿಕ್ಕ ಜಾಗವನ್ನೆಲ್ಲಾ ಸ್ವಾಹ ಮಾಡಿಕೊಂಡಿದ್ದ. ಎಲ್ಲೆಲ್ಲಿ ತನ್ನ ಕಾಂಗ್ರೆಸ್ ಸರ್ಕಾರವಿದೆಯೋ ಆ ರಾಜ್ಯಗಳಿಗೆ ದಂಡೆತ್ತಿ ಹೋಗುತ್ತಾನೆ ಈ ರಾಬರ್ಟ್ ವಾದ್ರಾ. ಅಲ್ಲಿದ್ದ ರಾಜ್ಯ ಸರ್ಕಾರಗಳ ಸಹಕಾರದಿಂದ ತನಗೆ ಬೇಕಾದ ಹಾಗೆ ಅಲ್ಲಿರುವ ಜಾಗಗಳನ್ನು ಅಕ್ರಮವಾಗಿ ಸಂಪಾದಿಸಿ ಅದನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾನೆ.

ರಾಬರ್ಟ್ ವಾದ್ರಾನ ಇಬ್ಬರು ಸ್ನೇಹಿತರ ಬಂಧನ…

ಇಂದು ರಾಬರ್ಟ್ ವಾದ್ರನ ಇಬ್ಬರು ನಿಕಟವರ್ತಿಗಳನ್ನು ಜಾರಿ ನಿರ್ಧೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ರಾಬರ್ಟ್ ವಾದ್ರಾನ ಲಾಂಡ್ ಡೀಲಿಂಗ್‍ನಲ್ಲಿ ಪಾಲು ಪಡೆದಿದ್ದ ಈ ಈರ್ವರನ್ನು ಇಡಿ ಅಧಿಕಾರಿಗಳನ್ನಬು ಬಂಧಿಸಿದ್ದು ಇದು ಸೋನಿಯಾ ಗಾಂಧಿ ಕುಟುಂಬಕ್ಕೆ ಭಾರೀ ಹೊಡೆತವನ್ನು ನೀಡಿದೆ. ಮಾತ್ರವಲ್ಲದೆ ಈ ಪ್ರಕರಣದಲ್ಲಿ ರಾಬರ್ಟ್ ವಾದ್ರ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ವಾದ್ರಾನೂ ಬಂಧನದ ಭೀತಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ.

ಬಂಧನಗೊಂಡ ವ್ಯಕ್ತಿಗಳು ಅಶೋಕ್ ಮತ್ತು ಜಯಪ್ರಕಾಶ್ ಬಗರ್‍ವಾಲ್ ಎಂಬ ವ್ಯಕ್ತಿಗಳಾಗಿದ್ದಾರೆ. ಇವರು ರಾಬರ್ಟ್ ವಾದ್ರಾನ ಅತ್ಯಂತ ಸಹವರ್ತಿಗಳಾಗಿದ್ದು ರಾಬರ್ಟ್ ವಾದ್ರಾ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ ಎನ್ನಲಾಗುತ್ತದೆ.

ಅಶೋಕ್ ಹಾಗೂ ರಾಬರ್ಟ್ ವಾದ್ರಾ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್‍ನ ಮಹೇಶ್ ನಗರ್ ಎಂಬರೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಈ ಮೂಲಕ ತಮ್ಮ ಅಕ್ರಮ ವ್ಯವಹಾರಗಳನ್ನು ನಡೆಸುತ್ರತಿದ್ದರು. ಈ ಮೂಲಕ ರಾಜಸ್ತಾನದ ಬಿಕರ್ನರ್‍ನ ಜಾಗಗಳನ್ನು ಅಕ್ರಮವಾಗಿ ಖರೀದಿಸುತ್ತಾನೆ. ಇವರ ತಂಡಗಳು ಸೇರಿಕೊಂಡು ಸ್ವಚ್ಚಂದವಾಗಿ ಅಕ್ರಮ ಆಸ್ತಿಗಳನ್ನು ಮಾಡಿ ಲಾಭ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಅಶೋಕ್ ಮತ್ತು ಜಯಪ್ರಕಾಶ್ ಬಗರ್‍ವಾಲಾನನ್ನು ಇಡಿ ಅಧಿಕಾರಿಗಳು ಬಂಧಿದ್ದು ರಾಬರ್ಟ್ ವಾದ್ರಾನಿಗೆ ಶಾಕ್ ಆಗುವಂತೆ ಮಾಡಿದೆ. ಮುಂದಿನ ಸರದಿ ತಾನೇ ಎಂಬ ಸತ್ಯ ಆತನಿಗೆ ಅರಿವೂ ಕೂಡ ಆಗಿದೆ.

ಸಿಬಿಐ ವಿಚಾರಣೆ ವೇಳೆ ಬಯಲಾಯ್ತು ಮಹತ್ವದ ರಹಸ್ಯ..!!!

ಈ ಹಿಂದೆ ಸಿಬಿಐ ಈ ಬಗ್ಗೆ ವಿಚಾರಣೆ ನಡೆಸಿದಾಗ ಅತಿದೊಡ್ಡ ರಹಸ್ಯವೊಂದು ಬಯಲಾಗಿತ್ತು. ರಾಬರ್ಟ್ ವಾದ್ರ ತಾನು ಮಾತ್ರವಲ್ಲದೆ ತನ್ನ ಅಕ್ರಮ ಚಟುವಟಿಕೆಗಳಿಗೆ ಬಾಡಿ ಗಾರ್ಡ್ ಹಾಗೂ ವಾಹನ ಚಾಲಕರನ್ನೂ ಬಳಸಿಕೊಳ್ಳಲಾಗುತ್ತಿತ್ತು. ಈ ಒಂದು ರಹಸ್ಯ ಸಿಬಿಐ ತನಿಖೆಯಿಂದ ಈ ಹಿಂದೆಯೇ ಬಯಲಾಗಿತ್ತು.

ತನ್ನ ಬಾಡಿ ಗಾರ್ಡ್ ಹಾಗೂ ಡ್ರೈವರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳನ್ನು ಮಾಡಿ ತಾನು ಅದನ್ನು ಉಪಯೋಗಿಸುತ್ತಿದ್ದ. ಅಕ್ರಮ ಅಕ್ರಮವಾಗಿ ಸಂಪಾದಿಸಿದ ಹಣವನ್ನು ತನ್ನ ಹೆಸರಿನಲ್ಲಿ ಇರಿಸಿದರೆ ಎಲ್ಲಿ ಇಡಿ ಅಧಿಕಾರಿಗಳು ತನ್ನನ್ನು ಬಂದಿಸುತ್ತಾರೋ ಎನ್ನುವ ಭಯದಿಂದ ತನ್ನ ಬಾಡಿಗಾರ್ಡ್ ಹಾಗೂ ಚಾಲಕನ ಹೆಸರಿನಲ್ಲಿ ಅಕ್ರಮಗಳನ್ನು ಎಸಗುತ್ತಿದ್ದ ಎನ್ನುವ ಅಂಶ ಬಟಬಯಲಾಗಿದ್ದು, ಅಂದೇ ಆತನಿಗೆ ಬಂಧನದ ಭೀತಿ ಎದುರಾಗಿತ್ತು.

* ಮಹೇಶ್ ನಗರ್ ವಾದ್ರಾನ ಭದ್ರತೆಗೆ ನೇಮಿಸಿದ್ದ ಪೊಲೀಸ್ ಆಗಿದ್ದವನು. ನಂತರ ತನ್ನ ಪೊಲೀಸ್ ಹುದ್ದೆಯನ್ನು ತ್ಯಜಿಸಿ ರಾಬರ್ಟ್ ವಾದ್ರಾನ ಬಾಡಿಗಾರ್ಡ್ ಆಗಿ ಪರ್ಮನೆಂಟ್ ಕೆಲಸ ಮಾಡುತ್ತಾನೆ. ವಾದ್ರಾನ ಪ್ರತೀಯೊಂದು ಅಕ್ರಮ ಚಟುವಟಿಕೆಗಳಿಗೆ ಈತ ಕೈಗೊಂಬೆಯಾಗಿ ಕೆಲಸ ಮಡುತ್ತಾನೆ.

* ಯಾವಾಗ ರಾಬರ್ಟ್ ವಾದ್ರಾಜನ ಅಕ್ರಮಗಳು ಬಯಲಾಗುತ್ತಾ ಬಂತೋ ಅಂದು ಈ ಮಹೇಶ್ ನಗರ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಯಾರಿಗೂ ತಿಳಿಯದ ಸ್ಥಳದಲ್ಲಿ ಹೋಗಿ ನೆಲೆಸುತ್ತಾನೆ. ವಾದ್ರಾನ ಪ್ರಕರಣದಲ್ಲಿ ಈತನನ್ನು ಬಂಧಿಸಿದರೆ ಆತನಲ್ಲಿ ಹಲವಾರು ಪ್ರಮುಖ ಅಂಶಗಳಿವೆ ಹೀಗಾಗಿ ರಾಬರ್ಟ್ ವಾದ್ರಾನೆ ಗೌಪ್ಯ ಸ್ಥಳದಲ್ಲಿ ಕೂರಿಸಿರುವುದು ಸ್ಪಷ್ಟವಾಗಿದೆ.

* ರಾಬರ್ಟ್ ವಾದ್ರಾನ ಅಕ್ರಮ ಆಸ್ತಿ ಪ್ರಕರಣಗಳ ಬಗ್ಗೆ ತೀವ್ರವಾದ ತನಿಖೆಯನ್ನು ನಡೆಸಿದಾಗ ಹಲವಾರು ಅಕ್ರಮಗಳು ಬಯಲಾಗಿದೆ. ರಾಬರ್ಟ್ ವಾದ್ರ ಸರ್ಕಾರಕ್ಕೆ ಮೋಸ ಮಾಡಿ ಹಲವಾರು ದಾಖಲೆಗಳನ್ನು ಪೋರ್ಜರಿ ಮಾಡಿರುವ ಮಾಹಿತಿ ಬಯಲಾಗುತ್ತೆ.

* ಇಂದು ಬಂಧನವಾಗಿರುವ ಅಶೋಕ್ ಕುಮಾರ್‍ನ ಬ್ಯಾಂಕ್ ಖಾತೆಗೆ 30 ಲಕ್ಷ ರೂಗಳನ್ನು ಹಾಕಿ ಪವರ್ ಆಫ್ ಅಟಾರ್ನಿ ಮಾಡಿಸಿಕೊಂಡು ಒಂದು ಸೈಟ್ ಖರೀದಿಸುತ್ತಾರೆ. ಇದರಲ್ಲಿ ಅಕ್ರಮವೆಸಗಿ ತಾನು ಖರೀದಿಸಿದ್ದ ಜಾಗವನ್ನು ಅತ್ಯಂತ ಜಾಸ್ತಿ ಬೆಲೆಗೆ, ಅಂದರೆ 2.3 ಕೋಟಿಗೆ ಮಾರಾಟ ಮಾಡುತ್ತಾರೆ.

* ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ 42 ಲಕ್ಷಕ್ಕೆ ಒಂದು ಜಾಗವನ್ನು ಖರೀದಿ ಮಾಡಿ 2 ವರ್ಷದಲ್ಲೇ ಅದನ್ನು 2.81 ಕೋಟಿಗೆ ಮಾರಾಟ ಮಾಡಿದ್ದ ವಿಷಯ ಬೆಳಕಿಗೆ ಬಂದಿತ್ತು.

* ಹಳ್ಳಿಯಲ್ಲಿ ಜಾಗಗಳನ್ನು ಖರೀದಿಸಿ ಅಲ್ಲಿ ಕಂಪನಿಗಳು ತಲೆ ಎತ್ತುವಂತೆ ಮಾಡುತ್ತಾರೆ. ಈ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ರಾಬರ್ಟ್ ವಾದ್ರ ಹಸ್ತಕ್ಷೇಪವನ್ನು ಮಾಡಿರುತ್ತಾನೆ.

* ಈ ಎಲ್ಲಾ ಪ್ರಕರಣಗಳಲ್ಲಿ ಸಿಬಿಐ ಎಫ್‍ಐಆರ್ ದಾಖಲಿಸಿ ರಾಬರ್ಟ್ ವಾದ್ರನ ಅಕ್ರಮಗಳನ್ನು ಒಂದೊಂದಾಗಿಯೇ ಬಯಲಿಗೆ ತರುತ್ತೆ.

ಈ ಎಲ್ಲಾ ಪ್ರಕರಣಗಳನ್ನೂ ಸಿಬಿಐ ತುಂಬಾನೆ ಸೀರಿಯಸ್ ಆಗಿ ತೆಗೆದುಕೊಂಡಿದ್ದು ಯಾವುದೇ ಕಾರಣಕ್ಕೂ ರಾಬರ್ಟ್ ವಾದ್ರನನ್ನು ಬಿಡೋದಿಲ್ಲ ಎಂದು ಹೇಳಿದೆ. ರಾಬರ್ಟ್ ವಾದ್ರಾ ಕೇವಲ ರಾಜಸ್ಥಾನದಲ್ಲಿ ಮಾತ್ರವಲ್ಲದೆ ಹರಿಯಾಣದಲ್ಲೂ ಅಕ್ರಮ ಆಸ್ತಿಗಳನ್ನು ಖರೀದಿಸಿದ್ದು ಇದೆಲ್ಲಾ ಒಟ್ಟಾಗಿ ರಾಬರ್ಟ್ ವಾದ್ರಾನಿಗೆ ಉರುಳಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

-ಸುನಿಲ್ ಪಣಪಿಲ

Tags

Related Articles

Close