ಪ್ರಚಲಿತ

ಸ್ಪೋಟಕ ಸುದ್ಧಿ: ಎಸ್.ಪಿ. ಸುಧೀರ್ ರೆಡ್ಡಿ ವರ್ಗಾವಣೆಗೆ ಪ್ರಭಾಕರ್ ಭಟ್ ಕಾರಣವೇ? ಹೊರ ಬಿತ್ತು ಸ್ಪೋಟಕ ರಹಸ್ಯ..!!!

ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯ ಪಕ್ಷಗಳ ಚುನಾವಣಾ ರಣತಂತ್ರ ಭರ್ಜರಿಯಾಗಿಯೇ ನಡೆಯುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ಚುನಾವಣಾ ಕಣ ರಂಗೇರಿದ್ದು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಪ್ರಯತ್ನವನ್ನು ಮಾಡುತ್ತಿವೆ. ಆಡಳಿತ ವಿರೋಧಿ ಅಲೆ, ಸಾಲು ಸಾಲು ಹತ್ಯೆಗಳ ನಿರ್ಲಕ್ಷ್ಯ, ಹಿಂದೂ ವಿರೋಧಿ ನೀತಿಗಳಿಂದಲೇ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕರಾವಳಿಯಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಆಡಳಿತ ಜಿಲ್ಲೆಯಲ್ಲಿ ಕೋಮುಗಲಭೆಗಳನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ. ಹಿಂದೂ ಕಾರ್ಯಕರ್ತರ ಹತ್ಯೆಗಳನ್ನೂ ತಡೆಯುವಲ್ಲಿ ವಿಫಲರಾಗಿದ್ದ ರಮಾನಾಥ ರೈ ವಿರುದ್ಧ ಜನತೆ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಲವಾರು ಜನವಿರೋಧಿ ನೀತಿಗಳಿಂದಲೇ ಹೆಸರಾಗಿದ್ದ ರಮಾನಾಥ ರೈ ಪೊಲೀಸ್ ಅಧಿಕಾರಿಗಳ ವಿಚಾರವಾಗಿಯೂ ಹಸ್ತಕ್ಷೇಪ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟಾರ್ಗೆಟ್ ಪ್ರಭಾಕರ್ ಭಟ್…?

ರಮಾನಾಥ್ ರೈ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ “ಈ ಭಾರಿಯ ಚುನಾವಣೆ ನನ್ನ ಮತ್ತು ರಾಜೇಶ್ ನಾಯ್ಕ್ ಮಧ್ಯೆ ಅಲ್ಲ. ಬದಲಾಗಿ ಈ ಬಾರಿಯ ಚುನಾವಣೆ ನನ್ನ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಲ್ಲಡ್ಕ ಪ್ರಭಾಕರ್ ಭಟ್ ಮಡುವೆ ಏರ್ಪಟ್ಟಿರುವ ಚುನಾವಣೆ. ಈ ಬಾರಿ ನನ್ನನ್ನು ಗೆಲ್ಲಿಸಿ, ನಾನು ಅಧಿಕಾರಕ್ಕೆ ಬಂದ ತಕ್ಷಣ ಪ್ರಭಾಕರ್ ಭಟ್‍ರನ್ನು ಬಂಧಿಸುತ್ತೇನೆ” ಎಂದು ಕರೆ ಕೊಟ್ಟಿದ್ದರು.

ನಂತರ ಬಂಟ್ವಾಳದಲ್ಲಿ ರಮಾನಾಥ್ ರೈ ಚುನಾವಣೆಯನ್ನು ಗೆದ್ದು ಶಾಸಕರಾಗಿ ಆಯ್ಕೆಯಾಗಿ ಹೊರಹೊಮ್ಮುತ್ತಾರೆ. ಈ ಹಿಂದೆ ಮುಲ್ಮಾನರಿಗೆ ನೀಡಿದ್ದ ಭರವಸೆಯಂತೆ ಕಲ್ಲಡ್ಕದ ಹಿಂದೂ ಹುಲಿ ಎಂದೇ ಪ್ರಸಿದ್ಧಿಯಾಗಿರುವ ಡಾ.ಪ್ರಭಾಕರ್ ಭಟ್‍ರನ್ನು ಬಂಧಿಸಲು ಇನ್ನಿಲ್ಲದ ತಂತ್ರಗಳನ್ನೂ ಹೂಡುತ್ತಾರೆ. ಆದರೆ ಯಾವ ತಂತ್ರವೂ ಕಾನೂನು ಮೂಲಕ ಪ್ರಭಾಕರ್ ಭಟ್‍ರನ್ನು ಬಂಧಿಸಲು ಅವಕಾಶನೀಡಲೇ ಇಲ್ಲ. ಮುಸ್ಲಿಮರು ರೈ ವಿರುದ್ಧ ಬಂಡಾಯ ಸಾರಿದ್ದರು. ಪ್ರಭಾಕರ್ ಭಟ್‍ರನ್ನು ಬಂಧಿಸಿ ಎಂದು ಒತ್ತಡ ಹೇರಿದ್ದರು. ಇದು ರಮಾನಾಥ್ ರೈಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿತ್ತು.

ಎಸ್.ಪಿ.ಗೆ ಕಾನೂನು ಪಾಠ ಹೇಳಿದ್ದ ರೈ…

ಮುಸಲ್ಮಾನರಿಗೆ ನೀಡಿದ್ದ ಅಭಯವನ್ನು ಅದೇಗೇ ಪ್ರಯತ್ನ ಪಟ್ಟರೂ ಈಡೇರಿಸಲು ಆಗಲೇ ಇಲ್ಲ. ಡಾ.ಪ್ರಭಾಕರ್ ಭಟ್‍ರನ್ನು ಬಂಧಿಸಲು ಯಾವ ಪ್ರಕರಣವೂ ಸಿಗಲೇ ಇಲ್ಲ. ಯಾವ ತಂತ್ರವೂ ಪ್ರಭಾಕರ್ ಭಟ್ ವಿರುದ್ಧ ಸಂಚು ನಡೆಸಲು ಅವಕಾಶ ನೀಡಲೇ ಇಲ್ಲ. ರಮಾನಾಥ್ ರೈ ಅಕ್ಷರಷಃ ಪೇಚಿಗೆ ಸಿಲುಕಿದ್ದರು. ಮುಸಲ್ಮಾನರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಅಸಾಧ್ಯವಾಯಿತು.

ನಂತರ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ.ಯಾಗಿದ್ದ ಬೋರಸೆಯವರನ್ನು ತನ್ನ ಬಳಿ ಕರೆಸಿ ರಮಾನಾಥ್ ರೈಯನ್ನು ಬಂಧಿಸಲು ಸೂಚನೆ ನೀಡುತ್ತಾರೆ. “ನಾನು ಪ್ರಭಾಕರ್ ಭಟ್‍ರನ್ನು ಕಾಲೇಜು ಸಮಯದಲ್ಲಿ ಓಡಿಸಿಕೊಂಡು ಹೋಗಿದ್ದೆ. ನೀವು ಏನೂ ಹೆದರಬೇಡಿ. ಅವನನ್ನು ಬಂಧಿಸಿ ಒಳಗೆ ಹಾಕಿ. ನಂತರ ಏನಾದರು ನಾನು ನೋಡಿಕೊಳ್ಳುತ್ತೇನೆ” ಎಂದು ಎಸ್.ಪಿ. ಬೋರಸೆಗೆ ಆದೇಶ ನೀಡಿದ್ದರು. ಇದರ ಒಂದು ವೀಡಿಯೋ ತುಣುಕು ಯಾರೋ ರಮಾನಾಥ್ ರೈ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ವೈರಲ್ ಆಗಿತ್ತು. ಮಾತ್ರವಲ್ಲದೆ ಇದನ್ನು ಮಾಧ್ಯಮಗಳ ಸಹಿತ ವಿರೋಧ ಪಕ್ಷಗಳು ರೈ ಬೆವರಿಳಿಸುವಂತೆ ಮಾಡಿದ್ದವು.

ಭಾರತೀಯ ಜನತಾ ಪಕ್ಷ ಸಹಿತ ಅನೇಕ ಸಂಘಟನೆಗಳು ರೈ ಅವರು ಎಸ್.ಪಿ.ಗೆ ನೀಡಿದ ಕಾನೂನು ಪಾಠದ ವಿರುದ್ಧ ಬೀದಿಗಿಳಿದಿದ್ದವು. ರಾಜೀನಾಮೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳೂ ನಡೆದವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಸಚಿವ ರಮಾನಾಥ್ ರೈ ಹೆಗಲಿಗೆ ಕೈ ಇಟ್ಟು ನಾನಿದ್ದೇನೆ ಎಂದು ಬಿಟ್ಟಿದ್ದರು.

ಪ್ರತಿಭಟನೆ ಬೆನ್ನಲ್ಲೇ ಬೋರಸೆ ಎತ್ತಂಗಡಿ…

ಯಾವಾಗ ವಿರೋಧ ಪಕ್ಷಗಳು ರಮಾನಾಥ್ ರೈ ಹೇಳಿಕೆ ವಿರೋಧಿಸಿ ಬೀದಿಗಿಳಿಯುತ್ತಾರೋ ಅದರ ಬೆನ್ನಲ್ಲೇ ಜಿಲ್ಲಾ ಎಸ್.ಪಿ.ಬೋರಸೆಯವರನ್ನು ಎತ್ತಂಗಡಿ ಮಾಡಲಾಗುತ್ತದೆ. ಪ್ರಭಾಕರ್ ಭಟ್‍ರನ್ನು ಬಂಧಿಸಲು ವಿಫಲರಾಗಿದ್ದಾರೆ ಎನ್ನುವ ಏಕೈಕ ಕಾರಣಕ್ಕಾಗಿ ಬೋರಸೆಯವರನ್ನು ಎತ್ತಂಗಡಿ ಮಾಡಲಾಗುತ್ತದೆ. ಉತ್ತಮ ವರ್ಚಸ್ಸನ್ನು ಹೊಂದಿದ್ದ ದಕ್ಷ ಪೊಲೀಸ್ ಅಧಿಕಾರಿಗೆ ಕಪ್ಪು ಚುಕ್ಕೆಯನ್ನು ಹೊರಿಸಿ ವರ್ಗಾವಣೆ ಮಾಡಲಾಗುತ್ತದೆ.

ಎಸ್.ಪಿ.ಸುಧೀರ್ ರೆಡ್ಡಿಗೂ ಕಾಟ ತಪ್ಪಿಲ್ಲ..!!!

ನಂತರ ಈ ಜಿಲ್ಲೆಗೆ ಆಗಮಿಸಿದವರೇ ದಕ್ಷ ಪೊಲೀಸ್ ಅಧಿಕಾರಿ ಎಂಬ ಹೆಸರನ್ನು ಹೊಂದಿದ್ದ ಎಸ್.ಪಿ.ಸುಧೀರ್ ರೆಡ್ಡಿ. ಸುಧೀರ್ ರೆಡ್ಡಿ ಜಿಲ್ಲೆಗೆ ಆಗಮಿಸಿದ ನಂತರ ಜಿಲ್ಲೆಯ ಎಲ್ಲವೂ ಓಕೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅದೇ ಸುಧೀರ್ ಹೆಗ್ಡೆಯ ಬಳಿ ಮತ್ತೆ ರಮಾನಾಥ್ ರೈ ಪ್ರಭಾಕರ್ ಭಟ್‍ರ ಬಂಧನದ ವಿಚಾರ ಪ್ರಸ್ತಾಪವಾಗುತ್ತೆ. ಹೇಗಾದರು ಮಾಡಿ ಪ್ರಭಾಕರ್ ಭಟ್‍ರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಈ ಬಾರಿ ಮುಸಲ್ಮಾನರು ನನಗೆ ಮತ ಹಾಕುವುದಿಲ್ಲ. ಶತಾಯ ಗತಾಯ ಈ ಬಾರಿ ಪ್ರಭಾಕರ್ ಭಟ್‍ರನ್ನು ಬಂಧಿಸುವಲ್ಲಿ ಹಠ ಹಿಡಿದಿದ್ದರು.

ಆದರೆ ಜಿಲ್ಲಾ ಉಸ್ತುವಾರಿ ಸಚಿವ ರೈ ಮಾತಿಗೆ ಎಸ್.ಪಿ.ಸುಧೀರ್ ರೆಡ್ಡಿ ಸೊಪ್ಪು ಹಾಕಲಿಲ್ಲ. ತಮ್ಮ ನಡವಳಿಕೆ ಯಾವ ರೀತಿ ಇದೆಯೋ ಅದೇ ರೀತಿ ತಮ್ಮ ಕರ್ತವ್ಯವನ್ನು ಮಾಡುತ್ತಾ ಬಂದಿದ್ದರು ಎಸ್‍ಪಿ ಸುಧೀರ್ ರೆಡ್ಡಿ. ಇದು ರಮಾನಾಥ್ ರೈಗೆ ಸಿಟ್ಟು ನೆತ್ತಿಗೇರಲು ಕಾರಣವಾಗಿತ್ತು. ಕೂಡಲೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಒತ್ತಡ ಹಾಕಲು ಪ್ರಯತ್ನಿಸುತ್ತಾರೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಲು ವಿಫಲರಾದ ಸುಧೀರ್ ರೆಡ್ಡಿಯನ್ನು ಎತ್ತಂಗಡಿ ಮಾಡುತ್ತಾರೆ. ಅಲ್ಲಿಗೆ ಕೇವಲ ಆರು ತಿಂಗಳ ಒಳಗಾಗಿ ಮತ್ತೊಬ್ಬ ಎಸ್.ಪಿ.ಯ ಎತ್ತಂಗಡಿ ಆಗಿಯೇ ಹೋಗುತ್ತೆ.

ಮುಸ್ಲಿಮರ ಭಯದಿಂದ “ಅಲ್ಲಾ” ಎಂದ “ರಾಮ”?

ರಮಾನಾಥ್ ರೈಗೆ ಈಗ ಮುಸ್ಲಿಮರ ಭಯ ಕಾಡತೊಡಗಿದೆ. ಹಿಂದಿನ ಚುನಾವಣೆಯಲ್ಲಿ ಪ್ರಭಾಕರ್ ಭಟ್‍ರನ್ನು ಬಂಧಿಸುತ್ತೇನೆ ನನ್ನನ್ನು ನಂಬಿ ಎಂದು ಮುಸ್ಲಿಮರ ಬಳಿ ಕಾಡಿ ಬೇಡಿ ಓಟು ಪಡೆದ ರಾಮಾನಾಥ್ ರೈ ಈ ಬಾರಿ ಮತ್ತೆ ಅದೇ ಮುಸ್ಲಿಮರ ಬಳಿ ತೆರಳಲು ಭಯ ಪಡುತ್ತಿದ್ದಾರೆ. ಪ್ರಭಾಕರ್ ಭಟ್ ಬಂಧನವನ್ನು ನಡೆಸಲಾಗದ ರಮಾನಾಥ್ ರೈ ಈಗ ಅಲ್ಲಾ ನ ಮೊರೆ ಹೋಗಿದ್ದಾರೆ. ಮುಸ್ಲಿಮರ ಪ್ರತಿ ಕಾರ್ಯಕ್ರಮದಲ್ಲೂ ನಾನು ಅಲ್ಲಾನ ಕೃಪೆಯಿಂದ ಶಾಸಕನಾಗಿ ಆಯ್ಕೆಯಾದವನು. ನಾನು ನನ್ನ ಕ್ಷೇತ್ರದ ಸಮಸ್ತ ಮುಸಲ್ಮಾನರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರ ಬಳಿ ಮತ್ತೆ ಮತ ಭಿಕ್ಷೆಯನ್ನು ಬೇಡಲು ಸಿದ್ಧರಾಗಿ ನಿಂತಿದ್ದಾರೆ.

ಈ ಬಾರಿ ಮುಸ್ಲಿಮರ ಪಕ್ಷವಾದ ಎಸ್‍ಡಿಪಿಐ ಕೂಡಾ ರಮಾನಾಥ್ ರೈಗೆ ಕಠಿಣ ಸವಾಲನ್ನು ಒಡ್ಡುತ್ತಿದ್ದು ಇದು ರಮಾನಾಥ್ ರೈ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಹೇಗಾದರೂ ಸರಿ ಪ್ರಭಾಕರ್ ಭಟ್‍ರನ್ನು ಬಂಧಿಸುವ ವಿಚಾರವನ್ನು ಬದಿಗೆ ಸರಿಸಿ ಅಲ್ಲನನ್ನೇ ಹೈಲೆಟ್ ಮಾಡುವ ರಮಾನಾಥ್ ರೈ ಪ್ಲಾನಿಂಗ್ ಹೂಡುತ್ತಿದ್ದಾರೆ. ಆದರೆ ಎನಾದರೂ ಸರಿ ಈ ಬಾರಿ ನಾವು ಸ್ಪರ್ಧಿಸಿ ರಮಾನಾಥ್ ರೈಗೆ ಸೋಲುಣಿಸುವುದು ಗ್ಯಾರಂಟಿ ಎಂದು ಎಸ್‍ಡಿಪಿಐ ಪಕ್ಷ ಸಾರಿ ಬಿಟ್ಟಿದೆ.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯು ರಮಾನಾಥ್ ರೈಗೆ ಹಿಂದೂಗಳೊಂದಿಗೆ ಮುಸಲ್ಮಾನರ ಭಯವೂ ಕಾಡುತ್ತಿದ್ದು, ಸೋಲು ಎನ್ನುವ ಬುತ್ತಿ ಶಾಶ್ವತವಾಗಿ ಉಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಕೇವಲ ಪ್ರಭಾಕರ್ ಭಟ್‍ರನ್ನು ಬಂಧಿಸುವಲ್ಲಿ ಇಲ್ಲಿನ ಎಸ್.ಪಿ.ಗಳು ವಿಫಲರಾಗಿದ್ದಾರೆ ಎನ್ನುವ ಏಕೈಕ ಕಾರಣಕ್ಕಾಗಿಯೇ ಅವರನ್ನು ವರ್ಗಾವಣೆ ಮಾಡಿದ್ದು ಮಾತ್ರ ರಮಾನಾಥ್ ರೈ ಹತಾಶ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

-ಸುನಿಲ್ ಪಣಪಿಲ

Tags

Related Articles

Close