ಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ!!! ಪರೇಶ್ ಮೇಸ್ತನ ಹತ್ಯೆಯ ಸಂದರ್ಭ ನಡೆದ ಗಲಭೆಯ ವೇಳೆ ಐಜಿಪಿ ಹೇಮಂತ್ ನಿಂಬಾಳ್ಕರ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿದ್ದು ಯಾಕೆ?

ಹೆಮಂತ್ ನಿಂಬಾಳ್ಕರ್

ಸಿದ್ದರಾಮಯ್ಯ ಸರಕಾರಕ್ಕೆ ಇಷ್ಟು ಸಹಾಯ ಮಾಡದೇ ಇದ್ದರೆ ಹೇಗೆ? ಮೊನ್ನೆ ಹೊನ್ನಾವರದಲ್ಲೂ ಅದೇ ನಡೆಯಿತು.. ಅತ್ತ ಪರೇಶ್ ಮೇಸ್ತನನ್ನು ಇಂಚಿಂಚು ನೋವು ನೀಡುತ್ತಾ, ಜೀವಂತ ಇರುವಾಗಲೇ ನರಕ ತೋರಿಸಿ, ಬಿಸಿಬಿಸಿ ಎಣ್ಣೆಯಿಂದ ಸುಟ್ಟು ಹೊನ್ನಾವರದ ಶೆಟ್ಟಿಕೆರೆಗೆ ಎಸೆದಾಗ ಐಜಿಪಿ ಹೇಮಂತ್ ನಿಂಬಾಳ್ಕರ್ ಏನಂದಿದ್ದರು? ಒಂದು ಕಡೆ ಉತ್ತರ ಕನ್ನಡ ಹೊತ್ತಿ ಉರಿಯುತ್ತಿರಬೇಕಾದರೆ ಇತ್ತ ಪೊಲೀಸರು ಅದಕ್ಕೆ ಪೆಟ್ರೋಲ್ ಸುರಿಯುವ ಕೆಲಸವನ್ನು ಮಾಡುತ್ತಿದ್ದರೆ ಇತ್ತ ಐಜಿಪಿ ಹೇಮಂತ್ ನಿಂಬಾಳ್ಕರ್ ಏನು ಮಾಡಿದ್ದರು..?

ಯುದ್ಧವೊಂದು ಸಂಭವಿಸಿ ಬಿಟ್ಟಿತು ಎನ್ನುವಂತೆ ಜನರೆಲ್ಲಾ ರೊಚ್ಚಿಗೆದ್ದು ಬೀದಿಗಿಳಿದಿದ್ದರೆ ಇತ್ತ ಪೊಲೀಸರೂ ಕೂಡಾ ಮೆರವಣಿಗೆಯತ್ತ ಕಲ್ಲು ಬಿಸಾಡಿದರೆ ಮತ್ತೊಂದು ಕಡೆಯಲ್ಲಿ ಕಲ್ಲು ಬಿಸಾಡುವ ಮತಾಂಧ ಕಿಡಿಗೇಡಿಗಳಿಗೆ ಪೊಲೀಸರಯ ಕಲ್ಲು ತೂರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪರೇಶ್ ಮೇಸ್ತನದ್ದು ಕೊಲೆ ಎಂದು ಜನರೆಲ್ಲಾ ಸಾಕ್ಷ್ಯ ಹಿಡಿದು ಸರಕಾರವನ್ನು ಜಗ್ಗುತ್ತಿದ್ದರೆ ಇದೇ ಪೊಲೀಸರು ಅದೆಲ್ಲಾ ಕಟ್ಟುಕಥೆ, ವದಂತಿ ಎಂದು ಯಾರೋ ಹೇಳಿದ್ದನ್ನು ಬಾಯಿಪಾಠ ಮಾಡಿದಂತೆ ಉರುಹೊಡೆಯುತ್ತಿದ್ದರು. ಇದೆಲ್ಲಾ ಜನರನ್ನು ರೊಚ್ಚಿಗೆಬ್ಬಿಸಿತ್ತಲ್ಲದೆ ಹೊನ್ನಾವರದ ಹೋರಾಟದ ಬೆಂಕಿ ಸುತ್ತೆಲ್ಲಾ ವ್ಯಾಪಿಸಿ ಇಡೀ ಉತ್ತರ ಕರ್ನಾಟಕವೇ ಬೀದಿಗಿಳಿದಿತ್ತು. ಈ ವೇಳೆ ಫೀಲ್ಡಿಗಿಳಿದಿದ್ದ ಐಜಿಪಿ ಹೇಮಂತ್ ನಿಂಬಾಳ್ಕರ್ ಮಾತ್ರ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಲಾಠಿಛಾರ್ಜ್ ನಡೆಸುವಂತೆ ಆದೇಶ ನೀಡಿದರು. ಆದರೂ ಜನರು ಕೇಳದಿದ್ದಾಗ ಅಶ್ರುವಾಯು ಪ್ರಯೋಗಿಸಿದರು. ಜನರೆಲ್ಲಾ ಜಗ್ಗದಿದ್ದಾಗ ಗಾಳಿಯಲ್ಲಿ ಗುಂಡುಹಾರಿಸಿದರು. ಜನರೆಲ್ಲಾ ದಿಕ್ಕಾಪಾಲಾಗಿ ಓಡುತ್ತಿದ್ದಾಗ ಪೊಲೀಸರೇ ಜನರನ್ನು ಉದ್ರೇಕಗೊಳಿಸುತ್ತಿದ್ದರು. ಅಲ್ಲಿಗೆ ಶಾಂತಗೊಂಡಿದ್ದ ಉತ್ತರ ಕನ್ನಡ ಬೆಂಕಿಯುಗುಳಿತ್ತು. ಇನ್ನು ಈ ಬೆಂಕಿಯನ್ನು ನಂದಿಸಲು ಸಾಧ್ಯವಿಲ್ಲ ಎಂದಾಗ ಒತ್ತಡಕ್ಕೆ ಬಿದ್ದ ಸರಕಾರ ಪರೇಶ್ ಮೇಸ್ತನ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು…

ಈ ನಡುವೆ ಐಜಿಪಿ ಸ್ಥಾನದಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಕ್ಷರಶಃ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿದರು. ಆದರೆ ಐಜಿಪಿ ಈ ರೀತಿ ಮಾತಾಡಲು ಕಾರಣವೇನು? ಇಂಥದೊಂದು ಪ್ರಶ್ನೆ ಇಡೀ ಕರ್ನಾಟಕದ ಜನರನ್ನು ಆವರಿಸಿತ್ತು. ಇಷ್ಟರವರೆಗೆ ಇದಕ್ಕೆ ಉತ್ತರ ಸಿಕ್ಕಿರಲಿಲ್ಲ. ಆದರೆ ಸತ್ಯ ಎಂದಾದರೂ ಹೊರಬರಲೇಬೇಕು. ಹೌದು ಕಾಂಗ್ರೆಸ್‍ನ ಋಣವನ್ನು ಹೇಮಂತ್ ನಿಂಬಾಳ್ಕರ್ ಕೊನೆಗೂ ತೀರಿಸಿದ್ದಾರೆ.

ಇದಕ್ಕೆ ಸಾಕ್ಷಿ ಒದಗಿಸಿದ್ದು ಅವರ ಟ್ವಿಟರ್ ಪೋಸ್ಟ್…

ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ. ಯಾಕೆಂದರೆ ಹೇಮಂತ್ ನಿಂಬಾಳ್ಕರ್ ಅವರ ಹೆಂಡತಿ ಡಾ|| ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ…. ತನ್ನ ಹೆಂಡತಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವಾಗ ನಿಂಬಾಳ್ಕರ್ ಅವರು ಕಾಂಗ್ರೆಸ್‍ನ ಸೇವೆ ಮಾಡುವ ಮೂಲಕ ಋಣ ತೀರಿಸಿದರು. ಬೇಜಾರಿನ ವಿಷಯವೆಂದರೆ ಅವರು ತಮ್ಮ ಋಣ ತೀರಿಸಲು ಪರೇಶ್ ಮೇಸ್ತನಂಥಾ ಅಮಾಯಕ ಸಾವನ್ನು ಬಳಸಬಾರದಿತ್ತು…. ಛೇ…
.
ಹೇಮಂತ್ ನಿಂಬಾಳ್ಕರ್ ಅವರ ಹೆಂಡತಿ ಡಾ|| ಅಂಜಲಿ ನಿಂಬಾಳ್ಕರ್ ಅವರು ಬರುವ ವಿಧಾನಸಭಾ ಚುನಾವಣೆಗ ಟಿಕೆಟ್ ಪಡೆದು ನಿಲ್ಲುವ ಎಲ್ಲಾ ಸಂಭವ ಇದೆ. ಈಗ ಅಧಿಕಾರದಲ್ಲಿರುವುದೂ ಕೂಡಾ ಇವರದೇ ಪಕ್ಷವಲ್ಲವೇ?

 

ಉತ್ತರ ಕನ್ನಡದ ಕುಮಟಾದಲ್ಲಿ ಅವರ ವಾಹನ ಸುಟ್ಟಿದ್ದು ಯಾರು ಎಂಬ ಅನುಮಾನ ಸ್ಥಳೀಯರು ಮೊದಲೇ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಜ್ಞಾವಂತ ಮತ್ತು ಸೌಮ್ಯ ,ಶಾಂತಿ ಸೌಹಾರ್ದಕ್ಕೆ ಹೆಸರಾದ ಜನರಾದ ಕುಮಟಾ, ಹೊನ್ನಾವರ, ಸಿರಸಿಯ ಜನರ ಮೇಲೆ ಈತ ಈ ಪಾಟಿ ಪೆÇೀಲಿಸ್ ತಾಕತ್ತು ತೋರಿಸಲು ಕಾರಣವೇನು ಎಂಬ ರಹಸ್ಯ ಸ್ಫೋಟಗೊಂಡಿದೆ.

ಸ್ವಕಾರ್ಯ ಹಾಗೂ ಸ್ವಾಮಿ ಕಾರ್ಯ ಎರಡೂ ಮಾಡಿದ್ದಾರೆ ಪೊಲೀಸ್ ಸಾಹೆಬ್ರು !!

ಅಷ್ಟಕ್ಕೂ ಹೇಮಂತ್ ನಿಂಬಾಳ್ಕರ್ ಮಾಡಿದ್ದೇನು ಗೊತ್ತೇ? ಸರಕಾರಿ ಹುದ್ದೆಯಲ್ಲಿರುವ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಮಾಡುವ ಕೆಲಸವೇ ಇದು? ಒಬ್ಬ ಸರಕಾರಿ ನೌಕರ ಯಾವುದೇ ಸಂಘ ಸಂಸ್ಥೆ, ಪಕ್ಷದಲ್ಲಿ ಗುರುತಿಸಲೇಬಾರದು ಎಂಬ ನಿಯಮವಿದೆ. ಅಲ್ಲದೆ ಒಂದು ಸಂಘಟನೆ, ಪಕ್ಷದ ಪರವಾಗಿ ಕೆಲಸವನ್ನೇ ಮಾಡಬಾರದೆಂಬ ನಿಯಮವಿದೆ. ಆದರೆ ಹೇಮಂತ್ ನಿಂಬಾಳ್ಕರ್ ಮಾಡಿದ್ದೇನು?

ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಡಾ|| ಅಂಜಲಿ ನಿಂಬಾಳ್ಕರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ `ಮನೆ ಮನೆಗೆ ಕಾಂಗ್ರೆಸ್’ ಪ್ರಚಾರದ ಟ್ವೀಟ್ ಮಾಡಿದ್ದರು. ಅದನ್ನೇ ಹೇಮಂತ್ ನಿಂಬಾಳ್ಕರ್ ಅವರು ರಿ ಟ್ವೀಟ್ ಮಾಡಿ ಪ್ರಮೋಟ್ ಮಾಡುವ ಮೂಲಕ ತನ್ನ ಹೆಂಡತಿಗೆ ನೆರವಾಗುವುದಲ್ಲದೆ ಕಾಂಗ್ರೆಸ್ ಪಕ್ಷಕ್ಕೂ ನೆರವಾಗಿದ್ದರು… ಹೇಮಂತ್ ಅವರು ಪ್ರಧಾನ ಹುದ್ದೆಯಲ್ಲಿದ್ದರೂ ಒಂದು ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿರುವುದು ಒಂದು ಘೋರ ಅಪರಾಧ. ನಿಂಬಾಳ್ಕರ್ ಅವರ ಈ ತಪ್ಪಿಗೆ ಅವರನ್ನು ಹುದ್ದೆಯಿಂದ ವಜಾಗೊಳಿಸಲೂಬಹುದು….

ಕೊಂಚ ಆಲೋಚಿಸಿ….

ಪರೇಶ್ ಮೇಸ್ತನ ಕೊಲೆ ನಡೆದ ಸಂದರ್ಭ ನಿಂಬಾಳ್ಕರ್ ಅಕ್ಷರಶಃ ಕಾಂಗ್ರೆಸ್ ಏಜೆಂಟ್‍ನಂತೆ ಹೇಳಿಕೆ ಕೊಟ್ಟಿರುವುದು ನೆನಪಿದೆಯೇ? ನೆನಪಿಲ್ಲದಿದ್ದರೆ ಮತ್ತೊಮ್ಮೆ ನೆನಪಿಸುತ್ತೇವೆ… ಇದು ಸ್ವತಃ ಅವರದ್ದೇ ಅಧಿಕೃತ ಮಾತುಗಳಾಗಿದ್ದು, ಹಲವಾರು ಮಾಧ್ಯಮಗಳಲ್ಲಿ ಯಥಾವತ್ ಪ್ರಸಾರಗೊಂಡಿದೆ.

 

`ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ನೀಡಿದ್ದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು. ವೈಯಕ್ತಿಕ ಹಿತಾಸಕ್ತಿಗಾಗಿ ಧರ್ಮದ ಆಧಾರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಕೋಮು ಭಾವನೆಗಳನ್ನು ಕೆರಳಿಸುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ರಾಜಕೀಯ ಪಕ್ಷದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳಿಂದ ಈ ಸ್ಥಿತಿ ನಿರ್ಮಾಣವಾಗಿದ್ದು, ಸಮಾಜವನ್ನು ಒಡೆಯುವ ಕೆಲಸ ನಡೆಸುತ್ತಿದ್ದು, ಇದರಲ್ಲಿ ದುರುದ್ದೇಶವಿದೆ. ಸಭೆ, ಸಮಾರಂಭ ಅಥವಾ ರಾಜಕೀಯ ರ್ಯಾಲಿ ಆಗಲಿ ಯಾವುದೂ ನಡೆಯದಂತೆ ಬಂದ್ ಮಾಡಲಾಗಿತ್ತು. ಸೆಕ್ಷನ್ 35 ಆಕ್ಟ್ ಪ್ರಕಾರ ಕಾರವಾರ ಜಿಲ್ಲಾಧಿಕಾರಗಳು ಆದೇಶ ಹೊರಡಿಸಿದ್ದರು.

ಆದರೂ ಅಲ್ಲಿ ಜನ ಸೇರಿ ನಮಗೆ ಮೆರವಣಿಗೆ ಬೇಕು ಅಂತ ಹೇಳುವುದು ಇದೊಂದು ಪ್ಲಾನ್ ಮಾಡಿಕೊಂಡಿರೋ ಆಕ್ರೋಶ ಎಂಬುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಪತ್ರಿಕಾ ಪ್ರಕಟಣೆಯಲ್ಲಿದ್ದಂತಹ ಹೇಳಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತಹ ವಿಷಯಗಳನ್ನೆಲ್ಲಾ ಒಳಪಡಿಸಿ ನಾವು ಒಂದು ಪ್ರಶ್ನೆಯನ್ನು ರೆಡಿ ಮಾಡಿ, ವೈದ್ಯರಿಗೆ ಆ ಪ್ರಶ್ನೆಗಳನ್ನು ಕೊಟ್ಟಿದ್ದೇವೆ. ಈ ರೀತಿ ಸುಳ್ಳು ಪ್ರಚಾರ ಮಾಡಿ ಎರಡು ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವಂತಹ ಸಂಚು ಕಾಣ್ತಾ ಇದೆ. ಈ ಸುಳ್ಳು ಮಾಹಿತಿಗಳಿಗೆ ಉತ್ತರ ಅಂತ ನಿನ್ನೆ ನಾವು ಪ್ರಕಟಣೆ ಕೊಟ್ಟಿದ್ದೇವೆ. ಅಲ್ಲದೇ ಸುಳ್ಳು ಮಾಹಿತಿ ಹರಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ಪ್ರಾಥಮಿಕ ಶಿಕ್ಷಕನನ್ನು ಬಂಧಿಸಿದ್ದೇವೆ.’

ಇದು ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ ಯಥಾವತ್ ಹೇಳಿಕೆಗಳು. ಯಾವುದೇ ಒಂದು ಗಲಭೆ ನಡೆದಾಗ ಯಾವುದೇ ಪೊಲೀಸ್ ಅಧಿಕಾರಿಗಳು ಒಂದು ಪಕ್ಷ ಅಥವಾ ಸಮುದಾಯವನ್ನು ಗುರುತಿಸಿ ಈ ರೀತಿ ಹೇಳುವುದಿಲ್ಲ. ಅಲ್ಲದೆ ತತ್‍ಕ್ಷಣದಲ್ಲಿ ಗಲಭೆಯನ್ನು ನಿಯಂತ್ರಿಸಲು ಏನುಬೇಕೋ ಆ ಕ್ರಮವನ್ನು ಕೈಗೊಳ್ಳುತ್ತಾರೆ. ಆದರೆ ಐಜಿಪಿಯವರ ಹೇಳಿಕೆ ಧ್ವೇಷದಿಂದ ಕೂಡಿದ ಹೇಳಿಕೆಯಂತೆ ಗೋಚರವಾಗುತ್ತಿತ್ತು. ಇದರಿಂದಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು…

https://m.facebook.com/story.php?story_fbid=1684836991572593&id=633444083378561

ಹೇಮಂತ್ ನಿಂಬಾಳ್ಕರ್ ಅವರು ತನ್ನ ಮಡದಿಯ ಕಾಂಗ್ರೆಸ್ ಪ್ರಚಾರದ ಟ್ವೀಟನ್ನು ರಿ-ಟ್ವೀಟ್ ಮಾಡಿದ್ದಷ್ಟೇ ಅಲ್ಲದೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಪೋಸ್ ನೀಡಿದ ಫೋಟೋ ಕೂಡಾ ಬಹಿರಂಗಗೊಂಡಿದೆ. ಇಷ್ಟೆಲ್ಲಾ ಸ್ವಾಮಿನಿಷ್ಠೆ ಪ್ರದರ್ಶಿಸಿದ ನಿಂಬಾಳ್ಕರ್ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದಿತ್ತು. ಅದು ಬಿಟ್ಟು ಕಾಂಗ್ರೆಸ್ ಪಕ್ಷದ ಏಜೆಂಟ್‍ನಂತೆ ವರ್ತಿಸಬಾರದಿತ್ತು… ಎಂಥಾ ವಿಪರ್ಯಾಸವಲ್ಲವೇ?

ನಿಂಬಾಳ್ಕರ್ ಅವರೇ ನೀವು ಖಡಕ್ ಪೊಲೀಸ್ ಅಧಿಕಾರಿಯೇ ಆಗಿದ್ದರೆ ನೀವು ತನ್ನ ಪತ್ನಿಯ ಕಾಂಗ್ರೆಸ್ ಪ್ರಚಾರದ ಟ್ವೀಟನ್ನು ರಿಟ್ವೀಟ್ ಮಾಡಿದ್ದು ಯಾಕೆ? ನೀವೊಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂಥದೆಲ್ಲಾ ಎಡವಟ್ಟು ಮಾಡಬಾರದೆಂಬ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇ? ಇದದರಿಂದ ಜನತೆಗೆ ಯಾವ ಸಂದೇಶ ಕೊಟ್ಟಂತಾಗಿದೆ ಎಂದು ಅನಿಸಿದೆಯೇ? ನಿಮಗೆ ಪಕ್ಷದ ಮೇಲೆ ಅಭಿಮಾನ ಇದ್ದಿದ್ದೇ ಆದರೆ ಒಂದಾ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು, ಇಲ್ಲವಾದರೆ ನಿವೃತ್ತಿಯಾದ ಬಳಿಕ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಿತ್ತು. ಅದು ಬಿಟ್ಟು ತಾವುಗಳು ಮಾಡಿದ್ದೇನು ಸ್ವಾಮಿ… ಇದಕ್ಕೆ ಏನು ಉತ್ತರ ನೀಡುತ್ತೀರಿ…?

-ಚೇಕಿತಾನ

Tags

Related Articles

Close