ಪ್ರಚಲಿತ

ಸ್ಫೋಟಕ ಸುದ್ದಿ! ಸುಬ್ರಹ್ಮಣಿಯನ್ ಸ್ವಾಮಿಯಿಂದ ಗಾಂಧಿ ಕುಟುಂಬದ ಆದಾಯ ತೆರಿಗೆ ದಾಖಲೆಗಳ ಬಿಡುಗಡೆ! ಜೈಲು ಪಾಲಾಗುವುದೇ ಸೋನಿಯಾ ಗಾಂಧಿ ಕುಟುಂಬ?

ನೆನ್ನೆಯಷ್ಟೇ, ‘ಸೋನಿಯಾ , ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯನ್ನು ಜೈಲಿಗೆ ಕಳುಹಿಸುವಂತಹ ನ್ಯಾಷನಲ್ ಹೆರಾಲ್ಡ್ ಪ್ರಕರಣದ ದುರ್ಲಭ
ದಾಖಲೆಗಳು ಸಿಕ್ಕಿವೆಯೆಂದು” ಎಂದು ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟಿಸಿದ್ದರು!! ಸ್ವಾಮಿಯವರ ಸಹೋದ್ಯೋಗಿ ಇಷ್ಕಾರಣ್ ಭಂಡಾರಿಯೂ ಸಹ, ದಾಖಲೆಗಳು ನುಕ್ಲಿಯರ್ ಬಾಂಬ್ ನಂತಿದೆ ಎಂದಿದ್ದರು!

ಹೇಳಿದಂತೆಯೇ ನಡೆದುಕೊಂಡಿದ್ದಾರೆ ಸ್ವಾಮಿ!

ನೆನ್ನೆ ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದು ಹೇಳಿದ ಹಾಗೆ ಸುಬ್ರಹ್ಮಣಿಯನ್ ಸ್ವಾಮಿ ಇವತ್ತು, 105 ಪುಟಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ! ಸ್ವಾಮಿಯವರು ನೀಡಿದ ದಾಖಲೆಗಳು ಗಾಂಧಿ ಕುಟುಂಬದ ತೆರಿಗೆ ಇಲಾಖೆಯ ಪತ್ರಗಳಾಗಿದ್ದು, ಇಲ್ಲಿಯ ತನಕವೂ ಕಾಂಗ್ರೆಸ್ ನೀಡಿದ್ದ ಸಾಕ್ಷಿಗಳಿಗೆ ತದ್ವಿರುದ್ಧವಾಗಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಟಣಾಗಾರರಾದ Associated Journals Limited (AJL) ಗೆ ಬರೋಬ್ಬರಿ 90 ಕೋಟಿ ರೂಗಳಷ್ಟು ಸಾಲವನ್ನು ಕೊಟ್ಟಿರುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ಅದೀಗ, ಕಾಂಗ್ರೆಸ್ ನಿಂದ ಈ ವಹಿವಾಟು ನಡೆದಿದ್ದು 2000 ಕೋಟಿ ರೂ ಬೆಲೆ ಬಾಳುವಂತಹ ಭೂ ಮತ್ತು ಬಿಲ್ಡಿಂಗ್ ಗಳನ್ನೊಳಗೊಂಡಂತಹ ಆಸ್ತಿಗಳನ್ನು ಖರೀದಿಸುವುದಕ್ಕಾಗಿ ಎಂದು ಸಾಬೀತಾಗಿದೆ!

ಸೋನಿಯಾ ಮತ್ತು ರಾಹುಲ್ , ಇಬ್ಬರೂ ಮುಖ್ಯ ಷೇರುದಾರರಾಗಿರುವ ಯಂಗ್ ಇಂಡಿಯಾ ಕಂಪೆನಿಗೆ ತೆರಿಗೆ ಇಲಾಖೆ ನೋಟೀಸನ್ನು ಕಳುಹಿಸಿತ್ತಾದರೂ ಕಂಪೆನಿ ಕ್ಯಾರೇ ಎಂದಿರಲಿಲ್ಲ. ಆದರೆ, ಇದೀಗ ತೆರಿಗೆ ಇಲಾಖೆ, ತೆರಿಗೆ ವಿನಾಯಿತಿಯ ಸರ್ಟಿಫಿಕೇಟನ್ನು ರದ್ದುಗೊಳಿಸಿದ್ದು, ಅಕ್ರಮವಾದ ವ್ಯವಹಾರ ನಡೆಸಿರುವುದಕ್ಕೆ 414 ಕೋಟಿ ರೂಗಳಷ್ಟು ದಂಡ ವಿಧಿಸಿದೆ!

ಸುಬ್ರಹ್ಮಣಿಯನ್ ಸ್ವಾಮಿ ಇವತ್ತು ಪ್ರಸ್ತುತ ಪಡಿಸಿರುವ ದಾಖಲೆಗಳು ಕಾಂಗಿಗಳ ಆಟವನ್ನು ಬಯಲು ಮಾಡಿದೆ. ಈ ಹಿಂದೆ ಕಾಂಗ್ರೆಸ್ ಹೇಳಿದ್ದ ‘ಸಾಲ’ವೂ ಸುಳ್ಖೆಂಬುದು ಸಾಬೀತಾಗಿದೆ! ಇದಕ್ಕೂ ಮೊದಲು ಸುಬ್ರಹ್ಮಣಿಯನ್ ಸ್ವಾಮಿ 600 ಪುಟಗಳಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದರಾದರೂ ಸಹ, ಕಾಂಗ್ರೆಸ್ ಸೃಷ್ಟಿಸಿದ್ದ ದಾಖಲೆಗಳ ಮುಂದೆ ಸ್ವಾಮಿಯವರ ದಾಖಲೆಗಳು ಅಷ್ಟು ಸಮಂಜಸವಾಗಿರಲಿಲ್ಲ. ಅದಲ್ಲದೇ, ಕಾಂಗ್ರೆಸ್ ಕೂಡಾ ತನ್ನ ಮೇಲಾಗಿದ್ದ ಆರೋಪವನ್ನು ತಳ್ಳಿ ಹಾಕಿತ್ತು. ಹಠಕ್ಕೆ ಬಿದ್ದ ಸ್ವಾಮಿ, ತೆರಿಗೆ ಇಲಾಖೆಯ ದಾಖಲೆಗಳನ್ನೇ ಪ್ರಸ್ತುತ ಪಡಿಸುತ್ತೇನೆಂದು ಹೇಳಿದ್ದರು.

ರಿಪಬ್ಲಿಕ್ ಟಿವಿಗೆ, ‘ನಾನು ಅವರಿಗೆ 600 ಪುಟಗಳ ದಾಖಲೆಗಳನ್ನು ಒಂದೋ ಒಪ್ಪಿಕೊಳ್ಳಿ, ಇಲ್ಲವೇ ತಿರಸ್ಕರಿಸಿ ಎಂದೆ. ಅವರು ತಿರಸ್ಕರಿಸಿದರು. ನಾನು ಪ್ರತಿವಾದ ಮಾಡಿದೆ.! ನೀವು ಈ ದಾಖಲೆಗಳನ್ನು ತಿರಸ್ಕರಿಸಿದಿರಿ! ಕಾನೂನು ಉಲ್ಲಂಘನೆಯನ್ನೂ ಮಾಡಿದಿರಿ ಎಂದೆ!” ಎಂದು ಸ್ವಾಮಿ ಹೇಳಿದ್ದಾರೆ!

ಯಾವಾಗ ಸ್ವಾಮಿಯವರು ದಾಖಲೆಗಳನ್ನು ಪ್ರಸ್ತುತ ಪಡಿದಿದರೋ, ಕಾಂಗ್ರೆಸ್ ನ ಮುಖ ಬಿಳುಚಲು ಪ್ರಾರಂಭಿಸಿತು! ಆಂತರಿಕ ಮೂಲಗಳ ಪ್ರಕಾರ,
ಕಾಂಗ್ರಸ್ ಬಹಳ ದಿನಗಳಿಂದಲೂ ಸಹ, ಸುಬ್ರಹ್ಮಣಿಯನ್ ಸ್ವಾಮಿಯವರು ತೆರಿಗೆ ಇಲಾಖೆಗಳ ದಾಖಲೆ ಪಡೆಯದಂತೆ ಮಾಡಲು ಬಹಳ ಒತ್ತಡ ಹೇರಲು ತೊಡಗಿತ್ತು. ಆದರೆ, ಸ್ವಾಮಿಯವರು ಇಲಾಖೆಯಿಂದ ಪ್ರತಿ ದಾಖಲೆಗಳನ್ನೂ ಹೊರತೆಗೆದಿದ್ದಾರೆ!

ಬೇರೆ ದಾರಿ ಇಲ್ಲ! ತೆರಿಗೆ ಇಲಾಖೆಯಿಂದ ಡಿಸೆಂಬರ್ ನಲ್ಲಿ ನೋಟಿಸ್ ಬಂದಿತ್ತೆಂಬುದನ್ನು ವಿಧಿಯಿಲ್ಲದೇ ಒಪ್ಪಬೇಕಾಗಿದೆ ಗಾಂಧಿ ಕುಟುಂಬ!

ಆದರೀಗ, ಯಂಗ್ ಇಂಡಿಯಾ ಕಂಪೆನಿಗೆ, ನ್ಯಾಷನಲ್ ಹೆರಾಲ್ಡ್ ನಿಂದ ದೋಚಿ ಹಣ ಕೊಡುವ ಹಗರಣದಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಹಾಗೂ ಮೋತಿಲಾಲ್ ವಹ್ರಾ ಭಾಗಿಯಾಗಿದ್ದರು ಎಂಬುದು ಸಾಬೀತಾಗಿದೆ! ಅದಕ್ಕೆ ಸರಿಯಾಗಿ, 414 ಕೋಟಿ ರೂಗಳಷ್ಟು ದಂಡ ಪಾವತಿಸಿ ಹೊರಡಿ ಎಂದಿರುವ ನ್ಯಾಯಾಲಯ, ಇನ್ನೂ ಜೈಲು ಶಿಕ್ಷೆ ವಿಧಿಸದಿರುವುದು ವಿಶೇಷವಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close