ಪ್ರಚಲಿತ

ಸ್ಫೋಟಕ ಸುದ್ದಿ!! ಸೇನೆಯನ್ನು ಎದುರಿಸಲಾಗದೆ ನಾಗರಿಕರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ!

ಪಾಕಿಸ್ತಾನ ಹತಾಶೆಯ ಮರಮಾವಧಿ ಮಿತಿಮೀರುತ್ತಿದ್ದು, ಸೈನಿಕರನ್ನು ಎದುರಿಸಲಾಗದೆ ಇದೀಗ ನಾಗರಿಕರ ಮೇಲೆ ದಾಳಿ ನಡೆಸುವ ಹೇಯಕೃತ್ಯವನ್ನು ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೇರ್ನಿ ಮತ್ತು ದಿಗ್ವಾರ್ ಪ್ರದೇಶದ ಗಡಿನಿಯಂತ್ರಣ ರೇಖೆಯ ಬಳಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಸೇನಾಪಡೆ, ತಾವೂ ಕೂಡಾ ಭಯೋತ್ಪಾದಕರಿಗಿಂತ ಕಮ್ಮಿ ಇಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ 9 ವರ್ಷದ ಬಾಲಕನೂ ಸೇರಿದ್ದಾನೆ. ಘಟನೆಯಲ್ಲಿ ಒಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ ನಾಲ್ಕು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪಾಕ್
ಸೇನೆ ನಾಗರಿಕರನ್ನೇ ಗುರಿಯಾಗಿಸಿ ಈ ದಾಳಿ ನಡೆಸಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಈ ಬಾರಿ ಪಾಕಿಸ್ತಾನ ಸೇನೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿದ್ದು, ಭಾರತ ಸೇನೆ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿ ಪಾಕಿಸ್ತಾನ ಸೇನೆಗೆ ಮಣ್ಣುಮುಕ್ಕಿಸುವ ಕೆಲಸದಲ್ಲಿ ನಿರತವಾಗಿದೆ. ಇದೀಗ ಬಂದ ಮಾಹಿತಿಯ ಪ್ರಕಾರ ಪಾಕ್ ಸೇನೆ ಸಣ್ಣ ಹಾಗೂ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳು, ಶೆಲ್‍ಗಳಿಂದ ದಾಳಿ ನಡೆಸುತ್ತಿದ್ದು, ಭಾರತ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ. ನಾಗರಿಕರ ಮೇಲೆ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿಸುವ ಮೂಲಕ ಪಾಕ್ ಸೇನೆ ಈ ಹಿಂದೆ ಇದ್ದ ಒಪ್ಪಂದವನ್ನು ಮುರಿದುಕೊಂಡಿದೆ.

ನಿಯಂತ್ರಣ ರೇಖೆಯ ಗಡಿ ದಾಟಿ ಬಂದಿರುವ ಪಾಕ್ ಸೇನೆಯನ್ನು ಭಾರತದ ಸೇನೆ ಯಶಸ್ವಿಯಾಗಿ ಅಟ್ಟುವ ಮೂಲಕ ಪಾಠ ಕಲಿಸಿದೆ. ಭಾರತದ ಸೇನೆ ಭಯೋತ್ಪಾದಕರನ್ನು ಹೊಸಕಿ ಹಾಕುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪಾಕಿಸ್ತಾನದ ಸೇನೆಯೇ ಭಯೋತ್ಪಾಕರಂತೆ ವರ್ತಿಸುತ್ತಿದೆ. ಈಗಾಗಲೇ ಆರು ಮಂದಿ ಉಗ್ರ ಕಮಾಂಡರ್‍ಗಳನ್ನು ಎನ್‍ಕೌಂಟರ್ ಮೂಲಕ ಮುಗಿಸಿರುವುದರಿಂದ ಭಯೋತ್ಪಾದನೆ ಸಾಕಷ್ಟು ಕಡಿಮೆಯಾಗಿದ್ದು, ಅದಕ್ಕಾಗಿಯೇ ಪಾಕ್ ಸೇನೆಯೇ ನೇರವಾಗಿ ರಣರಂಗಕ್ಕಿಳಿದಿದೆ.

ಇಂದು ಬೆಳಿಗ್ಗೆ ನಡೆದ ದಾಳಿಗೆ ಭಾರತದ ಸೇನೆಯೂ ದಿಟ್ಟ ಉತ್ತರವನ್ನು ನೀಡಿದ್ದು, ಪಾಕ್ ಸೇನೆ ಹಿಮ್ಮೆಟ್ಟಿದೆ ಎಂದು ತಿಳಿದುಬಂದಿದೆ. ಪ್ರತೀಬಾರಿ ಕದನ ವಿರಾಮ ಉಲ್ಲಂಘಿಸುವ ಪಾಕ್ ಸೇನೆ ಈ ಬಾರಿ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿ ತನ್ನ ದೌರ್ಬಲ್ಯವನ್ನು ತೋರಿಸಿಕೊಂಡಿದೆ. ಭಾರತದ ಸೇನೆಯನ್ನು ಎದುರಿಸಲಾಗದೆ ನಾಗರಿಕರನ್ನು ಕೊಲ್ಲುವ ಮೂಲಕ ತನ್ನ ಹತಾಶೆಯ ಪರಮಾವಧಿಯನ್ನು ಮೀರಿದ್ದು, ಪಾಕಿಸ್ತಾನ ವಿಶ್ವದ ಮುಂದೆ ಮತ್ತೊಮ್ಮೆ ಮಾನ ಕಳೆದುಕೊಂಡಿದೆ.

ಈ ಮುಂಚೆ ಅರ್ನಿಯಾ ವಲಯದ ಅಂತರರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನ ಪ್ರದೇಶದ ಕಡೆಯಿಂದ ಕೊರೆಯಲಾಗಿದ್ದ 14 ಅಡಿ ಉದ್ದದ ಸುರಂಗವೊಂದನ್ನು ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧರು ಪತ್ತೆ ಹಚ್ಚಿದ್ದರು. `ದಮನದ ಬಳಿಯ ಅಂತರರಾಷ್ಟ್ರೀಯ ಗಡಿಯ ವಿಕ್ರಂ ಮತ್ತು ಪಟೇಲ್ ವಲಯದ ನಡುವೆ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ನಿರ್ಮಾಣ ಹಂತದ ಈ ಸುರಂಗ ಪತ್ತೆಯಾಗಿದೆ. ಗಡಿಯುದ್ದಕ್ಕೂ ಸುರಂಗಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದರು. ಇದಾದ ಎರಡು ದಿನಗಳ ಬಳಿಕ ಪಾಕ್ ಸೇನೆ ನಾಗರಿಕರ ಮೇಲೆ ತನ್ನ ಕ್ರೂರ ಕೃತ್ಯವನ್ನು ಮೆರೆದಿದೆ.

-Chekitan

Tags

Related Articles

Close