ಪ್ರಚಲಿತ

ಹದಿನೈದು ನಿಮಿಷ ಪೋಲಿಸರನ್ನು ಸುಮ್ಮನಿರಲು ಹೇಳಿ! ನೂರು ಕೋಟಿ ಹಿಂದೂಗಳನ್ನು ಕೊಲ್ಲುತ್ತೇನೆಂದವರೊಡನೆ ನಾಲ್ಕು ಗೋಡೆಗಳ ಮಧ್ಯೆ ಸಿದ್ಧರಾಮಯ್ಯ ಮಾಡಿದ್ದೇನು ಗೊತ್ತೇ?!

ಮುಸ್ಲಿಮರ ಮತವಿಭಜನೆ ತಪ್ಪಿಸಲು ಈ ಬಾರಿ ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರಕ್ಕೆ ಜಿಹಾದಿ ಮುಸ್ಲಿಮ್ ಪಕ್ಷಗಳ ಜೊತೆಗೆ ಕೈಜೋಡಿಸುವ ಕಾಲ ಬಂದಿದೆ.
ಪ್ರಜ್ಞಾವಂತ ಮುಸ್ಲಿಮರೂ ಕೂಡಾ ಈ ಎರಡು ಪಕ್ಷಗಳನ್ನು ಬೆಂಬಲಿಸುವುದಿಲ್ಲ. ಅಂಥಹುದ್ದರಲ್ಲಿ ಸ್ವತಃ ಸಿದ್ದರಾಮಯ್ಯನವರೇ ಈ ಪಕ್ಷಗಳ ಜೊತೆ ಕೈ ಜೋಡಿಸಿ
ಹೊಂದಾಣಿಕೆ ಮಾಡಿಕೊಂಡಿದ್ದಾರೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಯಾವ ರೀತಿ ಅಧೋಗತಿಯನ್ನು ತಲುಪಿದೆ ಎಂದು ಈಗಲೇ ಅರ್ಥ ಮಾಡಿಕೊಳ್ಳಬಹುದು.

ಹೌದು ಈ ಬಾರಿ ಮುಸ್ಲಿಂ ಮತವಿಭಜನೆ ತಪ್ಪಿಸಲು ಸಿದ್ದರಾಮಯ್ಯ ಎಂಐಎಂ ಹಾಗೂ ಎಸ್‍ಡಿಪಿಐ ಜೊತೆ ಚರ್ಚೆ ನಡೆಸಿದ್ದಾರೆಂದು ಸುದ್ದಿವಾಹಿನಿಯೊಂದು ವರದಿ
ಮಾಡಿದೆ. ಮುಸ್ಲಿಮರು ಕಾಂಗ್ರೆಸ್‍ಗೆ ಬೆಂಬಲ ಕೊಡುವ ಸಲುವಾಗಿ ಎಂಐಎಂ ಹಾಗೂ ಎಸ್‍ಡಿಪಿಐ ಪಕ್ಷದ ಮುಖಂಡರ ಜೊತೆ ಚುನಾವಣಾ ಕಣಕ್ಕಿಳಿಯದಂತೆ
ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿದೆ. ಎಸ್‍ಡಿಪಿಐ ಮುಖಂಡರ ಜೊತೆ ಎರಡು ಬಾರಿ ಚರ್ಚೆ ನಡೆಸಿರುವ ಸಿದ್ದರಾಮಯ್ಯ ಆ ಪಕ್ಷದಿಂದ ಯಾರೂ ಕಣಕ್ಕಿಳಿಯದಂತೆ ಮನವಿ ಮಾಡಿದ್ದಾರೆ. ಅದೇ ರೀತಿ ಎಂಐಎಂ ಜೊತೆ ಮಾತುಕತೆ ನಡೆಸಲು ಶಾಸಕ ಜಮೀರ್ ಅಹ್ಮದ್
ಖಾನ್‍ಗೆ ಮಾತುಕತೆಯ ಜವಾಬ್ದಾರಿ ವಹಿಸಲಾಗಿದೆ. ಕಾಂಗ್ರೆಸ್‍ನ ಜಾತ್ಯತೀತ ನಿಲುವಿಗಾಗಿ ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ ಪಕ್ಷಗಳ ಜೊತೆಗೆ
ಹೊಂದಾಣಿಕೆ ನಡೆಸಲು ಮುಂದಾಗಿರುವ ಕಾಂಗ್ರೆಸ್‍ನ ಅಸಲಿ ಜಾತ್ಯತೀತ ತತ್ವ ಕೊನೆಗೂ ಬಯಲಾಗಿದೆ.

ಹಾಗೆ ನೋಡಿದರೆ ಕಾಂಗ್ರೆಸ್ ಕೂಡಾ ಮತೀಯ ಪಕ್ಷ. ಯಾಕೆಂದರೆ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಿಕೊಂಡು ಅಲ್ಪಸಂಖ್ಯಾತರನ್ನೇ
ಬಗುಲಲ್ಲಿ ಹಾಕಿಕೊಂಡು ಮೆರೆಯುತ್ತಿದೆ. ಮುಸ್ಲಿಮರಿಗಾಗಿ ಹಲವಾರು ಭಾಗ್ಯಗಳನ್ನು ಪ್ರಕಟಿಸಿ, ಅವರದ್ದೇ ಪರ ನಿಂತಿರುವ ಸಿದ್ದರಾಮಯ್ಯ ಮುಸ್ಲಿಮರ ಮುಖ್ಯಮಂತ್ರಿ ಎಂಬುವುದಾಗಿ ಎಂದೋ ಬಿಂಬಿತವಾಗಿದೆ.

ಆದರೆ ಇದೇ ಮುಸ್ಲಿಮರು ಇಂದು ಕಾಂಗ್ರೆಸ್‍ನ ಹಣೆಬರಹವನ್ನು ಅರ್ಥ ಮಾಡಿಕೊಂಡಿದ್ದು, ತನಗೆಸಗಿದ ಒಂದೊಂದೇ ಅನರ್ಥಗಳನ್ನು ಅರ್ಥ ಮಾಡಲಾರಂಭಿಸಿದ್ದಾರೆ. ಅದಕ್ಕಾಗಿಯೇ ಹಲವಾರು ಮುಸ್ಲಿಮರು ಕಾಂಗ್ರೆಸ್‍ಗೆ ಓಟು ಹಾಕುವುದಿಲ್ಲ. ಮುಸ್ಲಿಮರ ಓಟುಗಳು ನಿಧಾನವಾಗಿ ಕೈತಪ್ಪುತ್ತಿರುವುದನ್ನು ಮನಗಂಡ ಕಾಂಗ್ರೆಸಿಗರು ಇದೀಗ ಕೋಮುವಾದಿ ಮುಸ್ಲಿಮರ ಪಕ್ಷಗಳ ಜೊತೆಗೇ ಕೈಜೋಡಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯನ ಈ ನಡೆಯಿಂದ ಕಾಂಗ್ರೆಸ್ ಹಿಂದೂಗಳ ಓಟುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದು ಮತೀಯ ಮುಸ್ಲಿಂ ಪಕ್ಷವಾಗಿ ಹೊರಹೊಮ್ಮಲಿರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದೆ.

ಈ ಎಸ್‍ಡಿಪಿಐ ಯಾವ ಸಂಘಟನೆಯ ಪಕ್ಷ ಗೊತ್ತೇ? ಇಂದು ಭಾರತದಲ್ಲಿ ನಿಷೇಧದ ಹಂತದಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ
ಸಂಬಂಧಿಸಿದ ಪಕ್ಷ. ಮತೀಯ ಮುಸ್ಲಿಂ ಸಂಘಟನೆಯಾಗಿರುವ ಇದು ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವುದು ಇದರ ಉದ್ದೇಶ. ಟೆರರ್ ಕ್ಯಾಂಪ್ ನಿರ್ವಹಣೆ, ಐಸಿಸ್ ಉಗ್ರರ ಜೊತೆಗೆ ನಂಟು, ಹಿಂದೂ ಮುಖಂಡರ ಕೊಲೆ, ಲವ್ ಜಿಹಾದ್ ಮುಂತಾದ ಗುರುತರ ಆರೋಪಗಳು ಈ ಸಂಘಟನೆಯ ಮೇಲಿದೆ. ಇದೇ ಸಂಘಟನೆಯೊಂದು ಮುಸ್ಲಿಮರಿಗಾಗಿ ಸೋಸಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಎನ್ನುವ ಪಕ್ಷವನ್ನು ಸ್ಥಾಪಿಸಿದೆ. ಎಸ್‍ಡಿಪಿಐ ಈಗಾಗಲೇ ಈಗಾಗಲೇ ಹಲವು ಕಡೆಗಳಲ್ಲಿ ಸ್ಪರ್ಧಿಸಿ ಕೆಲವು ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ.

ಅದೇ ರೀತಿ ಎಂಐಎಂ ಎನ್ನುವುದು ಅಸಾಸುದ್ದೀನ್ ಓವೈಸಿ ಹಾಗೂ ಅಕ್ಬರುದ್ದೀನ್ ಓವೈಸಿ ಎಂಬ ಮತಾಂಧ ಮುಸ್ಲಿಮರು ಪ್ರತಿನಿಧಿಸುವ ಪಕ್ಷ. ಆಲ್ ಇಂಡಿಯಾ ಮಜ್ ಇಸ್ ಇ ಇಟಿಯಾಕ್ ಅಲ್ ಮುಸ್ಲಿಂ(ಎಂಐಎಂ) ಪಕ್ಷ ಈಗಾಗಲೇ ದೇಶದ ಹಲವಾರು ಕಡೆಗಳಲ್ಲಿ ಸ್ಪರ್ಧಿಸಿ ಒಂದೆರಡು ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಕಟ್ಟರ್
ಮುಸ್ಲಿಂವಾದಿಗಳಾಗಿರುವ ಅಕ್ಬರುದ್ದೀನ್ ಓವೈಸ್ ಹಾಗೂ ಅಸಾಸುದ್ದೀನ್ ಓವೈಸಿ ಸಹೋದರರು ಈ ಪಕ್ಷವನ್ನು ಮುನ್ನಡೆಸುತ್ತಿದ್ದು, ಈ ಇಬ್ಬರಿಗೂ ಪಾಕಿಸ್ತಾನವೆಂದರೆ ಅದೇನೋ ಮಮಕಾರ. ಹಿಂದೂಗಳ ಜೊತೆ ಧ್ವೇಷ ಸಾಧಿಸುತ್ತಾ ಹಿಂದೂಗಳ ವಿರುದ್ಧ ದೋಷಪೂರಿತ ಹೇಳಿಕೆಗಳನ್ನು ನೀಡುತ್ತಾ ಇರುವ ಓವೈಸಿ , ಒಮ್ಮೆ ಪೊಲೀಸರು ಹತ್ತು ನಿಮಿಷ ಸುಮ್ಮನಿದ್ದರೆ ಹಿಂದೂಗಳನ್ನು ನಿರ್ಣಾಮ ಮಾಡಿಬಿಡುತ್ತೇನೆ ಎಂದು ಹೇಳಿಕೆ ನೀಡಿದ್ದ. ಮುಸ್ಲಿಮರನ್ನು ಮತೀಯವಾಗಿ ಕೆರಳಿಸಿ ಅವರನ್ನು ಕೋಮುಗಲಭೆಗೆ ಪ್ರೇರೇಪಿಸುವುದು ಈತನ ಕೆಲಸ.

ಈ ಎರಡು ಪಕ್ಷಗಳು ಮತೀಯ ಮುಸ್ಲಿಂವಾದಿಗಳ ಮನಸೂರೆಗೊಂಡ ಪಕ್ಷವಾಗಿದ್ದು, ಕಾಂಗ್ರೆಸ್‍ನ ಮತವನ್ನು ಕಿತ್ತು ತಿನ್ನಲಾರಂಭಿಸಿದೆ. ಕಾಂಗ್ರೆಸ್ ಅಂದರೆ ಮುಸ್ಲಿಂ ಅಂತಿದ್ದ ಕಾಲ ಬಲುದೂರ ಸಾಗಿದ್ದು, ಇಂದು ಮುಸ್ಲಿಮರೇ ಕಾಂಗ್ರೆಸಿಗರನ್ನು ದೂರ ಮಾಡುತ್ತಿದ್ದು, ತನ್ನದೇ ಸಮುದಾಯದ ಪರವಾಗಿರುವ ಪಕ್ಷದ ಹಿಂದೆ
ಹೋಗುತ್ತಿದ್ದಾರೆ.

ಎಂಐಎಂ ಹಾಗೂ ಎಸ್‍ಡಿಪಿಐ ಪಕ್ಷಗಳು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಗೆದ್ದುಕೊಳ್ಳಬಹುದೇ ಹೊರತು ಬೇರೆ ಕಡೆಗಳಲ್ಲಿ ಗೆಲ್ಲುವುದು ಅಸಾಧ್ಯ. ಆದರೂ
ಕಾಂಗ್ರೆಸಿಗೆ ಈ ಎರಡು ಪಕ್ಷಗಳು ಯಾಕೆ ನಿದ್ದೆಗೆಡಿಸಿದೆ?

ಉತ್ತರ ಸಿಂಪಲ್. ಈ ಪಕ್ಷಗಳು ಮುಸ್ಲಿಮರ ಓಟುಗಳನ್ನು ಸೆಳೆಯುತ್ತಿದೆ. ಇದರಿಂದಾಗಿ ಕಾಂಗ್ರೆಸ್‍ಗೆ ಭಾರೀ ದೊಡ್ಡ ಹೊಡೆತ ಬಿದ್ದಿದ್ದು, ಕಾಂಗ್ರೆಸ್‍ಗೆ ಮುಸ್ಲಿಮರಿಂದ ಬರುತ್ತಿದ್ದ ಖಾಯಂ ಓಟುಗಳು ಕೈತಪ್ಪುವಂತಾಗಿದೆ. ಹಿಂದೂಗಳಂತೂ ಕಾಂಗ್ರೆಸ್ ಪಕ್ಷವನ್ನು ದೂರ ಇಡಲಾರಂಭಿಸಿದ್ದು, ಭಾರತ ಕಾಂಗ್ರೆಸ್ ಮುಕ್ತವಾಗುತ್ತಿದೆ. ಮುಸ್ಲಿಮರ ಓಟುಗಳು ಕೈ ಜಾರದಂತೆ ತಡೆಯಲು ಕಾಂಗ್ರೆಸ್ ಸ್ವತಃ ಮುಸ್ಲಿಂ ಮತೀಯ ಪಕ್ಷಗಳ ಜೊತೆಗೆ ಕೈಜೋಡಿಸಿಕೊಂಡು ಮುಸ್ಲಿಮರನ್ನು ಸೆಳೆಯಲು ಭಾರೀ ಕಸರತ್ತು ನಡೆಸುತ್ತಿದೆ.

ಈಗಾಗಲೇ ಕ್ಷೇತ್ರವಿಂಗಡನೆಯ ಕೆಲಸಗಳೂ ನಡೆಯುತ್ತಿದ್ದು, ಅದಕ್ಕಾಗಿ ಮುಸ್ಲಿಮರು ಕೆಲವೊಂದು ಕ್ಷೇತ್ರಗಳಿಗೆ ಡಿಮಾಂಡ್ ಮಾಡಿದ್ದಾರೆ. ಸಚಿವ ರೋಷನ್‍ಬೇಗ್ ಪ್ರತಿನಿಧಿಸುತ್ತಿರುವ ಶಿವಾಜಿನಗರ ಕ್ಷೇತ್ರಕ್ಕಾಗಿ ಎಂಐಎಂ ಮುಖಂಡರು ಡಿಮ್ಯಾಂಡ್ ಮಾಡಿದ್ದಾರೆ. ಅದೇ ರೀತಿ ಎಸ್‍ಡಿಪಿಐ ಮುಖಂಡರು ಕೆಲವು ಕ್ಷೇತ್ರಗಳಿಗೆ ಡಿಮ್ಯಾಂಡ್ ಮಾಡಿದ್ದಾರೆ.

ಅಧಿಕಾರಕ್ಕಾಗಿ ಕಾಂಗ್ರೆಸಿಗರು ಯಾವ ಮಟ್ಟಕ್ಕೂ ಇಳಿಯಬಲ್ಲರು ಎನ್ನುವುದನ್ನು ಈ ಘಟನೆ ಸಾಬೀತುಪಡಿಸಿದೆ. ಮುಸ್ಲಿಮರ ಓಟುಗಳನ್ನು ಕಳೆದುಕೊಳ್ಳುವ
ಭೀತಿಯಿಂದ ಕಟ್ಟರ್ ಮುಸ್ಲಿಮರೊಡನೆ ಕೈ ಜೋಡಿಸುತ್ತಿರುವ ಕಾಂಗ್ರೆಸ್‍ನ ಅಸಲಿ ಬಂಡವಾಳ ಬಟಾಬಯಲಾಗಿದೆ.

– ಚೇಕಿತಾನ

Tags

Related Articles

Close