ಪ್ರಚಲಿತ

ಹೇ ಪ್ರಿಯಾಂಕಾ ಗಾಂಧಿ… ನಿನ್ನ ಜೊತೆ ನಿನ್ನ ಗಂಡನನ್ನೂ ಕರ್ಕೊಂಡು ಬಾ, ಕರ್ನಾಟಕದ ಎಲ್ಲಾ ಸಂಪತ್ತನ್ನು ದೋಚುವಿರಂತೆ…..!

ಇಡೀ ದೇಶವನ್ನೇ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಇದೊಂದು ಮೈಲುಗಲ್ಲು.. ಯಾಕೆ ಗೊತ್ತೆ ಇಷ್ಟು ದಿನ ರಾಹುಲ್ ಗಾಂಧಿ ಒಬ್ಬ ಇಡೀ ದೇಶವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಲು ಹೆಣಗಾಡುತ್ತಿದ್ದ… ಇದೀಗ ರಾಹುಲ್‍ಗೆ ಸಹಾಯವಾಗ್ಲಿ ಅಂತ ಈತನ ಸಹೋದರಿ ಪ್ರಿಯಾಂಕಾ ಗಾಂಧಿಯನ್ನೂ ಕರ್ಕೊಂಡು ಬರ್ತಾರಂತೆ… ಈಕೆಯ ಮುಖ ಥೇಟ್ ಇಂದಿರಾ ಗಾಂಧಿಗೆ ಹೋಲುತ್ತದೆ ಎಂದು, ಇಡೀ ದೇಶದ ಜನರೆಲ್ಲಾ ಆಕೆಯ ನೆನಪನ್ನು ತಂದುಕೊಂಡು ತನ್ನ ಮತವನ್ನು ಕೈಗೆ ಒತ್ತುತ್ತಾರೆಂಬ ಹಗಲು ಕನಸು ಕಾಣುತ್ತಿರುವ ಮಹಾಮಾತೆ ಸೋನಿಯಾಳ ಮಂಡೆಯಲ್ಲಿ ಇಂಥದೊಂದು ಭರ್ಜರಿ ಐಡಿಯಾ ಹೊಳೆದಿದೆ. ಈಕೆಯ ಐಡಿಯಾಕ್ಕೆ ಗುಲಾಮರೆಲ್ಲಾ ತಲೆಯಾಡಿಸುವ ಮೂಲಕ ಒಪ್ಪಿಗೆ ಸೂಚಿಸಿದ್ದಾರಂತೆ…

ಅಂತಹಾ ಭರ್ಜರಿ ಐಡಿಯಾ ಏನು ಗೊತ್ತೇ? ಕಾಂಗ್ರೆಸ್ ಪಕ್ಷದ ಪಟ್ಟವನ್ನು ಡಿಸೆಂಬರ್‍ನಲ್ಲಿ ಅಲಂಕರಿಸಲು ರಾಹುಲ್ ಗಾಂಧಿ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಈತನ ಸಹೋದರಿ ಪ್ರಿಯಾಂಕ ಗಾಂಧಿಗೂ ಪಕ್ಷದ ಪ್ರಮುಖ ಸ್ಥಾನವನ್ನು ನೀಡಲು ಎಐಸಿಸಿ ಮುಂದಾಗಿದೆಯಂತೆ… ಜೊತೆಗೆ ಕರ್ನಾಟಕದ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ಚುನಾವಣಾ ಜವಾಬ್ದಾರಿಯನ್ನು ವಹಿಸಲು ಪ್ರಿಯಾಂಕ ಗಾಂಧಿಗೆ ವಹಿಸಲು ಪಕ್ಷದ ಹಿರಿಯ ನಾಯಕರು ಸಲಹೆ ನೀಡಿದ್ದಾರಂತೆ… ಪಕ್ಷದ ಹಿರಿಯ ನಾಯಕರು ಬೇರ್ಯಾರೂ ಅಲ್ಲ.. ಅದು ಸೋನಿಯಾ ಗಾಂಧಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಕಾಂಗ್ರೆಸಿಗರಿಗೆ ನಾಚಿಕೆ ಎಂಬುವುದಿಲ್ಲವೇ? ಎಷ್ಟು ದಿನ ಅಂತಾ ಈ ದಾಸ್ಯದಲ್ಲೇ ಮುಳುಗುತ್ತಾರೆ? ಯಾವಾಗ ಈ ಇಟಲಿ ಕುಟುಂಬದ ಪಾದ ನೆಕ್ಕುವುದನ್ನು ಕಡಿಮೆ ಮಾಡ್ತಾರೆ? ಇವರಿಗೆ ಯಾವಾಗ ದಾಸ್ಯದಿಂದ ಮುಕ್ತಿ ಸಿಗುತ್ತದೆ? ಏನೇ ಆಗ್ಲಿ ಇಷ್ಟರವರೆಗೆ ಕಾಂಗ್ರೆಸ್‍ನ ಪರಂಪರಾಗತವಾಗಿ ಬಂದಂತಹ ಪರಂಪರೆ ಇವಳಿಂದಾನೆ ಕೊನೆಯಾಗಲಿ. ಇಂದಿರಾ ಖಾನ್ ವಂಶದ ದುರಾಡಳಿತಕ್ಕೆ ಕೊನೆಗೂ ಅಂಕಿತ ಬೀಳಲಿ.. ಇವರ ಕುಟುಂಬಿಕರೆಲ್ಲಾ ದೋಚಿಕೊಂಡು ಪೇರಿಸಿಟ್ಟ ಸಂಪತ್ತೆಲ್ಲಾ ಬಯಲಾಗಲಿ… ಕರ್ನಾಟಕದ ವಿಧಾನಸಭೆಯನ್ನೇ ಮನೆಮಾಡಲು ಚಿಂತಿಸಿದ್ದ ಈಕೆಯ ಕನಸು ನುಚ್ಚುನೂರಾಗಲಿ…

ಪ್ರಿಯಾಂಕಾಳ ಗಂಡ ರಾಬರ್ಟ್ ವಾದ್ರಾ ಇಡೀ ದೇಶವನ್ನೇ ನುಂಗಿ ನೀರು ಕುಡಿದ ಎಂದು ಇಡೀ ದೇಶದ ಜನತೆಗೆ ಗೊತ್ತಿದೆ. ರಾಬರ್ಟ್ ವಾದ್ರಾ ಶಾಮೀಲಾಗಿರುವ ಬಿಕಾನೇರ್ ಭೂ ಕಬಳಿಕೆ ಹಗರಣ, ಹಣ ದುರುಪಯೋಗ ಹಗರಣದ ಬಗ್ಗೆ ತನಿಖೆ ನಡೆಸಲು ಸಿಬಿಐ ಮುಂದಾಗಿದೆ. ರಾಬರ್ಟ್ ವಾದ್ರಾನ ಭೂಹಗರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ತನಿಖೆ ನಡೆಯುತ್ತಿದೆ. ಹರ್ಯಾಣ, ರಾಜಸ್ಥಾನ ಮುಂದಾದ ರಾಜ್ಯಗಳಿಗೂ ಈತನ ಹಗರಣ ಹಬ್ಬಿಕೊಂಡಿದೆ. ಇದೀಗ ಕರ್ನಾಟಕದ ಮುಂದಿನ ವಿಧಾನ ಸಭಾ ಚುನಾವಣೆಯಂದಯ ಪ್ರಿಯಾಂಕಾಳನ್ನು ಮುಂದೆ ತಂದು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರವನ್ನು ಮರುಸ್ಥಾಪಿಸಲು ಸೋನಿಯಾ ಹೆಣಗಾಡುತ್ತಿದ್ದು, ಅದಕ್ಕಾಗಿ ತನ್ನ ಮುದ್ದಿನ ಕುವರ ಪಪ್ಪುವನ್ನು ಪಕ್ಕಕ್ಕೆ ಸರಿಸಿ ಪ್ರಿಯಾಂಕಾಳನ್ನು ಮುಂದೆ ತರಲು ಮುಂದಾಗಿದ್ದಾಳೆ..

ಹೇ ಪ್ರಿಯಾಂಕಾ ಗಾಂಧಿ… ನಿನ್ನ ಜೊತೆ ನಿನ್ನ ಗಂಡನನ್ನೂ ಕರ್ಕೊಂಡು ಬಾ, ಕರ್ನಾಟಕದ ಎಲ್ಲಾ ಸಂಪತ್ತನ್ನು ದೋಚುವಿರಂತೆ…..! ಆದರೆ ಈ ರೀತಿ ದೋಚುವ ಯೋಚನೆಗೆ ಕರ್ನಾಟಕದ ಜನತೆ ಮಾತ್ರ ಅವಕಾಶ ನೀಡುವುದಿಲ್ಲ ಎನ್ನುವುದನ್ನು ಮಾತ್ರ ಮರೆಯಬೇಡಿ…

ಆದರೆ ಈ ಕಾಂಗ್ರೆಸ್ ಪಾರ್ಟಿ ಆಫ್ ಸೋನಿಯಾ ಗಾಂಧಿಗೆ ಈ ವಿಷ್ಯ ಮಾತ್ರ ಮಂಡೆಗೆ ಹೊಳೆಯದಿರುವುದು ಮಾತ್ರ ವಿಪರ್ಯಾಸ. ಯಾಕೆಂದರೆ ಈ ಕಾಂಗ್ರೆಸ್‍ನಲ್ಲಿ ಇಂದಿರಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಗುಲಾಮರು ಎಷ್ಟೋ ಇರಬಹುದು. ಆದರೆ ಇಂದಿರಾ ಕಾಲದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮತದಾರರಿದ್ದಾರೆಯೇ? ಇನ್ನುಳಿದಿರುವ ಮತದಾರರು ಕಾಂಗ್ರೆಸ್ ಪಕ್ಷವನ್ನ ಗೆಲುವಿನ ಸನಿಹಕ್ಕೆ ಕರೆದುಕೊಂಡು ಹೋಗುವುದು ಅಷ್ಟರಲ್ಲೇ ಇದೆ. ಯಾಕೆಂದರೆ ನೆಹರೂ ಫ್ಯಾಮಿಲಿ ಮಾಡಿದ ಅನಾಚಾರವನ್ನು ಇಡೀ ಮತದಾರರೇ ಅರ್ಥೈಸಿಕೊಂಡಿದ್ದಾರೆ. ಆದ್ದರಿಂದ ಕರ್ನಾಟಕ ನಾಲ್ಕು ಭಾಗಗಳಲ್ಲಿ ಪ್ರಿಯಾಂಕ ವಾದ್ರಾ ಪ್ರಚಾರ ಮಾಡುವುದರಿಂದ ಆಗುವ ಪರಿಣಾಮ ಬಿಜೆಪಿಗೆ ಸರಳ ಬಹುಮತ ಬರುವ ಸಾಧ್ಯತೆ ಇತ್ತು..

ಪಾಪ ಈ ಪಪ್ಪು ಬಾಯಿಬಡಿದುಕೊಂಡದ್ದೇ ಬಂತು… ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎ.ಕೆ. ಆಂಟನಿ ಹಾಗೂ ಅಹ್ಮದ್ ಪಟೇಲ್ ಸೇರಿ ಪಿಯಾಂಕಾಳಿಗೆ ಕಾಂಗ್ರೆಸ್‍ನ ಪಟ್ಟ ಕಟ್ಟುವ ಯೋಚನೆಯಲ್ಲಿದ್ದಾರೆ. ಅಸಲಿಗೆ ಇದು ಸೋನಿಯಾಳದ್ದೇ ಯೋಚನೆ. ತನ್ನ ಆಲೋಚನೆಯನ್ನು ತನ್ನ ಗುಲಾಮರ ಬಾಯಿಯಲ್ಲಿ ಹೇಳಿಸಿದ್ದಾಳಷ್ಟೆ. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಮಾತುಕತೆ ನಡೆಸಿದ್ದ ಕರ್ನಾಟಕ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪ್ರಿಯಾಂಕಾಳನ್ನು ಪ್ರಚಾರಕ್ಕೆ ಬಳಸಿಕೊಂಡರೆ ಪಕ್ಷಕ್ಕೆ ಆಗುವ ಅನುಕೂಲಗಳನ್ನು ಮನದಟ್ಟು ಮಾಡಿಕೊಟ್ಟಿದ್ದರಂತೆ..

ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂಬರ್ ವನ್ ಪಟ್ಟಕ್ಕೇರಿಸಿದ ಕೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ಸಲ್ಲುತ್ತದೆ. ಈ ಸರಕಾರ ಯಾವಾಗ ತೊಲಗುತ್ತದೋ ಎಂದು ಜನರೆಲ್ಲಾ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇಂಥಹಾ ಸಂದರ್ಭದಲ್ಲಿ ಥೇಟ್ ಇಂದಿರಾ ಗಾಂಧಿ ಮುಖವನ್ನು ಹೋಲುವ ಪ್ರಿಯಾಂಕಳನ್ನು ಮುಂದಿಟ್ಟುಕೊಂಡು ಜನರನ್ನು ಮಂಗ ಮಾಡಲು ಕಾಂಗ್ರೆಸಿಗರ ಆಲೋಚನೆ. ಈಕೆಯ ಗಂಡ ಬಿಲಿಯನ್‍ಗಟ್ಟಲೆ ಭ್ರಷ್ಟಾಚಾರದಲ್ಲಿ ತೊಡಗಿರುವುದು ಇದೀಗಲೇ ಜಹಜಗ್ಗೀರು ಆಗಿರುವುದರಿಂದ ಯಾರೇ ಆಗಲಿ ಪ್ರಜ್ಞಾವಂತ ಮತದಾರ ಖಂಡಿತಾ ಕಾಂಗ್ರೆಸ್‍ಗೆ ಮತ ಹಾಕಲಾರ.

2004ರಲ್ಲಿ ಸಂಸದರಾದ ಬಳಿಕ ರಾಹುಲ್ ಗಾಂಧಿ 2007ರಲ್ಲಿ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದ. ಇದಾದ ಬಳಿಕ 2013ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಈ ಮೂಲಕ ನೆಹರೂನ ವಂಶವಾಹಿ ಆಡಳಿತಕ್ಕೆ ಸೋನಿಯಾ ನಾಂದಿ ಹಾಡಿದ್ದಳು. ಪಕ್ಷದ ಪ್ರಧಾನ ಹುದ್ದೆಗಾಗಿ ಕನಸು ಕಾಣುತ್ತಿದ್ದ ಮಲ್ಲಿಕಾರ್ಜುನ ಖರ್ಗೆ, ಕಪಿಲ್‍ಸಿಬಲ್‍ನಂಥಾ ಹಿರಿಯ ಮುಖಂಡರೆಲ್ಲಾ ಕನಸು ಭಗ್ನಗೊಂಡಿತ್ತು. ಸೋನಿಯಾಳ ಕುಟುಂಬ ಹೊರತುಪಡಿಸಿ ಪಕ್ಷದ ಪ್ರಮುಖ ಹುದ್ದೆ ತನಗೆ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಈ ಗುಲಾಮಿ ಕಾಂಗ್ರೆಸಿಗರೆಲ್ಲಾ ಸೋನಿಯಾಳ ಪಾದ ನೆಕ್ಕುವುದನ್ನು ಬಿಡಲಿಲ್ಲ. ಮುಂದೆ ಪ್ರಿಯಾಂಕಾಳ ಮಕ್ಕಳು ಕಾಂಗ್ರೆಸ್‍ನ ಪ್ರಧಾನ ಹುದ್ದೆ ಅಲಂಕರಿಸಿದರೂ ಈ ಗುಲಾಮರು ಅವರಿಗೂ ಜೈಕಾರ ಹಾಕುತ್ತಾ ದಾಸ್ಯದಿಂದ ಮುಳುಗುವುದನ್ನು ಮರೆಯುವುದಿಲ್ಲ.

ಸೋನಿಯಾಳ ಅಳಿಯ ರಾಬರ್ಟ್ ವಾದ್ರಾ ಎಲ್ಲೋ ಒಂದು ಕಡೆ ಡೆವಲಪರ್ ಆಗಿದ್ದ. ಈತನ ತಂದೆ ಪಾಕಿಸ್ತಾನದ ಸಿಯಾಲ್ ಕೋಟಾದಿಂದ ಬಂದವರು. ಬರೇ ಹತ್ತನೇ ತರಗತಿ ಓದಿರುವ ರಾಬರ್ಟ್ ವಾದ್ರಾನನ್ನು ಪ್ರಿಯಾಂಕ 1997ರಲ್ಲಿ ವಿವಾಹವಾದ. ಇವರಿಗೆ ರಿಹಾನ್(ಪುತ್ರ) ಹಾಗೂ ಮಿರಯಾ(ಪುತ್ರಿ) ಎಂಬ ಇಬ್ಬರು ಮಕ್ಕಳಿದ್ದಾರೆ.

ಗಮನಾರ್ಹವೆಂದರೆ ತಮ್ಮ ಮಗ ರಾಬರ್ಟ್, ಪ್ರಿಯಾಂಕಾ ಗಾಂಧಿಯನ್ನು ವರಿಸುವುದು ತಂದೆ ರಾಜೇಂದ್ರಗೆ ಸುತರಾಂ ಇಷ್ಟವಿರಲಿಲ್ಲ. ಹಾಗಾಗಿ ಮಗನನ್ನು ಕುಟುಂಬದಿಂದ ದೂರವಿಟ್ಟಿದ್ದರು. 2001ರಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿದ್ದ ರಾಬರ್ಟ್, ತನ್ನ ತಂದೆ ರಾಜೇಂದ್ರ ಮತ್ತು ಸೋದರ ರಿಚರ್ಡ್ ಅವರುಗಳು ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಜನತೆಗೆ ಎಚ್ಚರಿಕೆ ನೀಡಿದ್ದರು. ಇದಕ್ಕಾಗಿ ಮುಂದೆ ರಾಜೇಂದ್ರ, ತಮ್ಮ ಪುತ್ರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.

ಇದಾದ ಬಳಿಕ ರಾಬರ್ಟ್ ವಾದ್ರಾ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿದವು. 2009ರಲ್ಲಿ ನವದೆಹಲಿಯ ಯೂಸುಫ್ ಸರಾಯ್ ಪ್ರದೇಶದಲ್ಲಿರುವ ಗೆಸ್ಟ್ ಹೌಸ್ ಒಂದರಲ್ಲಿ ರಾಬರ್ಟ್ ವಾದ್ರಾ ತಂದೆ ರಾಜೇಂದ್ರ ಅವರು ಸತ್ತುಬಿದ್ದಿದ್ದರು. ಮುಂದೆ 2003ರಲ್ಲಿ ರಾಬರ್ಟ್ ವಾದ್ರಾ ಅಣ್ಣ ರಿಚರ್ಡ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂದೆ ರಾಬರ್ಟ್ ವಾದ್ರಾ ಸೋದರಿ ಮಿಷೆಲ್ 2001ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟರು. ರಾಬರ್ಟ್ ವಾದ್ರಾ ಕೋಟಿಗಟ್ಟಲೆ ಭೂಹಗರಣದಲ್ಲಿ ಸಿಕ್ಕಿಬಿದ್ದಿದ್ದ. ಒಟ್ಟಾರೆ ವಾದ್ರಾನನ್ನು ಮುಂದಿಟ್ಟು ಇಡೀ ದೇಶವನ್ನೇ ಸೋನಿಯಾ ಕುಟುಂಬ ಲೂಟಿ ಹೊಡೆದಿತ್ತು.

ಕಾಂಗ್ರೆಸ್‍ನ ಅನಾಚಾರ ಇಡೀ ದೇಶಕ್ಕೇ ಗೊತ್ತಾಗಿದೆ. ಸೋನಿಯಾ ಕುಟುಂಬದ ಅನಾಚಾರಗಳನ್ನು ಸುಬ್ರಹ್ಮಣಿಯನ್ ಸ್ವಾಮಿ ಒಂದೊಂದಾಗಿಯೇ ಬಯಲಿಗೆಳೆಯುತ್ತಾ ಕಾನೂನು ಸಮರ ನಡೆಸುತ್ತಿದ್ದಾರೆ. ಇತ್ತ ನರೇಂದ್ರ ಮೋದಿ ಸರಕಾರ ನೆಹರೂ ಕುಟುಂಬವನ್ನು ಮಟ್ಟಹಾಕಿ ದೇಶವನ್ನು ಮುನ್ನಡೆಸುತ್ತಿದ್ದು, ಒಂದೊಂದೇ ಕಾಯಿದೆಯ ಮೂಲಕ ಭ್ರಷ್ಟರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾರೆ.

ಇಂತಹಾ ಸಂದರ್ಭದಲ್ಲಿ ಭ್ರಷ್ಟಾಚಾರ ಕಳಂಕ ಪ್ರಿಯಾಂಕಾ ರಾಬರ್ಟ್ ವಾದ್ರಾನನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸಿದ್ದೇ ಆದರೆ ಕಾಂಗ್ರೆಸ್ ಮಕಾಡೆ ಮಲಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಪರಂಪರಾಪೀಡಿತ ದಾಸ್ಯದ ಆಡಳಿತ ಪಪ್ಪು ಹಾಗೂ ಪ್ರಿಯಾಂಕಾಳ ಅವಧಿಯಲ್ಲೇ ಕೊನೆಗೊಂಡು ಈ ದೇಶ ಕಾಂಗ್ರೆಸ್ ಮುಕ್ತವಾಗಲಿ ಎನ್ನುವುದೇ ಪ್ರಜ್ಞಾವಂತ ಜನರ ಆಗ್ರಹವೂ ಆಗಿದೆ…

source:http://publictv.in/is-priyanka-gandhi-up-for-elevation-too/

-ಚೇಕಿತಾನ

Tags

Related Articles

Close