ಪ್ರಚಲಿತ

2019 ಲೋಕಸಭೆ ಚುನಾವಣೆಯ ಬಹುದೊಡ್ಡ ಸಮೀಕ್ಷೆ! ಕರ್ನಾಟಕದಲ್ಲಿ 28 ರಲ್ಲಿ 22 ! ಭಾರತದಲ್ಲೆಷ್ಟು?!

ನರೇಂದ್ರ ಮೋದಿ ಪ್ರಧಾನಿಯಾಗಿ ನಾಲ್ಕು ವರ್ಷಗಳೇ ಕಳೆದು ಹೋಗಿವೆ! ದೇಶದ ಆರ್ಥಿಕತೆಯ ಏಳಿಗೆಯಲ್ಲಿ, ಅಭಿವೃದ್ಧಿ ವಿಚಾರದಲ್ಲಿ ಎಷ್ಟು ಬೆಂಬಲ
ಸಿಕ್ಕಿದೆಯೋ, ಅಷ್ಟೇ ಸುಖಾಸುಮ್ಮನೆ ಸೆಕ್ಯುಲರ್ ಗಳ ಅಜ್ಞಾನಕ್ಕೆ ಆರೋಪವನ್ನೂ ಕೇಳಿಸಿಕೊಂಡು ಸುಮ್ಮನಾಗಿದ್ದಾರೆ! ಕಳೆದ ನಾಲ್ಕು ವರ್ಷಗಳಲ್ಲಿ ರಾಜಕೀಯ ರಣತಂತ್ರದ ಮೂಲಕ ನೆರೆ ರಾಷ್ಟ್ರಗಳನ್ನು ಹಿಂದೆ ಸರಿಯುವಂತೆ ಮಾಡಿದ್ದಲ್ಲದೇ, ದೇಶದಲ್ಲೊಂದು ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ!

ನೋಟು ನಿಷೇಧ, ಜಿಎಸ್ ಟಿ ತೆರಿಗೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ,. ಯೆಲ್ಲ ಭಾರತದ ಅಭಿವೃದ್ಧಿಗೆ ಪೂರಕವಾಗಿಯೇ ಇದ್ದರೂ, ರಾತ್ರೋ ರಾತ್ರಿ ಹುಟ್ಟಿದ ಆರ್ಥಿಕ ತಜ್ಞರು, ಭಾರತದ ಆರ್ಥಿಕ ಮಾರುಕಟ್ಟೆಯನ್ನು ದಿವಾಳಿ ಎಬ್ಬಿಸುತ್ತಿದ್ದಾರೆ ಎಂದು ಬೊಬ್ಬರಿದ್ದರು! ಆದರೆ, ರಿಪಬ್ಲಿಕ್ ನಡೆಸಿದ ಸಿ – ವೋಟರ್ ಸಮೀಕ್ಷೆ ಯೊಂದು ಮೋದಿಯ ಭವಿಷ್ಯವನ್ನು ಬಿಚ್ಚಿಟ್ಟಿದೆ!

ಅಷ್ಟಕ್ಜೂ, ಯಾವ್ಯಾವ ರಾಜ್ಯಗಳಲ್ಲಿ ಯಾರ್ಯಾರಿಗೆ ಎಷ್ಡು?!

ಕಳೆದ ಬಾರಿಯಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬರುವುದು ಎನ್ ಡಿಎ ಸರಕಾರ!

ಛತ್ತೀಸ್ ಘರ್ ನಲ್ಲಿ ಕಳೆದ ಬಾರಿ 1 ಸೀಟು ಗೆದ್ದಿದ್ದ ಯುಪಿಎ ಈ ಸಲ ಆರು ಹೆಚ್ಚುವರಿ ಸೀಟುಗಳನ್ನು ಗೆಲ್ಲಲಿದೆಯಾದರೆ, ಎನ್ ಡಿಎ ಗೆ ಸೋಲುಂಟಾಗಲಿದೆ.

 

ಚಂಢೀಘರ್ ನಲ್ಲಿ ಕಳೆದ ಬಾರಿಯಂತೆ ಈಗಲೂ ಎನ್ ಡಿ ಎ ಸರಕಾರ ಹಿಡಿತ ಸಾಧಿಸಲಿದೆ!

 

https://pbs.twimg.com/media/DT05a08V4AEhL00.jpg

ಅಸ್ಸಾಮಿನಲ್ಲಿ ಎನ್ ಡಿ ಎ ಗೆ 9 ಸೀಟುಗಳು ಸಿಗಲಿದೆ! ಯುಪಿಎ ತನ್ನ ಗದ್ದುಗೆ ಕಳೆದುಕೊಳ್ಳಲಿದೆ.

 

ಅರುಣಾಚಲ ಪ್ರದೇಶದಲ್ಲಿ ಎರಡೂ ಸೀಟುಗಳು ಎನ್ ಡಿ ಎ ಪಾಲಾಗಲಿವೆ.

 

ಬಿಹಾರದಲ್ಲಿ, ಎನ್ ಡಿ ಎ ಕಳೆದ ಬಾರಿಗಿಂದ ಐದು ಹೆಚ್ವುವರಿ ಸೀಟುಗಳನ್ನು ಪಡೆದುಕೊಳ್ಳಲಿದೆ. ಯುಪಿಎ ತನ್ನ ಮೂರು ಸೀಟುಗಳನ್ನು
ಕಳೆದುಕೊಳ್ಳಲಿದೆ.

 

ಆಂದ್ರ ಪ್್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಯ ಪಕ್ಷ ಸ್ವತಂತ್ರ್ಯವಾಗಿ 13 ಸೀಟುಗಳನ್ನು ಗಳಿಸಿಕೊಂಡರೆ, ಎನ್ ಡಿ ಎ 12 ಸೀಟುಗಳನ್ನು ಪಡೆದುಕೊಳ್ಳಲಿ್ದೆ. ಯುಪಿಎಗೆ ಒಂದು ಸೀಟಿನ ಭರವಸೆಯೂ ಇಲ್ಲ!

 

ದಾದ್ರಾ ನಗರ ಮತ್ತು ಹವೇಲಿಯಲ್ಲಿ, ದಮನ್ ಮತ್ತು ದಿಯು ನಲ್ಲಿ ಎನ್ ಡಿ ಎ ಗೆ ಜಯ ದೊರಕಲಿದೆ.

 

ದೆಹಲಿಯಲ್ಲಿ ಏಳಕ್ಕೆ ಏಳೂ ಸೀಟುಗಳೂ ಎನ್ ಡಿ ಎ ಗೆ!

 

ಗೋವಾದಲ್ಲಿ ಎನ್ ಡಿಎ ಗೆ ಎರಡೂ ಸೀಟುಗಳನ್ನು ಗೆಲ್ಲಲಿದೆ.

 

ಗುಜರಾತಿನಲ್ಲಿ ಎನ್ ಡಿ ಎ ಮೂರು ಸೀಟುಗಳನ್ನು ಕಳೆದುಕೊಂಡರೆ, ಯುಪಿಎ ಮೂರು ಸೀಟುಗಳನ್ನು ಗಳಿಸಲಿದೆ.

 

ಹರ್ಯಾಣಾದಲ್ಲಿ ಎನ್ ಡಿ ಎ ಗೆ ಎಂಟು ಸೀಟುಗಳ ಬೆಂಬಲ ದಕ್ಕಲಿದೆ.

 

ಹಿಮಾಚಲ ಪ್ರದೇಶದಲ್ಲಿ ನಾಲ್ಕೂ ಸೀಟುಗಳನ್ನು ವಶ ಪಡೆಯಲಿದೆ ಎನ್ ಡಿ ಎ.

 

ಜಮ್ಮು ಕಾಶ್ಮೀರದಲ್ಲಿ ಕಳೆದ ಬಾರಿಗಿಂತ ಎರಡು ಸೀಟುಗಳನ್ನು ಕಳೆದುಕೊಳ್ಳಲಿದೆ ಎನ್ ಡಿಎ.

 

ಝಾರ್ಕಂಡ್ ನಲ್ಲಿ ಎನ್ ಡಿ ಎ ಐದು ಸೀಟುಗಳನ್ನು ಕಳೆದುಕೊಳ್ಳಲಿದೆ.

 

ಕರ್ನಾಟಕದಲ್ಲಿ ಐದು ಹೆಚ್ಚುವರಿ ಸೀಟು ಪಡೆದುಕೊಳ್ಳಲಿದೆ ಎನ್ ಡಿ ಎ. ಕೇರಳದಲ್ಲಿ, ಎನ್ ಡಿ ಎ ಗೆ ಸಿಗಲಿರುವುದು ಕೇವಲ 1!

 

ಕೇರಳದಲ್ಲಿ, ಎನ್ ಡಿ ಎ ಗೆ ಸಿಗಲಿರುವುದು ಕೇವಲ 1!

ಮಧ್ಯಪ್ರದೇಶದಲ್ಲಿ ಎನ್ ಡಿ ಎ ಗೆ ಸಿಗಲಿರುವುದು 23 ಸೀಟುಗಳು ಮಾತ್ರ.

ಲಕ್ಷದ್ವೀಪದಲ್ಲಿ ಯುಪಿಎ ಗೆ ಜೈ ಎನ್ನಲಿರುವ ಪ್ರಜೆಗಳು!

 

ಮಹಾರಾಷ್ಟ್ರದಲ್ಲಿ ಎನ್ ಡಿ ಎ ಗೆ ಸಿಗಲಿರುವುದು 44 ಸೀಟುಗಳು ಮಾತ್ರ.

ಓಡಿಸ್ಸಾದಲ್ಲಿ, ಹೆಚ್ಚುವರಿ 12 ಸೀಟುಗಳನ್ನು ಪಡೆದುಕೊಳ್ಳಲಿದೆ ಎನ್ ಡಿ ಎ ಸರಕಾರ!

 

ನಾರ್ತ್ ಈಸ್ಟ್ ನ ಅಷ್ಟೂ ಸೀಟುಗಳು ಈ ಸಲ ಎನ್ ಡಿ ಎ ಸರಕಾರಕ್ಕೆ!

 ಪುದುಚೇರಿಯಲ್ಲಿ ಎನ್ ಡಿ ಎ ಗೆ ಸೋಲಾಗಲಿದೆ

ಪಂಜಾಬಿನಲ್ಲಿ, ಯುಪಿಎ ಸರಕಾರ 6 ಹೆಚ್ಚುವರಿ ಸೀಟುಗಳನ್ನು ಗಳಿಸಿದರೆ, ಎನ್ ಡಿಎ, ಕಳೆದ ಬಾರಿಗಿಂತ 4 ಸೀಟುಗಳನ್ನು ಕಳೆದುಕೊಳ್ಳಲಿದೆ!

ರಾಜಸ್ಥಾನದಲ್ಲಿ, ಐದು ಸೀಟುಗಳನ್ನು ಕಳೆದುಕೊಳ್ಳಲಿದೆ ಎನ್ ಡಿ ಎ!

ಕರ್ನಾಟಕದಲ್ಲೇನಾಗಲಿದೆ ಗೊತ್ತಾ?!

ಲೋಕಸಭಾ ಚುನಾವಣೆ ನಡೆದರೆ ರಾಜ್ಯದಲ್ಲಾಗಿದೆ ಸಂಚಲನ!

ಕರ್ನಾಟಕದಲ್ಲಿ ಕಳೆದ ಬಾರಿಗಿಂತಲೂ ಸಹ ಎನ್ ಡಿ ಎ ಸರಕಾರ ಐದುವರಿ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳಲಿದೆ! ಯುಪಿಎ ನಾಲ್ಕು ಸೀಟುಗಳನ್ನು ಕಳೆದುಕೊಳ್ಳಲಿದೆ.

ಕಾಂಗ್ರೆಸ್ ಸರ್ಕಾರದ ಮಧ್ಯೆಯೇ ತೂರಿಕೊಂಡು ಬಂದಿತ್ತು ಬಿಜೆಪಿ-ವಿಲೀನವಾಗಿತ್ತು ಕೆಜೆಪಿ…

ಕಳೆದ 2013ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ \ಯಡಿಯೂರಪ್ಪನವರು ಭಾರತೀಯ ಜನತಾ ಪಕ್ಷವನ್ನು ತ್ಯಜಿಸಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸ್ಥಾಪಿಸಿ ಕಮಲ ಪಾಳಯಕ್ಕೆ ಭಾರೀ ಆಘಾತವನ್ನು ನೀಡಿದ್ದರು. ಹೀಗಾಗಿಯೇ ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಆದರೆ ಅದರ ಬೆನ್ನಲ್ಲೇ, ಅಂದರೆ 2014ರ ಲೋಕ ಸಭಾ ಚುನಾವಣೆಯಲ್ಲಿ ಅದೇ ಬಿಎಸ್ ಯಡಿಯೂರಪ್ಪನವರ ಕೆಜೆಪಿ ಪಕ್ಷ ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನವಾಗಿತ್ತು. ಬಿಜೆಪಿಗೆ ಮತ್ತೆ ಬಲ ಬಂದಿತ್ತು. ಅತ್ತ ಯಡಿಯೂರಪ್ಪನವರ ಬಲ, ಇತ್ತ ಮೋದಿ ಅಲೆ ಎರಡೂ ಕೆಲಸ ಮಾಡಿತ್ತು.

ಹೀಗಾಗಿ ಅಂದು ನಡೆದ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 19 ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ ಬಾಚಿತ್ತು. ಕೆಲವು ಕ್ಷೇತ್ರಗಳಲ್ಲಿ ಕೆಲವೇ ಕೆಲವು ಮತಗಳ ಅಂತರದಲ್ಲಿ ಸೋತಿತ್ತು. ಚಿಉಕ್ಕಬಳ್ಳಾಪುರದಲ್ಲಿ ಬಿಜೆಪಿಯ ಬಚ್ಚೇ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸ್ಪರ್ಧಿಸಿದ್ದರಿಂದ ಗೌಡ ಸಮಾಜದ ಮತ ವಿಭಜನೆಯಿಂದಾಗಿ ವೀರಪ್ಪ ಮೂಯಿಲಿಯವರು ಕೇವಲ 4000 ಮತಗಳ ಜಯ ಗಳಿಸಿದ್ದರು. ಹೀಗೆ ಅನೇಕ ಸ್ಥಾನಗಳೂ ಇದೇ ರೀತಿ ಬಿಜೆಪಿಗೆ ನಷ್ಟವಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೂ ಅಂದು ಮೋದಿ ಅಲೆಗೆ ಕಾಂಗ್ರೆಸ್ ಕೊಚ್ಚಿ ಹೋಗಿತ್ತು. ಈಗ ಮುಂದಿನ ಚುನಾವಣೆಯಲ್ಲಿ 22 ಸ್ಥಾನಗಳನ್ನು ಕರ್ನಾಟಕ ನೀಡಲಿದೆ ಎಂದು ಸಮೀಕ್ಷೆ ನುಡಿದಿದ್ದೆ ಅದನ್ನು ಅಲ್ಲಗಳೆಯುವಂತಿಲ್ಲ.

ಒಟ್ಟಾರೆಯಾಗಿ, ಎನ್ ಡಿ ಎ ಸರಕಾರ 335 ಸೀಟುಗಳನ್ನು ಗಳಿಸಿದರೆ, ಯುಪಿಎ ಸರಕಾರ 89 ಸೀಟುಗಳನ್ನಷ್ಟೇ ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ವರದಿ ನೀಡಿದೆ! ಇದಷ್ಟನ್ನೂ ನೋಡಿದರೆ . ,ಒಟ್ಟಾರೆಯಾಗಿ 2019 ರ ಚುನಾವಣೆಯಲ್ಲಿ ಮತ್ತೆ ಪ್ರಧಾನ ಮಂತ್ರಿಯಾಗುವುದು ಮೋದಿಯೇ ಎಂಬುದು ಸಾಬೀತಾಗಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close