ಪ್ರಚಲಿತ

2024 ಜನವರಿ 25: ಅಯೋಧ್ಯೆಯ ಭವ್ಯ ಮಂದಿರದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾನೆ ಪ್ರಭು ಶ್ರೀರಾಮ

ಅಯೋಧ್ಯೆಯಲ್ಲಿ ಬಹು ಕೋಟಿ ಜನರ ಆರಾಧ್ಯ ಮೂರ್ತಿ ಶ್ರೀರಾಮ ಭಕ್ತ ಜನರಿಗೆ ದರ್ಶನ ನೀಡುವ ಸಮಯ ಸನ್ನಿಹಿತವಾಗಿದೆ. ಇತಿಹಾಸದ ಪುಟಗಳಲ್ಲಿ, ಪುರಾಣ ಕಥೆಗಳಲ್ಲಿ, ಭಕ್ತರ ಹೃದಯದಲ್ಲಿ ಮಾತ್ರವೇ ಕಾಣುತ್ತಿದ್ದ ಶ್ರೀರಾಮ, ಮುಂದಿನ ವರ್ಷ ತನ್ನ ಜನ್ಮ ಭೂಮಿಯಲ್ಲಿ ವಿರಾಜಮಾನನಾಗಿ ಸರ್ವರನ್ನೂ ಹರಸಲಿದ್ದಾನೆ ಎನ್ನುವುದು ಸಂತಸದ ವಿಷಯ.

ಬಾಬ್ರಿ ಮಸೀದಿಯ ಅಡಿಯಲ್ಲಿ ಹುಡುಗಿ ಹೋಗಿದ್ದ ಶ್ರೀರಾಮ ಜನ್ಮ ಭೂಮಿಯ ಕುರುಹುಗಳು ಮತ್ತೆ ಜೀವ ಪಡೆದು, ಈ ಮಣ್ಣಿನ ಸಾರವನ್ನು ಜಗತ್ತಿಗೆ ಸಾರುವಂತಾಗುವ ದಿನಗಳಿಗೆ ಭಕ್ತ ಮಾನಸವೂ ಕಾತರದಿಂದ ಕಾಣುತ್ತಿದೆ. ಹಲವು ರಾಮ ಭಕ್ತರ ತ್ಯಾಗ, ಬಲಿದಾನಕ್ಕೆ ‌ಫಲ ದೊರೆತಂತೆ ಶ್ರೀರಾಮ ತನ್ನ ಜನ್ಮಸ್ಥಳದಲ್ಲಿಯೇ ಭಕ್ತರಿಗೆ ಮತ್ತೆ ದರ್ಶನ ಭಾಗ್ಯ ಕರುಣಿಸಲಿರುವುದು ಕೋಟ್ಯಾನುಕೋಟಿ ಭಾರತೀಯರ ಹರ್ಷಕ್ಕೆ ಕಾರಣವಾಗಿದೆ ಎಂದರೂ ತಪ್ಪಾಗಲಾರದು.

ಮುಂದಿನ ವರ್ಷ ಜನವರಿ ೧೪ ರ ಮಕರ ಸಂಕ್ರಾಂತಿ ದಿನದಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಗರ್ಭಗೃಹದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯುವುದಾಗಿ ಆಡಳಿತ ಸಮಿತಿ, ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಮಾಹಿತಿ ನೀಡಿವೆ. ಹಾಗೆಯೇ ಮಂದಿರ ನಿರ್ಮಾಣ ಕಾರ್ಯಗಳು ಸಹ ಭರದಿಂದ ಸಾಗುತ್ತಿದೆ. ಜನವರಿ ವೇಳೆಗೆ ನಿರ್ಮಾಣ ಕಾರ್ಯಗಳೆಲ್ಲವನ್ನೂ ಸಂಪೂರ್ಣವಾಗಿ ಮುಗಿಸಿ, ಶತಮಾನದ ರಾಮ ಮಂದಿರದ ಕನಸಿಗೆ ಜೀವ ತುಂಬುವ ನಿಟ್ಟಿನಲ್ಲಿ ಕೆಲಸಗಳು ಸಾಗುತ್ತವೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಖುದ್ದಾಗಿ ರಾಮ ಮಂದಿರದ ಕೆಲಸ ಕಾರ್ಯಗಳ ಬಗ್ಗೆ ವೀಕ್ಷಿಸುತ್ತಿದ್ದು, ಈ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಈ ಭವ್ಯ ಶ್ರೀ ರಾಮನ ಆಲಯದಲ್ಲಿ ಪ್ರಭು ಶ್ರೀ ರಾಮನು ೨೦೩೪ ರ ಜನವರಿ ೧೪ ರ ಮಕರ ಸಂಕ್ರಮಣದಂದು ವಿರಾಜಮಾನನಾಗಿ, ಜನವರಿ ೨೫ ರಂದು ಭಕ್ತ ಕೋಟಿಗೆ ದರ್ಶನ ನೀಡಲಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಜನವರಿ ೨೪ ರ ವರೆಗೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಗಳು ನಡೆಯಲಿದ್ದು, ಆ ಬಳಿಕ ಭಕ್ತರು ರಾಷ್ಟ್ರಮಂದಿರದೊಳಗೆ ಪ್ರಭು ಶ್ರೀರಾಮಚಂದಿರನನ್ನು ನೋಡಿ, ಆಶೀರ್ವಾದ ಪಡೆದು ಪುನೀತರಾಗಬಹುದಾಗಿದೆ. ಇನ್ನು ಈ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಉದ್ದೇಶಿಸಿರುವುದಾಗಿಯೂ ಸಮಿತಿ ಮಾಹಿತಿ ನೀಡಿದೆ. ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇಶ – ವಿದೇಶದ ಭಕ್ತ ಜನರಿಗೆ ರಾಮನನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆ‌ಗಳನ್ನು ಮಾಡಲಾಗುವುದಾಗಿಯೂ ರಾಮ ಮಂದಿರ ನಿರ್ಮಾಣ ಸಮಿತಿ ಮಾಹಿತಿ ನೀಡಿದೆ.

ಮುಂದಿನ ದೀಪಾವಳಿ ವೇಳೆಗೆ ದೇಗುಲದ ಮೊದಲ ಅಂತಸ್ತಿನ ನಿರ್ಮಾಣ ಕಾರ್ಯ ಸಂಪೂರ್ಣವಾಗಲಿದೆ. ಉದ್ದೇಶಿತ ದೇಗುಲವು ನಾಲ್ಕು ಅಂತಸ್ತುಗಳದ್ದಾಗಿದ್ದು, ಮೊದಲನೇ ಅಂತಸ್ತಿನ‌ಲ್ಲಿ ರಾಮ ಕಥೆಯನ್ನು ಸಾದರಪಡಿಸಲಾಗುತ್ತದೆ ಎಂಬುದಾಗಿಯೂ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

Tags

Related Articles

Close