ಪ್ರಚಲಿತ

22 ವರ್ಷಗಳ ನಂತರವೂ, ಇದೊಂದೇ ಒಂದು ರಹಸ್ಯದಿಂದ ಗುಜರಾತಿನಲ್ಲಿ ಕಾಂಗ್ರೆಸ್ ಗೆ ಬಿಜೆಪಿಯನ್ನು ಸೋಲಿಸಲಾಗಲಿಲ್ಲ!

ದಿನಗಳ ಹಿಂದೆ, ಒಂದು ಸುದ್ದಿ ಹಬ್ಬಿತ್ತು! ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಾಹುಲ್ ಗಾಂಧಿ ಬ್ಯಾಂಕಾಕ್ ಗೆ ಹೋಗಿದ್ದರೆಂಬ ಸುದ್ದಿ ಅದು! ಟ್ವಿಟ್ಟರ್ ನಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಆ ಟ್ವೀಟುಗಳ ಬಗ್ಗೆ ಮತ್ತೆ ಮತ್ತೆ ಚರ್ಚೆ ಮಾಡುವ ಅಗತ್ಯವಿಲ್ಲದಿದ್ದರೂ ಸಹ, ಒಂದಂತೂ ಸ್ಪಷ್ಟವಾಗಿತ್ತು. ರಾಹುಲ್ ಗಾಂಧಿಗೆ ರಾಜಕೀಯದಲ್ಲಿ ಬಹುದೊಡ್ಡ ಸೋಲೊಂದು ಕಾದಿದೆ ಎಂದು!

ಕಾಂಗ್ರೆಸ್ ಅಧ್ಯಕ್ಷನಾದ ರಾಹುಲ್ ಗಾಂಧಿಗೆ ಗೆಲುವುಗಳಿಗಿಂತ ಸೋಲೇ ಹೆಚ್ಚೆನ್ನುವುದು ನಿಜವಾದರೂ ಸಹ, ಕಾಂಗ್ರೆಸ್ ಗೆ ಬುದ್ಧಿ ಬರಲಿಲ್ಲ! ದೇಶದ ಪ್ರಧಾನಿಯನ್ನು ಮೋದಿಯನ್ನು ಸೋಲಿಸುವುದಕ್ಕೆ ಎಲ್ಲಾ ರೀತಿಯಿಂದಲೂ ಸಹ ದಾಳಿ ಮಾಡಿದೆ ಬಿಡಿ! ಜೊತೆ ಜೊತೆಗೆ ಪಾಕಿಸ್ಥಾನಕ್ಕೂ ಸಹ ಸುಪಾರಿ ಕೊಟ್ಟಿದ್ದ ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ಸೋಲಿಸಲೇ ಬೇಕೆಂದು ಮಾಡಿದ್ದ ಪ್ರತೀ ಕೊಳಕು ರಾಜಕೀಯದ ಉಪಾಯವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು!

ಕಾಂಗ್ರೆಸ್ ನ ಪ್ರತೀ ತಂತ್ರವೂ ಯಶಸ್ವಿಯಾಗಲೇ ಇಲ್ಲ! ಯಾಕೆ ಗೊತ್ತೇ?!

ಜಿಎಸ್ ಟಿ, ನೋಟು ನಿಷೇಧ ಹಾಗೂ ಪಾಟೀದಾರ ಆಂದೋಲನ! ಯಾವುದೂ ಬಿಜೆಪಿಗೆ ಒಂದು ಚೂರೂ ವ್ಯತಿರಿಕ್ತ ಪರಿಣಾಮ ಬೀರಲಿಲ್ಲವೇಕೆ?!

1. ಜಿಎಸ್ ಟಿ ತೆರಿಗೆಯನ್ನು ಎಲ್ಲಿ ಪರಿಚಯಿಸಿದರೋ, ಬುದ್ಧಿಜೀವಿಗಳೆಲ್ಲರೂ ಸಹ ಬಿಜೆಪಿ ಹೀನಾಯವಾಗಿ ಸೋಲಲಿದೆ ಎಂದು ಪ್ರಚಾರ ಮಾಡಿದವು. ಆದರೆ, ಗುಜರಾತ್ ನಲ್ಲಿ ಇರುವಷ್ಟು ವ್ಯಾಪಾರಿಗಳು ಬೇರೆಲ್ಲಿಯೂ, ಯಾವ ರಾಜ್ಯದಲ್ಲಿಯೂ ಇಲ್ಲ.

2. ‘ಪ್ರತಿ ನಾಲ್ಕರಲ್ಲಿ ಒಬ್ಬ ಪಾಟೀದಾರ’ ಭಾರತೀಯ ಜನತಾ ಪಕ್ಷದ ಬೆಂಬಲಿಗನಾಗಿದ್ದ! ಆದರೆ, ಪಾಟೀದಾರ ಸಮಾವೇಶದ ನಂತರ ಬಿಜೆಪಿ ಯ ಪಾಟೀದಾರರ ಮತಗಳೆಲ್ಲವನ್ನೂ ಕಳೆದುಕೊಂಡಿದೆ ಎಂಬುದು ಪ್ರಚಾರವಾಗಿತ್ತು.

3. ಪಾಟೀದಾರರ ಮತಗಳನ್ನೆಲ್ಲವನ್ನೂ ಸಹ ಹಾರ್ದಿಕ್ ಪಟೇಲ್ ಒಂದಷ್ಟು ಹಂತದ ಮಟ್ಟಿಗೆ ವಿಭಜನೆ ಮಾಡಲು ಸಾಧ್ಯವಾಗಿತ್ತಾದರೂ ಸಹ, ಕೊನೇ ಕ್ಷಣದ ಬದಲಾವಣೆಯ ಹೊರತಾಗಿ ಎಂಬಂತೆ,ಪಟೇಲ್ ನ ಕರ್ಮಕಾಂಡ ಬಯಲಾಗಿ ಅಲ್ಲಿಯವರೆಗೂ ಮಾಡಿದ್ದ ಶ್ರಮ ವ್ಯರ್ಥವಾಗಿ ಹೋಗಿತ್ತು.

ಆದರೆ, ಮೋದಿ ಅಳವಡಿಸಿಕೊಂಡ ಆ ರಹಸ್ಯ ಮಂತ್ರ! ರಾಜಕೀಯ ಮಂತ್ರ ಯಾವುದು ಗೊತ್ತೇ?!

1.ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಕಾಂಗ್ರೆಸ್ ಬೋಗಸ್ ಹಿಂದುತ್ವವನ್ನು ಅಳವಡಿಸಿಕೊಂಡು, ಪಾಟೀದಾರ್ ವಿವಾದಗಳ ಕಡೆ ಗಮನಹರಿಸಿದಾಗ, ಪ್ರಧಾನಿ ಮೋದಿ ಅಳವಡಿಸಿಕೊಂಡಿದ್ದು ‘ವಿಕಾಸ’ ‘ಅಭಿವೃದ್ಧಿ’ ಮಂತ್ರಗಳನು! ಅದೂ, ಗುಜರಾತ್ ಗೆ ಅವಶ್ಯಕವಾದಂತಹ ಅಭಿವೃದ್ಧಿ ಮಂತ್ರಗಳನ್ನು ಆಯ್ದು ಕೊಂಡಿತು ಮೋದಿ ಸರಕಾರ!

2.ಕಳೆದ 22 ವರ್ಷಗಳಿಂದಲೂ ಗುಜರಾತ್ ನಲ್ಲಿ ಬಿಜೆಪಿಯೇ ಒಂದಾದ ಮೇಲೊಂದು ಚುನಾವಣೆಗಳನ್ನು ಗೆಲ್ಲುತ್ತಿದೆಯೆಂದರೆ, ಅದರರ್ಥ ಕೇವಲ ‘ಅಭಿವೃದ್ಧಿ’ ಅಭಿವೃದ್ಧಿ ಮತ್ತು ಅಭಿವೃದ್ಧಿ ಮಾತ್ರವೇ!

3. ವಿಕಾಸ ಎನ್ನುವುದು ಕೇವಲ ರಸ್ತೆ, ಸಾರಿಗೆ, ವ್್ಯಾಪಾರವನ್ನು ಮಾತ್ರ ಅಭಿವೃದ್ಧಿಗೊಳಿಸುವುದಾಗಿರಲಿಲ್ಲ! ಬದಲಿಗೆ ಪ್ರತೀ ಗುಜರಾತಿಯ ಬದುಕನ್ನು ಒಂದು ಹಂತಕ್ಕೆ ತರುವುದಾಗಿತ್ತಷ್ಟೇ!

4. ದೇಶದೆಲ್ಲೆಡೆ, ಗುಜರಾತಿನಲ್ಲಿ ಮುಸಲ್ಮಾನರಿಗೆ ರಕ್ಷೆಯಿಲ್ಲ ಎಂಬುವ ಮಾತಿದ್ದರೆ, ಗುಜರಾತಿನಲ್ಲಿ ಮಾತ್ರ ಮುಸಲ್ಮಾನರು ಮೋದಿಗೆ ಜೈ ಕಾರ ಹಾಕಿದ್ದರು!

ರಾಹುಲ್ ಗಾಂಧಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವನೇ?!

ಇದು ಮಿಲಿಯನ್ ಡಾಲರ್ ಪ್ರಶ್ನೆ! ಅಕಸ್ಮಾತ್ ಕಾಂಗ್ರೆಸ್ ಸೋತರೆ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವರೇ?! ಹಿಮಾಚಲ ಪ್ರದೇಶ್, ಗುಜರಾತಿನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೆ ರಾಹುಲ್ ಗಾಂಧಿಗಿನ್ನೇನು ಕೆಲಸ?!
ಎಂದು ಟ್ವಿಟ್ಟರಾಯಿಗಳು ಪ್ರಶ್ನಿಸುತ್ತಿದ್ದಾರೆ!

– ಪೃಥು ಅಗ್ನಿಹೋತ್ರಿ

Tags

Related Articles

Close