ಪ್ರಚಲಿತ

ವಿಶ್ವದ ಎಂಟನೇ ಅದ್ಭುತ ಹಿರಿಮೆಗೆ ಪಾತ್ರವಾದ ಈ ದೇಗುಲ ಯಾವುದು ಗೊತ್ತೇ?

ವಿಶ್ವದ ಎಂಟನೇ ಅದ್ಭುತ ಎಂಬ ಖ್ಯಾತಿಗೆ ಕಾಂಬೋಡಿಯಾದ ಹೃದಯ ಭಾಗದಲ್ಲಿರುವ ಅಂಕೋರ್‌ವಾಟ್ ದೇವಾಲಯವು ಭಾಜನವಾಗಿದೆ.

ಈ ದೇವಾಲಯವು ಕಾಂಬೋಡಿಯಾದ ಹೃದಯ ಭಾಗದಲ್ಲಿದೆ. ಇಟಲಿಯ ಪೊಂಪೈ ಅನ್ನು ಹಿಂದಕ್ಕೆ ಹಾಕಿ ಈ ದೇವಾಲಯವು ವಿಶ್ವದ ಎಂಟನೇ ಅದ್ಭುತ ಎಂಬ ಕಿರೀಟವನ್ನು ಧರಿಸಿರುವುದಾಗಿದೆ. ಈ ದೇಗುಲವು ಈಗಾಗಲೇ ಪ್ರಪಂಚದ ಅತಿ ದೊಡ್ಡ ಧಾರ್ಮಿಕ ಕ್ಷೇತ್ರ ಎನ್ನುವ ಗಿನ್ನಿಸ್ ದಾಖಲೆಯನ್ನು ಸಹ ನಿರ್ಮಾಣ ಮಾಡಿದೆ.‌

ಅಂಕೋರ್ ವಾಟ್ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.‌ ಹಾಗೆಯೇ ಇದೊಂದು ದೊಡ್ಡ ದೇವಾಲಯ ಸಂಕೀರ್ಣವೂ ಆಗಿದೆ. ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಸ್ಮಾರಕ ಎಂಬ ಕೀರ್ತಿಯೂ ಈ ದೇಗುಲದ್ದಾಗಿದೆ. ಇಲ್ಲಿ ವರ್ಷವಿಡೀ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸಿ, ಇಲ್ಲಿನ ಸೌಂದರ್ಯ ಸವಿಯುತ್ತಾರೆ. ಈ ದೇಗುಲದ ರಮಣೀಯ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲವೇನೋ ಎನ್ನಬಹುದು.

ಮೂಲತಃ ಹಿಂದೂ ಧರ್ಮದ ವಿಷ್ಣು ದೇವರಿಗೆ ಈ ದೇವಾಲಯ ಸಮರ್ಪಿತವಾಗಿತ್ತು. ಇದನ್ನು ರಾಜಾ ಸೂರ್ಯವರ್ಮನ್ || ನಿರ್ಮಾಣ ಮಾಡಿದ ಎಂಬ ಪ್ರತೀತಿಯೂ ಇದೆ. ನಂತರದ ದಿನಗಳಲ್ಲಿ ಈ ದೇವಾಲಯವು ಬೌದ್ಧ ಧರ್ಮದ ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿತು. ಈ ದೇವಾಲಯ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ರೂಪಾಂತರವಾಗಿದೆ ಎನ್ನುವುದಕ್ಕೆ ಇದರ ಗೋಡೆಗಳಲ್ಲಿ ಅಲಂಕೃತವಾಗಿಕುವ ಚಿತ್ರಗಳೂ ಸಾಕ್ಷ್ಖ ನೀಡುವಂತಿವೆ.

ಈ ದೇವಾಲಯದ ಗೋಡೆಗಳಲ್ಲಿ ಹಿಂದೂ ಮತ್ತು ಬೌದ್ಧ ಧರ್ಮಗಳ ಸಮ್ಮಿಲನವನ್ನು ನಾವು ಕಾಣಬಹುದಾಗಿದೆ. ಈ ದೇಗುಲವನ್ನು ವಿಶ್ವದ ಎಂಟನೇ ಅದ್ಭುತವಾಗಿ ಮಾಡಿದ್ದು ಈ ದೇವಾಲಯದ ಸುಂದರಗೊಳಿಸಿರುವ ಕಲಾಕೃತಿಗಳು, ಅದರ ವಾಸ್ತುಶಿಲ್ಪದ ತೇಜಸ್ಸು. ಸುಮಾರು ಐನೂರು ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯ ಇದೆ. ಹೊರ ಮೈಯ ಸುತ್ತಲೂ ಬೃಹತ್ ಕಂದಕವಿದೆ. ಈ ದೇವಾಲಯವು ಮೇರು ಪರ್ವತಗಳನ್ನು ಪ್ರತಿನಿಧಿಸುವ ಐದು ಕಮಲಗಳ ಆಕಾರದ ಗೋಪುರಗಳನ್ನು ಸಹ ಒಳಗೊಂಡಿದೆ.

ವಿಶ್ವದ ಎಂಟನೇ ಅದ್ಭುತ ಎನ್ನುವ ಅನಧಿಕೃತ ಶಿರ್ಷಿಕೆಯನ್ನು ಹೊಸ ಕಟ್ಟಡಗಳಿಗೆ, ವಿನ್ಯಾಸಗಳಿಗೆ ಅಥವಾ ಯೋಜನೆಗಳಿಗೆ ನೀಡಲಾಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ಟ್ರಾವೆಲ್ಸ್ ತಿಳಿಸಿದೆ.

Tags

Related Articles

Close