ಪ್ರಚಲಿತ

ಮಣಿಪುರ ಹಿಂಸಾಚಾರ: ಕೇಂದ್ರ ಸರ್ಕಾರದಿಂದ ಒಂಬತ್ತು ಉಗ್ರ ಸಂಘಟನೆಗಳು ಬ್ಯಾನ್

ಕೆಲವು ಸಮಯದಿಂದ ದೊಡ್ಡ ಮಟ್ಟದಲ್ಲಿ ರಾಷ್ಟ್ರದಾದ್ಯಂತ ಸುದ್ದಿಯಾಗಿರುವ ಆಘಾತಕಾರಿ ಸಂಗತಿ ಮಣಿಪುರದ‌ ಹಿಂಸಾಚಾರ. ಅಲ್ಲಿನ ಬಡ, ಹಿಂದುಳಿದ ಜನರ ಬದುಕನ್ನು ಅಕ್ಷರಶಃ ನರಕವಾಗಿಸಿದ ಹಿಂಸಾಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು ಎನ್ನುವುದು ಸುಳ್ಳಲ್ಲ. ಇದೀಗ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಹಾಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಪ್ರಕಟಿಸಿದೆ.

ಜನಾಂಗೀಯ ಹಿಂಸಾಚಾರದ ಸುಳಿಗೆ ಸಿಕ್ಕು ನಲುಗುತ್ತಿರುವ ಮಣಿಪುರದಲ್ಲಿ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹ ಕೆಲವು ಉಗ್ರ ಸಂಘಟನೆಗಳು ನಡೆಸುತ್ತಿವೆ. ಹೀಗೆ ದೇಶಕ್ಕೆ ಹಾನಿ ಮಾಡುತ್ತಿರುವ ಕಿಡಿಗೇಡಿ ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮಣಿಪುರದಲ್ಲಿ ಹಿಂಸೆ ನಡೆಸುತ್ತಿರುವ ಮತ್ತು ಅಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುವಂತೆ ಪರ್ವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವ ಸುಮಾರು ಒಂಬತ್ತು ಉಗ್ರ ಸಂಘಟನೆಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ದುರ್ಘಟನೆಗಳಿಗೆ ಸಂಬಂಧಿಸಿದ ಹಾಗೆ ಮೈತ್ರೇಯಿ ಉಗ್ರ ಸಂಘಟನೆ ಮತ್ತು ಅದರ ಸಹ ಸಂಘಟನೆಗಳನ್ನು ನಿಷೇಧಿಸಿ ‌ಕ್ರಮ ಕೈಗೊಂಡಿರುವುದಾಗಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ, ಈ ಸಂಘಟನೆಯ ರಾಜಕೀಯ ವಿಭಾಗವಾದ ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್, ಯುನೈಟೆಡ್‌ ನ್ಯಾಷನಲ್ ಲಿಬರೇಶನ್ ಫ್ರಂಟ್, ಅದರ ಸಶಸ್ತ್ರ ವಿಭಾಗ ಮಣಿಪುರ ಪೀಪಲ್ಸ್ ಆರ್ಮಿ ಸಂಘಟನೆಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಹಾಗೆಯೇ ಪೀಪಲ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್, ಅದರ ಸಶಸ್ತ್ರ ವಿಭಾಗ ರೆಡ್ ಆರ್ಮಿ, ಕಂಗ್ಲೀಪಾಕ್ ಕಮ್ಯೂನಿಸ್ಟ್ ಪಾರ್ಟಿ, ಈ ಸಂಘಟನೆಯ ಸಶಸ್ತ್ರ ವಿಭಾಗ, ಕಂಗ್ಲೇ ಯೋಲ್ ಕನ್ಬಾ ಲುಪ್ಸಾ, ಸಮನ್ವಯ ಸಮಿತಿ, ಮತ್ತು ಅಲಯನ್ಸ್ ಫಾರ್ ಸೋಷಿಯಲಿಸ್ಟ್ ಯುನಿಟಿ ಕಂಗ್ಲಿಪಾಕ್ ಉಗ್ರ ಸಂಘಟನೆಗಳನ್ನು ನಿಷೇಧಿಸಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಆದೇಶ ಹೊರಡಿಸಿರುವುದಾಗಿದೆ.

Tags

Related Articles

Close