ಪ್ರಚಲಿತ

ಮುಸ್ಲಿಮರ ಮೇಲೆ ಕಾಂಗ್ರೆಸ್ ನಾಯಕಿಯ ಅನುಮಾನ ಹೇಳಿಕೆಯ ವೀಡಿಯೋ ವೈರಲ್! ಎಸ್.ಡಿ.ಪಿ.ಐ. ಹೇಳಿಕೆಗೆ ಮುಸ್ಲಿಮರ ತೀವ್ರ ಆಕ್ಷೇಪ!

ಸದಾ ಮುಸಲ್ಮಾನರ ಓಲೈಕೆಯಲ್ಲೇ ಸುದ್ಧಿಯಾಗುತ್ತಿದ್ದ ಕಾಂಗ್ರೆಸ್ ಪಕ್ಷ ಇದೀಗ ಅದೇ ಮುಸ್ಲಿಂ ಸಮಾಜದ ಮೇಲೆ ಭಾರೀ ಅನುಮಾನವನ್ನು ವ್ಯಕ್ತ ಪಡಿಸುತ್ತಿದೆ. ಒಂದೆಡೆ ಎಸ್.ಡಿ.ಪಿ.ಐ. ಪಕ್ಷ ಮುಸ್ಲಿಮರನ್ನು ಪ್ರತಿನಿದಿಸುತ್ತಿದ್ದರೆ ಮತ್ತೊಂದೆಡೆ ಎಮ್.ಇ.ಪಿ. ಎಂಬ ಮುಸ್ಲಿಂ ಪಕ್ಷ ಮತ್ತೊಂದು ರೀತಿಯಲ್ಲಿ ಮುಸ್ಲಿಮರನ್ನು ಸೆಳೆಯುತ್ತಿದೆ. ಇವೆಲ್ಲವನ್ನು ನೋಡುತ್ತಿರುವ ಕಾಂಗ್ರೆಸ್ ಪಕ್ಷ ಎಲ್ಲಿ ತನ್ನ ಓಟ್ ಬ್ಯಾಂಕ್‍ನ್ನು ನಾವು ಕಳಚಿಕೊಳ್ಳುತ್ತಿದ್ದೇವೋ ಎಂಬ ಆತಂಕ ಸೃಷ್ಟಿಯಾಗಿದೆ.

ನಿಮ್ಮನ್ನು ನಂಬಲಾಗಲ್ಲ ಎಂದ ಮಾಜಿ ಮೇಯರ್..!

ಮುಸ್ಲಿಮರನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಮಾಡಿ ತನ್ನತ್ತ ಬರಸೆಳೆಯುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ನಿಸ್ಸೀಮರು. ಈವರೆಗೂ ಮುಸ್ಲಿಂ ಸಮಾಜವನ್ನೇ ನಂಬಿಕೊಂಡು ಬಹುಸಂಖ್ಯಾತ ಹಿಂದೂಗಳನ್ನು ಎದುರು ಹಾಕಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅದೇ ಮುಸ್ಲಿಂ ಸಮಾಜದ ಮೇಲೆ ಅನುಮಾನ ಉಂಟುಮಾಡಿದೆ. ಈ ಬಗ್ಗೆ ಸ್ವತಃ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಅವರೇ ಕಾಂಗ್ರೆಸ್ ಮುಖಂಡರೆದುರು ಹೇಳಿಕೊಂಡಿದ್ದಾರೆ. ಅದೂ ಮುಸ್ಲಿಂ ಮುಖಂಡರೆದುರು.

ಇತ್ತೀಚೆಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಪ್ರವಾಸವನ್ನು ಕೈಗೊಂಡಿದ್ದರು. ಈ ವೇಳೆ ಮಂಗಳೂರಿಗೆ ಆಗಮಿಸಿದ್ದ ರಾಹುಲ್
ಗಾಂಧಿಯವರನ್ನು ಸ್ವಾಗತಿಸಲು ಮಂಗಳೂರಿನ ಕಾಂಗ್ರೆಸ್ ಟೀಂ ಸಜ್ಜಾಗಿತ್ತು. ಹೀಗೆ ಸೇರಿದ್ದ ಕಾಂಗ್ರೆಸ್ ಮುಖಂಡೆರೆಲ್ಲರೂ ಸೇರಿ ಮಂಗಳೂರಿನ ಪ್ರತಿಷ್ಟಿತ ಹೊಟೇಲ್ ಒಂದರಲ್ಲಿ ಊಟ ಮಾಡಿಕೊಂಡು ಇರುತ್ತಾರೆ. ಈ ವೇಳೆ ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಮುಸ್ಲಿಂ ಮತದಾರರ ಮೇಲೆ ಗಂಭೀರ ಆರೋಪ ಹಾಗೂ ಅನುಮಾನ್ನು ವ್ಯಕ್ತಪಡಿಸುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಮಹಮ್ಮದ್ ಮತ್ತು ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಸೇರಿದಂತೆ ಇನ್ನಿತರ ನಾಯಕರು ಊಟ ಮಾಡುತ್ತಿದ್ದರು. ಈ ವೇಳೆ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಮುಸ್ಲಿಂ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಮಹಮ್ಮದ್ ಅವರನ್ನು ಉದ್ಧೇಶಿಸಿ “ನಿಮ್ಮ ಜಾತಿಯವರನ್ನು ನಂಬಲು ಆಗೋದಿಲ್ಲ. ಅವರಿಗೆ ನಿಯತ್ತಿಲ್ಲ. ಅವರು ಈ ಬಾರಿ ಕಾಂಗ್ರೆಸ್‍ಗೆ ಓಟ್ ಹಾಕೋದು ಡೌಟ್. ಅವರು ಈ ಬಾರಿ ಎಸ್.ಡಿ.ಪಿ.ಐ.ಗೆ ಓಟ್ ಹಾಕುತ್ತಾರೆ. ಈಗ ಇರುವ ಮುಸ್ಲಿಮರಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ.ನವರು. ಹೀಗಾಗಿ ಅವರು ಅದೇ ಪಕ್ಷಕ್ಕೆ ಮತ ಹಾಕುತ್ತಾರೆ” ಎಂದು ಹೇಳಿದ್ದಾರೆ.

ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಅವರ ಈ ಆರೋಪ ಕಟ್ಟರ್ ಕಾಂಗ್ರೆಸ್‍ನಲ್ಲಿರುವ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಭಾರೀ ಆಕ್ರೋಶವೇ ಭುಗಿಲೇಳುವಂತೆ ಮಾಡಿದೆ. ತಮ್ಮ ಹುಟ್ಟಿನಿಂದಲೂ ಕಾಂಗ್ರೆಸ್ ಪಕ್ಷದ ಜೊತೆಗೆ ನಿಕಟ ಸಂಪರ್ಕ ಹಾಗೂ ಕಾರ್ಯಕರ್ತರಾಗಿರುವ ಕಾಂಗ್ರೆಸ್‍ನ ಮುಸಲ್ಮಾನ ಸಮಾಜದವರು ಕವಿತಾ ಸನಿಲ್ ಅವರ ಈ ಮಾತು ಬೇಸರ ಉಂಟುಮಾಡಿದೆ ಎಂದು ಹೇಳಿದ್ದಾರೆ.

ಮುಸ್ಲಿಮರಿಗೆ ಸ್ಥಾನಮಾನ ನೀಡದ ಕಾಂಗ್ರೆಸ್..!

ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮಾಜದವರನ್ನು ಬೆಳೆಸದೆ ಕೇವಲ ಕೆಲಸಕ್ಕೆ ಉಪಯೋಗಿಸಿಕೊಂಡಿದೆ. ಕೇವಲ ಓಟ್ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷ ತಮಗೆ ಯಾವ ರೀತಿಯ ಅವಕಾಶವನ್ನೂ ನೀಡದೆ ಕೇವಲ ಉಪಯೋಗಿಸಿಕೊಂಡಿದೆ ಎಂದು ಕಾಂಗ್ರೆಸ್‍ನ ಮುಸಲ್ಮಾನರು ತಮ್ಮ ಅಳಲನ್ನು ಪಕ್ಷದ ಹಿರಿಯ ಮುಯಖಂಡರಲ್ಲಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಾತ್ರವಲ್ಲದೆ ಇತ್ತೀಚೆಗೆ ನಡೆದ ಮಂಗಳೂರು ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಯ್ಕೆಯ ಸಂದರ್ಭದಲ್ಲಿ ಮುಸಲ್ಮಾನರಿಗೆ ಪ್ರಾಶಸ್ತ್ಯ ನೀಡಬೇಕು ಎಂಬ ಪ್ರಸ್ತಾಪವನ್ನು ಮುಸ್ಲಿಂ ಮುಖಂಡರು ಇಟ್ಟಿದ್ದರು. ಈ ವಿಚಾರಕ್ಕಾಗಿ ಮುಸ್ಲಿಂ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಸಭೆಯಲ್ಲಿ ಜಟಾಪಟಿ ನಡೆದಿತ್ತು.

ಆದರೆ ಕೊನೆಗೂ ಮುಸ್ಲಿಂ ಸಮುದಾಯದ ಮನವೊಲಿಸುವಲ್ಲಿ ಸಫಲರಾದ ಕಾಂಗ್ರೆಸ್ ಮುಖಂಡರು ಭಾಸ್ಕರ್ ಎಂಬುವವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು. ಸಮಾಧಾನವಿಲ್ಲದಿದ್ದರೂ ಪಕ್ಷದ ವಿಚಾರಧಾರೆಗೆ ಕಟ್ಟು ಬಿದ್ದು ಒಪ್ಪಿಕೊಂಡಿದ್ದರು.

ಆದರೆ ಮಾಜಿ ಮೇಯರ್ ಕವಿತಾ ಸನಿಲ್ ಜಿಲ್ಲೆಯ ಮಾತ್ರವಲ್ಲದೆ ಎಲ್ಲಾ ಮುಸ್ಲಿಂ ನಾಯಕರ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ನೀಡಿದ್ದ ವೀಡಿಯೋ ಭಾರೀ ವೈರಲ್ ಆಗುತ್ತಿದ್ದು ಕಾಂಗ್ರೆಸ್‍ನ ಮುಸಲ್ಮಾನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ಬಾರಿ ಬಹುತೇಕ ಮುಸ್ಲಿಂರು ಕಾಂಗ್ರೆಸ್ ಬಿಟ್ಟು ಎಸ್.ಡಿ.ಪಿ.ಐ.ಗೆ ಸೇರಿಕೊಂಡರೂ ಅಚ್ಚರಿಯಿಲ್ಲ. ಮಾತ್ರವಲ್ಲದೆ ಕೆಲವು ಮುಸಲ್ಮಾನ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದೊಂದಿಗೂ ಸಂಪರ್ಕವನ್ನು ಹೊಂದಿದ್ದು ಮುಂಬರುವ ಚುನಾವಣೆಯಲ್ಲಿ ಇದು ಯಾವ ಧಿಕ್ಕಿಗೂ ಬದಲಾಗಬಹುದು ಎಂದು ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close