ಪ್ರಚಲಿತ

ಆರು ಭೂಕಂಪನವನ್ನೇ ಎದುರಿಸಿ ವಿಜ್ಞಾನಕ್ಕೆ ಸವಾಲಾಗಿ ನಿಂತ ಹಿಂದೂ ದೇವಾಲಯ

ಈ ವರೆಗೆ ನಿರ್ಮಾಣ‌ವಾಗಿರುವ ಪ್ರಮುಖ ರಚನೆಗಳಲ್ಲಿ ಬೃಹದೀಶ್ವರ ಮಂದಿರವೂ ಶ್ರೇಷ್ಠ ರಚನೆಯಾಗಿದೆ. ಏಕೆಂದರೆ,

  • ಈ ಮಂದಿರವನ್ನು ಇಂಟರ್‌ಲಾಕ್ ಮಾದರಿಯನ್ನು ಅನುಸರಿಸಿ ನಿರ್ಮಾಣ ಮಾಡಲಾಗಿದೆ. ಇದರ ಕಲ್ಲುಗಳ ನಡುವೆ ಪ್ಲಾಸ್ಟಿಕ್, ಸಿಮೆಂಟ್ ಅಥವಾ ಯಾವುದೇ ಅಂಟು ಪದಾರ್ಥಗಳನ್ನು ಬಳಕೆ ಮಾಡಲಾಗಿದೆ. ಇದಕ್ಕೆ 1000 ವರ್ಷಗಳ ಕಾಲ ಇದು ಉಳಿದುಕೊಂಡಿದ್ದು, 6 ಪ್ರಬಲ ಭೂಕಂಪಗಳಿಂದ ರಕ್ಷಿಸಿಕೊಂಡಿದೆ.
  • ಇದರ ಗೋಪುರವು 216 ಅಡಿಗಳಷ್ಟು ಎತ್ತರವಾಗಿದ್ದು, ಆ ಸಮಯದಲ್ಲಿ ಪ್ರಪಂಚದಲ್ಲೇ ಅತ್ಯಂತ ಎತ್ತರದ ಗೋಪುರ ಎಂಬ ಹಿರಿಮೆ ತನ್ನದಾಗಿಸಿಕೊಂಡಿತ್ತು.
  • ಈ ವಿಧಾನವನ್ನು ಅನುಸರಿಸಿ ನಿರ್ಮಾಣ ಮಾಡಲಾದ ಇತರ ರಚನೆಗಳು ಬಿಗ್ ಬೆನ್ ಮತ್ತು ಪಿಸಾದ ಲೀನಿಂಗ್ ಟವರ್ ಸಮಯ ಸರಿದಂತೆ ವಾಲುವುದಕ್ಕೆ ತೊಡಗಿದೆ. ಆದರೆ ಬೃಹದೀಶ್ವರ ಮಂದಿರವು ಶೂನ್ಯ ಡಿಗ್ರಿ ಒಲವನ್ನು ಹೊಂದಿದೆ.
  • ಈ ಕಟ್ಟಡದ ನಿರ್ಮಾಣ‌ಕ್ಕೆ 1,30,000 ಟನ್ ಗ್ರಾನೈಟ್ ಅನ್ನು ಬಳಕೆ ಮಾಡಲಾಗಿದ್ದು, ಇದನ್ನು 60 ಕಿಮೀ ದೂರದಿಂದ 3000 ಆನೆಗಳು ಸಾಗಾಟ ಮಾಡಿದವು.
  • ಭೂಮಿಯನ್ನು ಅಗೆದು ಬುನಾದಿ ಹಾಕದೆಯೇ ಈ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
  • ಈ ಮಂದಿರದ ಗೋಪುರದ ಮೇಲಿರುವ ಕುಂಭಂ‌ನ ತೂಕ 80 ಟನ್‌ಗಳಷ್ಟಿದೆ. ಹಾಗೆಯೇ ಇದನ್ನು ಏಕಶಿಲೆಯಿಂದ ನಿರ್ಮಾಣ ಮಾಡಲಾಗಿದೆ.
  • 200 ಅಡಿ ಗೋಪುರದ ಮೇಲೆ 80 ಟನ್ ತೂಕದ ಕಲ್ಲು ಹೇಗೆ ನಿಂತಿದೆ ಎಂಬುದರ ಬಗ್ಗೆ ಹಲವಾರು ಸಿದ್ಧಾಂತ‌ಗಳು ಅಸ್ತಿತ್ವ‌ದಲ್ಲಿವೆ. ಕೆಲವರು ಇದನ್ನು ಲೆವಿಟೇಶನ್ ತಂತ್ರಜ್ಞಾನ ಎನ್ನುತ್ತಾರೆ. ಈ ಕಲ್ಲನ್ನು 6 ಕಿಮೀ ಉದ್ದದ ರಾಂಪ್ ಮೇಲೆ ಎಳೆಯಲು ಅನೆಗಳನ್ನು ಬಳಕೆ ಮಾಡಲಾಗಿದೆ.
  • ಈ ಮಂದಿರದ ಕೆಳಗೆ ಹಲವಾರು ಭೂಗತವಾದ ಮಾರ್ಗಗಳಿವೆ ಎಂಬುದಾಗಿಯೂ ಹೇಳುತ್ತಾರೆ. ಅವುಗಳಲ್ಲಿ ಹೆಚ್ಚಿನ ಮಾರ್ಗಗಳನ್ನು ಶತಮಾನದ ಹಿಂದೆ ಮುಚ್ಚಿರುವುದಾಗಿ ಹೇಳಲಾಗುತ್ತದೆ. ಈ ರಹಸ್ಯ ದಾರಿಗಳು ಚೋಳರಿಗೆ ಸುರಕ್ಷತಾ ತಾಣ ಮತ್ತು ನಿರ್ಗಮಿಸುವುದಕ್ಕೆ ಬಳಕೆ ಮಾಡಲಾಗುತ್ತಿತ್ತು. ಹಲವು ಮೂಲಗಳು ಈ ಮಂದಿರದ ಕೆಳಗೆ ಸುಮಾರು 100 ರಹಸ್ಯ ಮಾರ್ಗಗಳಿದ್ದುದಾಗಿಯೂ ಹೇಳುತ್ತವೆ.
  • ಇದೊಂದು ಅನನ್ಯ, ಗಮನಾರ್ಹ ಮಂದಿರವಾಗಿದ್ದು, ಇದನ್ನು ಅನ್ಯಗ್ರಹ ಜೀವಿಗಳು ನಿರ್ಮಾಣ ಮಾಡಿರುವುದಾಗಿಯೂ ಕೆಲವರು ಹೇಳುತ್ತಾರೆ. ಬೃಹದೀಶ್ವರ ಮಂದಿರದಂತೆ ಬೇರೊಂದು ಮಂದಿರವಿಲ್ಲ. ಈ ಕಾಲಾತೀತ ಅದ್ಭುತ‌ವನ್ನು ನಾವು ಅಮೂಲ್ಯ ಎಂಬುದಾಗಿ ಪರಿಗಣಿಸಬೇಕು. ಇಂತಹ ವಾಸ್ತು ಶಿಲ್ಪ, ಕಲೆಗಳನ್ನು ಉಳಿಸುವತ್ತ ಗಮನ ಹರಿಸಬೇಕು.
Tags

Related Articles

Close