ಪ್ರಚಲಿತ

ರಾಹುಲ್ ಗಾಂಧಿ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಆಚಾರ್ಯ ಪ್ರಮೋದ ಕೃಷ್ಣಂ

ದೇಶಕ್ಕೆ ಕಾಂಗ್ರೆಸ್ ಪಕ್ಷ ಎಂತಹ ಆಪತ್ತು ಎನ್ನುವುದನ್ನು ಅದೇ ಪಕ್ಷದಲ್ಲಿ ಪದವಿ ಹೊಂದಿದ್ದು, ಸದ್ಯ ಪಕ್ಷದಿಂದ ಹೊರಗಿರುವ ಕಾಂಗ್ರೆಸ್ ಮಾಜಿ ನಾಯಕರೊಬ್ಬರು ಬಾಯಿ ಬಿಟ್ಟಿದ್ದಾರೆ. ಈ ನಾಯಕನ ಮಾತುಗಳು ದೇಶಕ್ಕೆ, ಇಲ್ಲಿನ ಜನರಿಗೆ ಕಾಂಗ್ರೆಸ್ ಮಾಡುತ್ತಿರುವ ಅನ್ಯಾಯ, ಕೈ ನಾಯಕರ ನೀಚ ಬುದ್ಧಿಗೆ ಹಿಡಿದ ಕೈಗನ್ನಡಿಯ ಹಾಗಿದೆ ಎಂದರೂ ಅತಿಶಯವಲ್ಲ.

ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ರಾಹುಲ್ ಗಾಂಧಿ ಬಗೆಗೆ ಹೇಳಿರುವ ಈ ಮಾತು ನಿಜಕ್ಕೂ ಸಾರ್ವಜನಿಕರಲ್ಲಿ ಅಸಮಾಧಾನ ಸೃಷ್ಟಿ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ತೀರ್ಪನ್ನು ರದ್ದು ಮಾಡಲು ರಾಹುಲ್ ಗಾಂಧಿ ಹುನ್ನಾರ ನಡೆಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ಮೂವತೈದು ವರ್ಷಕ್ಕೂ ಅಧಿಕ ಸಮಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಆಚಾರ್ಯ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಮೇಲಿನ ಅಸಮಾಧಾನದಿಂದ ಹೊರ ಬಂದಿದ್ದರು.

ಈ ಬಗ್ಗೆ ಸುದ್ದಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಳೆದ 32 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೆ. ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಆಪ್ತರ ಜೊತೆಗೆ ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ರಚನೆಯಾದಲ್ಲಿ ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಮಹಾ ಶಕ್ತಿ ಆಯೋಗವನ್ನು ರಚನೆ ಮಾಡುತ್ತೇವೆ ಮತ್ತು ರಾಜೀವ್ ಗಾಂಧಿ ಶಾ ಬಾನೋ ನಿರ್ಧಾರವನ್ನು ರದ್ದು ಮಾಡಿದಂತೆ ರಾಹುಲ್ ಗಾಂಧಿ ರಾಮ ಮಂದಿರ ನಿರ್ಮಾಣ ನಿರ್ಧಾರವನ್ನು ರದ್ದು ಮಾಡುವುದಾಗಿ ನಿರ್ಣಯ ಕೈಗೊಂಡಿದ್ದಾಗಿ ಅವರು ಸ್ಫೋಟಕ ಮಾಹಿತಿಯನ್ನು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ದೇಶದ ಮೇಲೆ ಪ್ರೀತಿ ಇರುವವರು, ಸನಾತನ ಧರ್ಮದಲ್ಲಿ ನಂಬಿಕೆ ಇರುವವರು, ಹಿಂದೂ ಧರ್ಮವನ್ನು ಆರಾಧನೆ ಮಾಡುವವರು, ಶ್ರೀರಾಮನ ಮೇಲೆ ಭಕ್ತಿ ಉಳ್ಳವರು ಉಳಿದುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಈಗ ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧಾರ ಮಾಡುವವರ ದೊಡ್ಡ ಪಟ್ಟಿಯೇ ಇದೆ. ಜೂನ್ 4 ರ ಒಳಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯಲು ಹಿರಿಯರ ದೊಡ್ಡ ದಂಡೇ ಸಿದ್ದವಾಗಿದೆ. ದೇಶದ ಬಗ್ಗೆ ಕಾಳಜಿ ಹೊಂದಿರುವವರು ಕೈ ಪಕ್ಷದಲ್ಲಿ ಉಳಿದುಕೊಳ್ಳಲು ಸಾಧ್ಯವೆ ಇಲ್ಲ. ಪಾಕಿಸ್ತಾನವನ್ನು ಹಾಡಿ ಹೊಗಳುವವರು ಮಾತ್ರವೇ ಪಾಕಿಸ್ತಾನದಲ್ಲಿ ಉಳಿಯಬಹುದು ಎಂದು ಅವರು ತಿಳಿಸಿದ್ದಾರೆ.

Tags

Related Articles

Close